(1) ಮತಯಂತ್ರದ ಬ್ಯಾಲಟಿಂಗ್ ಯುನಿಟ್, ಕನ್ನಡ ಭಾಷೆ ಮತ್ತು ರಾಜ್ಯ ಚುನಾವಣಾ ಆಯೋಗವು ನಿರ್ದಿಷ್ಟಪಡಿಸಬಹುದಾದಂಂತಹ ಇತರೆ ಭಾಷೆಗಳಲ್ಲಿ ಅಂತಹ ವಿವರಗಳನ್ನು ಒಳಗೊಂಡಿರತಕ್ಕದ್ದು.
(ಐ) ಅಭ್ಯರ್ಥಿಗಳ ಹೆಸರುಗಳನ್ನು ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟೆಯಲ್ಲಿ ಅವು ಕಾಣಿಸುವಂತಹ ಪಟ್ಟಿಯಲ್ಲಿ ಅವುಗಳನ್ನು ತೋರಿಸಿರುವಂತಹ ಅದೇ ಕ್ರಮಾದೇಶದಲ್ಲಿ ಬ್ಯಾಲಟಿಂಗ್ ಯುನಿಟ್ನಲ್ಲಿ ವ್ಯವಸ್ಥೆಗೊಳಿಸತಕ್ಕದ್ದು.
(3) ಒಂದು ವೇಳೆ ಎರಡು ಅಥವಾ ಹೆಚ್ಚಿನ ಅಭ್ಯರ್ಥಿಗಳು ಒಂದೇ ಹೆಸರನ್ನು ಹೊಂದಿದ್ದರೆ, ಅವರನ್ನು, ಅವರ ತಂದೆಯ ಹೆಸರನ್ನು ಅಥವಾ ವಾಸಸ್ಮಳವನ್ನು ಸೇರಿಸುವ ಮೂಲಕ ಅಥವಾ ಯಾವುದೇ ಇತರ ರೀತಿಯಲ್ಲಿ ಗುರುತಿಸತಕ್ಕದ್ದು.
(4) ಈ ನಿಯಮದ ಹಿಂದೆ ಹೇಳಿದ ಉಪಬಂಧಗಳಿಗೊಳಪಟ್ಟು, ರಿಟರ್ವಿಂಗ್ ಅಧಿಕಾರಿಯು,-
(ಎ) ಬ್ಯಾಲಟಿಂಗ್ ಯುನಿಟ್ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಯನ್ನು ಒಳಗೊಂಡಿರುವ ಗುರುತು ಚೀಟಿಯನ್ನು ಅಂಟಿಸತಕ್ಕದ್ದು ಮತ್ತು ಆತನ ಮೊಹರಿನೊಂದಿಗೆ ಮತ್ತು ಅಂತಹ ಸ್ಪರ್ಧಿಸುವ ಅಭ್ಯರ್ಥಿಗಳ ಅಥವಾ ಅದನ್ನು ಅಂಟಿಸಲು ಬಯಸುವಂಥ ಅಲ್ಲಿ ಹಾಜರಿರುವ ಅವರ ಚುನಾವಣಾ ಏಜೆಂಟರುಗಳ ಮೊಹರಿನೊಂದಿಗೆ ಆ ಬ್ಯಾಲಟಿಂಗ್ ಯುನಿಟ್ ಅನ್ನು ಭದ್ರಪಡಿಸತಕ್ಕದ್ದು.
(ಬಿ) ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯನ್ನು ಹೊಂದಿಸತಕ್ಕದ್ದು (ಸೆಟ್ ಮಾಡತಕ್ಕದ್ದು) ಮತ್ತು ಕಂಟ್ರೋಲ್ ಯುನಿಟ್ನಲ್ಲಿ ಅಭ್ಯರ್ಥಿ ಹೊಂದಿಕೆ (ಸೆಟ್) ವಿಭಾಗವನ್ನು ಮುಕ್ತಾಯಗೊಳಿಸತಕ್ಕದ್ದು ಮತ್ತು ಅದನ್ನು ಆತನ ಮೊಹರಿನೊಂದಿಗೆ ಮತ್ತು ಅಂತಹ ಸ್ಪರ್ಧಿಸುವ ಅಭ್ಯರ್ಥಿಗಳ ಅಥವಾ ಅದನ್ನು ಅಂಟಿಸಲು ಬಯಸುವಂಥ ಅಲ್ಲಿ ಹಾಜರಿರುವ ಅವರ ಚುನಾವಣಾ ಏಜೆಂಟ್ಗಳ ಮೊಹರಿನೊಂದಿಗೆ ಭದ್ರಪಡಿಸತಕ್ಕದ್ದು.