(1) ಈ ಅಧ್ಯಾಯದ ಉಪಬಂಧಗಳು, ಚುನಾವಣೆಗಳನ್ನು ನಡೆಸಿದ ಸಮಯದಲ್ಲಿ ಬಳಸಿದ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿರುವಲ್ಲೆಲ್ಲಾ ಅನ್ವಯವಾಗತಕ್ಕದ್ದು.
(ಐ) ಪ್ರತಿಯೊಂದು. ವಿದ್ಯುನ್ಮಾನ ಮತಯಂತ್ರವು ಎರಡು ಯುನಿಟ್ಗಳನ್ನು ಒಳಗೊಂಡಿರತಕ್ಕದ್ದು (ಇದರಲ್ಲಿ ಇನ್ನು ಮುಂದೆ ಮತಯಂತ್ರವೆಂದು ಉಲ್ಲೇಖಿಸಲಾಗಿದೆ) ಅದರಲ್ಲಿ ಒಂದು ಕಂಟ್ರೋಲ್ ಯುನಿಟ್ ಮತ್ತು ಮತ್ತೊಂದು ಬ್ಯಾಲಟಿಂಗ್ ಯುನಿಟ್ ಇರತಕ್ಕದ್ದು. ಮತ್ತು ರಾಜ್ಯ ಚುನಾವಣಾ ಆಯೋಗವು ಅನುಮೋದಿಸಬಹುದಾದಂತಹ ವಿನ್ಯಾಸದಲ್ಲಿ ಇರತಕ್ಕದ್ದು.