(1) ಮತದಾನ ಕೇಂದ್ರದಲ್ಲಿ ಬಳಸಿದ ಪ್ರತಿಯೊಂದು ಮತಯಂತ್ರದ ಕಂಟ್ರೋಲ್ ಯುನಿಟ್ ಮತ್ತು ಬ್ಯಾಲಟಿಂಗ್ ಯುನಿಟ್ ಈ ಕೆಳಕಂಡ ವಿವರಗಳೊಂದಿಗೆ ಗುರುತಿಸಿದ ಲೇಬಲ್ ಅನ್ನು ಹೊಂದಿರತಕ್ಕದ್ದು, ಎಂದರೆ:-
(ಎ) ಕ್ರಮ ಸಂಖ್ಯೆ, ಯಾವುದಾದರೂ ಇದ್ದರೆ, ಮತ್ತು ಮತಕ್ಷೇತ್ರದ ಹೆಸರು;
(ಬಿ) ಸಂದರ್ಭಾನುಸಾರ, ಮತದಾನ ಕೇಂದ್ರ ಅಥವಾ ಕೇಂದ್ರಗಳ ಕ್ರಮ ಸಂಖ್ಯೆ ಮತ್ತು ಹೆಸರು
(ಸಿ) ಯುನಿಟ್ನ ಕ್ರಮಸಂಖ್ಯೆ; ಮತ್ತು
(ಡಿ) ಮತದಾನದ ದಿನಾಂಕ
(2) ಮತದಾನವನ್ನು ಪ್ರಾರಂಭಿಸುವುದಕ್ಕೆ ಮುಂಚೆ, ಪ್ರಿಸೈಡಿಂಗ್ ಅಧಿಕಾರಿಯು, ಮತಯಂತ್ರದಲ್ಲಿ ಯಾವುದೇ ಮತವು ಈಗಾಗಲೇ ದಾಖಲೆಯಾಗಿಲ್ಲ ಮತ್ತು (4) ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಪೇಪರ್ ಸೀಲ್ ಅನ್ನು ಹೊಂದಿದೆ ಎಂದು ಪೋಲಿಂಗ್ ಏಜೆಂಟ್ಗಳಿಗೆ ಮತ್ತು ಹಾಜರಿರುವ ಇತರೆ ವ್ಯಕ್ತಿಗಳಿಗೆ ಪ್ರದರ್ಶಿಸತಕ್ಕದ್ದು.
(3) ಮತಯಂತ್ರದ ಕಂಟ್ರೋಲ್ ಯುನಿಟ್ ಅನ್ನು ಭದ್ರಗೊಳಿಸುವುದಕ್ಕಾಗಿ ಪೇಪರ್ ಸೀಲ್ ಅನ್ನು ಬಳಸತಕ್ಕದ್ದು ಮತ್ತು ಪ್ರಿಸೈಡಿಂಗ್ ಅಧಿಕಾರಿಯು ಪೇಪರ್ ಸೀಲ್ನ ಮೇಲೆ ಆತನ ಸಹಿಯನ್ನು ಹಾಕತಕ್ಕದ್ದು ಮತ್ತು ಸಹಿಯನ್ನು ಮಾಡಲು ಇಚ್ಛಿಸುವಂತಹ ಮತದಾನ ಏಜೆಂಟ್ಗಳ ಸಹಿಯನ್ನು ಅದರ ಮೇಲೆ ಪಡೆಯತಕ್ಕದ್ದು.
(4) ಪ್ರಿಸೈಡಿಂಗ್ ಅಧಿಕಾರಿಯು, ಹಾಗೆ ಸಹಿ ಮಾಡಿದ ಪೇಪರ್ ಸೀಲ್ ಅನ್ನು ಮತಯಂತ್ರದ ಕಂಟ್ರೋಲ್ ಯುನಿಟ್ನ ಅದಕ್ಕಾಗಿ ಇರುವ ಸ್ಥಳದಲ್ಲಿ ಅಂಟಿಸತಕ್ಕದ್ದು ಮತ್ತು ಭದ್ರಪಡಿಸತಕ್ಕದ್ದು ಹಾಗೂ ಅದನ್ನು ಮೊಹರು ಮಾಡತಕ್ಕದ್ದು.
(5) ಕಂಟ್ರೋಲ್ ಯುನಿಟ್ ಅನ್ನು ಭದ್ರಪಡಿಸುವುದಕ್ಕಾಗಿ ಬಳಸಿದ ಮೊಹರನ್ನು ಮೊಹರು ಮಾಡಿದ ನಂತರ, ಆ ಮೊಹರನ್ನು ಒಡೆಯದೆ “ರಿಸಲ್ಟ್ ಬಟನ್” ಅನ್ನು ಒತ್ತಲು ಸಾಧ್ಯವಾಗದ ರೀತಿಯಲ್ಲಿ ಅಂಟಿಸತಕ್ಕದ್ದು.
(6) ಕಂಟ್ರೋಲ್ ಯುನಿಟ್ ಅನ್ನು ಮುಚ್ಚತಕ್ಕದ್ದು ಹಾಗೂ ಭದ್ರಪಡಿಸತಕ್ಕದ್ದು ಮತ್ತು ಪ್ರಿಸೈಡಿಂಗ್ ಅಧಿಕಾರಿ ಮತ್ತು ಮತದಾನ ಏಜೆಂಟ್ಗಳಿಗೆ ಪೂರ್ಣವಾಗಿ ಕಾಣುವಂತೆ ಇಡತಕ್ಕದ್ದು ಮತ್ತು ಬ್ಯಾಲಟಿಂಗ್ ಯುನಿಟ್ ಅನ್ನು ಪೋಲಿಂಗ್ ಕಂಪಾರ್ಟ್ಮೆಂಟ್ನಲ್ಲಿ ಇಡತಕ್ಕದ್ದು.