(1) ರಿಟರ್ನಿಂಗ್ ಅಧಿಕಾರಿಯು, ಈ ನಿಯಮದಲ್ಲಿ ಉಪಬಂಧಿಸಿದ ರೀತಿಯಲ್ಲಿ ಅಂಚೆ ಮತಪತ್ರವನ್ನು ಮೊದಲು ತೆಗೆದುಕೂಳ್ಳತಕ್ಕದ್ದು.
(2) ಆ ಬಗ್ಗೆ ವಿಗದಿಪಡಿಸಿದ ಅವಧಿಯು ಮುಕ್ತಾಯವಾದ ತರುವಾಯ ರಿಟರ್ನಿಂಗ್ ಅಧಿಕಾರಿಯು ಸ್ವೀಕರಿಸಿದ ನಮೂನೆ 16-ಬಿ ಯಲ್ಲಿನ ಯಾವುದೇ ಲಕೋಟಿಯನ್ನು ತೆರೆಯತಕ್ಕದ್ದಲ್ಲ ಮತ್ತು ಅಂಥ ಯಾವುದೇ ಲಕೋಟಿಯಲ್ಲಿರುವ ಯಾವುದೇ ಮತವನ್ನು ಎಣಿಕೆ ಮಾಡತಕ್ಕದ್ದಲ್ಲ.
- ಇತರೆ ಲಕೋಟೆಗಳನ್ನು ಒಂದಾದ ನಂತರ ಮತ್ತೊಂದನ್ನು ತೆರೆಯತಕ್ಕದ್ದು ಹಾಗೂ ಪ್ರತಿಯೊಂದು ಲಕೋಟಿ ತೆರೆದಾಗ, ರಿಟರ್ವಿಂಗ್ ಅಧಿಕಾರಿಯು ಮೊದಲು ಅದರಲ್ಲಿರುವ ನಮೂನೆ-16 ರಲ್ಲಿನ. ಘೋಷಣೆಯನ್ನು ಪರಿಶೀಲಿಸತಕ್ಕದ್ದು.
(4) ಸದರಿ ಘೋಷಣೆಯ ಕಂಡುಬರದಿದ್ದರೆ ಅಥವಾ ಕ್ರಮಬದ್ಧವಾಗಿ ಸಹಿ ಮಾಡಿರದಿದ್ದರೆ ಅಥವಾ ಅನುಪ್ರಮಾಣಿಸಿರದಿದ್ದರೆ ಅಥವಾ ಅನ್ಯಥಾ ಗಮನಾರ್ಹವಾಗಿ ದೋಷಯುಕ್ತವಾಗಿದ್ದರೆ, ಅಥವಾ ಅದರಲ್ಲಿ ನಮೂದಿಸಿದಂತೆ ಮತ ಪತ್ರದ ಕ್ರಮಸಂಖ್ಯೆಯು, ನಮೂನೆ 16-d ಯಲ್ಲಿನ ಲಕೋಟಿಯ ಮೇಲೆ ಹಿಂಬರಹ ಮಾಡಲಾದ ಕ್ರಮಸಂ೦ಖ್ಯೆಗಿಂತ ಭಿನ್ನವಾಗಿದ್ದರೆ, ಆ ಲಕೋಟಿಯನ್ನು ತೆರೆಯತಕ್ಕದ್ದಲ್ಲ ಮತ್ತು ಅದರ ಮೇಲೆ ಸೂಕ್ತವಾದ ಹಿಂಬರಹ ಮಾಡಿದ ತರುವಾಯ, ರಿಟರ್ನಿಂಗ್ ಅಧಿಕಾರಿಯು, ಅದರಲ್ಲಿರುವ ಮತಪತ್ರವನ್ನು ತಿರಸ್ಕರಿಸತಕ್ಕದ್ದು.
(5) ಹಾಗೆ ಹಿಂಬರಹ ಮಾಡಲಾದ ಪ್ರತಿಯೊಂದು ಲಕೋಟೆಯನ್ನು ಮತ್ತು ಅದರೊಂದಿಗೆ ಸ್ವೀಕರಿಸಲಾದ ಘೋಷಣೆಯನ್ನು ನಮೂನೆ-16 ಬಿ ಯಲ್ಲಿನ ಲಕೋಟಿಯಲ್ಲಿ ಪುನ: ಇಡತಕ್ಕದ್ದು ಮತ್ತು ನಮೂನೆ 16-ಬಿ ಯಲ್ಲಿ ಅಂಥ ಎಲ್ಲ ಲಕೋಟಿಗಳನ್ನು ಪ್ರತ್ಯೇಕ ಪ್ಯಾಕೆಟ್ನಲ್ಲಿ ಇಡತಕ್ಕದ್ದು ಅದಕ್ಕೆ ಮೊಹರು ಮಾಡತಕ್ಕದ್ದು ಹಾಗೂ ಅದರ ಮೇಲೆ ವಾರ್ಡಿನ ಹೆಸರು, ಮತ ಎಣಿಕೆ ದಿನಾಂಕ ಮತ್ತು ಅದರ ಒಳಾಂಶಗಳ ಸಲಂಕ್ಕಿಪ್ತ ವಿವರಣೆಯನ್ನು ದಾಖಲಿಸತಕ್ಕದ್ದು.
(6) ರಿಟರ್ನಿಂಗ್ ಅಧಿಕಾರಿಯು, ತನಗೆ ಕ್ರಮಬದ್ಧವಾಗಿದೆ ಎಂದು ಕಂಡುಬಂದ ನಮೂನೆ-16 ರಲ್ಲಿನ ಎಲ್ಲ ಘೋಷಣೆಗಳನ್ನು ನಂತರ ಪ್ರತ್ಯೇಕ ಪ್ಯಾಕಟಿನಲ್ಲಿಡತಕ್ಕದ್ದು ಅದನ್ನು ನಮೂನೆ 17-ಎ ರಲ್ಲಿನ ಯಾವುದೇ ಲಕೋಟೆಯನ್ನು ತೆರೆಯುವುದಕ್ಕೆ ಮುಂಚೆ ಮೊಹರು ಮಾಡತಕ್ಕದ್ದು ಮತ್ತು ಅದರ ಮೇಲೆ (5) ನೇ ಉಪ-ನಿಯಮದಲ್ಲಿ ಉಲ್ಲೇಖಿಸಲಾದ ವಿವರಗಳನ್ನು ದಾಖಲಿಸತಕ್ಕದ್ದು.
(7) ಈ ನಿಯಮದ ಈ ಹಿಂದೆ ಹೇಳಿದ ಉಪಬಂಧಗಳ ಮೇರೆಗೆ ಈಗಾಗಲೇ ಚರ್ಚಿಸಿರದ ನಮೂನೆ 16-ಎ ಯಲ್ಲಿನ ಲಕೋಟೆಗಳನ್ನು ನಂತರ ಒಂದಾದ ಮೇಲೆ ಮತ್ತೊಂದನ್ನು ತೆರೆಯತಕ್ಕದ್ದು ಮತ್ತು ರಿಟರ್ನಿಂಗ್ ಅಧಿಕಾರಿಯು ಪ್ರತಿಯೊಂದು ಮತಪತ್ರವನ್ನು ಪರಿಶೀಲಿಸತಕ್ಕದ್ದು ಮತ್ತು ಅದರ ಮೇಲೆ ದಾಖಲಾದ ಮತದ ಸಿಂಧುತ್ವವನ್ನು ತೀರ್ಮಾನಿಸತಕ್ಕದ್ದು.
(8) ಅಂಚೆ ಮತಪತ್ರವನ್ನು,
(i) ಅದು ಯಾವುದೇ ಗುರುತನ್ನು (ಮತ ದಾಖಲಿಸುವ ಗುರುತನ್ನು ಹೊರತುಪಡಿಸಿ) ಅಥವಾ ಮತದಾರನನ್ನು ಗುರುತಿಸಬಹುದಾದಂಥ ಬರಹವನ್ನು ಹೊಂದಿದ್ದರೆ;
(ii) ಅದರ ಮೇಲೆ ಯಾವುದೇ ಮತವನ್ನು ದಾಖಲಿಸಿರದಿದ್ದರೆ;
(ii) ಆಯ್ಕೆಮಾಡಬೇಕಾಗಿರುವ ಅಭ್ಯರ್ಥಿಗಳಿಗಿಂತ ಹೆಚ್ಚು ಅಭ್ಯರ್ಥಿಗಳಿಗೆ ಅದರ ಮೇಲೆ ಮತಗಳನ್ನು ಹಾಕಿದ್ದರೆ;
(iv) ಅದು ಖೋಟಾ ಮತಪತ್ರವಾಗಿದ್ದರೆ;
(V) ಅದು ನೈಜವಾದ ಮತಪತ್ರವೆಂದು ಗುರುತಿಸುವುದನ್ನು ದೃಢಪಡಿಸಿಕೂಳ್ಳಲಾಗದ ಹಾಗೆ ಅದು ಹಾನಿಯಾಗಿದ್ದರೆ ವಿರೂಪವಾಗಿದ್ದರೆ; ಅಥವಾ
(vi) ರಿಟರ್ನಿಂಗ್ ಅಧಿಕಾರಿಯು ಮತದಾರನಿಗೆ ಅದರೊಂ೦ದಿಗೆ ಕಳುಹಿಸಿದ ಲಕೋಟಿಯಲ್ಲಿ ಅದನ್ನು ಹಿಂತಿರುಗಿಸದಿದ್ದರೆ - ತಿರಸ್ಕರಿಸತಕ್ಕದ್ದು.
(9) ಅಂಚೆ ಮತಪತ್ರದ ಮೇಲೆ ದಾಖಲಿಸಿದ ಮತವನ್ನು, ಯಾವ ಅಭ್ಯರ್ಥಿಗೆ ಮತವನ್ನು ನೀಡಲಾಗಿದೆಯೆಂಬುದರ ಬಗ್ಗೆ ಸಂದೇಹ ಉಂಟುಮಾಡುವ ಅಂಥ ರಿತಿಯಲ್ಲಿ ಮತವನ್ನು ಸೂಚಿಸುವ ಗುರುತನ್ನು ಮತಪತ್ರದ ಮೇಲೆ ಹಾಕಿದ್ದರೆ ತಿರಸ್ಕರಿಸತಕ್ಕದ್ದು.
(10) ಅಂಚೆ ಮತಪತ್ರದ ಮೇಲೆ ದಾಖಲಿಸಿದ ಮತವನ್ನು ಮತವು, ನಿರ್ದಿಷ್ಟ ಅಭ್ಯರ್ಥಿಗಾಗಿ ಇದೆ ಎಂಬ ಉದ್ದೇಶವು ಆ ಪತ್ರಕ್ಕೆ ಗುರುತು ಮಾಡಿದ ರೀತಿಯಿಂದ ಸ್ಪಷ್ಟವಾಗಿ ಕಂಡುಬಂದರೆ, ಮತವನ್ನು ಸೂಚಿಸಿರುವ ಗುರುತು ಅಸ್ಪಷ್ಟವಾಗಿದೆ ಅಥವಾ ಒಂದಕ್ಕಿಂಂತ ಹೆಚ್ಚು ಸಲ ಮಾಡಲಾಗಿದೆ ಎಂಬ ಕಾರಣದಿಂದ ಮಾತ್ರ ತಿರಸ್ಕರಿಸತಕ್ಕದ್ದಲ್ಲ.
(1) ರಿಟರ್ವಿಂಗ್ಕೆ ಅಧಿಕಾರಿಯು, ಪ್ರತಿಯೊಬ್ಬ ಅಭ್ಯರ್ಥಿಗೆ ಅಂಚೆ ಮತದ ಮೂಲಕ ನೀಡಲಾದ ಎಲ್ಲ ಸಿಂಧುವಾದ ಮತಗಳನ್ನು ಎಣಿಕೆ ಮಾಡತಕ್ಕದ್ದು, ನಮೂನೆ-23 ರಲ್ಲಿ ಫಲಿತಾಂಶದ ಹಾಳೆಯಲ್ಲಿ ಅದರ ಒಟ್ಟು ಮತಗಳನ್ನು ದಾಖಲಿಸತಕ್ಕದ್ದು ಮತ್ತು ಅದನ್ನು ಪ್ರಕಟಿಸತಕ್ಕದ್ದು.
(12) ತದನಂತರ, ಎಲ್ಲ ಸಿಂಧುವಾದ ಮತಪತ್ರಗಳು ಮತ್ತು ಎಲ್ಲ ತಿರಸ್ಕರಿಸಿದ ಮತಪತ್ರಗಳನ್ನು, ಪ್ರತ್ಯೇಕವಾಗಿ ಕಟ್ಟಿಡತಕ್ಕದ್ದು ಮತ್ತು ಒಂದು ಲಕೋಟೆಯಲ್ಲಿ ಜೊತೆಗಿಡತಕ್ಕದ್ದು. ರಿಟರ್ನ್ವಿಂಗ್ ಅಧಿಕಾರಿಯು ಮತ್ತು ಅದರ ಮೇಲೆ. ತಮ್ಮ ಮೊಹರುಗಳನ್ನು ಹಾಕಲು ಇಚ್ಡಿಸಬಹುದಾದಂಂಥ ಉಮೇದುದಾರರು, ಅವರ ಚುನಾವಣಾ ಏಜಿಂಟುಗಳ ಮೊಹರಿನಿಂದ ಅದನ್ನು ಸೀಲ್ ಮಾಡತಕ್ಕದ್ದು ಮತ್ತು ಹಾಗೆ ಸೀಲ್ ಮಾಡಲಾದ ಲಕೋಟಿಗಳ ಮೇಲೆ, ವಾರ್ಡಿನ ಹೆಸರು, ಮತ ಎಣಿಕೆ ದಿನಾಂಕ ಮತ್ತು ಅದರ ಒಳಾಂಶಗಳ ಸಂಕ್ಷಿಪ್ತ ವಿವರಣೆಯನ್ನು ದಾಖಲಿಸತಕ್ಕದ್ದು.