ನಮೂನೆ-Iಎ
(ನಿಯಮ 10ರ ಉಪ-ನಿಯಮ (3) ನ್ನು ನೋಡಿ)
ಚುನಾವಣೆ ನೋಟೀಸು
-
ಈ ಮೂಲಕ ಸೂಚನೆ ನೀಡುವುದೇನೆಂದರೆ ........ ಮಹಾನಗರ ಪಾಲಿಕೆಯ ........ * ವಾರ್ಡಿನಿಂದ ಹಿಂದುಳಿದ ವರ್ಗಗಳ ಎ/ ಬಿ/ ಅನುಸೂಚಿತ ಜಾತಿ/ ಅನುಸೂಚಿತ ಪಂಗಡ ಮತ್ತು ಮಹಿಳೆಯರಿಗೆ ಮೀಸಲಿಟ್ಟ ಕೌನ್ಸಿಲರ್ ಅನ್ನು ಚುನಾಯಿಸಲು ಚುನಾವಣೆಯನ್ನು ನಡೆಸಲಾಗುವುದೆಂದು.
-
........ (ದಿನಾಂಕ) ದಿಂದ ........ (ದಿನಾಂಕದ) ವರೆಗೆ ಸಾರ್ವಜನಿಕ ರಜಾ ದಿನವನ್ನು ಹೊರತುಪಡಿಸಿ ಯಾವುದೇ ದಿನದಂದು ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 3-00 ಗಂಟೆಯ ನಡುವೆ ರಿಟರ್ನಿಂಗ್ ಅಧಿಕಾರಿಯ ಕಛೇರಿಯಿಂದ ನಾಮಪತ್ರದ ನಮೂನೆಗಳನ್ನು ಪಡೆಯಬಹುದೆಂದು;
-
ನಾಮ ಪತ್ರಗಳನ್ನು ಅಭ್ಯರ್ಥಿ ಅಥವಾ ಆತನ ಸೂಚಕನು ........ ದಿನಾಂಕವನ್ನು ಮೀರದಂತೆ ಸಾರ್ವಜನಿಕ ರಜಾ ದಿನವನ್ನು ಹೊರತುಪಡಿಸಿ ಯಾವುದೇ ದಿನದಂದು ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 3-00 ಗಂಟೆಯ ನಡುವೆ ರಿಟರ್ನಿಂಗ್ ಅಧಿಕಾರಿಗೆ ಒಪ್ಪಿಸಬಹುದೆಂದು;
-
ನಾಮ ಪತ್ರಗಳನ್ನು ........ ನಲ್ಲಿ (ಸ್ಥಳ) ........ ರಂದು (ದಿನಾಂಕ) ........ (ವೇಳೆಯಲ್ಲಿ) ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.
-
ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟೀಸನ್ನು ರಿಟರ್ನಿಂಗ್ ಅಧಿಕಾರಿಯ ಮುಂದೆ ಅವರ ಕಛೇರಿಯಲ್ಲಿ ........ ದಿನಾಂಕದಂದು ಮಧ್ಯಾಹ್ನ 3.00 ಗಂಟೆಯೊಳಗೆ, ಅಭ್ಯರ್ಥಿ/ ಅವನ ಸೂಚಕನು ತಮ್ಮ ಚುನಾವಣಾ ಏಜೆಂಟ್ನ ಮೂಲಕ ಒಪ್ಪಿಸಬಹುದೆಂದು.
-
ಚುನಾವಣೆಗೆ ಸ್ಪರ್ಧೆ ಇರುವ ಸಂದರ್ಭದಲ್ಲಿ ಮತದಾನವನ್ನು ........ (ದಿನಾಂಕ) ದಂದು ........ ಗಂಟೆಯಿಂದ ಮತ್ತು ........ ಗಂಟೆಯವರೆಗೆ ನಡೆಸಲಾಗುವುದೆಂದು.
ಈ ಮೂಲಕ ನೋಟೀಸು ನೀಡಲಾಗಿದೆ.
ಸ್ಥಳ: ........
ದಿನಾಂಕ: ........
ರಿಟರ್ನಿಂಗ್ ಅಧಿಕಾರಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿರಿ.
ಸೂಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದು ಹಾಕಿ.