(1) ಯಾವುದೇ ಚುನಾಣೆಯಲ್ಲಿ,-
(ಎ) ಮತದಾನ ಕೇಂದ್ರದಲ್ಲಿ ಅಥವಾ ಮತದಾನಕ್ಕಾಗಿ ನಿಗದಿಪಡಿಸಿದ ಸ್ಮಳದಲ್ಲಿ (ಇದರಲ್ಲಿ ಇನ್ನು ಮುಂದೆ ಈ ನಿಯಮದಲ್ಲಿ ಒಂದು ಸ್ಮಳವೆಂದು ಉಲ್ಲೆಖಿಸಲಾಗಿದೆ) ಆ ಮತದಾನ ಕೇಂದ್ರದಲ್ಲಿ ಅಥವಾ ಸ್ಮಳದಲ್ಲಿ ಮತದಾನದ ಫಲಿತಾಂಶವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲದೇ ಇರುವಂಥ ರೀತಿಯಲ್ಲಿ ಮತಗಟ್ಟಿಯನ್ನು ಬಲವಂ೦ತವಾಗಿ ವಶಪಡಿಸಿಕೂಂಡರೆ; ಅಥವಾ
(ಬಿ) ಮತಗಳನ್ನು ಎಣಿಕೆ. ಮಾಡುವುದಕ್ಕಾಗಿ ಯಾವುದೇ ಸ್ಮಳದಲ್ಲಿ, ಆ ಸ್ಮಳದಲ್ಲಿ ಎಣಿಕೆಯಾಗುತ್ತಿರುವುದರ ಫಲಿತಾಂಶವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲದೆ ಇರುವಂಥ ರೀತಿಯಲ್ಲಿ ಮತಗಟ್ಟೆಯನ್ನು ಬಲವಂ೦ತವಾಗಿ ವಶಪಡಿಸಿಕೂಂಡರೆ.
ರಿಟರ್ನಿಂಗ್ ಅಧಿಕಾರಿಯು ಕೂಡಲೇ ರಾಜ್ಯ ಚುನಾವಣಾ ಆಯೋಗ ಮತ್ತು ಮುಖ್ಯ ಆಯುಕ್ತರಿಗೆ ಆ ವಿಷಯವನ್ನು ವರದಿ ಮಾಡತಕ್ಕದ್ದು.
(2) ರಾಜ್ಯ ಚುನಾವಣಾ ಆಯೋಗವು (1) ನೇ ಉಪ-ನಿಯಮದ ಅಡಿಯಲ್ಲಿ ರಿಟರ್ನಿಂಗ್ ಅಧಿಕಾರಿಯಿಂದ ವರದಿ ಸ್ವೀಕರಿಸಿದ ಮೇಲೆ ಮತ್ತು ಎಲ್ಲಾ ಮುಖ್ಯ ಸನ್ನಿವೇಶಗಳನ್ನು ಪರಿಗಣನೆಗೆ ತೆಗೆದುಕೊಂಡ ತರುವಾಯ, ಯಾವುದಾದರೂ ಒಂದು ಸನ್ನಿವೇಶದಲ್ಲಿ,-
(ಎ) ಆ ಮತದಾನ ಕೇಂದ್ರದಲ್ಲಿ ಅಥವಾ ಸ್ಥಳದಲ್ಲಿ ನಡೆದ ಮತದಾನವು ಕಾನೂನು ಮಾನ್ಯವಲ್ಲವೆಂದು ಫೋಷಿಸತಕ್ಕದ್ದು. ಆ ಮತದಾನ ಕೇಂದ್ರ ಅಥವಾ ಸ್ಮಳದಲ್ಲಿ ಹೊಸ ಮತದಾನವನ್ನು ನಡೆಸುವುದಕ್ಕಾಗಿ ಗೊತ್ತುಪಡಿಸಿದ ದಿನ ಮತ್ತು ವೇಳೆಯನ್ನು ನಿಗದಿಪಡಿಸತಕ್ಕದ್ದು ಮತ್ತು ತಾನು ಸೂಕವೆಂದು ಭಾವಿಸಬಹುದಾದಂಥ ರೀತಿಯಲ್ಲಿ ಹಾಗೆ ಗೊತ್ತುಪಡಿಸಿದ ದಿನಾಂಕ ಮತ್ತು ನಿಗದಿಪಡಿಸಿದ ವೇಳೆಯನ್ನು ಅಧಿಸೂಚಿಸತಕ್ಕದ್ದು;
(ಬಿ) ಮತಗಟ್ಟೆಯನ್ನು ಬಲವಂತವಾಗಿ ವಶಪಡಿಸಿಕೊಂಡಿರುವಲ್ಲಿ, ಹೆಚ್ಚಿನ ಸಂಖ್ಯೆಯ ಮತದಾನ ಕೇಂದ್ರಗಳು ಅಥವಾ ಸ್ಥಳಗಳು ಸೇರಿದೆಯೆಂದು, ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂದು ಅಥವಾ ಮತಗಟ್ಟೆಯನ್ನು ವಶಪಡಿಸಿಕೊಳ್ಳುವಿಕೆಯು ಚುನಾವಣಾ ಫಲಿತಾಂಶಕ್ಕೆ ಬಾಧಕವಾಗಬಹುದಾದ ರೀತಿಯಲ್ಲಿ ಮತಗಳ ಎಣಿಕೆಯು ಬಾಧಕವಾಗುತ್ತದೆಯೆಂದು ಅಭಿಪ್ರಾಯಪಟ್ಟರೆ ಆ ವಾರ್ಡಿನ ಚುನಾವಣೆಯನ್ನು ರದ್ದುಪಡಿಸತಕ್ಕದ್ದು.
ವಿವರಣೆ: ಈ ನಿಯಮದ ಉದ್ದೇಶಕ್ಕಾಗಿ “ಮತಗಟ್ಟೆಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು” ಎಂಬುದು ಇತರ ವಿಷಯಗಳೊಂದಿಗೆ ಈ ಮುಂದಿನ ಎಲ್ಲಾ ಅಥವಾ ಯಾವುದೇ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ ಎಂದರೆ:-
(i) ಯಾವನೇ ವ್ಯಕ್ತಿಯು, ಮತದಾನ ಕೇಂದ್ರವನ್ನು ಅಥವಾ ಮತದಾನಕ್ಕಾಗಿ ನಿಗಧಿಪಡಿಸಿರುವ ಸ್ಥಳವನ್ನು ಬಲಾತ್ಕಾರವಾಗಿ ಹಿಡಿದಿಟ್ಟುಕೊಳ್ಳುವುದು, ಮತದಾನ ಅಧಿಕಾರಿಗಳಿಗೆ ಮತಪತ್ರಗಳನ್ನು ಅಥವಾ ಮತದಾನ ಯಂತ್ರಗಳನ್ನು ಬಲವಂತವಾಗಿ ವಶಕ್ಕೆ ಒಪ್ಪಿಸುವಂತೆ ಮಾಡುವುದು ಮತ್ತು ಚುನಾವಣೆಗಳು ಶಾಂತಿಯುತವಾಗಿ ನಡೆಯುವುದಕ್ಕೆ ಬಾಧಕವನ್ನುಂಟು ಮಾಡುವಂಥ ಇತರೆ ಯಾವುದೇ ಕೃತ್ಯಗಳನ್ನು ಮಾಡುವುದು;
(ii) ಯಾವನೇ ವ್ಯಕ್ತಿಯು ಒಂದು ಮತದಾನ ಕೇಂದ್ರ ಅಥವಾ ಮತದಾನಕ್ಕಾಗಿ ನಿಗದಿಪಡಿಸಿರುವ ಸ್ಥಳವನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳುವುದು ಮತ್ತು ಅವನ ಅಥವಾ ಅವರ ಬೆಂಬಲಿಗರು ಮಾತ್ರ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟು, ಮತ್ತು ಇತರರು ಮತ ಚಲಾಯಿಸದಂತೆ ತಡೆಯುವುದು;
(iii) ಯಾರೇ ಮತದಾರನಿಗೆ ಬೆದರಿಕೆ ಹಾಕುವುದು ಮತ್ತು ಅವನು ತನ್ನ ಮತ ಚಲಾಯಿಸಲು ಮತದಾನ ಕೇಂದ್ರಕ್ಕೆ ಅಥವಾ ಮತದಾನಕ್ಕೆ ಗೊತ್ತುಪಡಿಸಿರುವ ಸ್ಥಳಕ್ಕೆ ಹೋಗದಂತೆ ತಡೆಯುವುದು.
(iv) ಯಾವನೇ ವ್ಯಕ್ತಿ ಅಥವಾ ವ್ಯಕ್ತಿಗಳು ಮತಗಳ ಎಣಿಕೆ ಮಾಡುವ ಸ್ಥಳವನ್ನು ಬಲಾತ್ಕಾರವಾಗಿ ಹಿಡಿದಿಟ್ಟುಕೊಳ್ಳುವುದು, ಎಣಿಕೆ ಮಾಡುವ ಅಧಿಕಾರಿಗಳಿಗೆ ಮತಪತ್ರಗಳನ್ನು ಅಥವಾ ಮತದಾನ ಯಂತ್ರಗಳನ್ನು ಬಲವಂತವಾಗಿ ಒಪ್ಪಿಸುವಂತೆ ಮಾಡುವುದು ಮತ್ತು ಮತಗಳನ್ನು ಶಾಂತಿಯುತವಾಗಿ ಎಣಿಸುವ ಕಾರ್ಯಕ್ಕೆ ಬಾಧಕವನ್ನುಂಟು ಮಾಡುವಂಥ ಯಾವುದೇ ಕೃತ್ಯವನ್ನು ಮಾಡುವುದು.
(v) ಸರ್ಕಾರಿ ಸೇವೆಯಲ್ಲಿರುವ ಯಾವನೇ ವ್ಯಕ್ತಿಯು ಮೇಲೆ ಹೇಳಲಾದ ಎಲ್ಲಾ ಅಥವಾ ಯಾವುದೇ ಚಟುವಟಿಕೆಗಳನ್ನು ಮಾಡುವುದು ಅಥವಾ ಒಬ್ಬ ಅಭ್ಯರ್ಥಿಯ ಚುನಾವಣೆಯ ಸಂಭಾವ್ಯತೆಯ ಮುಂದುವರಿಕೆಯಲ್ಲಿ ಅಂಥ ಯಾವುದೇ ಚಟುವಟಿಕೆಗೆ ಸಹಾಯ ಮಾಡುವುದು ಅಥವಾ ಪರೋಕ್ಷ ಸಮ್ಮತಿ ನೀಡುವುದು.