ನಮೂನೆ-16ಸಿ
(ನಿಯಮ 49ರ ಉಪ-ನಿಯಮ (1) ರ ಖಂಡ (iv) ನ್ನು ನೋಡಿ)
ಮತದಾರರ ಮಾರ್ಗದರ್ಶನಕ್ಕಾಗಿ ಸೂಚನೆಗಳು
........* ವಾರ್ಡಿನಿಂದ ........ ನಗರದ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ಇದರೊಂದಿಗೆ ಕಳುಹಿಸಿದ ಮತಪತ್ರದ ಮೇಲೆ ಯಾರ ಹೆಸರುಗಳನ್ನು ಮುದ್ರಿಸಲಾಗಿದೆಯೋ ಆ ವ್ಯಕ್ತಿಗಳು, ಮೇಲ್ಕಂಡ ಚುನಾವಣೆಯ ಅಭ್ಯರ್ಥಿಗಳಾಗಿದ್ದಾರೆ. ನೀವು ಮತ ಚಲಾಯಿಸಲು ಇಚ್ಛಿಸಿದರೆ ನಿಮ್ಮ ಮತವನ್ನು ಕೆಳಕಂಡ ಭಾಗ-I ರಲ್ಲಿ ನೀಡಲಾದ ನಿರ್ದೇಶನಗಳಿಗನುಸಾರವಾಗಿ ನೀವು ದಾಖಲಿಸತಕ್ಕದ್ದು ಮತ್ತು ಆ ತರುವಾಯ ಭಾಗ- II ರಲ್ಲಿ ವಿವರಿಸಿರುವ ಸೂಚನೆಗಳನ್ನು ಅನುಸರಿಸತಕ್ಕದ್ದು.
ಭಾಗ-I
ಮತದಾರರಿಗೆ ನಿರ್ದೇಶನಗಳು
-
ಚುನಾಯಿಸಬೇಕಾದ ಸದಸ್ಯರುಗಳ ಸಂಖ್ಯೆ ಒಂದು ಆಗಿದೆ.
-
ನಿಮಗೆ ಒಂದು ಮತ ಮಾತ್ರ ಇದೆ.
-
ನೀವು ಒಬ್ಬ ಅಭ್ಯರ್ಥಿಗಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಬಾರದು. ನೀವು ಹಾಗೆ ಮಾಡಿದರೆ ನಿಮ್ಮ ಮತಪತ್ರವನ್ನು ತಿರಸ್ಕರಿಸಲಾಗುವುದು.
-
ನೀವು ಯಾರಿಗೆ ಆ ಮತವನ್ನು ಚಲಾಯಿಸಬೇಕೆಂದು ಇಚ್ಚಿಸುವಿರೋ ಆ ಅಭ್ಯರ್ಥಿಯ ಹೆಸರಿನ ಎದುರಿಗೆ ಸ್ಪಷ್ಟವಾಗಿ ಒಂದು ಗುರುತನ್ನು ಹಾಕುವುದರ ಮೂಲಕ ಮತವನ್ನು ದಾಖಲಿಸುವುದು.
-
ನಿಮ್ಮ ಮತವನ್ನು ನೀವು ಯಾವ ಅಭ್ಯರ್ಥಿಗೆ ನೀಡುವಿರೋ ಅದನ್ನು ಸ್ಪಷ್ಟವಾಗಿ ಮತ್ತು ಸಂಶಯಾತೀತವಾಗಿ ತೋರಿಸುವ ಹಾಗೆ ಗುರುತನ್ನು ಹಾಕಬೇಕು. ನೀವು ಯಾವ ಅಭ್ಯರ್ಥಿಗೆ ಮತವನ್ನು ನೀಡಿರುವಿರಿ ಎಂಬ ಬಗ್ಗೆ ಸಂಶಯ ಬರುವಂತೆ ಗುರುತು ಹಾಕಿದ್ದರೆ, ಆ ಮತವು ಸಿಂಧುವಾಗುವುದಿಲ್ಲ.
-
4ನೇ ಪ್ಯಾರಾಗೆ ಅನುಸಾರವಾಗಿ ಅದರ ಮೇಲೆ ನೀವು ಹಾಕಲು ಅಗತ್ಯವಿರುವ ಗುರುತಲ್ಲದೆ ಬೇರೆ ಮತಪತ್ರದ ಮೇಲೆ ನಿಮ್ಮ ಸಹಿ ಮಾಡುವುದಾಗಲಿ ಅಥವಾ ಯಾವುದೇ ಪದವನ್ನು ಬರೆಯುವುದಾಗಲಿ ಅಥವಾ ಯಾವುದೇ ಗುರುತು, ಚಿಹ್ನೆ ಅಥವಾ ಯಾವುದೇ ಬರಹವನ್ನು ಬರೆಯುವುದಾಗಲಿ ಮಾಡಬಾರದು.
-
ಮತದಾರನು, ನಮೂನೆ-16 ರಲ್ಲಿನ ಘೋಷಣೆಯ ಮೇಲಿನ ತನ್ನ ಸಹಿಗೆ ಮ್ಯಾಜಿಸ್ಟ್ರೇಟ್ ಅಥವಾ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಣ ಪಡೆಯಬೇಕು. ಅಥವಾ
(ಎ) ಅವರು, ಒಕ್ಕೂಟದ ಸಶಸ್ತ್ರ ಪಡೆಗಳ ಅಥವಾ ರಾಜ್ಯದ ಸಶಸ್ತ್ರ ಪೊಲೀಸ್ ಪಡೆಯ ಸದಸ್ಯನಾಗಿದ್ದು ಆದರೆ ಆ ರಾಜ್ಯದ ಹೊರಗಡೆ ಸೇವೆ ಸಲ್ಲಿಸುತ್ತಿದ್ದರೆ, ಮತದಾರನು ಅಥವಾ ಸಂದರ್ಭಾನುಸಾರ
ಆಕೆಯ ಪತಿಯು ನಿಯೋಜನೆಯಾಗಿರುವ ಘಟಕ, ನೌಕೆ ಅಥವಾ ಕಾರ್ಯಸಂಸ್ಥೆಯ ಕಮಾಂಡಿಂಗ್ ಅಧಿಕಾರಿಯು ಈ ಬಗ್ಗೆ ನೇಮಕ ಮಾಡಬಹುದಾದಂಥ ಅಧಿಕಾರಿಯಿಂದ;
(ಬಿ) ಅವನು ಚುನಾವಣಾ ಕರ್ತವ್ಯದ ಮೇಲಿದ್ದರೆ, ಯಾರೇ ಗೆಜೆಟೆಡ್ ಅಧಿಕಾರಿಯಿಂದ ಅಥವಾ ಅವನು ಚುನಾವಣಾ ಕರ್ತವ್ಯದ ಮೇಲಿರುವ ಮತದಾನ ಕೇಂದ್ರದ ಪ್ರಿಸೈಡಿಂಗ್ ಅಧಿಕಾರಿಯಿಂದ; ಮತ್ತು
(ಸಿ) ಅವನು, ಜನತಾ ಪ್ರಾತಿನಿಧ್ಯ ಅಧಿನಿಯಮ, 1950ರ 20ನೇ ಪ್ರಕರಣದ (4) ನೇ ಉಪ-ಪ್ರಕರಣದ ಉಪಬಂಧಗಳು ಅನ್ವಯಿಸುವ ಹುದ್ದೆಯಾಗಿದೆ ಎಂದು ಘೋಷಿಸಿರುವ ಹುದ್ದೆಯನ್ನು ಹೊಂದಿದ್ದರೆ, ಸರ್ಕಾರದ ಉಪ ಕಾರ್ಯದರ್ಶಿಯ ದರ್ಜೆಗಿಂತ ಕಡಿಮೆಯಲ್ಲದ ಅಧಿಕಾರಿಯಿಂದ; ಮತ್ತು
(ಡಿ) ಅವನು, ಪ್ರತಿಬಂಧಕ ಸ್ಥಾನಬದ್ಧತೆಯಲ್ಲಿದ್ದರೆ, ಅವನು ಸ್ಥಾನಬದ್ಧತೆಯಲ್ಲಿರುವಂಥ ಸ್ಥಾನಬದ್ಧತಾ ಶಿಬಿರದ ಕಮಾಂಡೆಂಟ್ ಕಾರಾಗೃಹದ ಸೂಪರಿಂಟೆಂಡೆಂಟ್ನಾಗಿರುತ್ತಾನೆ.
ಭಾಗ- II
ಮತದಾರರಿಗೆ ಸೂಚನೆಗಳು
(ಎ) ನೀವು ನಿಮ್ಮ ಮತವನ್ನು ಮತಪತ್ರದ ಮೇಲೆ ದಾಖಲಿಸಿದ ತರುವಾಯ, ಇದರೊಂದಿಗೆ ಕಳುಹಿಸಿದ 'ಎ' ಎಂದು ಗುರುತು ಮಾಡಿದ ಚಿಕ್ಕ ಲಕೋಟೆಯಲ್ಲಿ ಮತಪತ್ರವನ್ನಿಡುವುದು. ಲಕೋಟೆಯನ್ನು ಮುಚ್ಚುವುದು ಮತ್ತು ಮೊಹರು ಮಾಡಿ ಅಥವಾ ಅನ್ಯಥಾ ಅದನ್ನು ಭದ್ರಪಡಿಸಬೇಕು.
(ಬಿ) ಅನಂತರ ನೀವು ಇದರೊಂದಿಗೆ ಕಳುಹಿಸಿದ ನಮೂನೆ-16 ರಲ್ಲಿನ ಘೋಷಣೆಗೆ ನಿಮ್ಮ ಸಹಿಯನ್ನು ದೃಢೀಕರಿಸಲು ಮ್ಯಾಜಿಸ್ಟ್ರೇಟ್ ಅಥವಾ ಇತರೆ ಯಾರೆ ಸಕ್ಷಮ ಅಧಿಕಾರಿಯ ಸಮ್ಮುಖದಲ್ಲಿ ಸಹಿ ಮಾಡಬೇಕು (ಮೇಲಿನ 7ನೇ ನಿರ್ದೇಶನವನ್ನು ನೋಡಿ). ಘೋಷಣೆಯನ್ನು ಯಾರೇ ಅಂಥ ಅಧಿಕಾರಿಯ ಬಳಿಗೆ ತೆಗೆದುಕೊಂಡು ಹೋಗಿ ನಿಮ್ಮ ಗುರುತಿನ ಬಗ್ಗೆ ಅವರು ಮನದಟ್ಟು ಮಾಡಿಕೊಂಡ ತರುವಾಯ ಅವರ ಸಮ್ಮುಖದಲ್ಲಿ ಅದಕ್ಕೆ ಸಹಿ ಮಾಡಬೇಕು. ಆ ಅಧಿಕಾರಿಯು ನಿಮ್ಮ ಸಹಿಯನ್ನು ದೃಢೀಕರಿಸುವುದು ಮತ್ತು ನಿಮಗೆ ಘೋಷಣೆಯನ್ನು ಹಿಂತಿರುಗಿಸುತ್ತಾರೆ ನೀವು ದೃಢೀಕರಿಸಿದ ಅಧಿಕಾರಿಗೆ ನಿಮ್ಮ ಮತಪತ್ರವನ್ನು ತೋರಿಸಕೂಡದು ಅಥವಾ ನೀವು ಹೇಗೆ ಮತ ಚಲಾಯಿಸಿದಿರಿ ಎಂಬ ಬಗ್ಗೆ ಅವರಿಗೆ ಹೇಳಕೂಡದು.
(ಸಿ) ಅನಕ್ಷರತೆ, ಅಂಧತ್ವ ಅಥವಾ ಇತರೆ ದುರ್ಬಲತೆಯ ಕಾರಣದಿಂದಾಗಿ ಮತಪತ್ರಕ್ಕೆ ಗುರುತು ಮಾಡಲು ಮತ್ತು ಮೇಲೆ ಸೂಚಿಸಲಾದ ರೀತಿಯಲ್ಲಿ ಸ್ವತ: ಘೋಷಣೆಗೆ ಸಹಿ ಮಾಡಲು ನೀವು ಅಸಮರ್ಥರಾಗಿದ್ದರೆ, ಬಾಬ್ತು (ಬಿ)ಯಲ್ಲಿ ಉಲ್ಲೇಖಿಸಲಾದ ಯಾರೇ ಅಧಿಕಾರಿಯು ನಿಮ್ಮ ಮತವನ್ನು ಗುರುತು ಹಾಕಿಸಿಕೊಳ್ಳಲು ಮತ್ತು ಘೋಷಣೆಗೆ ಸಹಿ ಮಾಡಿಸಿಕೊಳ್ಳಲು ಹಕ್ಕುಳ್ಳವರಾಗಿರುತ್ತೀರಿ. ಅಂಥ ಅಧಿಕಾರಿಯು ನಿಮ್ಮ ಕೋರಿಕೆಯ ಮೇರೆಗೆ ನಿಮ್ಮ ಸಮ್ಮುಖದಲ್ಲಿ ಮತ್ತು ನಿಮ್ಮ
ಇಚ್ಛೆಯನುಸಾರವಾಗಿ ಮತಪತ್ರಕ್ಕೆ ಗುರುತು ಮಾಡುವುದು. ಈ ಬಗ್ಗೆ ಅವನು ಅಗತ್ಯ ಪ್ರಮಾಣಪತ್ರವನ್ನು ಸಹ ಭರ್ತಿ ಮಾಡಬೇಕು.
(ಡಿ) ನಿಮ್ಮ ಘೋಷಣೆಗೆ ಸಹಿ ಮಾಡಿದ ಮತ್ತು ನಿಮ್ಮ ಸಹಿಯನ್ನು ದೃಢೀಕರಿಸಲಾದ ತರುವಾಯ, ಬಾಬ್ತು (ಬಿ) ಅಥವಾ ಬಾಬ್ತು (ಸಿ) ಅನುಸಾರವಾಗಿ, ನಮೂನೆ-16 ರಲ್ಲಿನ ಘೋಷಣೆಯ ಮತಪತ್ರವನ್ನು ಒಳಗೊಂಡಿರುವ ಲಕೋಟೆಯನ್ನು ದೊಡ್ಡ 'ಎ' ಎಂದು ಗುರುತು ಮಾಡಿದ ಚಿಕ್ಕ ಲಕೋಟೆಯಲ್ಲಿ, 'ಬಿ' ಎಂದು ಗುರುತು ಮಾಡಿದ ದೊಡ್ಡ ಲಕೋಟೆಯಲ್ಲಿ ಹಾಕಬೇಕು.
ಅದನ್ನು ಅಂಚೆ ಮೂಲಕ ಅಥವಾ ಸಂದೇಶ ವಾಹಕನ ಮೂಲಕ ರಿಟರ್ನಿಂಗ್ ಅಧಿಕಾರಿಗೆ ಕಳುಹಿಸಬೇಕು. 'ಬಿ' ಎಂದು ಗುರುತು ಮಾಡಿದ ಲಕೋಟೆಯ ಮೇಲೆ ಒದಗಿಸಿದ ಸ್ಥಳದಲ್ಲಿ ನಿಮ್ಮ ಪೂರ್ಣ ಸಹಿಯನ್ನು ಮಾಡಬೇಕು. ನೀವು ಯಾವುದೇ ಅಂಚೆ ಸ್ಟ್ಯಾಂಪನ್ನು ಅಂಟಿಸುವ ಅಗತ್ಯವಿರುವುದಿಲ್ಲ.
(ಇ) ಲಕೋಟೆಯು ಚುನಾವಣಾಧಿಕಾರಿಗೆ ........ ರಂದು ........ ಗೂ ಮುಂಚೆ ತಲುಪಿರುವುದನ್ನು ಖಚಿತಪಡಿಸಿಕೊಳ್ಳಬೇಕು.
(ಎಫ್) ದಯವಿಟ್ಟು ಇವುಗಳನ್ನು ಗಮನಿಸಿ:
(i) ಮೇಲೆ ಸೂಚಿಸಲಾದ ರೀತಿಯಲ್ಲಿ ನಿಮ್ಮ ಘೋಷಣೆಗೆ ದೃಢೀಕರಣ ಪಡೆಯಲು ಅಥವಾ ಪ್ರಮಾಣೀಕರಣ ಪಡೆಯಲು ತಪ್ಪಿದರೆ, ನಿಮ್ಮ ಮತಪತ್ರವನ್ನು ತಿರಸ್ಕರಿಸಲಾಗುತ್ತದೆ; ಮತ್ತು
(ii) ಲಕೋಟೆಯು ........ ದಿನಾಂಕದಂದು ........ ತರುವಾಯ ರಿಟರ್ನಿಂಗ್ ಅಧಿಕಾರಿಯನ್ನು ತಲುಪಿದರೆ, ನಿಮ್ಮ ಮತವನ್ನು ಎಣಿಕೆ ಮಾಡಲಾಗುವುದಿಲ್ಲ.
-
ಚುನಾವಣೆಯ ಯುಕ್ತ ವಿವರಗಳನ್ನು ಸೇರಿಸಿ.
-
ಮತಗಳ ಎಣಿಕೆಯ ಪ್ರಾರಂಭಕ್ಕೆ ನಿಗದಿಪಡಿಸಿದ ವೇಳೆ ಮತ್ತು ದಿನಾಂಕವನ್ನು ಇಲ್ಲಿ ನಿರ್ದಿಷ್ಟಪಡಿಸಿ