(1) ಪ್ರಕರಣ 10ರ ಅಡಿಯಲ್ಲಿನತೆರಿಗೆ ಸಂದಾಯದ ಆಯ್ಕೆಯು ನಿಯಮ 3ರ ಉಪನಿಯಮ (3)ರ ಅಡಿಯಲ್ಲಿ ತಿಳಿಸುವಿಕೆ ಪತ್ರವನ್ನು ಸಲ್ಲಿಸಿದ್ದಲ್ಲಿ ಹಣಕಾಸಿನ ವರ್ಷದ ಪ್ರಾರಂಭದಿಂದ ಮತ್ತು ಸದರಿ ನಿಯಮದ ಉಪನಿಯಮ (1)ರ ಅಡಿಯಲ್ಲಿ ತಿಳಿಸುವಿಕೆ ಪತ್ರವನ್ನು ಸಲ್ಲಿಸಿದ್ದಲ್ಲಿ ಗೊತ್ತು ಪಡಿಸಲಾದ ದಿನದಿಂದ ಜಾರಿಗೊಳ್ಳತಕ್ಕದ್ದು.
(2) ನಿಯಮ 3ರ ಉಪನಿಯಮ (2)ರ ಅಡಿಯಲ್ಲಿ ತಿಳಿಸುವಿಕೆ ಪತ್ರವನ್ನು, ಅರ್ಜಿದಾರನಿಗೆ ನೋಂದಣಿಯನ್ನು ಮಂಜೂರು ಮಾಡಿದ ನಂತರ ಮಾತ್ರ ಪರಿಗಣಿಸತಕ್ಕದ್ದು ಮತ್ತು ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವ ಆತನ ಆಯ್ಕೆಯು ನಿಯಮ 10ರ ಉಪನಿಯಮ (2) ಅಥವಾ (3)ರ ಅಡಿಯಲ್ಲಿ ನಿಗಧಿಪಡಿಸಿದ ದಿನಾಂಕದಿಂದ ಜಾರಿಗೊಳ್ಳತಕ್ಕದ್ದು.