(1) ಚುನಾವಣೆಯಲ್ಲಿ ಬಳಸಲಾದ ಎಲ್ಲಾ ಮತಪೆಟ್ಟಿಗೆಗಳನ್ನು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ಅಭಿರಕ್ಷೆಯಲ್ಲಿ ಇಡತಕ್ಕದ್ದು.
(2) ರಿಟರ್ನಿಂಗ್ ಅಧಿಕಾರಿಯು ಈ ಕೆಳಗಿನವುಗಳನ್ನು ಸುರಕ್ಷಿತ ಅಭಿರಕ್ಷೆಯಲ್ಲಿ ಇಡತಕ್ಕದ್ದು, ಎಂದರೆ:-
(i) ಅವುಗಳಿಗೆ ಲಗತ್ತಿಸಿದ ಪಕ್ಕಾ ಪ್ರತಿಗಳೊಂದಿಗೆ ಬಳಸಿಲ್ಲದ ಮತಪತ್ರಗಳ ಪ್ಯಾಕೆಟ್ಗಳು;
(ii) ಸಿಂಧುವಾದ, ಟೆಂಡರ್ಡ್ ಅಥವಾ ತಿರಸ್ಕರಿಸಿದ ಬಳಸಿಲ್ಲದ ಮತಪತ್ರಗಳ ಪ್ಯಾಕೆಟ್ಗಳು;
(iii) ಬಳಸಿದ ಮತಪತ್ರಗಳ ಪಕ್ಕಾ ಪ್ರತಿಗಳ ಪ್ಯಾಕೆಟ್ಗಳು;
(iv) ಮತದಾರರ ಪಟ್ಟಿಯ ಗುರುತು ಮಾಡಿದ ಪ್ರತಿಯ ಪ್ಯಾಕೆಟ್ಗಳು;
(v) ಮತದಾರರ ಘೋಷಣೆಗಳು ಮತ್ತು ಅವರ ಸಹಿಗಳ ಅನುಪ್ರಮಾಣೀಕರಿಸಿದ ಪ್ಯಾಕೆಟ್ಗಳು; ಮತ್ತು
(vi) ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರ ಕಾಗದ ಪತ್ರಗಳು.