(1) ಪ್ರಕರಣ 60ರ ಉಪಪ್ರಕರಣ (1)ರ ಉಪಬಂಧಗಳಿಗೆ ಅನುಸಾರವಾಗಿ ತಾತ್ಕಾಲಿಕ ಆಧಾರದಲ್ಲಿ ತೆರಿಗೆಯನ್ನು ಸಂದಾಯ ಮಾಡುವುದಕ್ಕಾಗಿ ಕೋರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಒಂದು ಅರ್ಜಿಯನ್ನು ಆತನ ಕೋರಿಕೆಗೆ ಪೂರಕವಾದ ದಸ್ತಾವೇಜುಗಳೊಂದಿಗೆ, ನಮೂನೆ ಜಿಎಸ್ಟಿ ಎಎಸ್ಎಂಟಿ-01ರಲ್ಲಿ, ಸಾಮಾನ್ಯ ಪೋರ್ಟಲ್ನ ಮುಖಾಂತರ ನೇರವಾಗಿಯಾಗಲಿ ಅಥವಾ ಆಯುಕ್ತರಿಂದ ಅಧಿಸೂಚಿಸಲಾದ ಒಂದು ಸಹಾಯ ಕೇಂದ್ರದ ಮೂಲಕವಾಗಿಯಾಗಲಿ, ವಿದ್ಯುನ್ಮಾನ ರೀತಿಯಲ್ಲಿ ಒದಗಿಸತಕ್ಕದ್ದು.
(2) ಯುಕ್ತ ಅಧಿಕಾರಿಯು, ಉಪನಿಯಮ (1)ರ ಅಡಿಯಲ್ಲಿ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಆತನ ಕೋರೀಕೆಗೆ ಪೂರಕವಾದ ಹೆಚ್ಚುವರಿ ಮಾಹಿತಿ ಅಥವಾ ದಸ್ತಾವೇಜುಗಳನ್ನು ಒದಗಿಸುವಂತೆ ನೋಂದಾಯಿತ ವ್ಯಕ್ತಿಯನ್ನು ಅಗತ್ಯಪಡಿಸಿ ನಮೂನೆ ಜಿಎಸ್ಟಿ ಎಎಸ್ಎಂಟಿ-02ರಲ್ಲಿ ಒಂದು ಸೂಚನಾ ಪತ್ರವನ್ನು ನೀಡಬಹುದು ಮತ್ತು ಅರ್ಜಿದಾರನು ಸೂಚನಾ ಪತ್ರಕ್ಕೆ ಉತ್ತರವನ್ನು ನಮೂನೆ ಜಿಎಸ್ಟಿ ಎಎಸ್ಎಂಟಿ-03ರಲ್ಲಿ ಸಲ್ಲಿಸತಕ್ಕದ್ದು, ಮತ್ತು ಆತನು ಹಾಗೆ ಅಪೇಕ್ಷಿಸಿದಲ್ಲಿ ಸದರಿ ಅಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗಬಹುದು.
(3) ಯುಕ್ತ ಅಧಿಕಾರಿಯು ತಾತ್ಕಾಲಿಕ ಆಧಾರದಲ್ಲಿ ತೆರಿಗೆ ಸಂದಾಯವನ್ನು ಅನುಮತಿಸಿ, ಯಾವ ಮೌಲ್ಯ ಅಥವಾ ದರ ಅಥವಾ ಅವುಗಳೆರಡರ ಆಧಾರದಲ್ಲಿ ಕರನಿರ್ಧರಣೆಯನ್ನು ತಾತ್ಕಾಲಿಕವಾಗಿ ಅನುಮತಿಸಬೇಕು ಮತ್ತು ಬಾಂಡ್ನ್ನು ಬರೆದುಕೊಡಬೇಕಾದ ಮೊತ್ತ ಮತ್ತು ಬಾಂಡ್ನ ಅಡಿಯಲ್ಲಿ ವ್ಯಾಪ್ತವಾದ ಮೊತ್ತದ ಶೇಕಡ ಇಪ್ಪತ್ತೈದರಷ್ಟನ್ನು ಮೀರಿದಂತೆ ಒದಗಿಸಬೇಕಾದ ಭದ್ರತೆಯನ್ನು ಸೂಚಿಸಿ, ಒಂದು ಆದೇಶವನ್ನು ನಮೂನೆ ಜಿಎಸ್ಟಿ ಎಎಸ್ಎಂಟಿ-04ರಲ್ಲಿ ಒಂದು ಆದೇಶವನ್ನು ನೀಡತಕ್ಕದ್ದು
(4) ನೋಂದಾಯಿತ ವ್ಯಕ್ತಿಯು, ಪ್ರಕರಣ 60ರ ಉಪಪ್ರಕರಣ (2)ರ ಉಪಬಂಧಗಳಿಗೆ ಅನುಸಾರವಾಗಿ ಒಂದು ಬಾಂಡನ್ನು ನಮೂನೆ ಜಿಎಸ್ಟಿ ಎಎಸ್ಎಂಟಿ-05ರಲ್ಲಿ, ಉಪನಿಯಮ (3)ರಲ್ಲಿ ನಿರ್ಧರಿಸಿದ ಒಂದು ಮೊತ್ತಕ್ಕಾಗಿ ಬ್ಯಾಂಕ್ ಖಾತರಿಯ ರೂಪದಲ್ಲಿ ಭದ್ರತೆಯ ಜೊತೆಗೆ ಬರೆದುಕೊಡತಕ್ಕದ್ದು.
ಪರಂತು, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಅಥವಾ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಯುಕ್ತ ಅಧಿಕಾರಿಗೆ ಒದಗಿಸಿದ ಒಂದು ಬಾಂಡನ್ನು, ಅಧಿನಿಯಮ ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳ ಉಪಬಂಧಗಳ ಅಡಿಯಲ್ಲಿ ಒದಗಿಸಿದ ಒಂದು ಬಾಂಡ್ ಎಂದು ಪರಿಗಣಿಸತಕ್ಕದ್ದು.
ವಿವರಣೆ.- ಈ ನಿಯಮಗಳ ಉದ್ದೇಶಗಳಿಗಾಗಿ, “ಮೊತ್ತ” ಎಂಬ ಪದಾವಳಿಯು ಆ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಏಕೀಕೃತ ತೆರಿಗೆ, ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆ ಮತ್ತು ಉಪಕರವನ್ನು ಒಳಗೊಳ್ಳತಕ್ಕದ್ದು.
(5) ಯುಕ್ತ ಅಧಿಕಾರಿಯು ಪ್ರಕರಣ 60ರ ಉಪಪ್ರಕರಣ (3)ರ ಅಡಿಯಲ್ಲಿ ಕರನಿರ್ಧರಣೆಯನು ಅಂತಿಮಗೊಳಿಸುವುದಕ್ಕಾಗಿ ಅಗತ್ಯವಿರುವ ಮಾಹಿತಿ ಮತ್ತು ದಾಖಲೆಗಳನ್ನು ಕರೆ ಮಾಡುವುದಕ್ಕಾಗಿ ಒಂದು ಸೂಚನಾ ಪತ್ರವನ್ನು ನಮೂನೆ ಜಿಎಸ್ಟಿ ಎಎಸ್ಎಂಟಿ-06ರಲ್ಲಿ ನೀಡತಕ್ಕದ್ದು ಮತ್ತು ನೋಂದಾಯಿತ ವ್ಯಕ್ತಿಯಿಂದ ಸಂದಾಯ ಮಾಡಬೇಕಾದ ಮೊತ್ತ ಅಥವಾ ಮರುಪಾವತಿ ಮಾಡಬಹುದಾದ ಮೊತ್ತವೇನಾದರು ಇದ್ದಲ್ಲಿ ಅದನ್ನು ನಿರ್ದಿಷ್ಟಪಡಿಸಿ, ಒಂದು ಅಂತಿಮ ಕರನಿರ್ಧರಣಾ ಆದೇಶವನ್ನು ನಮೂನೆ ಜಿಎಸ್ಟಿ ಎಎಸ್ಎಂಟಿ-07ರಲ್ಲಿ ನೀಡತಕ್ಕದ್ದು.
(6) ಉಪನಿಯಮ (5)ರ ಅಡಿಯಲ್ಲಿ ಆದೇಶದವನ್ನು ನೀಡಿದ ನಂತರ ಉಪನಿಯಮ (4)ರ ಅಡಿಯಲ್ಲಿ ಒದಗಿಸಿದ ಭದ್ರತೆಯನ್ನು ಬಿಡುಗಡೆಗೊಳಿಸುವುದಕ್ಕಾಗಿ ಅರ್ಜಿದಾರನು ಒಂದು ಅರ್ಜಿಯನ್ನುನಮೂನೆ ಜಿಎಸ್ಟಿ ಎಎಸ್ಎಂಟಿ-08ರಲ್ಲಿ ಸಲ್ಲಿಸತಕ್ಕದ್ದು.
(7) ಯುಕ್ತ ಅಧಿಕಾರಿಯು, ಅರ್ಜಿದಾರನು ಉಪನಿಯಮ (5)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮೊತ್ತವನ್ನು ಸಂದಾಯ ಮಾಡಿದ್ದಾನೆ ಎನ್ನುವುದನ್ನು ಖಾತರಿಪಡಿಸಿಕೊಂಡ ನಂತರ, ಉಪನಿಯಮ (4)ರ ಅಡಿಯಲ್ಲಿ ಒದಗಿಸಿದ ಭದ್ರತೆಯನ್ನು ಬಿಡುಗಡೆಗೊಳಿಸತಕ್ಕದ್ದು ಮತ್ತು ಉಪನಿಯಮ (6)ರ ಅಡಿಯಲ್ಲಿ ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳ ಅವಧಿಯ ಒಳಗಾಗಿ ನಮೂನೆ ಜಿಎಸ್ಟಿ ಎಎಸ್ಎಂಟಿ-09ರಲ್ಲಿ ಒಂದು ಆದೇಶವನ್ನು ನೀಡತಕ್ಕದ್ದು.
38ಅಧಿಸೂಚನೆ ಸಂ. ಆಇ 47 ಸಿಎಸ್ಎಲ್ 2017 (4-ಜೆ/2017) ದಿನಾಂಕ 03-01-2018ರ ಮೂಲಕ ಸೇರಿಸಲಾಗಿದೆ. [[