(1) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಾಗಿ ದಾಖಲಾತಿ ಮಾಡಿಕೊಳ್ಳುವುದಕ್ಕಾಗಿ, ನಮೂನೆ ಜಿ.ಎಸ್,ಟಿ ಪಿಸಿಟಿ-1ರಲ್ಲಿ ಸಾಮಾನ್ಯ ಪೋರ್ಟಲ್ನ ಮುಖಾಂತರ ನೇರವಾಗಿಯಾಗಲಿ ಅಥವಾ ಆಯುಕ್ತರಿಂದ ಅಧಿಸೂಚಿಸಲಾದ ಒಂದು ಸಹಾಯ ಕೇಂದ್ರದ ಮೂಲಕವಾಗಿಯಾಗಲಿ, ವಿದ್ಯುನ್ಮಾನ ರೀತಿಯಲ್ಲಿ ಒಂದು ಅರ್ಜಿಯನ್ನು
(ಎ) (i) ಭಾರತೀಯ ಪ್ರಜೆಯಾಗಿರುವ;
(ii) ಸ್ವಸ್ಥ ಚಿತ್ತ ವ್ಯಕ್ತಿಯಾಗಿರುವ;
(iii) ದಿವಾಳಿಎಂದು ನ್ಯಾಯ ನಿರ್ಣೀತನಾಗದಿರುವ; ಸಕ್ಷಮ ನ್ಯಾಯಾಲಯದಿಂದ ಅಪರಾಧಿ ಎಂದು ನಿರ್ಣೀತನಾಗಿಲ್ಲದಿರುವ;
(ಬಿ) -ಯಾಮೊಬ್ಬ ವ್ಯಕ್ತಿಯು, ಸಲ್ಲಿಸಬಹುದು ಮತ್ತು ಈ ಕೆಳಕಂಡ ಷರತ್ತುಗಳಲ್ಲಿ ಯಾವುದಾದರನ್ನು ಪೂರೈಸಿರಬೇಕು:-
(i) ಅವನು ಸರ್ಕಾರದ ಅಡಿಯಲ್ಲಿನ ತನ್ನ ಸೇವಾ ಅವಧಿಯಲ್ಲಿ ಗ್ರೂಪ್ ಬಿ ಪತ್ರಾಂಕಿತ ಅಧಿಕಾರಿಯ ಶ್ರೇಣಿಗಿಂತ ಕಡಿಮೆ ಇಲ್ಲದ ಹುದ್ದೆಯಲ್ಲಿ ಎರಡು ವರ್ಷಗಳಿಗಿಂತ ಕಡಿಮೆ ಇರದ ಒಂದು ಅವಧಿಗೆ ಕಾರ್ಯ ನಿರ್ವಹಿಸಿರುವ, ಯಾವುದೇ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಅಥವಾ ಭಾರತ ಸರ್ಕಾರದ ಅಬಕಾರಿ ಮತ್ತು ಕಸ್ಟಮ್ಸ್ನ ಕೇಂದ್ರ ಮಂಡಳಿ, ರಾಜಸ್ವ ಇಲಾಖೆಯ ಒಬ್ಬ ನಿವೃತ್ತಿ ಅಧಿಕಾರಿಯಾಗಿರಬೇಕು; ಅಥವಾ
(ii) ಅವನು ಕನಿಷ್ಟ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗಾಗಿ, ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಒಬ್ಬ ಮಾರಾಟ ತೆರಿಗೆ ವೃತ್ತಿದಾರನಾಗಿ ಅಥವಾ ತೆರಿಗೆ ರಿಟರ್ನಿನ ಸಿದ್ಧಪಡಿಸುವವನಾಗಿ ದಾಖಲಾತಿ ಮಾಡಿಕೊಂಡಿರಬೇಕು.
(ಸಿ) ಕೆಳಕಂಡವುಗಳಲ್ಲಿ ತೇರ್ಗಡೆಗೊಂಡಿರಬೇಕು:
(i) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಸ್ಥಾಪಿಸಿದ ಭಾರತೀಯ ವಿಶ್ವವಿದ್ಯಾಲಯದಿಂದ ನಡೆಸಲಾಗುವ, ವಾಣಿಜ್ಯ, ಕಾನೂನು, ಉಚ್ಚತಮ ಲೆಕ್ಕಪರಿಶೋಧನೆಯನ್ನ ಒಳಗೊಂಡ ಬ್ಯಾಂಕಿಂಗ್, ಅಥವಾ ವ್ಯವಹಾರ ಆಡಳಿತ ಅಥವಾ ವ್ಯವಹಾರ ನಿರ್ವಹಣೆಂiಲ್ಲಿ ಒಂದು ಪದವಿಯನ್ನು ಹೊಂದಿರುವ, ಸ್ನಾತಕ ಅಥವಾ ಸ್ನಾತಕೋತ್ತರ ಅಥವಾ ತತ್ಸಮಾನವಾದ ಪರೀಕ್ಷೆ; ಅಥವಾ
(ii) ಉಪಖಂಡದ (i) ರಲ್ಲಿ ನಮೂದಿಸಿರುವ ಪದವಿ ಪರೀಕ್ಷೆಗಳಿಗೆ ತತ್ಸಮಾನ ಎಂದು ಯಾವುದೇ ಭಾರತೀಯ ವಿಶ್ವವಿದ್ಯಾಲಯವು ಮಾನ್ಯತೆ ನೀಡಿರುವ ಯಾವುದೇ ವಿದೇಶಿ ವಿಶ್ವವಿದ್ಯಾಲಯದ ಒಂದು ಪದವಿ ಪರೀಕ್ಷೆ; ಅಥವಾ
(iii) ಪರಿಷತ್ತಿನ ಶಿಫಾರಸ್ಸಿನ ಅನ್ವಯ ಸರ್ಕಾರದಿಂದ ಈ ಉದ್ದೇಶಕ್ಕಾಗಿ ಅಧಿಸೂಚಿಸಿದ ಯಾವುದೇ ಇತರ ಪರೀಕ್ಷೆ; ಅಥವಾ
(iv) ಕೆಳಕಂಡ ಯಾವುದಾದರೂ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರಬೇಕು, ಅಂದರೆ.-
(ಎ) ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಅಂತಿಮ ಪರೀಕ್ಷೆ
(ಬಿ) ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಅಂತಿಮ ಪರೀಕ್ಷೆ
(ಸಿ) ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟೆರಿಸ್ನ ಅಂತಿಮ ಪರೀಕ್ಷೆ
(2) ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾದ ಅರ್ಜಿಯನ್ನು ಸ್ವಿಕರಿಸಿದಮೇಲೆ, ಈ ಸಂಬಂಧದಲ್ಲಿ ಪ್ರಾಧಿಕೃತನಾದ ಅಧಿಕಾರಿಯು, ಆತನು ಅವಶ್ಯಕವೆಂದು ಪರಿಗಣಿಸಿದ ಅಂಥ ವಿಚಾರಣೆ ಮಾಡಿದ ನಂತರ, ಅರ್ಜಿದಾರನನ್ನು ಸರಕು ಮತ್ತು ಸೇವೆಗಳ ತೆರಿಗೆಯ ವೃತ್ತಿದಾರ ಎಂದು ದಾಖಲಾತಿ ಮಾಡಿಕೊಳ್ಳುವುದು ಮತ್ತು ಅದರ ಪರಿಣಾಮವಾಗಿ ಒಂದು ಪ್ರಮಾಣ ಪತ್ರವನ್ನು ನಮೂನೆ ಜಿಎಸ್ಟಿ ಪಿಸಿಟಿ-2 ರಲ್ಲಿ ನೀಡುವುದಾಗಲಿ ಅಥವಾ ಅರ್ಜಿದಾರನು ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರ ಎಂದು ದಾಖಲಾತಿ ಮಾಡಿಕೊಳ್ಳಲು ಅರ್ಹನಲ್ಲನೆಂದು ಕಂಡು ಬಂದಲ್ಲಿ, ಅವನ ಅರ್ಜಿಯನ್ನು ತಿರಸ್ಕರಿಸುವುದಾಗಲಿ ಮಾಡತಕ್ಕದ್ದು.
(3) ಉಪಪ್ರಕರಣ (3)ರ ಅಡಿಯಲ್ಲಿ ಮಾಡಲಾದ ದಾಖಲಾತಿಯು, ಅದು ರದ್ದುಗೊಳ್ಳುವವರೆಗೆ ಸಿಂಧುವಾಗಿರುತ್ತದೆ.
ಪರಂತು, ಸರಕು ಮತ್ತು ಸೇವೆಗಳ ತೆರಿಗೆಯ ವೃತ್ತಿದಾರ ಎಂದು ದಾಖಲಾತಿಯಾಗಿರುವ ಯಾಮೊಬ್ಬ ವ್ಯಕ್ತಿಯು, ಪರಿಷತ್ತಿನ ಶಿಫಾರಸ್ಸುಗಳ ಅನ್ವಯ ಆಯುಕ್ತರಿಂದ ಅಧಿಸೂಚಿಸಬಹುದಾದ ಅಂಥ ಪ್ರಾಧಿಕಾರದಿಂದ ಅಂಥ ಅವಧಿಗಳಿಗೆ ನಡೆಸುವ ಅಂಥ ಪರೀಕ್ಷೆಯಲ್ಲಿ ಅವನು ತೇರ್ಗಡೆಯಾಗಿರುವ ಹೊರತು, ದಾಖಲಾಗಿ ಉಳಿಯಲು ಅರ್ಹನಿರತಕ್ಕದ್ದಲ್ಲ.
ಮತ್ತು ಪರಂತು, ಉಪ ನಿಯಮ] (1)ರ ಖಂಡ (ಬಿ)ಯ]ಉಪಬಂಧಗಳು ಅನ್ವಯವಾಗುವ ಯಾಮೊಬ್ಬ ವ್ಯಕ್ತಿಯು, ಸದರಿ ಪರೀಕ್ಷೆಯನ್ನು ಗೊತ್ತು ಪಡಿಸಲಾದ ದಿನಾಂಕದಿಂದ ಒಂದು ವರ್ಷದ ಅವಧಿಯ ಒಳಗಾಗಿ ಅವನು ತೇರ್ಗಡೆಯಾಗದ ಹೊರತು, ದಾಖಲಾಗಿ ಉಳಿಯಲು ಅರ್ಹನಿರತಕ್ಕದ್ದಲ್ಲ.
(4) ಯಾವುದೇ ಸರಕು ಮತ್ತು ಸೇವೆಗಳ ವೃತ್ತಿದಾರನು, ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗೆ ಸಂಬಂಧಿಸಿದಂತೆ, ದುರ್ನಡತೆಯ ತಪ್ಪಿತಸ್ಥನೆಂದು ಕಂಡುಬಂದಲ್ಲಿ, ಪ್ರಾಧಿಕೃತ ಅಧಿಕಾರಿಯು, ನಮೂನೆ ಜಿಎಸ್ಟಿ ಪಿಸಿಟಿ-03 ರಲ್ಲಿ ಅಂಥ ದುರ್ನಡತೆಗಾಗಿ ಕಾರಣವನ್ನು ಕೇಳುವ ಒಂದು ಸೂಚನಾಪತ್ರವನ್ನು ನೀಡಿದ ನಂತರ ಮತ್ತು ಆತನಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಯುಕ್ತವಾದ ಅವಕಾಶ ನೀಡಿದ ನಂತರ, ಅಲ್ಲಿಂದ ಮುಂದೆ ಅವನು, ಸರಕು ಮತ್ತು ಸೇವೆಗಳ ವೃತ್ತಿದಾರನಾಗಿ ಪ್ರಕಾರ್ಯ ನಿರ್ವಹಿಸಲು, ಪ್ರಕರಣ 48ರ ಅಡಿಯಲ್ಲಿ ಅನರ್ಹನಾಗಿರತಕ್ಕವನು ಎಂದು ನಮೂನೆ ಜಿಎಸ್ಟಿ ಪಿಸಿಟಿ-04ರಲ್ಲಿ ಆದೇಶದ ಮೂಲಕ, ನಿರ್ದೇಶಿಸಬಹುದು.
(5) ಉಪನಿಯಮ (4)ರ ಅಡಿಯಲ್ಲಿ, ಯಾರ ವಿರುದ್ದ ಒಂದು ಆದೇಶ ಮಾಡಲಾಗಿದೆಯೋ, ಆ ಯಾಮೊಬ್ಬ ವ್ಯಕ್ತಿಯು ಅಂಥ ಆದೇಶವನ್ನು ನೀಡಲಾದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ, ಅಂಥ ಆದೇಶದ ವಿರುದ್ಧ ಆಯುಕ್ತರಿಗೆ ಅಪೀಲನ್ನು ಸಲ್ಲಿಸಬಹುದು.
(6) ಯಾವುದೇ ನೋಂದಾಯಿತ ವ್ಯಕ್ತಿಯು, ಆತನ ಆಯ್ಕೆಯಂತೆ, ಒಬ್ಬ ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿಗಾರನನ್ನು ಸಾಮಾನ್ಯ ಪೋರ್ಟಲ್ನಲ್ಲಿ ನಮೂನೆ ಜಿಎಸ್ಟಿ ಪಿಸಿಟಿ-5ರಲ್ಲಿ ಪ್ರಾಧಿಕೃತಗೊಳಿಸಬಹುದು ಅಥವಾ, ಯಾವುದೇ ಸಮಯದಲ್ಲಿ, ಅಂಥ ಪ್ರಾಧಿಕರಣವನ್ನು, ನಮೂನೆ ಜಿಎಸ್ಟಿ ಪಿಸಿಟಿ-6ರಲ್ಲಿ ಹಿಂತೆಗೆದುಕೊಳ್ಳಬಹುದು ಮತ್ತು ಹಾಗೆ ಪ್ರಾಧಿಕೃತನಾದ ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನು, ಪ್ರಾಧಿಕರಣದ ಸಮಯದಲ್ಲಿ, ಸದರಿ ಪ್ರಾಧಿಕರಣದಲ್ಲಿ ಸೂಚಿಸಿದಂತೆ, ಅಂಥ ಕಾರ್ಯಗಳನ್ನು, ಕೈಗೊಳ್ಳಲು ಅವಕಾಶ ನೀಡತಕ್ಕದ್ದು.
(7) ಒಬ್ಬ ನೋಂದಾಯಿತ ವ್ಯಕ್ತಿಯು ಒದಗಿಸುವುದು ಅಗತ್ಯವಿರುವ ವಿವರಪತ್ರವು, ಆತನಿಂದ ಪ್ರಾಧಿಕೃತನಾದ ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಂದ ಒದಗಿಸಲಾಗಿದ್ದಲ್ಲಿ, ನೋಂದಾಯಿತ ವ್ಯಕ್ತಿಯಿಂದ ಒಂದು ಖಚಿತಪಡಿಸುವಿಕೆಯನ್ನು ಮಿಂಚೋಲೆ ಅಥವಾ ಎಸ್ಎಂಎಸ್ ಮೂಲಕ ಕೋರತಕ್ಕದ್ದು ಮತ್ತು ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಂದ ಒದಗಿಸಲಾದ ವಿವರಪತ್ರವನ್ನು ನೋಂದಾಯಿತ ವ್ಯಕ್ತಿಗೆ ಸಾಮಾನ್ಯ ಪೋರ್ಟಲ್ನಲ್ಲಿ ಲಭ್ಯವಾಗುವಂತೆ ಮಾಡತಕ್ಕದ್ದು.
ಪರಂತು, ನೊಂದಾಯಿತ ವ್ಯಕ್ತಿಯು ಖಚಿತಪಡಿಸುವಿಕೆಯ ಆ ಕೋರಿಕೆಗೆ, ಅಂಥ ವಿವರಪತ್ರವನ್ನು ಒದಗಿಸಲು ಇರುವ ಕೊನೆಯ ದಿನಾಂಕದ ವರೆಗೆ ಪ್ರತಿಕ್ರಿಯಿಸಲು ವಿಫಲನಾದಲ್ಲಿ, ಸರಕು ಮತ್ತು ಸೇವೆಗಳ ವೃತ್ತಿದಾರನಿಂದ ಒದಗಿಸಲಾಗಿರುವ ವಿವರಪತ್ರವನ್ನು ಅವನು ಖಚಿತಪಡಿಸಿದ್ದಾನೆ ಎಂದು ಪರಿಭಾವಿಸತಕ್ಕದ್ದು.
(8) ಒಬ್ಬ ಸರಕು ಮತ್ತು ಸೇವೆಗಳ ವೃತ್ತಿದಾರನು, ಕೆಳಕಂಡ ಯಾವುದಾದರೂ ಅಥವಾ ಎಲ್ಲಾ ಚಟುವಟಿಕೆಗಳನ್ನು ನೋಂದಾಯಿತ ವ್ಯಕ್ತಿಯ ಪರವಾಗಿ, ಹಾಗೆ ಆತನಿಂದ ಪ್ರಾಧಿಕೃತಗೊಂಡಿದ್ದರೆ, ಕೈಗೊಳ್ಳಬಹುದು.
(ಎ) ಹೊರಮುಖ ಮತ್ತು ಒಳಮುಖ ಪೂರೈಕೆಗಳ ವಿವರಗಳನ್ನು ಒದಗಿಸುವುದು;
(ಬಿ) ಮಾಸಿಕ, ತ್ರೈಮಾಸಿಕ, ವಾರ್ಷಿಕ ಅಥವಾ ಅಂತಿಮ ರಿಟರ್ನನ್ನು ಒದಗಿಸುವುದು;
(ಸಿ) ವಿದ್ಯುನ್ಮಾನ ನಗದು ಖಾತೆಯಲ್ಲಿ ಜಮೆಗಾಗಿ ಠೇವಣಿ ಮಾಡುವುದು;
(ಡಿ) ಮರುಪಾವತಿಗೆ ಒಂದು ಕ್ಲೇವiನ್ನು ಸಲ್ಲಿಸುವುದು; ಮತ್ತು
(ಇ) ನೋಂದಣಿಯ ತಿದ್ದುಪಡಿ ಅಥವಾ ರದ್ಧತಿಗಾಗಿ ಒಂದು ಅರ್ಜಿಯನ್ನು ಸಲ್ಲಿಸುವುದು:
261ನೇ ಜುಲೈ 2017ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಬಿ/2017) ದಿನಾಂಕ 01- 08-2017ರ ಮೂಲಕ “ಪ್ರಕರಣ” ಪದವನ್ನು “ನಿಯಮ” ಪದದಿಂದ ಪ್ರತಿಯೋಜಿಸಲಾಗಿದೆ.
27“(ಸಿ)” ಅಕ್ಷರಕ್ಕಾಗಿ ಶುದ್ಧಿಪತ್ರ ಸಂ. ಆಇ 48 ಸಿಎಸ್ಎಲ್ 2017 ದಿನಾಂಕ 28-12-2017 ರ ಮೂಲಕ ತಿದ್ದುಪಡಿ ಮಾಡಲಾಗಿದೆ.
ಪರಂತು, ಮರುಪಾವತಿಗಾಗಿ ಮಾಡಿರುವ ಒಂದು ಕ್ಲೇಮು ಅಥವಾ ನೋಂದಣಿಯ ತಿದ್ದುಪಡಿ ಅಥವಾ ರದ್ಧತಿಗಾಗಿ ಸಂಬಂಧಿಸಿದಂತೆ, ಒಂದು ಅರ್ಜಿಯು, ನೋಂದಾಯಿತ ವ್ಯಕ್ತಿಯಿಂದ ಪ್ರಾಧಿಕೃತನಾದ ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಂದ ಸಲ್ಲಿಕೆಯಾಗಿದ್ದಲ್ಲಿ, ನೋಂದಾಯಿತ ವ್ಯಕ್ತಿಯಿಂದ ಒಂದು ಖಚಿತಪಡಿಸುವಿಕೆಯನ್ನು ಕೋರತಕ್ಕದ್ದು ಮತ್ತು ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಂದ ಸಲ್ಲಿಕೆಯಾದ ಅರ್ಜಿಯನ್ನು, ನೋಂದಾಯಿತ ವ್ಯಕ್ತಿಗೆ ಸಾಮಾನ್ಯ ಪೋರ್ಟಲ್ನಲ್ಲಿ ಲಭ್ಯವಾಗುವಂತೆ ಮಾಡತಕ್ಕದ್ದು ಮತ್ತು ಅಂಥ ಅರ್ಜಿಯ ಮೇಲೆ, ಅದಕ್ಕೆ ನೊಂದಾಯಿತ ವ್ಯಕ್ತಿಯು ತನ್ನ ಸಮ್ಮತಿಯನ್ನು ನೀಡುವ ವರೆಗೆ, ಮುಂದುವರೆದು ಕ್ರಮ ಕೈಗೊಳ್ಳತಕ್ಕದ್ದಲ್ಲ.
(9) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನ ಮೂಲಕ ತನ್ನ ರಿಟರ್ನನ್ನು ಒದಗಿಸಲು ಆಯ್ಕೆ ಮಾಡಿಕೊಂಡಿರುವ ಯಾಮೊಬ್ಬ ನೋಂದಾಯಿತ ವ್ಯಕ್ತಿಯು,-
(ಎ) ಯಾವುದೇ ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಗೆ, ತನ್ನ ರಿಟರ್ನನ್ನು ಸಿದ್ಧಪಡಿಸಲು ಮತ್ತು ಒದಗಿಸಲು, ನಮೂನೆ ಜಿಎಸ್ಟಿ ಪಿಸಿಟಿ-05ರಲ್ಲಿ ತನ್ನ ಸಮ್ಮತಿಯನ್ನು ನೀಡತಕ್ಕದ್ದು; ಮತ್ತು
(ಬಿ) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನು ಸಿದ್ಧಪಡಿಸಿದ ಯಾವುದೇ ವಿವರಪತ್ರದ ಸಲ್ಲಿಸುವಿಕೆಯನ್ನು ಖಚಿತಪಡಿಸುವ ಮೊದಲು, ರಿಟರ್ನ್ನಲ್ಲಿ ನಮೂದಿಸಲಾದ ಸಂಗತಿಗಳು ನಿಜವಾಗಿವೆ ಹಾಗೂ ಸರಿಯಾಗಿವೆ ಎನ್ನುವುದನ್ನು ಖಾತರಿಪಡಿಸಿಕೊಳ್ಳತಕ್ಕದ್ದು.
(10) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನು.-
(ಎ) ಯುಕ್ತವಾದ ಜಾಗರೂಕತೆಯಿಂದ ವಿವರಪತ್ರಗಳನ್ನು ಸಿದ್ಧಪಡಿಸತಕ್ಕದ್ದು; ಮತ್ತು
(ಬಿ) ಆತನಿಂದ ಸಿದ್ಧಪಡಿಸಿದ ವಿವರಪತ್ರಗ ಅಂಕಿಚಿಹ್ನೆ ಸಹಿ ಹಾಕತಕ್ಕದ್ದು ಅಥವಾ ತನ್ನ ಪರಿಚಯ ಪತ್ರಗಳನ್ನು ಬಳಸಿ ವಿದ್ಯುನ್ಮಾನವಾಗಿ ದೃಢಪಡಿತಕ್ಕದ್ದು.
(11) ಯಾವುದೇ ಇತರ ರಾಜ್ಯ ಅಥವಾ ಕೆಂದ್ರಾಡಳಿತ ಪ್ರದೇಶದಲ್ಲಿ ದಾಖಲಾತಿ ಹೊಂದಿರುವ ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನನ್ನು, ಉಪನಿಯಮ (8)ರ ಉದ್ದೇಶಗಳಿಗಾಗಿ, ರಾಜ್ಯದಲ್ಲಿ ದಾಖಲಾತಿ ಹೊಂದಿದ್ದಾನೆ ಎಂದು ಪರಿಗಣಿಸತಕ್ಕದ್ದು.