(1) ಪ್ರಕರಣ 107ರ ಉಪಪ್ರಕರಣ (1)ರ ಅಡಿಯಲ್ಲಿ ಅಪೀಲು ಪ್ರಾಧಿಕಾರಕ್ಕೆ ಒಂದು ಅಪೀಲನ್ನು ನಮೂನೆ ಜಿಎಸ್ಟಿ ಎಪಿಎಲ್-01ರಲ್ಲಿ, ಸಂಬಂಧಪಟ್ಟ ದಸ್ತಾವೇಜುಗಳೊಂದಿಗೆ, ವಿದ್ಯುನ್ಮಾನ ರೀತಿಯಾಗಲಿ ಅಥವಾ ಆಯುಕ್ತರು ಅಧಿಸೂಚಸಬಹುದಾದಂತೆ ಅನ್ಯಥಾ ರೀತಿಯಲ್ಲಾಗಲಿ ಸಲ್ಲಿಸತಕ್ಕದ್ದು, ಮತ್ತು ಅಪೀಲುದಾರನಿಗೆ ಕೂಡಲೇ ಒಂದು ತಾತ್ಕಾಲಿಕ ಸ್ವೀಕೃತಿಯನ್ನು ನೀಡತಕ್ಕದ್ದು.
(2) ನಮೂನೆ ಜಿಎಸ್ಟಿ ಎಪಿಎಲ್-01ರಲ್ಲಿ ಒಳಗೊಂಡಂತೆ ಅಪೀಲಿನ ಕಾರಣಾಧಾರಗಳು ಮತ್ತು ಪರಿಶೀಲನೆಯ ನಮೂನೆಯನ್ನು ನಿಯಮ 26ರಲ್ಲಿ ನಿರ್ದಿಷ್ಟಪಡಿಸಿರುವ ವಿಧಾನದಲ್ಲಿ ಸಹಿಮಾಡಿರತಕ್ಕದ್ದು.
(3) ಅದರ ವಿರುದ್ಧವಾಗಿ ಅಪೀಲು ಮಾಡಲಾಗಿರುವ ನಿರ್ಣಯ ಅಥವಾ ಆದೇಶದ ಪ್ರಮಾಣೀಕರಿಸಿದ ಪ್ರತಿಯನ್ನು ಉಪನಿಯಮ (1)ರ ಅಡಿಯಲ್ಲಿ ಅಪೀಲನ್ನು ಸಲ್ಲಿಸಿದ ಏಳು ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು ಮತ್ತು ತದನಂತರ ಅಪೀಲು ಪ್ರಾಧಿಕಾರ ಅಥವಾ ಆತನಿಂದ ಈ ಸಂಬಂಧದಲ್ಲಿ ಪ್ರಾಧಿಕೃತಗೊಳಿಸಿದ ಒಬ್ಬ ಅಧಿಕಾರಿಯು, ಅಪೀಲು ಸಂಖ್ಯೆಯನ್ನು ಸೂಚಿಸಿದ ಒಂದು ಅಂತಿಮ ಸ್ವೀಕೃತಿಯನ್ನು, ನಮೂನೆ ಜಿಎಸ್ಟಿ ಎಪಿಲ್-02ರಲ್ಲಿ ನೀಡತಕ್ಕದ್ದು.
ಪರಂತು, ನಿರ್ಣಯ ಅಥವಾ ಆದೇಶದ ಪ್ರಮಾಣೀಕರಿಸಿದ ಪ್ರತಿಯನ್ನು ನಮೂನೆ ಜಿಎಸ್ಟಿ ಎಪಿಎಲ್-01ನ್ನು ಸಲ್ಲಿಸಿದ ಏಳು ದಿನಗಳ ಒಳಗಾಗಿ ಸಲ್ಲಿಸಿದ್ದಲ್ಲಿ, ಅಪೀಲಿನ ಸಲ್ಲಿಸುವಿಕೆಯ ದಿನಾಂಕವು ತಾತ್ಕಾಲಿಕ ಸ್ವೀಕೃತಿಯನ್ನು ನೀಡಿದ ದಿನಾಂಕವಾಗಿರತಕ್ಕದ್ದು ಮತ್ತು ಸದರಿ ಪ್ರತಿಯನ್ನು ಏಳು ದಿನಗಳ ನಂತರ ಸಲ್ಲಿಸಿದ್ದಲ್ಲಿ, ಅಪೀಲಿನ ಸಲ್ಲಿಸುವಿಕೆಯದಿನಾಂಕವು ಅಂಥ ಪ್ರತಿಯನ್ನು ಸಲ್ಲಿಸಿದ ದಿನಾಂಕವಾಗಿರತಕ್ಕದ್ದು ವಿವರಣೆ.- ಈ ನಿಯಮದ ಉಪಬಂಧಗಳಿಗಾಗಿ, ಅಪೀಲು ಸಂಖ್ಯೆಯನ್ನು ಸೂಚಿಸಿದ ಒಂದು ಅಂತಿಮ ಸ್ವೀಕೃತಿಯನ್ನು ನೀಡಿದಾಗ ಮಾತ್ರ ಅಪೀಲು ಸಲ್ಲಿಕೆಯಾಗಿದೆ ಎಂದು ಪರಿಗಣಿಸತಕ್ಕದ್ದು.