(1) ಪ್ರಕರಣ 49ರ ಉಪಪ್ರಕರಣ (7)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ವಿದ್ಯುನ್ಮಾನ ಬಾಧ್ಯತೆ ರಿಜಿಸ್ಟರನ್ನು ತೆರಿಗೆ, ಬಡ್ಡಿ, ದಂಡ ಹಾಗೂ ವಿಳಂಬ ಶುಲ್ಕ ಅಥವಾ ಯಾವುದೇ ಇತರೇ ಮೊತ್ತವನ್ನು ಸಂದಾಯ ಮಾಡಲು ಬಾಧ್ಯನಿರುವ ಪ್ರತಿಯೊಬ್ಬ ವ್ಯಕ್ತಿಯು ಸಾಮಾನ್ಯ ಪೋರ್ಟಲ್ನಲ್ಲಿನ ನಮೂನೆ ಜಿಎಸ್ಟಿ ಪಿಎಂಟಿ 01ರಲಿ ್ಲ ನಿರ್ವಹಿಸತಕ್ಕದ್ದು ಮತ್ತು ಆತನಿಂದ ಸಂದಾಯ ಮಾಡಬೇಕಾದ ಎಲ್ಲಾ ಮೊತ್ತಗಳು ಸದರಿ ರಿಜಿಸ್ಟರ್ಗೆ ಖರ್ಚು ಹಾಕತಕ್ಕದ್ದು.
(2) ವ್ಯಕ್ತಿಯ ವಿದ್ಯುನ್ಮಾನ ತೆರಿಗೆ ಬಾಧ್ಯತೆ ರಿಜಿಸ್ಟರ್ನ್ನು ಕೆಳಕಂಡವುಗಳಿಂದ ಖರ್ಚು ಹಾಕತಕ್ಕದ್ದು-
(ಎ) ತೆರಿಗೆ ಮೊತ್ತ, ಬಡ್ಡಿ, ವಿಳಂಬ ಶುಲ್ಕಕ್ಕಾಗಿ ಸಂದಾಯ ಮಾಡಬೇಕಾದ ಮೊತ್ತ ಅಥವಾ ಸದರಿ ವ್ಯಕ್ತಿಯು ಒದಗಿಸಿದ ರಿಟರ್ನ್ ಪ್ರಕಾರ ಸಂದಾಯ ಮಾಡಬೇಕಾದ ಯಾವುದೇ ಇತರ ಮೊತ್ತ;
(ಬಿ) ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗಳ ಅನುಸರಣೆಯಲ್ಲಿ ಯುಕ್ತ ಅಧಿಕಾರಿಯಿಂದ ನಿರ್ಧರಿಸಿದ ಅಥವಾ ಸದರಿ ವ್ಯಕ್ತಿಯಿಂದ ಖಚಿತ ಪಡಿಸಿದಂತೆ, ತೆರಿಗೆ, ಬಡ್ಡಿ, ದಂಡದ ಮೊತ್ತ, ಅಥವಾ ಸಂದಾಯ ಮಾಡಬೇಕಾದ ಯಾವುದೇ ಇತರ ಮೊತ್ತ;
(ಸಿ) ಪ್ರಕರಣ 42 ಅಥವಾ ಪ್ರಕರಣ 43 ಅಥವಾ ಪ್ರಕರಣ 50ರ ಅಡಿಯಲ್ಲಿನತಪ್ಪುಹೊಂದಾಣಿಕೆಯ ಪರಿಣಾಮವಾಗಿ ಸಂದಾಯ ಮಾಡಬೇಕಾದ ತೆರಿಗೆ ಮತ್ತು ಬಡ್ಡಿ ; ಅಥವಾ (ಡಿ)ಕಾಲ ಕಾಲಕ್ಕೆ ಅರ್ಜಿತವಾಗುವಬಡ್ಡಿಯ ಯಾವುದೇ ಮೊತ್ತ.
(3) ಪ್ರಕರಣ 49ರ ಉಪಬಂಧಗಳಿಗೆ ಒಳಪಟ್ಟು, ನೋಂದಾಯಿತ ವ್ಯಕ್ತಿಯು ತನ್ನ ರಿಟರ್ನ್ ಪ್ರಕಾರವಾದ ಪ್ರತಿಯೊಂದು ಬಾಧ್ಯತೆಯ ಸಂದಾಯವನ್ನು, ನಿಯಮ 86ರ ಪ್ರಕಾರ ನಿರ್ವಹಿಸಲಾದ ವಿದ್ಯುನ್ಮಾನ ಜಮೆ ಖಾತೆ ಅಥವಾ ನಿಯಮ 87ರ ಪ್ರಕಾರ ನಿರ್ವಹಿಸಲಾದ ವಿದ್ಯುನ್ಮಾನ ನಗದು ಖಾತೆಗೆ ಖರ್ಚು ಹಾಕುವುದರ ಮೂಲಕ ಮಾಡತಕ್ಕದ್ದು ಮತ್ತು ಅದರ ಪ್ರಕಾರ ವಿದ್ಯುನ್ಮಾನ ತೆರಿಗೆ ಬಾಧ್ಯತೆ ರಿಜಿಸ್ಟರ್ಗೆ ಜಮೆಗೊಳ್ಳತಕ್ಕದ್ದು.
(4) ಪ್ರಕರಣ 51ರ ಅಡಿಯಲ್ಲಿಮುರುಗಡೆಗೊಳಿಸಲಾದ ಮೊತ್ತ ಅಥವಾ ಪ್ರಕರಣ 52ರ ಅಡಿಯಲ್ಲಿಸಂಗ್ರಹಿಸಲಾದ ಮೊತ್ತ ಅಥವಾ ಹಿಮ್ಮುಖ ವಿಧಿಸುವಿಕೆಯ ಆಧಾರದಲ್ಲಿ ಸಂದಾಯ ಮಾಡಬೇಕಾದ ಮೊತ್ತಅಥವಾ ಪ್ರಕರಣ 10ರ ಅಡಿಯಲ್ಲಿಸಂದಾಯ ಮಾಡಬೇಕಾದ ಮೊತ್ತ ಅಥವಾ ಅಧಿನಿಯಮದ ಅಡಿಯಲ್ಲಿ ಬಡ್ಡಿ, ದಂಡ, ಶುಲ್ಕ ಅಥವಾ ಯಾವುದೇ ಇತರೇ ಮೊತ್ತಕ್ಕಾಗಿ ಸಂದಾಯ ಮಾಡಬೇಕಾದ ಯಾವುದೇ ಮೊತ್ತವನ್ನು, ನಿಯಮ 86ರ ಪ್ರಕಾರ ನಿರ್ವಹಿಸಲಾದ ವಿದ್ಯುನ್ಮಾನ ಜಮೆ ಖಾತೆ ಅಥವಾ ನಿಯಮ 87ರ ಪ್ರಕಾರ ನಿರ್ವಹಿಸಲಾದ ವಿದ್ಯುನ್ಮಾನ ನಗದು ಖಾತೆಗೆ ಖರ್ಚು ಹಾಕುವುದರ ಮೂಲಕ ಮಾಡತಕ್ಕದ್ದು ಮತ್ತು ಅದರ ಪ್ರಕಾರ ವಿದ್ಯುನ್ಮಾನ ತೆರಿಗೆ ಬಾಧ್ಯತೆ ರಿಜಿಸ್ಟರ್ಗೆ ಜಮೆಗೊಳ್ಳತಕ್ಕದ್ದು.
(5) ವಿದ್ಯುನ್ಮಾನ ಬಾಧ್ಯತೆ ರಿಜಿಸ್ಟರ್ನಲ್ಲಿ ಖರ್ಚು ಹಾಕಲಾದ ಯಾವುದೇ ತಗಾದೆಯ ಮೊತ್ತವು,ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯದಿಂದ ನೀಡಿದ ಪರಿಹಾರದಷ್ಟರ ಮಟ್ಟಿಗೆ ಇಳಿಕೆಯಾಗತಕ್ಕದ್ದು ಮತ್ತು ಅದರ ಪ್ರಕಾರ ವಿದ್ಯುನ್ಮಾನ ತೆರಿಗೆ ಬಾಧ್ಯತೆ ರಿಜಿಸ್ಟರ್ಗೆ ಜಮೆಗೊಳ್ಳತಕ್ಕದ್ದು.
(6), ತೆರಿಗೆದಾಯಕ ವ್ಯಕ್ತಿಯು ಕಾರಣ ಕೇಳುವ ನೋಟೀಸು ಅಥವಾ ತಗಾದೆ ಆದೇಶದಲ್ಲಿ ನಿರ್ಧಿಷ್ಟಪಡಿಸಿದ ತೆರಿಗೆ, ಬಡ್ಡಿ ಮತ್ತು ದಂಡದ ಸಂದಾಯವನ್ನು ಮಾಡಿದರೆ, ವಿಧಿಸಲಾದ ಅಥವಾ ವಿಧಿಸುವಿಕೆಗೆ ಬಾಧ್ಯವಾದ ದಂಡದ ಮೊತ್ತವು, ಭಾಗಶಃವಾಗಿ ಅಥವಾ ಸಂದರ್ಭಾನುಸಾರವಾಗಿ ಪೂರ್ಣವಾಗಿ ಇಳಿಕೆಯಾಗತಕ್ಕದ್ದು ಅದರ ಪ್ರಕಾರ ವಿದ್ಯುನ್ಮಾನ ತೆರಿಗೆ ಬಾಧ್ಯತೆ ರಿಜಿಸ್ಟರ್ಗೆ ಜಮೆಗೊಳ್ಳತಕ್ಕದ್ದು.
(7) ಒಬ್ಬ ನೋಂದಾಯಿತ ವ್ಯಕ್ತಿಯು, ಆತನ ವಿದ್ಯುನ್ಮಾನ ಬಾಧ್ಯತೆ ರಿಜಿಸ್ಟರನಲ್ಲಿ ಯಾವುದೇ ನ್ಯೂನ್ಯತೆಗಳನ್ನು ಗಮನಿಸಿದ ತರುವಾಯ, ಅದನ್ನು ಈ ವಿಷಯದಲ್ಲಿನ ಅಸ್ತಿತ್ವದಲ್ಲಿರುವ ಕ್ಷೇತ್ರವ್ಯಾಪ್ತಿಯ ಅಧಿಕಾರಿಗೆ, ಸಾಮಾನ್ಯ ಪೋರ್ಟಲ್ನಲ್ಲಿ ನಮೂನೆ ಜಿಎಸ್ಟಿ ಪಿಎಂಟಿ-04ರಲ್ಲಿ ತಿಳಿಸತಕ್ಕದ್ದು.