(1) ಒಂದು ವೇಳೆ ತಾನೇ ನಿರ್ದಿಷ್ಟ ಮತದಾರ ಎಂದು ಹೇಳಿಕೊಳ್ಳುವ ಒಬ್ಬ ಅಂಥ ಮತದಾರನೆಂದು ಈಗಾಗಲೇ ಒಬ್ಬ ವ್ಯಕ್ತಿಯು ಮತ ಚಲಾಯಿಸಿದ ನಂತರ, ಮತದಾನ ಮಾಡಲು ಕೇಳಿಕೊಂಡರೆ, ಆತನು ಪ್ರಿಸೈಡಿಂಗ್ ಅಧಿಕಾರಿಯು ಕೇಳಬಹುದಾದಂತಹ, ಆತನ ಗುರುತಿಗೆ ಸಂಬಂಧಿಸಿದ ಅಂತಹ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರವನ್ನು ನೀಡಿದ ಮೇಲೆ, ಬ್ಯಾಲಟಿಂಗ್ ಯುನಿಟ್ನ ಮೂಲಕ ಮತ ಚಲಾಯಿಸಲು ಅನುಮತಿಸುವ ಬದಲು, ರಾಜ್ಯ ಚುನಾವಣಾ ಆಯೋಗವು ನಿರ್ದಿಷ್ಟಪಡಿಸಬಹುದಾದಂತಹ ವಿನ್ಯಾಸದಲ್ಲಿರುವಂಥ ಮತ್ತು ವಿವರಗಳು ಕನ್ನಡ ಮತ್ತು ಇತರೆ ಭಾಷೆಗಳಲ್ಲಿರುವಂಥ ಟೆಂಡರ್ಡ್ ಮತ ಪತ್ರವನ್ನು ಒದಗಿಸತಕ್ಕದ್ದು.
(2) ಅಂಥಹ ಪ್ರತಿಯೊಬ್ಬ ಮತದಾರನು, ಟೆಂಡರ್ಡ್ ಮತಪತ್ರವನ್ನು ಆತನಿಗೆ ಒದಗಿಸುವುದಕ್ಕೆ ಮುಂಚೆ, ನಮೂನೆ 19-ಎ ನಲ್ಲಿ ಅವನಿಗೆ ಸಂಬಂಧಿಸಿದ ನಮೂದಿನ ಎದುರು ಆತನ ಹೆಸರನ್ನು ಬರೆಯತಕ್ಕದ್ದು.
(3) ಮತ ಪತ್ರವನ್ನು ಸ್ವೀಕರಿಸಿದ ಕೂಡಲೇ ಪ್ರತಿಯೊಬ್ಬ ಮತದಾರನು,-
(ಎ) ಪೋಲಿಂಗ್ ಕಂಪಾರ್ಟ್ಮೆಂಟ್ಗೆ ಹೋಗತಕ್ಕದ್ದು.
(ಬಿ) ಆತನು ಯಾವ ಅಭ್ಯರ್ಥಿಗೆ ಮತವನ್ನು ಹಾಕಲು ಉದ್ದೇಶಿಸಿರುವನೋ ಆ ಅಭ್ಯರ್ಥಿಯ ಚಿಹ್ನೆಯ ಮೇಲೆ ಅಥವಾ ಸಮೀಪದಲ್ಲಿ ಆ ಉದ್ದೇಶಕ್ಕಾಗಿ ಒದಗಿಸಲಾದ ಉಪಕರಣ ಅಥವಾ ಸಾಧನದಿಂದ ‘X’ ಗುರುತನ್ನು ಹಾಕುವ ಮೂಲಕ ಮತಪತ್ರದ ಮೇಲೆ ಆತನ ಮತವನ್ನು ದಾಖಲಿಸತಕ್ಕದ್ದು;
(ಸಿ) ಆತನ ಮತವನ್ನು ಮುಚ್ಚಿಡುವ ಹಾಗೆ ಮತಪತ್ರವನ್ನು ಮಡಚತಕ್ಕದ್ದು;
(ಡಿ) ಅಗತ್ಯಪಡಿಸಿದರೆ, ಪ್ರಿಸೈಡಿಂಗ್ ಅಧಿಕಾರಿಗೆ, ಮತಪತ್ರದ ಮೇಲಿನ ವಿಭಿನ್ನತಾ ಗುರುತನ್ನು ತೋರಿಸತಕ್ಕದ್ದು;
(ಇ) ಅದನ್ನು ಪ್ರಿಸೈಡಿಂಗ್ ಅಧಿಕಾರಿಗೆ ನೀಡತಕ್ಕದ್ದು. ಅವರು ಅದನ್ನು ಈ ಉದ್ದೇಶಕ್ಕಾಗಿ ವಿಶೇಷವಾಗಿ ಇಡಲಾದ ಲಕೋಟೆಯಲ್ಲಿ ಇಡತಕ್ಕದ್ದು; ಮತ್ತು (ಎಫ್) ಮತದಾನ ಕೇಂದ್ರದಿಂದ ತೆರಳತಕ್ಕದ್ದು.
(4) ಒಂದು ವೇಳೆ ಅಂಧತ್ವ ಅಥವಾ ದೈಹಿಕ ದುರ್ಬಲತೆಯನ್ನು ಹೊಂದಿರುವಂಥ ಮತದಾರನು, ಸಹಾಯವಿಲ್ಲದೆ ತನ್ನ ಮತವನ್ನು ದಾಖಲು ಮಾಡಲು ಅಸಮರ್ಥನಾದರೆ, ಪ್ರಿಸೈಡಿಂಗ್ ಅಧಿಕಾರಿಯು, ಆತನ ಇಚ್ಛೆಗೆ ಅನುಸಾರವಾಗಿ ಮತವನ್ನು ದಾಖಲಿಸುವುದಕ್ಕಾಗಿ, ಷರತ್ತಿಗೊಳಪಟ್ಟು ಮತ್ತು 92ನೇ ನಿಯಮದ ಮೇರೆಗೆ ನಿರ್ದಿಷ್ಟಪಡಿಸಲಾದಂತೆ ಪ್ರಕ್ರಿಯೆಯನ್ನು ಅನುಸರಿಸುವುದಕ್ಕಾಗಿ ಒಬ್ಬ ಸಂಗಡಿಗನನ್ನು ಅವನೊಂದಿಗೆ ಕರೆದುಕೊಂಡು ಹೋಗಲು ಅನುಮತಿ ನೀಡತಕ್ಕದ್ದು.