ಪೂರ್ಣವಾಗಿ ಹಣದಲ್ಲಿ ಇಲ್ಲದ ಪ್ರತಿಫಲಕ್ಕಾಗಿ ಮಾಡಿದ ಸರಕು ಅಥವಾ ಸೇವೆಗಳ ಪೂರೈಕೆಯಾದಲ್ಲಿ, ಪೂರೈಕೆಯ ಮೌಲ್ಯವು,
(ಎ) ಅಂಥ ಪೂರೈಕೆಯ ಮುಕ್ತ ಮಾರುಕಟ್ಟೆಯ ಮೌಲ್ಯವಾಗಿರತಕ್ಕದ್ದು;
(ಬಿ) ಮುಕ್ತ ಮಾರುಕಟ್ಟೆಯ ಮೌಲ್ಯವು ಲಭ್ಯವಿರದಿದ್ದರೆ, ಹಣದ ರೂಪದ ಪ್ರತಿಫಲದ ಮತ್ತು ಹಣದ ರೂಪದಲ್ಲಿರದ ಪ್ರತಿಫಲಕ್ಕೆ ತತ್ಸಮಾನವಾದ ಹಣದಲ್ಲಿನ ಯಾವುದೇ ಅಂಥ ಮುಂದುವರೆದ ಮೊತ್ತದ, ಪೂರೈಕೆಯ ಸಮಯದಲ್ಲಿ ಅಂಥ ಮೊತ್ತ ತಿಳಿದುಬಂದರೆ, ಒಟ್ಟು ಮೊತ್ತವಾಗಿರತಕ್ಕದ್ದು;
(ಸಿ) ಖಂಡ (ಎ) ಅಥವಾ ಖಂಡ (ಬಿ)ಯ ಅಡಿಯಲ್ಲಿ, ಪೂರೈಕೆಯ ಮೌಲ್ಯವನ್ನು ನಿರ್ಧರಿಸಲಾಗದಿದ್ದರೆ, ಅದೇ ತರಹದ ಮತ್ತು ಗುಣಮಟ್ಟದ ಸರಕು ಅಥವಾ ಸೇವೆಗಳ ಪೂರೈಕೆಯ ಮೌಲ್ಯವಾಗಿರತಕ್ಕದ್ದು;
(ಡಿ) ಖಂಡ (ಎ) ಅಥವಾ ಖಂಡ (ಬಿ) ಅಥವಾ ಖಂಡ (ಸಿ)ಯ ಅಡಿಯಲ್ಲಿ, ಮೌಲ್ಯವನ್ನು ನಿರ್ಧರಿಸಲಾಗದಿದ್ದರೆ, ನಿಯಮ 30 ಅಥವಾ ನಿಯಮ 31ನ್ನು ಅದೇ ಕ್ರಮದಲ್ಲಿ ಅನ್ವಯಿಸಿ ನಿರ್ಧರಿಸಿದಂತೆ ಹಣದ ರೂಪದ ಪ್ರತಿಫಲದ ಮತ್ತು ಹಣದ ರೂಪದಲ್ಲಿರದ ಪ್ರತಿಫಲಕ್ಕೆ ತತ್ಸಮಾನವಾದ ಹಣದಲ್ಲಿನ ಯಾವುದೇ ಅಂಥ ಮುಂದುವರೆದ ಮೊತ್ತದ ಒಟ್ಟು ಮೊತ್ತವಾಗಿರತಕ್ಕದ್ದು;
ದೃಷ್ಟಾಂತ:
(1) ಒಂದು ಹೊಸ ದೂರವಾಣಿಯನ್ನು ಒಂದು ಹಳೆಯದಾದ ದೂರವಾಣಿಯ ವಿನಿಮಯದೊಂದಿಗೆ ಇಪ್ಪತ್ತು ಸಾವಿರ ರೂಪಾಯಿಗಳಿಗೆ ಪೂರೈಕೆ ಮಾಡಿದ್ದಲ್ಲಿ ಮತ್ತು ವಿನಿಮಯರಹಿತವಾದ ಹೊಸ ದೂರವಾಣಿಯ ಬೆಲೆ ಇಪ್ಪತ್ತು ಸಾವಿರದ ನಾಲ್ಕು ಸಾವಿರ ರೂಪಾಯಿಗಳಾಗಿದ್ದರೆ, ಹೊಸ ದೂರವಾಣಿಯ ಮುಕ್ತ ಮಾರುಕಟ್ಟೆಯ ಮೌಲ್ಯವು ಇಪ್ಪತ್ತು ಸಾವಿರದ ನಾಲ್ಕು ಸಾವಿರ ರೂಪಾಯಿಗಳಾಗಿರುತ್ತದೆ.
(2) ಒಂದು ಲ್ಯಾಪ್ಟಾಪ್ಅನ್ನು ಸ್ವಿಕರಿಸುವವನಿಂದ ತಯಾರಿಕೆಯಾದ ಪ್ರಿಂಟರ್ನ್ನು ವಸ್ತು ವಿನಿಮಯದೊಂದಿಗೆ ನಲವತ್ತು ಸಾವಿರ ರೂಪಾಯಿಗಳಿಗೆ ಪೂರೈಕೆ ಮಾಡಿದ್ದಲ್ಲಿ ಮತ್ತು ಪೂರೈಕೆಯ ಸಮಯದಲ್ಲಿ ಪ್ರಿಂಟರ್ನ ಮೌಲ್ಯವು ನಾಲ್ಕು ಸಾವಿರ ರೂಪಾಯಿಗಳಾಗಿದ್ದು ಆದರೆ ಲ್ಯಾಪ್ಟಾಪ್ನ ಮುಕ್ತ ಮಾರುಕಟ್ಟೆಯ ಬೆಲೆ ಗೊತ್ತಿಲ್ಲದಿದ್ದಾಗ, ಲ್ಯಾಪ್ಟಾಪ್ನ ಪೂರೈಕೆ ಮೌಲ್ಯ ನಲವತ್ತ ನಾಲ್ಕು ಸಾವಿರ ರೂಪಾಯಿಗಳಾಗಿರುತ್ತದೆ.