(1) ಪ್ರಕರಣ 107ರ ಉಪಪ್ರಕರಣ (2)ರ ಅಡಿಯಲ್ಲಿ ಅಪೀಲು ಪ್ರಾಧಿಕಾರಕ್ಕೆ ಒಂದು ಅರ್ಜಿಯನ್ನು ನಮೂನೆ ಜಿಎಸ್ಟಿ ಎಪಿಎಲ್-03ರಲ್ಲಿ, ಸಂಬಂಧಪಟ್ಟ ದಸ್ತಾವೇಜುಗಳೊಂದಿಗೆ, ವಿದ್ಯುನ್ಮಾನ ರೀತಿಯಾಗಲಿ ಅಥವಾ ಆಯುಕ್ತರು ಅಧಿಸೂಚಸಬಹುದಾದಂತೆ ಅನ್ಯಥಾ ರೀತಿಯಲ್ಲಾಗಲಿ ಸಲ್ಲಿಸತಕ್ಕದ್ದು,
(2) ಅದರ ವಿರುದ್ಧವಾಗಿ ಅಪೀಲು ಮಾಡಲಾಗಿರುವ ನಿರ್ಣಯ ಅಥವಾ ಆದೇಶದ ಪ್ರಮಾಣೀಕರಿಸಿದ ಪ್ರತಿಯನ್ನು ಉಪನಿಯಮ (1)ರ ಅಡಿಯಲ್ಲಿ ಅಪೀಲನ್ನು ಸಲ್ಲಿಸಿದ ಏಳು ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು ಮತ್ತು ತದನಂತರ ಅಪೀಲು ಪ್ರಾಧಿಕಾರ ಅಥವಾ ಆತನಿಂದ ಈ ಸಂಬಂಧದಲ್ಲಿ ಪ್ರಾಧಿಕೃತಗೊಳಿಸಿದ ಒಬ್ಬ ಅಧಿಕಾರಿಯಿಂದ, ಅಪೀಲು ಸಂಖ್ಯೆಯನ್ನು ಸೃಷ್ಟಿಸತಕ್ಕದ್ದು.
41[109ಎ.ಅಪೀಲು ಪ್ರಾಧಿಕಾರದ ನೇಮಕಾತಿ- (1) ಈ ಅಧಿನಿಯಮ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಹೊರಡಿಸಲಾದ ಯಾವುದೇ ನಿರ್ಣಯ ಅಥವಾ ಆದೇಶದಿಂದ ಬಾಧಿತನಾದ ಯಾವುದೇ ವ್ಯಕ್ತಿಯು ಅಪೀಲನ್ನು ಕೆಳಕಂಡವರುಗಳಿಗೆ-
(ಎ) ಅಂಥ ನಿರ್ಣಯ ಅಥವಾ ಆದೇಶವು ಜಂಟಿ ಆಯುಕ್ತರಿಂದ ಹೊರಡಿಸಲಾಗಿದ್ದಲ್ಲಿ, ಅಪರ ಆಯುಕ್ತರು (ಅಪೀಲುಗಳು);
(ಬಿ) ಅಂಥ ನಿರ್ಣಯ ಅಥವಾ ಆದೇಶವು ಉಪ ಅಥವಾ ಸಹಾಯಕ ಆಯುಕ್ತರು ಅಥವಾ ವಾಣಿಜ್ಯ ತೆರಿಗೆ ಅಧಿಕಾಯಿಂದ ಹೊರಡಿಸಲಾಗಿದ್ದಲ್ಲಿ, ಜಂಟಿ ಆಯುಕ್ತರು (ಅಪೀಲುಗಳು)ರವರಿಗೆ ಸದರಿ ನಿರ್ಣಯ ಅಥವಾ ಆದೇಶವು ಅಂಥ ವ್ಯಕ್ತಿಗೆ ತಿಳಿಸಲ್ಪಟ್ಟ ದಿನಾಂಕದಿಂದ ಮೂರು ತಿಂಗಳುಗಳ ಒಳಗಾಗಿ ಸಲ್ಲಿಸಬಹುದು.
(2) ಈ ಅಧಿನಿಯಮ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಹೊರಡಿಸಲಾದ ಯಾವುದೇ ನಿರ್ಣಯ ಅಥವಾ ಆದೇಶದ ವಿರುದ್ದವಾಗಿ ಅಪೀಲನ್ನು ಸಲ್ಲಿಸಲು ಪ್ರಕರಣ 107ರ ಉಪಪ್ರಕರಣ (2)ರ ಅಡಿಯಲ್ಲಿ ನಿರ್ದೇಶಿತನಾದ ಒಬ್ಬ ಅಧಿಕಾರಿಯು ಅಪೀಲನ್ನು -
(ಎ) ಅಂಥ ನಿರ್ಣಯ ಅಥವಾ ಆದೇಶವು ಜಂಟಿ ಆಯುಕ್ತರಿಂದ ಹೊರಡಿಸಲಾಗಿದ್ದಲ್ಲಿ, ಅಪರ ಆಯುಕ್ತ (ಅಪೀಲುಗಳು) ರವರಿಗೆ;
(ಬಿ) ಅಂಥ ನಿರ್ಣಯ ಅಥವಾ ಆದೇಶವು ಉಪ ಅಥವಾ ಸಹಾಯಕ ಆಯುಕ್ತರು ಅಥವಾ ವಾಣಿಜ್ಯ ತೆರಿಗೆ ಅಧಿಕಾಯಿಂದ ಹೊರಡಿಸಲಾಗಿದ್ದಲ್ಲಿ, ಜಂಟಿ ಆಯುಕ್ತ (ಅಪೀಲುಗಳು)ರವರಿಗೆ ಸದರಿ ನಿರ್ಣಯ ಅಥವಾ ಆದೇಶವು ಅಂಥ ವ್ಯಕ್ತಿಗೆ ತಿಳಿಸಲ್ಪಟ್ಟ ದಿನಾಂಕದಿಂದ ಮೂರು ತಿಂಗಳುಗಳ ಒಳಗಾಗಿ ಸಲ್ಲಿಸಬಹುದು.
(2) ಈ ಅಧಿನಿಯಮ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಹೊರಡಿಸಲಾದ ಯಾವುದೇ ನಿರ್ಣಯ ಅಥವಾ ಆದೇಶದ ವಿರುದ್ದವಾಗಿ ಅಪೀಲನ್ನು ಸಲ್ಲಿಸಲು ಪ್ರಕರಣ 107ರ ಉಪಪ್ರಕರಣ (2)ರ ಅಡಿಯಲ್ಲಿ ನಿರ್ದೇಶಿತನಾದ ಒಬ್ಬ ಅಧಿಕಾರಿಯು ಅಪೀಲನ್ನು -
(ಎ) ಅಂಥ ನಿರ್ಣಯ ಅಥವಾ ಆದೇಶವು ಜಂಟಿ ಆಯುಕ್ತರಿಂದ ಹೊರಡಿಸಲಾಗಿದ್ದಲ್ಲಿ, ಅಪರ ಆಯುಕ್ತ (ಅಪೀಲುಗಳು) ರವರಿಗೆ;
(ಬಿ) ಅಂಥ ನಿರ್ಣಯ ಅಥವಾ ಆದೇಶವು ಉಪ ಅಥವಾ ಸಹಾಯಕ ಆಯುಕ್ತರು ಅಥವಾ ವಾಣಿಜ್ಯ ತೆರಿಗೆ ಅಧಿಕಾಯಿಂದ ಹೊರಡಿಸಲಾಗಿದ್ದಲ್ಲಿ, ಜಂಟಿ ಆಯುಕ್ತ (ಅಪೀಲುಗಳು)ರವರಿಗೆ ಸದರಿ ನಿರ್ಣಯ ಅಥವಾ ಆದೇಶವು ತಿಳಿಸಲ್ಪಟ್ಟ ದಿನಾಂಕದಿಂದ ಆರು ತಿಂಗಳುಗಳ ಒಳಗಾಗಿ ಸಲ್ಲಿಸಬಹುದು.] 40ಅಧಿಸೂಚನೆ ಸಂ. ಆಇ 47 ಸಿಎಸ್ಎಲ್ 2017 (4-ಜೆ/2017) ದಿನಾಂಕ 03-01-2018ರ ಮೂಲಕ ಸೇರಿಸಲಾಗಿದೆ.
41ಅಧಿಸೂಚನೆ ಸಂ. ಆಇ 47 ಸಿಎಸ್ಎಲ್ 2017 (4-ಜೆ/2017) ದಿನಾಂಕ 03-01-2018ರ ಮೂಲಕ ಸೇರಿಸಲಾಗಿದೆ.