(1) ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಲು ನೋಂದಾಯಿತ ವ್ಯಕ್ತಿಯಿಂದ ಬಳಸಿಕೊಂಡ ಆಯ್ಕೆಯು ಸದರಿ ಪ್ರಕರಣ ಮತ್ತು ಈ ನಿಯಮಗಳ ಅಡಿಯಲ್ಲಿ ನಮೂದಿಸಲಾದ ಎಲ್ಲಾ ಷರತ್ತುಗಳನ್ನು ಈಡೇರಿಸುವ ವರೆಗೆ ಸಿಂಧುವಾಗಿರತಕ್ಕದ್ದು.
(2) ಉಪನಿಯಮ (1)ರಲ್ಲಿ ಉಲ್ಲೇಖಿಸಲಾದ ವ್ಯಕ್ತಿಯು, ಪ್ರಕರಣ 10ರಲ್ಲಿ ಅಥವಾ ಈ ಅಧ್ಯಾಯದ ಉಪಬಂಧಗಳಲ್ಲಿ ನಮೂದಿಸಲಾದ ಯಾವುದೇ ಷರತ್ತುಗಳನ್ನು ನೆರವೇರಿಸುವುದನ್ನು ಆತನು ನಿಲ್ಲಿಸಿದ ದಿನದಿಂದ ಪ್ರಕರಣ 9ರ ಉಪಪ್ರಕರಣ (1)ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವುದಕ್ಕೆ ಬಾಧ್ಯನಿರತಕ್ಕದ್ದು ಮತ್ತು ತದನಂತರ ಮಾಡಿದ ಪ್ರತಿಯೊಂದು ತೆರಿಗೆದಾಯಕ ಪೂರೈಕೆಗೆ ತೆರಿಗೆ ಬೆಲೆಪಟ್ಟಿಯನ್ನು ನೀಡತಕ್ಕದ್ದು ಮತ್ತು ಅಂಥ ಘಟನೆ ಸಂಭವಿಸಿದ ಏಳು ದಿನಗಳ ಒಳಗಾಗಿ ನಮೂನೆಜಿಎಸ್ಟಿ ಸಿಎಂಪಿ-04ರಲ್ಲಿ ಯೋಜನೆಯಿಂದ ಹಿಂದೆಸರಿಯುವಿಕೆಗಾಗಿಒಂದು ತಿಳಿಸುವಿಕೆ ಪತ್ರವನ್ನು ಸಹ ಸಲ್ಲಿಸತಕ್ಕದ್ದು.
(3) ರಾಜಿ ತೆರಿಗೆ ಯೋಜನೆಯಿಂದ ಹಿಂದೆ ಸರಿಯಲು ಉದ್ದೇಶಿಸಿರುವ ನೋಂದಾಯಿತ ವ್ಯಕ್ತಿಯು, ಅಂಥ ಹಿಂದೆ ಸರಿಯುವಿಕೆಯ ದಿನಾಂಕಕ್ಕಿಂತ ಮುಂಚಿತವಾಗಿ ಯುಕ್ತವಾಗಿ ಸಹಿಮಾಡಿದ ಅಥವಾ ವಿದ್ಯುನ್ಮಾನ ಪರಿಶೀಲನೆಯ ಕೋಡ್ ಮುಖಾಂತರ ಪರಿಶೀಲಿಸಿದ ಒಂದು ಅರ್ಜಿಯನ್ನು ನಮೂನೆಜಿಎಸ್ಟಿ ಸಿಎಂಪಿ-04ರಲ್ಲಿ,ವಿದ್ಯುನ್ಮಾನ ರೀತಿಯಲ್ಲಿ ಸಾಮಾನ್ಯ ಪೋರ್ಟಲ್ನಲ್ಲಿ ಸಲ್ಲಿಸತಕ್ಕದ್ದು.
(4) ನೋಂದಾಯಿತ ವ್ಯಕ್ತಿಯು ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಲು ಅರ್ಹನಾಗಿರಲಿಲ್ಲ ಅಥವಾ ಅಧಿನಿಯಮದಉಪಬಂಧಗಳನ್ನು ಅಥವಾ ಈ ಅಧ್ಯಾಯದ ಉಪಬಂಧಗಳನ್ನು ಉಲ್ಲಂಘಿಸಿದ್ದಾನೆ ಎಂದು ನಂಬಲು ಯುಕ್ತ ಅಧಿಕಾರಿಯು ಕಾರಣಗಳನ್ನು ಹೊಂದಿದ್ದರೆ, ಆತನು ಅಂಥ ವ್ಯಕ್ತಿಗೆ, ಒಂದು ಸೂಚನಾ ಪತ್ರವನ್ನು, ನಮೂನೆಜಿಎಸ್ಟಿ ಸಿಎಂಪಿ-05ರಲ್ಲಿ, ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವ ಆಯ್ಕೆಯನ್ನು ಏಕೆ ನಿರಾಕರಿಸತಕ್ಕದ್ದಲ್ಲ ಎನ್ನುವುದಕ್ಕೆ ಕಾರಣಗಳನ್ನು ಅಂಥ ಸೂಚನಾ ಪತ್ರವನ್ನು ಸ್ವೀಕರಿಸಿದ ಹದಿನೈದು ದಿನಗಳ ಒಳಗಾಗಿ ತೋರಿಸುವಂತೆ ನೀಡಬಹುದು.
(5) ಉಪನಿಯಮ (4)ರ ಅಡಿಯಲ್ಲಿ ನೀಡಲಾದ ಕಾರಣ ಕೇಳುವ ಸೂಚನಾ ಪತ್ರಕ್ಕೆ, ನೋಂದಾಯಿತ ವ್ಯಕ್ತಿಯಿಂದ ನಮೂನೆಜಿಎಸ್ಟಿ ಸಿಎಂಪಿ-06ರಲ್ಲಿ ಉತ್ತರವನ್ನು ಸ್ವೀಕರಿಸಿದ ನಂತರ, ಯುಕ್ತ ಅಧಿಕಾರಿಯು ಅಂಥ ಉತ್ತರವನ್ನು ಸ್ವೀಕರಿಸಿದ ಮೂವತ್ತು ದಿನಗಳ ಅವಧಿಯ ಒಳಗಾಗಿ, ಸಂದರ್ಭಾನುಸಾರವಾಗಿ ಉತ್ತರವನ್ನು ಅಂಗೀಕರಿಸಿಯಾಗಲಿ, ಅಥವಾ ಆಯ್ಕೆಯ ದಿನಾಂಕದಿಂದ ಅಥವಾ ಸಂಬಂಧಪಟ್ಟ ಅಂಥ ಉಲ್ಲಂಘನೆಯ ಘಟನೆಯ ದಿನಾಂಕದಿಂದ ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವ ಆಯ್ಕೆಯನ್ನು ನಿರಾಕರಿಸಿಯಾಗಲಿಒಂದು ಆದೇಶವನ್ನು ನಮೂನೆಜಿಎಸ್ಟಿ ಸಿಎಂಪಿ- 07ರಲ್ಲಿ ನೀಡತಕ್ಕದ್ದು
(6) ಉಪನಿಯಮ (2)ರ ಅಡಿಯಲ್ಲಿ ಒಂದು ತಿಳಿಸುವಿಕೆ ಪತ್ರವನ್ನು ಒದಗಿಸಿರುವ ಅಥವಾ ಉಪನಿಯಮ (3)ರ ಅಡಿಯಲ್ಲಿ ಹಿಂದೆಸರಿಯುವಿಕೆಯ ಒಂದು ಅರ್ಜಿಯನ್ನು ಸಲ್ಲಿಸಿರುವ ಪ್ರತಿಯೊಬ್ಬ ವ್ಯಕ್ತಿಯು ಅಥವಾ ಉಪನಿಯಮ (5)ರ ಅಡಿಯಲ್ಲಿ ಆಯ್ಕೆಯನ್ನು ಹಿಂತೆಗೆದುಕೊಳ್ಳುವ ಒಂದು ಆದೇಶವನ್ನು ನಮೂನೆಜಿಎಸ್ಟಿ ಸಿಎಂಪಿ-07ರಲ್ಲಿ ಹೊರಡಿಸಲಾಗಿರುವುದಕ್ಕೆ ಸಂಬಂಧಿಸಿರುವ ಒಬ್ಬ ವ್ಯಕ್ತಿಯು, ಆಯ್ಕೆಯನ್ನು ಹಿಂತೆಗೆದುಕೊಂಡಿರುವ ಅಥವಾ ನಿರಾಕರಿಸಿರುವ ದಿನಾಂಕದಂದು, ಆತನು ದಾಸ್ತಾನಿನಲ್ಲಿ ಹೊಂದಿರುವ ಹೂಡುವಳಿಗಳ ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ಧರೂಪದ ಅಥವಾ ಸಿದ್ಧರೂಪದ ಸರಕುಗಳಲ್ಲಿ ಒಳಗೊಂಡಿರುವ ಹೂಡುವಳಿಗಳ ವಿವರಗಳನ್ನು ಒಳಗೊಂಡಿರುವ ಒಂದು ವಿವರಪತ್ರವನ್ನ್ಲು ಆಯ್ಕೆಯನ್ನು ಹಿಂತೆಗೆದುಕೊಂಡ ದಿನಾಂಕದಿಂದ ಅಥವಾ ಸಂದರ್ಭಾನುಸಾರವಾಗಿ ನಮೂನೆಜಿಎಸ್ಟಿ ಸಿಎಂಪಿ-07ರಲ್ಲಿ ಹೊರಡಿಸಿದ ಆದೇಶದ ದಿನಾಂಕದಿಂದ ಮೂವತ್ತು ದಿನಗಳ ಅವಧಿಯ ಒಳಗಾಗಿ ನಮೂನೆಜಿಎಸ್ಟಿ ಐಟಿಸಿ-01ರಲ್ಲಿ ಸಾಮಾನ್ಯ ಪೋರ್ಟಲ್ನಲ್ಲಿ, ನೇರವಾಗಿಯಾಗಲಿ ಅಥವಾ ಆಯುಕ್ತರಿಂದ ಅಧಿಸೂಚಿಸಲಾದ ಒಂದು ಸಹಾಯ ಕೇಂದ್ರದ ಮೂಲಕವಾಗಿಯಾಗಲಿ ವಿದ್ಯುನ್ಮಾನ ರೀತಿಯಲ್ಲಿ ಒದಗಿಸತಕ್ಕದ್ದು.
(7) ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿನ ಯಾವುದೇ ವ್ಯವಹಾರ ಸ್ಥಳಕ್ಕೆ ಸಂಬಂಧಿಸಿದಂತೆಉಪನಿಯಮ (2) ಅಥವಾ (3)ರ ಅಡಿಯಲ್ಲಿ ಹಿಂಪಡೆಯುವಿಕೆಗಾಗಿ ಅಥವಾ ಉಪನಿಯಮ (5)ಕ್ಕೆ ಅನುಸಾರವಾಗಿ ಪ್ರಕರಣ 10ರ ಅಡಿಯಲ್ಲಿ ತೆರಿಗೆ ಸಂದಾಯದ ಆಯ್ಕೆಯನ್ನು ನಿರಾಕರಿಸುವುದಕ್ಕಾಗಿನ, ಯಾವುದೇ ತಿಳಿಸುವಿಕೆಯ ಪತ್ರ ಅಥವಾ ಅರ್ಜಿಯನ್ನು, ಅದೇ ಶಾಶ್ವತ ಖಾತೆ ಸಂಖ್ಯೆಯ ಮೇಲೆ ನೋಂದಾಯಿತವಾದ ಎಲ್ಲಾ ಇತರ ವ್ಯವಹಾರ ಸ್ಥಳಗಳಿಗೆ ಸಂಬಂಧಿಸಿದ ಒಂದು ತಿಳಿಸುವಿಕೆಯಪತ್ರ ಎಂದು ಪರಿಭಾವಿಸತಕ್ಕದ್ದು.