(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ” ಎಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020 (2020 ರ ಕರ್ನಾಟಕ ಅಧಿನಿಯಮ 53);
(ಬಿ) “ಬ್ಯಾಲೆಟ್ ಬಾಕ್ಸ್ ಅಥವಾ ಬ್ಯಾಲೆಟ್ ಪೇಪರ್” ಎಂದರೆ, ಈ ನಿಯಮಗಳಲ್ಲಿ, ಬ್ಯಾಲೆಟ್ ಬಾಕ್ಸ್ ಅಥವಾ ಬ್ಯಾಲೆಟ್ ಪೇಪರ್ ಎಂದು ಬಳಸಿರುವ ಕಡೆಗಳಲ್ಲಿ ಅನ್ವಯವಾಗುವ ಕಡೆಗಳಲ್ಲೆಲ್ಲಾ ವಿದ್ಯಾನ್ಮಾನ ಮತಯಂತ್ರವೆಂದು ಅರ್ಥೈಸತಕ್ಕದ್ದು.
(ಸಿ) “ಜಾತಿ ಪ್ರಮಾಣ ಪತ್ರ” ಎಂದರೆ, ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿಯ ಮೀಸಲಾತಿ ಇತ್ಯಾದಿ) ಅಧಿನಿಯಮ, 1990ರ ಅಡಿಯಲ್ಲಿ ಕಂದಾಯ ತಾಲ್ಲೂಕಿನ ತಹಶೀಲ್ದಾರ್ ರವರಿಂದ ನೀಡಲಾದ ಜಾತಿ ಪ್ರಮಾಣ ಪತ್ರ ಅಥವಾ ಆದಾಯ ಮತ್ತು ಜಾತಿ ಪ್ರಮಾಣಪತ್ರ;
(ಡಿ) “ಕೌನ್ಸಿಲರ್” ಎಂದರೆ, ಈ ಅಧಿನಿಯಮದ 11ನೇ ಪ್ರಕರಣದ ಮೇರೆಗೆ ನೇಮಕಗೊಂಡ ಕೌನ್ಸಿಲರ್ ಮತ್ತು ಅಧಿನಿಯಮದ 18ನೇ ಪ್ರಕರಣದ ಮೇರೆಗೆ ಕೌನ್ಸಿಲರಾ್ಗಿ ಕಾರ್ಯನಿರ್ವಹಿಸಲು ನೇಮಕಗೊಂಡ ವ್ಯಕ್ತಿಯನ್ನು ಒಳಗೊಳ್ಳುತ್ತದೆ;
(ಇ) “ಪಾಲಿಕೆ” ಎಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ;
(ಎಫ್) “ಮುಖ್ಯ ಆಯ್ತುಕರು" ಎಂದರೆ, 63ನೇ ಪ್ರಕರಣದ ಮೇರೆಗೆ ನೇಮಕಗೊಂಡ ಮುಖ್ಯ ಆಯುಕ್ತರು ಮತ್ತು ಅಧಿನಿಯಮದ 64ನೇ ಪ್ರಕರಣದ ಮೇರೆಗೆ ಮುಖ್ಯ ಆಯುಕ್ತರಾಗಿ ಕಾರ್ಯ ನಿರ್ವಹಿಸಲು ನೇಮಕಗೊಂಡ ವ್ಯಕ್ತಿಯನ್ನು ಒಳಗೊಳ್ಳುತ್ತದೆ;
(2) “ನಮೂನೆ” ಎಂದರೆ, ಈ ನಿಯಮಗಳಿಗೆ ಸೇರಿಸಲಾದ ನಮೂನೆ;
(ಎಚ್) “ಸರ್ಕಾರ” ಎಂದರೆ, ಕರ್ನಾಟಕ ಸರ್ಕಾರ;
(ಐ) "ಪ್ರಿಸೈಡಿಂಗ್ ಅಧಿಕಾರಿ” ಎಂದರೆ, ಪ್ರಿಸೈಡಿಂಗ್ ಅಧಿಕಾರಿಯಾಗಿ 17ನೇ ಪ್ರಕರಣದ ಮೇರೆಗೆ ನೇಮಕಗೊಂಡ ಯಾವುದೇ ವ್ಯಕ್ತಿ ಮತ್ತು 8ನೇ ನಿಯಮದ ಮೇರೆಗೆ ಪ್ರಿಸೈಡಿಂಗ್ ಅಧಿಕಾರಿಯ ಯಾವುದೇ ಪ್ರಕಾರ್ಯಗಳನ್ನು ನಿರ್ವಹಿಸುವ ಯಾವುದೇ ಪೋಲಿಂಗ್ ಅಧಿಕಾರಿಯನ್ನು ಒಳಗೊಳ್ಳುತ್ತದೆ;
(ಜಿ) “ಸಾರ್ವಜನಿಕ ರಜಾದಿನ” ಎಂದರೆ, ವರ್ಗಾವಣೀಯ ಲಿಖಿತಪತ್ರಗಳ ಅಧಿನಿಯಮ, 1881ರ (1881 ರ ಕೇಂದ್ರ ಅಧಿನಿಯಮ 26) 25ನೇ ಪ್ರಕರಣದ ಉದ್ದೇಶಕ್ಕಾಗಿ ಸಾರ್ವಜನಿಕ ರಜಾ ದಿನವಾಗಿರುವ ಯಾವುದೇ ದಿನ;
ಕ). “ಅರ್ಹ ಅಭ್ಯರ್ಥಿ" ಅಥವಾ “ಚುನಾಯಿಸಬೇಕಾದ ಅರ್ಹ ಅಭ್ಯರ್ಥಿ" ಎಂದರೆ, ಅಧಿನಿಯಮದ ಉಪಬಂಧಗಳು ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳ ಮೇರೆಗೆ ನಡೆಯುವ ಚುನಾವಣೆಗಳಲ್ಲಿ ಚುನಾಯಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿ;
(ಎಲ್) “ಮೀಸಲಿಟ್ಟ ಸ್ಥಾನ” ಎಂದರೆ, ಅಧಿನಿಯಮದ 7ನೇ ಪ್ರಕರಣದ ಮೇರೆಗೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಮಹಿಳೆಗಾಗಿ ಮೀಸಲಿಟ್ಟ ಸ್ನಾನ;
(ಎಂ) “ರಿಟರ್ನಿಂಗ್ ಅಧಿಕಾರಿ” ಎಂದರೆ, ರಿಟರ್ನಿಂಗ್ ಅಧಿಕಾರಿಯಾಗಿ 5ನೇ ನಿಯಮದ ಮೇರೆಗೆ ನೇಮಕಗೊಂಡ ಯಾವುದೇ ವ್ಯಕ್ತಿ ಮತ್ತು ರಿಟರ್ವಿಂಗ್ ಅಫೀಸರ್ ಯಾವುದೇ ಪ್ರಕರಣಗಳನ್ನು ನಿರ್ವಹಿಸುವ ಸಹಾಯಕ ರಿಟರ್ನಿಂಗ್ ಅಧಿಕಾರಿಯನ್ನು ಒಳಗೊಳ್ಳುತ್ತದೆ; ಮತ್ತು (ಎನ್) “ಪ್ರಕರಣ” ಎಂದರೆ, ಈ ಅಧಿನಿಯಮದ ಪ್ರಕರಣ;
(2) ಈ ನಿಯಮಗಳಲ್ಲಿ ಬಳಸಲಾದ ಆದರೆ ಪರಿಭಾಷಿಸಿಲ್ಲದ ಪದಗಳು ಮತ್ತು ಅಭಿವ್ಯಕ್ತಿಗಳು ಈ ಅಧಿನಿಯಮದಲ್ಲಿ ಅವುಗಳಿಗೆ ಗೊತ್ತಪಡಿಸಿಸಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು.
ಅಧ್ಯಾಯ-॥