(1) ಯುಕ್ತ ಅಧಿಕಾರಿಯು,
(ಎ) ಪ್ರಕರಣ 73ರ ಉಪಪ್ರಕರಣ (1) ಅಥವಾ ಪ್ರಕರಣ 74ರ ಉಪಪ್ರಕರಣ (1) ಅಥವಾ ಪ್ರಕರಣ 76ರ ಉಪಪ್ರಕರಣ (2)ರ ಅಡಿಯಲ್ಲಿ ಒಂದು ಸೂಚನಾಪತ್ರವನ್ನು, ಅದರ ಒಂದು ಸಾರಾಂಶವನ್ನು ನಮೂನೆ ಜಿಎಸ್ಟಿ ಡಿಆರ್ಸಿ-01 ರಲ್ಲಿ ವಿದ್ಯುನ್ಮಾನ ರೀತಿಯಲ್ಲಿ,
(ಬಿ) ಪ್ರಕರಣ 73ರ ಉಪಪ್ರಕರಣ (3) ಅಥವಾ ಪ್ರಕರಣ 74ರ ಉಪಪ್ರಕರಣ (3) ಅಡಿಯಲ್ಲಿ ಒಂದು ವಿವರಪತ್ರವನ್ನು, ಅದರ ಒಂದು ಸಾರಾಂಶವನ್ನು ನಮೂನೆ ಜಿಎಸ್ಟಿ ಡಿಆರ್ಸಿ-02 ರಲ್ಲಿ ವಿದ್ಯುನ್ಮಾನ ರೀತಿಯಲ್ಲಿ, ಅದರಲ್ಲಿ ಸಂದಾಯ ಮಾಡಬೇಕಾದ ಮೊತ್ತವನ್ನು ನಿರ್ದಿಷ್ಟಪಡಿಸಿ ಅದರ ಜೊತೆಯಲ್ಲಿ ಜಾರಿಗೊಳಿಸತಕ್ಕದ್ದು.
(2) ಸೂಚನಾ ಪತ್ರ ಅಥವಾ ವಿವರಪತ್ರವನ್ನು ಜಾರಿಗೊಳಿಸುವ ಮೊದಲು, ತೆರಿಗೆಯನ್ನು ವಿಧಿಸಬಹುದಾದ ವ್ಯಕ್ತಿಯು, ಪ್ರಕರಣ 73ರ ಉಪಪ್ರಕರಣ (5)ರ ಉಪಬಂಧಗಳಿಗೆ ಅನುಸಾರವಾಗಿ ತೆರಿಗೆ ಮತ್ತು ಬಡ್ಡಿಯನ್ನು ಅಥವಾ ಸಂದರ್ಭಾನುಸಾರವಾಗಿ, ಪ್ರಕರಣ 74ರ ಉಪಪ್ರಕರಣ (5)ರ ಉಪಬಂಧಗಳಿಗೆ ಅನುಸಾರವಾಗಿ ತೆರಿಗೆ, ಬಡ್ಡಿ ಮತ್ತು ದಂಡವನ್ನು ಸಂದಾಯ ಮಾಡಿದಲ್ಲಿ, ಆತನು, ಅಂಥ ಸಂದಾಯವನ್ನು ನಮೂನೆ ಜಿಎಸ್ಟಿ ಡಿಆರ್ಸಿ-03 ರಲ್ಲಿ ಯುಕ್ತ ಅಧಿಕಾರಿಗೆ ತಿಳಿಸತಕ್ಕದ್ದು ಮತ್ತು ಯುಕ್ತ ಅಧಿಕಾರಿಯು ಸದರಿ ವ್ಯಕ್ತಿಯಿಂದ ಮಾಡಲಾದ ಸಂದಾಯವನ್ನು ಅಂಗೀಕರಿಸಿ ಒಂದು ಸ್ವೀಕೃತಿಯನ್ನು ನಮೂನೆ ಜಿಎಸ್ಟಿ ಡಿಆರ್ಸಿ-04ರಲ್ಲಿ ನೀಡತಕ್ಕದ್ದು.
(3) ತೆರಿಗೆಯನ್ನು ವಿಧಿಸಬಹುದಾದ ವ್ಯಕ್ತಿಯು, ಪ್ರಕರಣ 73ರ ಉಪಪ್ರಕರಣ (8)ರ ಅಡಿಯಲ್ಲಿ, ತೆರಿಗೆ ಮತ್ತು ಬಡ್ಡಿಯನ್ನು ಅಥವಾ ಸಂದರ್ಭಾನುಸಾರವಾಗಿ, ಪ್ರಕರಣ 74ರ ಉಪಪ್ರಕರಣ (8)ರ ಅಡಿಯಲ್ಲಿ ತೆರಿಗೆ, ಬಡ್ಡಿ ಮತ್ತು ದಂಡವನ್ನು, ನಿಯಮ (1)ರ ಅಡಿಯಲ್ಲಿ ಜಾರಿಗೊಳಿಸಿದ ಒಂದು ಸೂಚನಾಪತ್ರದ ಮೂವತ್ತು ದಿನಗಳ ಒಳಗಾಗಿ ಸಂದಾಯ ಮಾಡಿದಲ್ಲಿ, ಆತನು, ಅಂಥ ಸಂದಾಯವನ್ನು ನಮೂನೆ ಜಿಎಸ್ಟಿ ಡಿಆರ್ಸಿ-03 ರಲ್ಲಿ ಯುಕ್ತ ಅಧಿಕಾರಿಗೆ ತಿಳಿಸತಕ್ಕದ್ದು ಮತ್ತು ಯುಕ್ತ ಅಧಿಕಾರಿಯು ಸದರಿ ಸೂಚನಾ ಪತ್ರಕ್ಕೆ ಸಂಬಂಧಿಸಿದಂತೆ ನಡಾವಳಿಯನ್ನು ಮುಕ್ತಾಯಗೊಳಿಸಿ ಒಂದು ಆದೇಶವನ್ನು ನಮೂನೆ ಜಿಎಸ್ಟಿ ಡಿಆರ್ಸಿ-05ರಲ್ಲಿ ನೀಡತಕ್ಕದ್ದು.
(4) ಪ್ರಕರಣ 73ರ ಉಪಪ್ರಕರಣ (9)ರ ಮತ್ತು ಪ್ರಕರಣ 74ರ ಉಪಪ್ರಕರಣ (9)ರಲ್ಲಿ ಉಲ್ಲೇಖಿಸಲಾದ ವಿಜ್ಞಾಪನೆಯು ನಮೂನೆ ಜಿಎಸ್ಟಿ ಡಿಆರ್ಸಿ-06ರಲ್ಲಿರತಕ್ಕದ್ದು.
(5) ಪ್ರಕರಣ 73ರ ಉಪಪ್ರಕರಣ (9)ರ ಮತ್ತು ಪ್ರಕರಣ 74ರ ಉಪಪ್ರಕರಣ (9)ರ ಅಥವಾ ಪ್ರಕರಣ 76ರ ಉಪಪ್ರಕರಣ (3)ರ ಅಡಿಯಲ್ಲಿ ನೀಡಲಾದ ಆದೇಶದ ಸಾರಾಂಶವನ್ನು, ಅದರಲ್ಲಿ, ತೆರಿಗೆಯನ್ನು ವಿಧಿಸಬಹುದಾದ ವ್ಯಕ್ತಿಯು, ಸಂದಾಯ ಮಾಡಬೇಕಾದ ತೆರಿಗೆ, ಬಡ್ಡಿ ಮತ್ತು ದಂಡದ ಮೊತ್ತವನ್ನು ನಿರ್ದಿಷ್ಟಪಡಿಸಿ ನಮೂನೆ ಜಿಎಸ್ಟಿ ಡಿಆರ್ಸಿ-07ರಲ್ಲಿ ವಿದ್ಯುನ್ಮಾನ ರೀತಿಯಲ್ಲಿ, ಅಪ್ಲೋಡ್ ಮಾಡತಕ್ಕದ್ದು.
(6) ಉಪನಿಯಮ (5)ರಲ್ಲಿ ಉಲ್ಲೇಖಿಸಲಾದ ಆದೇಶವನ್ನು ವಸೂಲಾತಿಗಾಗಿ ಸೂಚನಾ ಪತ್ರವೆಂದು ಪರಿಭಾವಿಸತಕ್ಕದ್ದು.
(7) ಪ್ರಕರಣ 161ರ ಉಪಬಂಧಗಳಿಗೆ ಅನುಸಾರವಾಗಿ ಆದೇಶದ ಯಾವುದೇ ಸರಿಪಡಿಸುವಿಕೆಯನ್ನು ಯುಕ್ತ ಅದಿಕಾರಿಯು ನಮೂನೆ ಜಿಎಸ್ಟಿ ಡಿಆರ್ಸಿ-08ರಲ್ಲಿ ಮಾಡತಕ್ಕದ್ದು.