(1) ಕೆಳಕಂಡ ಯಾವುದೇ ದಸ್ತಾವೇಜುಗಳ ಆಧಾರದ ಮೇಲೆ ಹೂಡುವಳಿ ಸೇವಾ ಹಂಚಿಕೆದಾರರನ್ನೊಳಗೊಂಡಂತೆ ನೋಂದಾಯಿತ ವ್ಯಕ್ತಿಯು ಹೂಡುವಳಿ ತೆರಿಗೆ ಜಮೆಯನ್ನು ಉಪಯೋಗಿಸತಕ್ಕದ್ದು:-
(ಎ) ಪ್ರಕರಣ 31ರ ಉಪಬಂಧಗಳಿಗೆ ಅನುಸಾರವಾಗಿ ಸರಕು ಅಥವಾ ಸೇವೆಗಳ ಅಥವಾ ಅವುಗಳೆರೆಡರ ಪೊರೈಕೆದಾರನಿಂದ ನೀಡಲಾದ ಬೆಲೆಪಟ್ಟಿ;
(ಬಿ) ತೆರಿಗೆ ಸಂದಾಯಕ್ಕೆ ಒಳಪಟ್ಟು, ಪ್ರಕರಣ 31 ಉಪಪ್ರಕರಣ 3 ರ ಖಂಡ (ಎಫ್)ದ ಉಪಬಂಧಗಳಿಗೆ ಅನುಸಾರವಾಗಿನೀಡಲಾದ ಬೆಲೆಪಟ್ಟಿ;
(ಸಿ)ಪ್ರಕರಣ 34ರ ಉಪಬಂದಗಳಿಗೆ ಅನುಸಾರವಾಗಿ ಪೊರೈಕೆದಾರನುನೀಡಿದ ಖರ್ಚುಚೀಟಿ;
(ಡಿ) ಆಮದುಗಳ ಮೇಲಿನ ಏಕೀಕೃತ ತೆರಿಗೆಯ ಕರನಿರ್ಧರಣೆಗಾಗಿ ಸೀಮಾಸುಂಕ ಅಧಿನಿಯಮ, 1962 ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ನಿಯಮಿಸಲಾದ ಪ್ರವೇಶದ ಬಿಲ್ಲು ಅಥವಾ ಅದೇ ರೀತಿಯ ದಸ್ತಾವೇಜು;
(ಇ) ನಿಯಮ 54ರ ಉಪನಿಯಮ (1) ರ ಉಪಬಂಧಗಳಿಗೆ ಅನುಸಾರವಾಗಿಒಬ್ಬ ಹೂಡುವಳಿ ಸೇವೆ ಹಂಚಿಕೆದಾರನಿಂದ ನೀಡಲಾದ ಹೂಡುವಳಿ ಸೇವೆ ಹಂಚಿಕೆಯ ಬೆಲೆಪಟ್ಟಿ ಅಥವಾ ಹೂಡುವಳಿ ಸೇವೆ ಹಂಚಿಕೆಯ ಜಮೆ ಚೀಟಿ ಅಥವಾ ಯಾವುದೇ ದಸ್ತಾವೇಜು.
(2) ಅಧ್ಯಾಯ VI ರಲ್ಲಿ ನಿರ್ದಿಷ್ಟಪಡಿಸಿದಂತೆ ಅನ್ವಯವಾಗುವ ಎಲ್ಲ ವಿವರಗಳುಸದರಿ ದಸ್ತಾವೇಜಿನಲ್ಲಿ, ಒಳಗೊಂಡಿದ್ದರೆ ಮತ್ತು ಸದರಿ ದಸ್ತಾವೇಜಿನಲ್ಲಿನ ಸಂಬಂಧಿತ ಮಾಹಿತಿಯು ಅಂಥ ವ್ಯಕ್ತಿಯುನಮೂನೆ ಜಿಎಸ್ಟಿಆರ್-2ರಲ್ಲಿ ಒದಗಿಸಿದ್ದಾಗ ಮಾತ್ರ ನೋಂದಾಯಿತ ವ್ಯಕ್ತಿಯು ಹೂಡುವಳಿ ತೆರಿಗೆ ಜಮೆಯನ್ನು ಉಪಯೋಗಿಸತಕ್ಕದ್ದು.
(3) ಮೋಸ ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವುದರ ಕಾರಣದಿಂದ ಯಾವುದೇ ತಗಾದೆಯನ್ನುಸ್ಥೀರೀಕರಿಸಲಾಗಿರುವ ಯಾವುದೇ ಆದೇಶಕ್ಕೆಅನುಸಾರವಾಗಿ,ಯಾವುದೇ ತೆರಿಗೆಯುಸಂದಾಯವಾಗಿರುವುದಕ್ಕೆ ಸಂಬಂಧಿಸಿದಂತೆ ನೋಂದಾಯಿತ ವ್ಯಕ್ತಿಯು ಹೂಡುವಳಿ ತೆರಿಗೆ ಜಮೆಯನ್ನು ಉಪಯೋಗಿಸತಕ್ಕದ್ದಲ್ಲ.