ನಿಯಮ 54ಕ್ಕೆ ಒಳಪಟ್ಟು, ಪ್ರಕರಣ-31ರ ಅಡಿಯಲ್ಲಿ ಉಲ್ಲೇಖಿಸಲಾದ ಒಂದು ತೆರಿಗೆ ಬೆಲೆ ಪಟ್ಟಿಯನ್ನು, ನೋಂದಾಯಿತ ವ್ಯಕ್ತಿಯುಕೆಳಕಂಡ ವಿವರಗಳನ್ನು ಒಳಗೊಂಡಂತೆ ನೀಡತಕ್ಕದ್ದು, ಅಂದರೆ,-
(ಎ) ಪೂರೈಕೆದಾರನ ಹೆಸರು, ವಿಳಾಸ ಮತ್ತು ಸರಕು ಮತ್ತು ಸೇವೆಗಳ ತೆರಿಗೆಯ ಗುರುತಿನ ಸಂಖ್ಯೆ;
(ಬಿ) ಒಂದು ಹಣಕಾಸು ವರ್ಷಕ್ಕಾಗಿ ವಿಶಿಷ್ಟವಾದ, ವರ್ಣಮಾಲೆಗಳು ಅಥವಾ ಸಂಖ್ಯೆಗಳು ಅಥವಾ ವಿಶೇಷ ಅಕ್ಷರಗಳು- ಹೈಫೆನ್ ಅಥವಾ ಡ್ಯಾಶ್ ಮತ್ತು ಅನುಕ್ರಮವಾಗಿ, ಸ್ಲ್ಯಾಶ್ “ –”ಮತ್ತು“ / ”ಮತ್ತು ಅವುಗಳ ಯಾವುದೇ ಸಂಯೋಜನೆಯನ್ನು ಒಳಗೊಂಡಿರುವ, ಒಂದು ಅಥವಾ ಬಹು ಸರಣಿಗಳಲ್ಲಿರುವ, ಹದಿನಾರು ಅಕ್ಷರಗಳಿಗೆ ಮೀರದಿರುವ ಒಂದಾದ ಮೇಲೊಂದು ಬರುವ ಕ್ರಮ ಸಂಖ್ಯೆ;
(ಸಿ) ಅದನ್ನು ನೀಡಿದ ದಿನಾಂಕ;
(ಡಿ) ನೋಂದಾಯಿತನಾಗಿದ್ದರೆ, ಸ್ವೀಕರಿಸುವವನ ಹೆಸರು, ವಿಳಾಸ ಮತ್ತು ಸರಕು ಮತ್ತು ಸೇವೆಗಳ ತೆರಿಗೆಯ ಗುರುತಿನ ಸಂಖ್ಯೆ ಅಥವಾ ವಿಶಿಷ್ಟ ಗುರುತಿನ ಸಂಖ್ಯೆ;
(ಇ) ಅಂಥ ಸ್ವೀಕರಿಸುವನು ಅನೋಂದಾಯಿತನಾಗಿದ್ದರೆ ಮತ್ತು ತೆರಿಗೆದಾಯಕ ಪೂರೈಕೆಯ ಮೌಲ್ಯವು ಐವತ್ತು ಸಾವಿರ ರೂಪಾಯಿಗಳು ಅಥವಾಅದಕ್ಕಿಂತ ಹೆಚ್ಚಾಗಿದ್ದಲ್ಲಿ, ಸ್ವೀಕರಿಸುವವನ ಹೆಸರು ಮತ್ತು ವಿಳಾಸ ಮತ್ತು ರಾಜ್ಯದ ಹೆಸರು ಮತ್ತು ಅದರ ಕೋಡ್ನೊಂದಗೆ, ಬಟವಾಡೆಯ ವಿಳಾಸ;
(ಎಫ್) ಅಂಥ ಸ್ವೀಕರಿಸುವನು ಅನೋಂದಾಯಿತನಾಗಿದ್ದರೆ ಮತ್ತು ತೆರಿಗೆದಾಯಕ ಪೂರೈಕೆಯ ಮೌಲ್ಯವು ಐವತ್ತು ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದಲ್ಲಿ ಸ್ವೀಕರಿಸುವವನ ಹೆಸರು ಮತ್ತು ವಿಳಾಸ ಮತ್ತು ಹಾಗೂ ರಾಜ್ಯದ ಹೆಸರು ಮತ್ತು ಅದರ ಕೋಡ್ನೊಂದಿಗೆ, ಬಟವಾಡೆಯ ವಿಳಾಸಮತ್ತು ಸ್ವೀಕರಿಸುವವನು ಕೋರಿದ ಅಂಥ ವಿವರಗಳನ್ನು ಬೆಲೆಪಟ್ಟಿಯಲ್ಲಿ ದಾಖಲು ಮಾಡುವುದು;
(ಜಿ) ಸರಕು ಅಥವಾ ಸೇವೆಗಳಿಗಾಗಿ ಹಾರ್ಮೊನೈಸಡ್ ಸಿಸ್ಟಂ ಆಫ್ ನೋಮಿನಕ್ಲೇಚರ್ ಕೋಡ್;
(ಹೆಚ್) ಸರಕು ಮತ್ತು ಸೇವೆಗಳ ವಿವರ;
(ಐ) ಸರಕುಗಳ ಸಂದರ್ಭದಲ್ಲಿ ಪರಿಮಾಣ ಮತ್ತು ಅವುಗಳ ಘಟಕ ಅಥವಾ ವಿಶಿಷ್ಟ ಪರಿಮಾಣ ಕೋಡ್;
(ಜೆ) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರೈಕೆಯ ಒಟ್ಟು ಮೌಲ್ಯ;
(ಕೆ) ಸೋಡಿ ಅಥವಾ ಉಪಶಮನ, ಯಾವುದಾದರೂ ಇದ್ದರೆ, ಅದನ್ನು ಗಣನೆಗೆ ತೆಗೆದುಕೊಂಡು ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರೈಕೆಯ ತೆರಿಗೆದಾಯಕ ಮೌಲ್ಯ;
(ಎಲ್) ತೆರಿಗೆ ದರ (ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಏಕೀಕೃತ ತೆರಿಗೆ, ಕೇಂದ್ರಾಡಳಿತ ಪ್ರದೇಶ ತೆರಿಗೆ ಅಥವಾ ಉಪಕರ);
(ಎಂ) ತೆರಿಗೆದಾಯಕ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ವಿಧಿಸಲಾದ ತೆರಿಗೆಯ ಮೊತ್ತ(ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಏಕೀಕೃತ ತೆರಿಗೆ, ಕೇಂದ್ರಾಡಳಿತ ಪ್ರದೇಶ ತೆರಿಗೆ ಅಥವಾ ಸೆಸ್);
(ಎನ್) ಒಂದು ಪೂರೈಕೆ ಅಂತರ ರಾಜ್ಯ ವ್ಯಾಪಾರ ಅಥವಾ ವಾಣಿಜ್ಯಕ್ಕೆ ಸಂಬಂಧಿಸಿದ್ದಾದರೆ ರಾಜ್ಯದ ಹೆಸರಿನ ಜೊತೆಗೆ ಪೂರೈಕೆಯ ಸ್ಥಳ;
(ಒ) ಬಟವಾಡೆ ವಿಳಾಸ, ಅದು ಪೂರೈಕೆಯ ಸ್ಥಳದಿಂದ ಬೇರೆಯಾಗಿದ್ದರ;
(ಪಿ) ತೆರಿಗೆಯನ್ನು ಹಿಮ್ಮುಖ ವಿಧಿಸುವಿಕೆಯ ಆಧಾರದಲ್ಲಿ ಸಂದಾಯ ಮಾಡುವುದಿದ್ದರೆ ಅದು; ಮತ್ತು
(ಕ್ಯೂ) ಪೂರೈಕೆದಾರನ ಅಥವಾ ಆತನ ಪ್ರಾಧಿಕೃತ ಪ್ರತಿನಿಧಿಯ ಸಹಿ ಅಥವಾ ಡಿಜಿಟಲ್ ಸಹಿ:
ಪರಂತು, ಆಯುಕ್ತರು,ಕೌನ್ಸಿಲ್ನ ಶಿಫಾರಸ್ಸುಗಳ ಅನ್ವಯ ಅಧಿಸೂಚನೆಮೂಲಕ ಕೆಳಕಂಡವುಗಳನ್ನು ನಿರ್ದಿಷ್ಟಪಡಿಸಬಹುದು-
(i) ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂತೆ, ಅಂಥ ಅವಧಿಗೆ, ನೋಂದಾಯಿತ ವ್ಯಕ್ತಿಗಳ ಒಂದು ವರ್ಗವು, ಸರಕು ಅಥವಾ ಸೇವೆಗಳಿಗಾಗಿ ನಮೂದಿಸುವುದು ಅಗತ್ಯವಿರತಕ್ಕ ಹಾರ್ಮೊನೈಸಡ್ ಸಿಸ್ಟಂ ಆಫ್ ನೋಮಿನಕ್ಲೇಚರ್ ಕೋಡ್ನ ಡಿಜಿಟ್ಗಳ ಸಂಖ್ಯೆ; ಮತ್ತು
(ii) ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂತೆ, ಅಂಥ ಅವಧಿಗೆ, ಸರಕು ಅಥವಾ ಸೇವೆಗಳಿಗಾಗಿ ಹಾರ್ಮೊನೈಸಡ್ ಸಿಸ್ಟಂ ಆಫ್ ನೋಮಿನಕ್ಲೇಚರ್ ಕೋಡ್ನ ಡಿಜಿಟ್ಗಳ ಸಂಖ್ಯೆಯನ್ನು ನಮೂದಿಸುವುದು ಅಗತ್ಯವಿರದ ನೋಂದಾಯಿತ ವ್ಯಕ್ತಿಗಳ ಒಂದು ವರ್ಗ:
ಮತ್ತು ಪರಂತು, ಪ್ರಕರಣ 31ರ ಉಪ ಪ್ರಕರಣ (3)ರ ಖಂಡ (ಎಫ್) ಅಡಿಯಲ್ಲಿ ಒಂದು ಬೆಲೆಪಟ್ಟಿಯನ್ನು ನೀಡಬೇಕಾದಲ್ಲಿ, ಒಬ್ಬ ನೋಂದಾಯಿತ ವ್ಯಕ್ತಿಯು, ಪ್ರಕರಣ 9ರ ಉಪ ಪ್ರಕರಣ (4)ರ ಅಡಿಯಲ್ಲಿ ವ್ಯಾಪ್ತವಾಗುವ ಪೂರೈಕೆಗಳಿಗಾಗಿ, ಅಂಥ ಪೂರೈಕೆಗಳ ಸಮಗ್ರ ಮೌಲ್ಯವು ಒಂದು ದಿನದಲ್ಲಿ ಯಾವುದೇ ಅಥವಾ ಎಲ್ಲಾ ಪೂರೈಕೆದಾರರಿಂದ ಐದು ಸಾವಿರ ರೂಪಾಯಿಗಳನ್ನು ಮೀರಿದ್ದಾಗ, ತಿಂಗಳಿನ ಕೊನೆಯಲ್ಲಿ ಒಂದು ಕ್ರೋಢೀಕೃತ ಬೆಲೆಪಟ್ಟಿಯನ್ನು ನೀಡಬಹುದು: ಅಲ್ಲದೆ ಪರಂತು, ಸರಕು ಮತ್ತು ಸೇವೆಗಳ ರಫ್ತುವಿನ ಸಂದರ್ಭದಲ್ಲಿ, ಬೆಲೆಪಟ್ಟಿಯು, “ಏಕೀಕೃತ ತೆರಿಗೆ ಸಂದಾಯದ ಮೇಲಿನ ರಫ್ತಿಗಾಗಿ ಮುಡುಪಾದ ಪೂರೈಕೆ/ ಎಸ್ಇಝಡ್ ಘಟಕ ಅಥವಾ ಎಸ್ಇಝಡ್ ಅಭಿವೃದ್ಧಿದಾರರಿಗೆ ಪ್ರಾಧಿಕೃತ ಕಾರ್ಯಾಚರಣೆಗಳಿಗಾಗಿ ಪೂರೈಕೆ ” ಅಥವಾ ಸಂದರ್ಭಾನುಸಾರವಾಗಿ “ಏಕೀಕೃತ ತೆರಿಗೆ ಸಂದಾಯವಿಲ್ಲದೆ, ಬಾಂಡ್ ಅಥವಾ ವಾಗ್ದಾನ ಪತ್ರದ ಅಡಿಯಲ್ಲಿ ರಫ್ತಿಗಾಗಿ ಮುಡುಪಾದ ಪೂರೈಕೆ/ ಎಸ್ಇಝಡ್ ಘಟಕ ಅಥವಾ ಎಸ್ಇಝಡ್ ಅಭಿವೃದ್ಧಿದಾರರಿಗೆ ಪ್ರಾಧಿಕೃತ ಕಾರ್ಯಾಚರಣೆಗಳಿಗಾಗಿ ಪೂರೈಕೆ ”” ಎನ್ನುವ ಹಿಂಬರಹವನ್ನು ಹೊಂದಿರತಕ್ಕದ್ದು ಮತ್ತು ಖಂಡ(ಇ)ರಲ್ಲಿ ನಿರ್ದಿಷ್ಟಪಡಿಸಿದ ವಿವರಗಳಿಗೆ ಬದಲಾಗಿ, ಕೆಳಕಂಡ ವಿವರಗಳನ್ನು ಹೊಂದಿರತಕ್ಕದ್ದು, ಅಂದರೆ,-
(i) ಸ್ವೀಕರಿಸುವವನ ಹೆಸರು ಮತ್ತು ವಿಳಾಸ;
(ii) ಬಟವಾಡೆಯ ವಿಳಾಸ;
(iii) ಗಮ್ಯಸ್ಥಾನ ದೇಶದ ಹೆಸರು:] ಅಲ್ಲದೆ ಪರಂತು,ಒಬ್ಬ ನೋಂದಾಯಿತ ವ್ಯಕ್ತಿಯು, ಕೆಳಕಂಡ ಷರತ್ತುಗಳಿಗೆ ಒಳಪಟ್ಟು, ಪ್ರಕರಣ 31ರ ಉಪ ಪ್ರಕರಣ (3)ರ ಖಂಡ (ಬಿ)ನ ಉಪಬಂಧಗಳಿಗೆ ಅನುಸಾರವಾಗಿ ಬೆಲೆಪಟ್ಟಿಯನ್ನು ನೀಡದಿರಬಹುದು, ಅಂದರೆ,-
(ಎ) ಸ್ವೀಕರಿಸುವವನು, ನೋಂದಾಯಿತ ವ್ಯಕ್ತಿಯಾಗಿರಬಾರದು; ಮತ್ತು
(ಬಿ) ಸ್ವೀಕರಿಸುವವನಿಗೆ ಅಂಥ ಬೆಲೆಪಟ್ಟಿಯ ಅಗತ್ಯವಿರುವುದಿಲ್ಲ, ಮತ್ತು ಅಂಥ ಎಲ್ಲಾ ಪೂರೈಕೆಗಳಿಗೆ ಸಂಬಂಧಿಸಿದಂತೆ ಪ್ರತಿ ದಿನದ ಕೊನೆಯಲ್ಲಿ ಒಂದು ಕ್ರೋಢೀಕೃತ ತೆರಿಗೆ ಬೆಲೆಪಟ್ಟಿಯನ್ನು ಅಂಥ ಪೂರೈಕೆಗಾಗಿ ನೀಡತಕ್ಕದ್ದು.
19[46 ಎಬೆಲೆ ಪಟ್ಟಿ ಒಡನೆಯ ಪೂರೈಕೆಯ ಬಿಲ್ಲು.-ನಿಯಮ 46 ಅಥವಾ ನಿಯಮ 49 ಅಥವಾ ನಿಯಮ 54ರಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಒಬ್ಬ ನೋಂದಾಯಿತ ವ್ಯಕ್ತಿಯು, ಒಬ್ಬ ಅನೋಂದಾಯಿತ ವ್ಯಕ್ತಿಗೆ ತೆರಿಗೆದಾಯಕ ಹಾಗೂ ವಿನಾಯಿತಿ ಸರಕು ಮತ್ತು ಸೇವೆಗಳು ಅಥವಾ ಅವುಗಳೆರಡರ ಪೂರೈಕೆಯನ್ನು ಮಾಡುತ್ತಿದ್ದಲ್ಲಿ, ಆತನು ಅಂಥ ಎಲ್ಲಾ ಪೂರೈಕೆಗಳಿಗಾಗಿ ಏಕ “ಬೆಲೆ ಪಟ್ಟಿ ಒಡನೆಯ ಪೂರೈಕೆಯ ಬಿಲ್ಲನ್ನು” ನೀಡಬಹುದು.]