(1) ಪ್ರಕರಣ 38ರ ಉಪಪ್ರಕರಣ (2)ರ ಅಡಿಯಲ್ಲಿ ಒಂದು ತೆರಿಗೆ ಅವಧಿಯಲ್ಲಿ ಸ್ವೀಕರಿಸಿದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುಖ ಪೂರೈಕೆಯ ವಿವರಗಳನ್ನು ಸಲ್ಲಿಸುವುದು ಅಗತ್ಯವಿರುವ, ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ ಪ್ರಕರಣ 14ರಲ್ಲಿ ಉಲ್ಲೇಖಿಸಲಾದ ವ್ಯಕ್ತಿಯನ್ನು ಹೊರತುಪಡಿಸಿದಂತಹ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ನಮೂನೆ ಜಿಎಸ್ಟಿಆರ್-02ಎನ ಭಾಗ ಎ, ಭಾಗ ಬಿ ಮತ್ತು ಭಾಗ ಸಿನಲ್ಲಿ ಒಳಗೊಂಡಿರುವ ವಿವರಗಳ ಆಧಾರದ ಮೇಲೆ, ಸದರಿ ಪ್ರಕರಣದ ಉಪ ಪ್ರಕರಣ (1)ರಲ್ಲಿ ನಿರ್ಧಿಷ್ಟಪಡಿಸಿದಂತೆ ಅಂಥ ವಿವರಗಳನ್ನು ಸಿದ್ಧಪಡಿಸತಕ್ಕದ್ದು ಮತ್ತು ಪ್ರಕರಣ 38ರ ಉಪಪ್ರಕರಣ (2)ರ ಅಡಿಯಲ್ಲಿ ಒದಗಿಸಲು ಅಗತ್ಯವಿರುವ ಯಾವುದಾದರೂ ಅಂಥ ಇತರ ಒಳಮುಖ ಪೂರೈಕೆಗಳು ಏನಾದರು ಇದ್ದಲ್ಲಿ ಅದರಲ್ಲಿ ಸೇರಿಸಿದ ನಂತರ, ಅದನ್ನು ನಮೂನೆ ಜಿಎಸ್ಟಿಆರ್-2ರಲ್ಲಿ, ಸಾಮಾನ್ಯ ಪೋರ್ಟಲ್ನ ಮುಖಾಂತರ ನೇರವಾಗಿಯಾಗಲಿ ಅಥವಾ ಆಯುಕ್ತರಿಂದ ಅಧಿಸೂಚಿಸಲಾದ ಒಂದು ಸಹಾಯ ಕೇಂದ್ರದ ಮೂಲಕವಾಗಿಯಾಗಲಿ, ವಿದ್ಯುನ್ಮಾನ ರೀತಿಯಲ್ಲಿ ಒದಗಿಸತಕ್ಕದ್ದು.
(2) ಪ್ರಕರಣ 38ರ ಉಪಪ್ರಕರಣ (5)ರ ಅಡಿಯಲ್ಲಿ ಒದಗಿಸುವುದು ಅಗತ್ಯವಿರುವ ಯಾವುದಾದರೂ ವಿವರಗಳು ಏನಾದರು ಇದ್ದಲ್ಲಿ, ಅದನ್ನು ನಮೂನೆ ಜಿಎಸ್ಟಿಆರ್-2ರಲ್ಲಿ ವಿದ್ಯುನ್ಮಾನ ರೀತಿಯಲ್ಲಿ ಒದಗಿಸತಕ್ಕದ್ದು.
(3) ನೋಂದಾಯಿತ ವ್ಯಕ್ತಿಯು, ನಮೂನೆ ಜಿಎಸ್ಟಿಆರ್-2ರಲ್ಲಿ ಹೂಡುವಳಿ ತೆರಿಗೆ ಜಮೆಗಾಗಿ ಪೂರ್ಣವಾಗಿಯಾಗಲಿ ಅಥವಾ ಭಾಗಶಃವಾಗಿಯಾಗಲಿ ಆತನು ಅರ್ಹನಾಗಿಲ್ಲದಿರುವುದಕ್ಕೆ ಸಂಬಂಧಿಸಿದ ಒಳಮುಖ ಪೂರೈಕೆಗಳನ್ನು, ಅಂಥ ಅರ್ಹತೆಯನ್ನು ಬೆಲೆಪಟ್ಟಿಯ ಮಟ್ಟದಲ್ಲಿಯೇ ನಿರ್ಧರಿಸಲು ಸಾಧ್ಯವಿದ್ದಲ್ಲಿ, ನಿರ್ಧಿಷ್ಟಪಡಿಸತಕ್ಕದ್ದು.
(4) ನೋಂದಾಯಿತ ವ್ಯಕ್ತಿಯು, ತೆರಿಗೆರಹಿತ ಪೂರೈಕೆಗಳಿಗೆ ಅಥವಾ ವ್ಯವಹಾರವನ್ನು ಹೊರತುಪಡಿಸಿದ ಇತರ ಉದ್ದೇಶಗಳಿಗೆ ಮತ್ತು ಬೆಲೆಪಟ್ಟಿಯ ಮಟ್ಟದಲ್ಲಿಯೇ ನಿರ್ಧರಿಸಲು ಸಾಧ್ಯವಿಲ್ಲದಿರುವುದಕ್ಕೆ, ಸಂಬಂಧಿಸಬಹುದಾದ ಒಳಮುಖ ಪೂರೈಕೆಗಳ ಮೇಲಿನ ಅನರ್ಹ ಹೂಡುವಳಿ ತೆರಿಗೆ ಜಮೆಯ ಪ್ರಮಾಣವನ್ನು ನಮೂನೆ ಜಿಎಸ್ಟಿಆರ್-2ರಲ್ಲಿ ಘೋಷಿಸತಕ್ಕದ್ದು.
(5) ಒಬ್ಬ ಅನಿವಾಸಿ ತೆರಿಗೆದಾಯಕ ವ್ಯಕ್ತಿಯು, ನಿಯಮ 63ರ ಅಡಿಯಲ್ಲಿ ನಮೂನೆ ಜಿಎಸ್ಟಿಆರ್-5ರಲ್ಲಿನ ತನ್ನ ರಿಟರ್ನಿನಲ್ಲಿ ಒದಗಿಸಿದ ಬೆಲೆಪಟ್ಟಿಯ ವಿವರಗಳನ್ನು, ಸಾಮಾನ್ಯ ಪೋರ್ಟಲ್ ಮುಖಾಂತರ, ಜಮೆಯನ್ನು ಸ್ವೀಕರಿಸುವವನಿಗೆ ನಮೂನೆ ಜಿಎಸ್ಟಿಆರ್-2ಎಯ ಭಾಗ ಎ ನಲ್ಲಿ ವಿದ್ಯುನ್ಮಾನ ರೀತಿಯಲ್ಲಿ ಲಭ್ಯ ಮಾಡತಕ್ಕದ್ದು ಮತ್ತು ಸದರಿ ಸ್ವೀಕರಿಸುವವನು ಅದನ್ನು ನಮೂನೆ ಜಿಎಸ್ಟಿಆರ್-2ರಲ್ಲಿ ಸೇರಿಸಿಕೊಳ್ಳಬಹುದು.
(6) ಒಬ್ಬ ಹೂಡುವಳಿ ಸೇವೆ ಹಂಚಿಕೆದಾರನು, ನಿಯಮ 65ರ ಅಡಿಯಲ್ಲಿ ನಮೂನೆ ಜಿಎಸ್ಟಿಆರ್-6ರಲ್ಲಿನ ತನ್ನ ರಿಟರ್ನಿನಲ್ಲಿ ಒದಗಿಸಿದ ಬೆಲೆಪಟ್ಟಿಯ ವಿವರಗಳನ್ನು, ಸಾಮಾನ್ಯ ಪೋರ್ಟಲ್ ಮುಖಾಂತರ, ಜಮೆಯನ್ನು ಸ್ವೀಕರಿಸುವವನಿಗೆ ನಮೂನೆ ಜಿಎಸ್ಟಿಆರ್-2ಎಯ ಭಾಗ ಬಿ ಯಲ್ಲಿ ವಿದ್ಯುನ್ಮಾನ ರೀತಿಯಲ್ಲಿ ಲಭ್ಯ ಮಾಡತಕ್ಕದ್ದು ಮತ್ತು ಸದರಿ ಸ್ವೀಕರಿಸುವವನು ಅದನ್ನು ನಮೂನೆ ಜಿಎಸ್ಟಿಆರ್-2ರಲ್ಲಿ ಸೇರಿಸಿಕೊಳ್ಳಬಹುದು.
(7) ಒಬ್ಬ ಮುರುಗಡೆದಾರನು, ಪ್ರಕರಣ 39ರ ಉಪಪ್ರಕರಣ (3)ರ ಅಡಿಯಲ್ಲಿ ನಮೂನೆ ಜಿಎಸ್ಟಿಆರ್-7ರಲ್ಲಿ ಒದಗಿಸಿದ, ಮೂಲದಲ್ಲಿ ತೆರಿಗೆಯನ್ನು ಮುರುಗಡೆಗೊಳಿಸಿದ ವಿವರಗಳನ್ನು, ಸಾಮಾನ್ಯ ಪೋರ್ಟಲ್ ಮುಖಾಂತರ, ಮುರುಗಡೆಗೊಳಗಾಗುವನಿಗೆ ನಮೂನೆ ಜಿಎಸ್ಟಿಆರ್-2ಎಯ ಭಾಗ ಸಿ ಯಲ್ಲಿ ವಿದ್ಯುನ್ಮಾನ ರೀತಿಯಲ್ಲಿ ಲಭ್ಯ ಮಾಡತಕ್ಕದ್ದು ಮತ್ತು ಸದರಿ ಮುರುಗಡೆಗೊಳಗಾಗುವವನು ಅದನ್ನು ನಮೂನೆ ಜಿಎಸ್ಟಿಆರ್-2ರಲ್ಲಿ ಸೇರಿಸಿಕೊಳ್ಳಬಹುದು.
(8) ಒಬ್ಬ ವಿದ್ಯುನ್ಮಾನ ವಾಣಿಜ್ಯ ನಿರ್ವಾಹಕನು, ಪ್ರಕರಣ 52ರ ಅಡಿಯಲ್ಲಿ ನಮೂನೆ ಜಿಎಸ್ಟಿಆರ್-8ರಲ್ಲಿ ಒದಗಿಸಿದ, ಮೂಲದಲ್ಲಿ ತೆರಿಗೆಯನ್ನು ಸಂಗ್ರಹಿಸಿದ ವಿವರಗಳನ್ನು, ಸಾಮಾನ್ಯ ಪೋರ್ಟಲ್ ಮುಖಾಂತರ, ಸಂಬಂಧಿಸಿದ ವ್ಯಕ್ತಿಗೆ ನಮೂನೆ ಜಿಎಸ್ಟಿಆರ್-2ಎಯ ಭಾಗ ಸಿ ಯಲ್ಲಿ ವಿದ್ಯುನ್ಮಾನ ರೀತಿಯಲ್ಲಿ ಲಭ್ಯ ಮಾಡತಕ್ಕದ್ದು ಮತ್ತು ಅಂಥ ವ್ಯಕ್ತಿಯು ಅದನ್ನು ನಮೂನೆ ಜಿಎಸ್ಟಿಆರ್-2ರಲ್ಲಿ ಸೇರಿಸಿಕೊಳ್ಳಬಹುದು.
(9) ನಮೂನೆ ಜಿಎಸ್ಟಿಆರ್-2ರಲ್ಲಿ ಒದಗಿಸಿದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುಖ ಪೂರೈಕೆಗಳ ವಿವರಗಳು, ಇತರ ವಿಷಯಗಳೊಡನೆ, ಕೆಳಕಂಡವುಗಳನ್ನು ಒಳಗೊಂಡಿರತಕ್ಕದ್ದು,-
(ಎ) ನೋಂದಾಯಿತ ಅಥವಾ ಅನೋಂದಾಯಿತ ವ್ಯಕ್ತಿಗಳಿಂದ ಸ್ವೀಕರಿಸಿದ ರಾಜ್ಯದೊಳಗಿನ ಮತ್ತು ಅಂತರ ರಾಜ್ಯದ ಎಲ್ಲಾ ಪೂರೈಕೆಗಳ ಬೆಲೆಪಟ್ಟಿವಾರು ವಿವರಗಳು;
(ಬಿ)ಸರಕು ಅಥವಾ ಸೇವೆಗಳನ್ನು ಆಮದು ಮಾಡಿರುವುದು; ಮತ್ತು
(ಸಿ) ಪೂರೈಕೆದಾರನಿಂದ ಸ್ವೀಕರಿಸಿದ ಖರ್ಚು ಮತ್ತು ಜಮೆ ಚೀಟಿಗಳು ಏನಾದರೂ ಇದ್ದರೆ.