ಕೌನ್ಸಿಲರುಗಳ ಚುನಾವಣೆಗಾಗಿ ಉಪಬಂಧಗಳು, ಕೌನ್ಸಿಲರುಗಳ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.
(1) ಚುನಾವಣೆಯಲ್ಲಿ ಬಳಸಲಾದ ಎಲ್ಲಾ ಮತಪೆಟ್ಟಿಗೆಗಳನ್ನು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ಅಭಿರಕ್ಷೆಯಲ್ಲಿ ಇಡತಕ್ಕದ್ದು.
(2) ರಿಟರ್ನಿಂಗ್ ಅಧಿಕಾರಿಯು ಈ ಕೆಳಗಿನವುಗಳನ್ನು ಸುರಕ್ಷಿತ ಅಭಿರಕ್ಷೆಯಲ್ಲಿ ಇಡತಕ್ಕದ್ದು, ಎಂದರೆ:-
(i) ಅವುಗಳಿಗೆ ಲಗತ್ತಿಸಿದ ಪಕ್ಕಾ ಪ್ರತಿಗಳೊಂದಿಗೆ ಬಳಸಿಲ್ಲದ ಮತಪತ್ರಗಳ ಪ್ಯಾಕೆಟ್ಗಳು;
(ii) ಸಿಂಧುವಾದ, ಟೆಂಡರ್ಡ್ ಅಥವಾ ತಿರಸ್ಕರಿಸಿದ ಬಳಸಿಲ್ಲದ ಮತಪತ್ರಗಳ ಪ್ಯಾಕೆಟ್ಗಳು;
(iii) ಬಳಸಿದ ಮತಪತ್ರಗಳ ಪಕ್ಕಾ ಪ್ರತಿಗಳ ಪ್ಯಾಕೆಟ್ಗಳು;
(iv) ಮತದಾರರ ಪಟ್ಟಿಯ ಗುರುತು ಮಾಡಿದ ಪ್ರತಿಯ ಪ್ಯಾಕೆಟ್ಗಳು;
(v) ಮತದಾರರ ಘೋಷಣೆಗಳು ಮತ್ತು ಅವರ ಸಹಿಗಳ ಅನುಪ್ರಮಾಣೀಕರಿಸಿದ ಪ್ಯಾಕೆಟ್ಗಳು; ಮತ್ತು
(vi) ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರ ಕಾಗದ ಪತ್ರಗಳು.
(1) ರಿಟರ್ನಿಂಗ್ ಅಧಿಕಾರಿಯು ಅಭಿರಕ್ಷೆಯಿರುವಲ್ಲಿ,-
(ಎ) ಅವುಗಳಿಗೆ ಲಗತ್ತಿಸಿದ ಪಕ್ಕಾ ಪ್ರತಿಗಳೊಂದಿಗೆ ಬಳಸಿಲ್ಲದ ಮತಪತ್ರಗಳ ಪ್ಯಾಕೆಟ್ಗಳು;
(ಬಿ) ಸಿಂಧುವಾದ, ಟೆಂಡರ್ಡ್ ಅಥವಾ ತಿರಸ್ಕರಿಸಿದ, ಬಳಸಿದ ಮತಪತ್ರಗಳ ಪ್ಯಾಕೆಟ್ಗಳು;
(ಸಿ) ಬಳಸಿದ ಮತಪತ್ರಗಳ ಪಕ್ಕಾ ಪ್ರತಿಗಳ ಪ್ಯಾಕೆಟ್ಗಳು;
(@) ಮತದಾರರ ಪಟ್ಟೆಯ ಗುರುತು ಮಾಡಿದ ಪ್ರತಿಯ ಪ್ಯಾಕಟ್ಗಳು; ಮತ್ತು
(ಇ) ಮತದಾರರ ಘೋಷಣೆಗಳ ಮತ್ತು ಅವರ ಸಹಿಗಳನ್ನು ಅನುಪ್ರಮಾಣೀಕರಿಸಿದ ಪ್ಯಾಕೆಟ್ಗಳನ್ನು - ಸಕ್ಷಮ ಸ್ಯಾಯಾಲಯ ಅಥವಾ ನ್ಯಾಯಾಧಿಕರಣದ ಆದೇಶಗಳ ಮೇರೆಗೆ ಹೊರತುಪಡಿಸಿ ಯಾರೇ ವ್ಯಕ್ತಿ ಅಥವಾ ಪ್ರಾಧಿಕಾರವು ಅವುಗಳನ್ನು ತೆರೆಯತಕ್ಕದ್ದಲ್ಲ ಮತ್ತು ಅದರ ಒಳಾಂಶಗಳನ್ನು ಪರಿಶೀಲಿಸಿತಕ್ಕದ್ದಲ್ಲ ಅಥವಾ ಅದರ ಮುಂದೆ ಹಾಜರುಪಡಿಸತಕ್ಕದ್ದಲ್ಲ.
(2) ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ಷರತ್ತುಗಳಿಗೆ ಮತ್ತು ಅಂತಹ ಶುಲ್ಕದ ಸಂದಾಯಕ್ಕೂಳಪಟ್ಟು,-
(ಎ) ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರೆ ಕಾಗದಪತ್ರಗಳನ್ನು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರತಕ್ಕದ್ದು; ಮತ್ತು
(ಬಿ) ಅವುಗಳ ಪ್ರತಿಗಳನ್ನು ಅರ್ಜಿಯ ಆಧಾರದ ಮೇಲೆ ಒದಗಿಸತಕ್ಕದ್ದು.
(3) 78ನೇ ನಿಯಮದ ಮೇರೆಗೆ ರಿಟರ್ವಿಂಗ್ ಅಧಿಕಾರಿಯು ಕಳುಹಿಸಿದ ವಿವರಪಟ್ಟೆಕೆಗಳ ಪ್ರತಿಗಳನ್ನು, ಪ್ರತಿಯೊಂದು ಅಂತಹ ಪ್ರತಿಗಾಗಿ ಎರಡು ರೂಪಾಯಿಗಳ ಶುಲ್ಕದ ಸಂದಾಯದ ಮೇಲೆ ರಿಟರ್ನಿಂಗ್ ಅಧಿಕಾರಿಯು ಒದಗಿಸತಕ್ಕದ್ದು. 12. ಚುನಾವಣಾ ಕಾಗದಪತ್ರಗಳ ವಿಲೆ.- ರಾಜ್ಯ ಚುನಾವಣಾ ಆಯೋಗ ಅಥವಾ ಸಕ್ಷಮ ನ್ಯಾಯಾಲಯ ಅಥವಾ ನ್ಯಾಯಾಧಿಕರಣವು ತದ್ವಿರುದ್ಧವಾಗಿ... ನೀಡಿದ ಯಾವುದೇ ನಿರ್ದೇಶನಗಳಿಗೊಳಪಟ್ಟು,- (ಎ) ಬಳಸಿಲ್ಲದ ಮತಪತ್ರಗಳ ಪ್ಯಾಕಟ್ಗಳನ್ನು ಆರು ತಿಂಗಳ ಅವಧಿಯವರೆಗೆ ಇಟ್ಟುಕೂಂ೦ಡಿರತಕ್ಕದ್ದು... ಮತ್ತು. ಆ. ನಂತರ ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ರೀತಿಯಲ್ಲಿ ನಾಶಗೊಳಿಸತಕ್ಕದ್ದು; ಮತ್ತು
(ಬಿ) 110 ನೇ ವಿಯಮದ (1) ನೇ ಉಪ-ನಿಯಮದಲ್ಲಿ ಉಲ್ಲೇಖಿಸಿದ ಇತರ ಪ್ಯಾಕೆಟ್ಗಳನ್ನು, ಒಂದು ವರ್ಷದಲ್ಲಿ ಅವಧಿಯವರೆಗೆ ಇಟ್ಟುಕೊಂಡಿರತಕ್ಕದ್ದು ಮತ್ತು ಅವುಗಳನ್ನು ಆನಂತರ ನಾಶಪಡಿಸತಕ್ಕದ್ದು:
ಪರಂತು, ಬಳಸಿದ ಮತಪತ್ರಗಳ ಪಕ್ಕಾಪ್ರತಿಗಳನ್ನು ಒಳಗೊಂಡಿರುವ ಪ್ಯಾಕಟ್ಗಳನ್ನು ರಾಜ್ಯ ಚುನಾವಣಾ ಆಯೋಗದ ಪೂರ್ವನುಮೋದನೆಯೊಂದಿಗೆ ಹೊರತುಪಡಿಸಿ ನಾಶಪಡಿಸತಕ್ಕದ್ದಲ್ಲ.
(A) ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಇತರ ಕಾಗದಪತ್ರಗಳನ್ನು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ಅವಧಿಯವರೆಗೆ ಇಟ್ಟುಕೊಂಡಿರತಕ್ಕದ್ದು.
(1) 2 ನೇ ನಿಯಮದ ಮೇರೆಗೆ ಮಾಡಿದ ಠೇವಣಿಯನ್ನು, ಅದನ್ನು ಮಾಡಿರುವ ವ್ಯಕ್ತಿಗೆ ಅಥವಾ ಆತನ ಕಾನೂನು ಸಮ್ಮತ ಪ್ರತಿನಿಧಿಗೆ ಹಿಂದಿರುಗಿಸತಕ್ಕದ್ದು ಅಥವಾ ನಿಗಮಕ್ಕೆ ಮುಟ್ಟುಗೋಲು ಮಾಡತಕ್ಕದ್ದು.
() ಈ ನಿಯಮದಲ್ಲಿ ನಮೂದಿಸಿದ ಸಂದರ್ಭಗಳಲ್ಲಿ ಹೊರತುಪಡಿಸಿ, ಠೇವಣಿಯನ್ನು ಚುನಾವಣೆಯ ಫಲಿತಾಂಶವನ್ನು ಫೋಷಿಸಿದ ನಂತರ ಕಾರ್ಯ ಸಾಧ್ಯವಾದಷ್ಟು ಬೇಗನೆ ಹಿಂದಿರುಗಿಸತಕ್ಕದ್ದು.
(3) ಒಂದು ವೇಳೆ ಅಭ್ಯರ್ಥಿಯನ್ನು ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತೋರಿಸಿರದಿದ್ದರೆ ಅಥವಾ ಆತನು ಮತದಾನದ ಪ್ರಾರಂಭಕ್ಕೂ ಮುಂಚೆ ಮೃತಪಟ್ಟರೆ, ಸಂದರ್ಭಾನುಸಾರ, ಪಟ್ಟೆಯ ಪ್ರಕಟಣೆಯ ನಂತರ ಅಥವಾ ಮರಣದ ನಂತರ ಕಾರ್ಯಸಾಧ್ಯವಾದಷ್ಟು ಬೇಗನೆ ಠೇವಣಿಯನ್ನು ಹಿಂದಿರುಗಿಸತಕ್ಕದ್ದು.
(4) ಉಪ-ನಿಯಮ (3) ರ ಉಪಬಂಧಗಳಿಗೊಳಪಟ್ಟು, ಮತದಾನವು ನಡೆದಂಥ ಚುನಾವಣೆಯಲ್ಲಿ ಅಭ್ಯರ್ಥಿಯು ಚುನಾಯಿತನಾಗದಿದ್ದರೆ ಮತ್ತು ಆತನು ಪಡೆದ ಸಿಂಧುವಾದ ಮತಗಳು ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯಿಂದ ಭಾಗಿಸಿದಾಗ ಎಲ್ಲಾ ಅಭ್ಯರ್ಥಿಗಳು ಪಡೆದ ಸಿಂಧುವಾದ ಮತಗಳ ಆರನೇ ಒಂದರಷ್ಟು ಭಾಗವನ್ನು ಮೀರದಿದ್ದರೆ, ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.
ಪರಂತು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳ ಅಥವಾ ಮಹಿಳೆಯರು ಸಂದರ್ಭದಲ್ಲಿ ಅವರು ಪಡೆದ ಸಿಂಧುವಾದ ಮತಗಳ ಸಂಖ್ಯೆಯು, ಚಲಾವಣೆಯಾದ ಸಿಂಧುವಾದ ಮತಗಳ ಒಟ್ಟು ಸಂಖ್ಯೆಯ ಹದಿನಾರನೇ ಒಂದು ಭಾಗಕ್ಕಿಂತ ಕಡಿಮೆಯಿದ್ದ ಹೊರತು ಠೇವಣಿಯನ್ನು ಮುಟ್ಟುಗೋಲು ಹಾಕಿಕೂಳ್ಳತಕ್ಕದ್ದಲ್ಲ.
(5) (2) (3) ಮತ್ತು (4) ನೇ ಉಪನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿನ ವಾರ್ಡುಗಳಲ್ಲಿ ಸ್ಪರ್ಧಿಸಿದ್ದರೆ, ಠೇವಣಿಗಳಲ್ಲಿ ಒಂದಕ್ಕಿಂತ ಹೆಚ್ಚಿನ ಠೇವಣಿಯನ್ನು ಹಿಂದಿರುಗಿಸತಕ್ಕದ್ದಲ್ಲ ಮತ್ತು ಉಳಿದವುಗಳನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.
ಕೌನ್ಸಿಲರ್ನ ಪದದಲ್ಲಿ ಆಕಸ್ಮಿಕ ಖಾಲಿ ಸ್ಥಾನವು ಉಂಟಾದಾಗ, ಮುಖ್ಯ ಆಯುಕ್ತರು ರಾಜ್ಯ ಚುನಾವಣಾ ಆಯೋಗಕ್ಕೆ ಅದರ ಖಾಲಿ ಸ್ಥಾನದ ದಿನಾಂಕದಿಂದ ಏಳು ದಿನಗಳೊಳಗಾಗಿ ಅಂತಹ ಖಾಲಿ ಸ್ಥಾನದ ಮಾಹಿತಿಯನ್ನು ನೀಡತಕ್ಕದ್ದು. ರಾಜ್ಯ ಚುನಾವಣಾ ಆಯೋಗವು, ಅಂತಹ ಖಾಲಿಸ್ಥಾನದಲ್ಲಿ ಕೌನ್ಸಿಲರ್ನ ಚುನಾವಣೆಗಾಗಿ. ಈ ನಿಯಮಗಳಲ್ಲಿ ಉಪಬಂಧಿಸಿದ ರೀತಿಯಲ್ಲಿ ಅದರ ಮೇಲೆ ಕ್ರಮ ಕೈಗೊಳ್ಳತಕ್ಕದ್ದು.
ಅಧ್ಯಾಯ-/ 16. ಆವರಣಗಳು, ವಾಹನಗಳು ಮುಂತಾದವುಗಳ ಕಡ್ಮಾಯ ಕೋರಿಕೆಯ ಬಗ್ಗೆ ಆದೇಶವನ್ನು ಜಾರಿ ಮಾಡುವ ವಿಧಾನ.- 48 ನೇ ಪ್ರಕರಣದ ಮೇರೆಗೆ ಕಡ್ಡಾಯ ಕೋರಿಕೆಯ ಆದೇಶವನ್ನು,-
(ಎ) ಅಂಥ ಆದೇಶವನ್ನು ಯಾವ ವ್ಯಕ್ತಿಯ ಹೆಸರಿಗೆ ಬರೆಯಲಾಗಿದೆಯೋ ಅವನು ಒಂದು ನಿಗಮ ಅಥವಾ ಫರ್ಮ್ ಆಗಿರುವಲ್ಲಿ, ಸಿವಿಲ್ ಪ್ರಕ್ರಿಯಾ ಸಂಹಿತೆ, 1908 (1908 ರ ಅಧಿನಿಯಮ V) ರ ಮೊದಲನೇ ಅನುಸೂಚಿಯಲ್ಲಿ, ಸಂದರ್ಭಾನುಸಾರ, XXIX ಆದೇಶದ 2ನೇ ನಿಯಮದಲ್ಲಿ ಅಥವಾ XXX ಆದೇಶದ 3ನೇ ನಿಯಮದಲ್ಲಿ ಸಮನ್ಗಳ ಜಾರಿಗಾಗಿ. ಉಪಬಂಧಿಸಿದ ರೀತಿಯಲ್ಲಿ ಜಾರಿಗೊಳಿಸತಕ್ಕದ್ದು.
(ಬಿ) ಅಂಥ ಆದೇಶವನ್ನು ಯಾರ ಹೆಸರಿಗೆ ಬರೆಯಲಾಗಿದೆಯೋ ಅವನು ಒಬ್ಬ ವ್ಯಕ್ತಿಯಾಗಿರುವಲ್ಲಿ,-
(i) ಆದೇಶವನ್ನು ಖುದ್ದಾಗಿ ವಿತರಿಸುವ ಅಥವಾ ನೀಡುವ ಮೂಲಕ;
(ii) ನೋಂದಾಯಿತ ಅಂಚೆಯ ಮೂಲಕ; ಅಥವಾ
(ii) ಒಂದು ವೇಳೆ ವ್ಯಕ್ತಿಯು ಪತ್ತೆಯಾಗದಿದ್ದರೆ, ಆತನ ಕುಟುಂಬದ ಯಾರೇ ವಯಸ್ಕ ಸದಸ್ಯನಿಗೆ ಆದೇಶದ ಅಧಿಕೃತ ಪ್ರತಿಯನ್ನು ನೀಡುವ ಮೂಲಕ ಅಥವಾ ಅವನು ಕೊನೆಯದಾಗಿ ವಾಸಿಸುತ್ತಿದ್ದನೆಂದು ಅಥವಾ ವ್ಯವಹಾರ ನಡೆಸುತ್ತಿದ್ದನೆಂದು ಅಥವಾ ಗಳಿಕೆಗಾಗಿ ಖುದ್ದು ಕೆಲಸ ಮಾಡಿದ್ದನೆಂದು ತಿಳಿದುಬಂದಂಥ ಆವರಣದಲ್ಲಿ ಎದ್ದು ಕಾಣುವಂಥ ಕೆಲವು ಭಾಗದಲ್ಲಿ ಅಂತಹ ಆದೇಶದ ಪ್ರತಿಯನ್ನು ಅಂಟಿಸುವ ಮೂಲಕ ಜಾರಿಗೊಳಿಸತಕ್ಕದ್ದು. 17. ಮೇಯರ್, ಉಪಮೇಯರ್ ಮತ್ತು ಸ್ಮಾಯಿ ಸಮಿತಿಗಳ ಸದಸ್ಯರ ಚುನಾವಣೆಗಾಗಿ ಪ್ರಿಸೈಡಿಂಗ್ ಅಧಿಕಾರಿ- ಸಂಬಂಧಪಟ್ಟ ವಲಯದ ಪ್ರಾದೇಶಿಕ ಆಯುಕ್ತರು, ಸಾಮಾನ್ಯ ಚುನಾವಣೆಯ ನಂತರ ನಡೆದ ನಿಗಮದ ಮೊದಲನೇ ಸಭೆಯಲ್ಲಿ, ಮತ್ತು ಮೇಯರ್, ಉಪ ಮೇಯರ್ ಮತ್ತು ಸ್ಮಾಯಿ ಸಮಿತಿಗಳ ಸದಸ್ಯರ ಚುನಾವಣೆಯ ಉದ್ದೇಶಕ್ಕಾಗಿ ನಡೆದ, ಪ್ರತಿ ತರುವಾಯದ ಸಭೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿಯಾಗಿರತಕ್ಕದ್ದು. 118. ನಾಮಪತ್ರಗಳನ್ನು ಸಲ್ಲಿಸುವುದು. ಮೇಯರ್ನ ಚುನಾವಣೆಗಾಗಿ ಸಭೆಯನ್ನು ನಿಗದಿಪಡಿಸಿದ ಸಮಯಕ್ಕೆ ಮುಂಚೆ ಎರಡು ಗಂಟಿಗಳಿಗೆ ಕಡಿಮೆಯಿರದಂತೆ, ಯಾರೇ ಕೌವ್ಸಿಲರನು, ಮೇಯರ್ ಆಗಿ ಚುನಾಯಿತನಾಗಲು, (3) ನೇ ಪ್ರಕರಣದ 0) ನೇ ಉಪ-ಪ್ರಕರಣದ (ಎ) ಖಂಡದಲ್ಲಿ ಉಲ್ಲೇಖಿಸಲಾದಂತೆ, ಇನ್ನೊಬ್ಬ ಕೌನ್ಸಿಲರ್ ಅನ್ನು ನಾಮ ನಿರ್ದೇಶನ ಮಾಡಬಹುದು, ನಾಮಪತ್ರವನ್ನು ಪ್ರಿಸೈಡಿಂಗ್ ಅಧಿಕಾರಿಗೆ ತಲುಪಿಸುವುದು. 119. ಕೌನ್ಸಿಲರ್ಗಳು ಒಂದಕ್ಕಿಂತ ಹೆಚ್ಚಿರದ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವುದು.- ಯಾರೇ ಕೌನ್ಸಿಲರನು 118 ನೇ ನಿಯಮದ ಮೇರೆಗೆ, ಮೇಯರ್ನ ಹುದ್ದೆಗಾಗಿ ಒಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡತಕ್ಕದ್ದಲ್ಲ.
ಪರಂತು, ಒಬ್ಬ ಕೌನ್ಸಿಲರನು ಮೇಯರ್ನ ಹುದ್ದೆಗಾಗಿ ಒಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಿದರೆ, ಪ್ರಿಸೈಡಿಂಗ್ ಅಧಿಕಾರಿಯು ಮೊದಲು ಸ್ವೀಕರಿಸಿದಂಥ ನಾಮಪತ್ರವನ್ನು ಪರಿಶೀಲನೆಗಾಗಿ ಪರಿಗಣಿಸತಕ್ಕದ್ದು. 120. ನಾಮಪತ್ರಗಳ ಪರಿಶೀಲನೆ.- ಸಭೆಯ ಪ್ರಾರಂಭದ ನಂತರ, ಪ್ರಿಸೈಡಿಂಗ್ ಅಧಿಕಾರಿಯು, ಅಧಿನಿಯಮದ 17ನೇ ಪ್ರಕರಣದ ಮೇರೆಗೆ ಆತನಿಗೆ ಸಲ್ಲಿಸಿದ ಎಲ್ಲಾ ನಾಮಪತ್ರಗಳನ್ನು ಪರಿಶೀಲಿಸತಕ್ಕದ್ದು ಮತ್ತು ಅವರ ಅಭಿಪ್ರಾಯದಲ್ಲಿ ಪ್ರಸ್ತಾಪಿತರ ಜೊತೆಯಲ್ಲಿ ಯುಕ್ತವಾಗಿ ನಾಮನಿರ್ದೇಶನಗೊಂಡಂತಹ ಕೌನ್ಸಿಲರುಗಳ ಹೆಸರುಗಳನ್ನು, ಅಂತಹ ಸಭೆಯಲ್ಲಿ ಹಾಜರಿರುವ ಕೌನ್ಸಿಲರುಗಳಿಗೆ ಓದಿ ಹೇಳತಕ್ಕದ್ದು. 121. ಅಭ್ಯರ್ಥಿಗಳ ಹಿಂಪಡೆಯುವಿಕೆ.- (1) ಯಾರೇ ಅಭ್ಯರ್ಥಿಯು 120 ನೇ ನಿಯಮದ ಮೇರೆಗೆ ನಾಮಪತ್ರಗಳ ಪರಿಶೀಲನೆಯ ತರುವಾಯ, ಕೂಡಲೇ ಅವರು ನೀಡಲು ಒಪ್ಪಿಕೊಂಡಂತೆ ಲಿಖಿತದಲ್ಲಿ ನೋಟಿಸಿನ ಮೂಲಕ ಮತ್ತು ಅದನ್ನು ಪ್ರಿಸೈಡಿಂಗ್ ಅಧಿಕಾರಿಗೆ ನೀಡುವ ಮೂಲಕ ಆತನ ಅಭ್ಯರ್ಥಿತನವನ್ನು ಹಿಂಪಡೆಯಬಹುದು.
(2) ನೋಟೀಸ್ ಅನ್ನು ಅಭ್ಯರ್ಥಿಯು ಖುದ್ದಾಗಿ ನೀಡಬಹುದು ಅಥವಾ ಅಭ್ಯರ್ಥಿಯು ಲಿಖಿತದಲ್ಲಿ ಆತನ ಪರವಾಗಿ ಅಧಿಕೃತನಾದಂಥ ಆತನ ಸೂಚಕರ ಮೂಲಕ ನೀಡಬಹುದು
(3) ಉಪ-ನಿಯಮ (1) ರ ಮೇರೆಗೆ ಆತನ ಅಭ್ಯರ್ಥಿತನದ ಹಿಂಪಡೆಯುವಿಕೆಯ ನೋಟೀಸ್ ಅನ್ನು ನೀಡಿರುವಂಥ ಯಾರೇ ವ್ಯಕ್ತಿಯು ಹಿಂಪಡೆಯುವಿಕೆಯ ನೋಟೀಸ್ ಅನ್ನು ರದ್ದುಮಾಡಲು ಅನುಮತಿಸತಕ್ಕದ್ದಲ್ಲ.
(4) ಪ್ರಿಸೈಡಿಂಗ್ ಅಧಿಕಾರಿಯು, ಹಿಂಪಡೆಯುವ ನೋಟೀಸಿನ ನೈಜತೆ ಮತ್ತು (2) ನೇ ಉಪ-ನಿಯಮದ ಮೇರೆಗೆ ಅದನ್ನು ತಲುಪಿಸುವ ವ್ಯಕ್ತಿಯ ಗುರುತಿನ ಬಗ್ಗೆ ಮನವರಿಕೆಯಾದ ಮೇಲೆ, ಅವರ ಅಭ್ಯರ್ಥಿತನವನ್ನು ಹಿಂಪಡೆಯುವ ವ್ಯಕ್ತಿಗಳ ಹೆಸರುಗಳನ್ನು, ಅಂತಹ ಸಭೆಯಲ್ಲಿ ಹಾಜರಿರುವ ಕೌನ್ಸಿಲರುಗಳಿಗೆ ಓದಿ ಹೇಳತಕ್ಕದ್ದು. 122. ಸ್ಪರ್ಧಿಸಿದ ಮತ್ತು ಸ್ಪರ್ಧಿಸಿಲ್ಲದ ಚುನಾವಣೆಗಳಲ್ಲಿನ ಪ್ರಕ್ರಿಯೆ.- (1) ಹಿಂಪಡೆಯುವಿಕೆಗಾಗಿ ನಿಗದಿಪಡಿಸಿದ್ದ ಸಮಯವು ಮುಗಿದ ನಂತರ, ಸಿಂಧುವಾಗಿ ನಾಮನಿರ್ದೇಶನಗೊಂಡಿರುವಂಥ ಮತ್ತು ನಿರ್ದಿಷ್ಟಪಡಿಸಿದ ರೀತಿಯಲ್ಲಿ. ಮತ್ತು ಸಮಯದೊಳಗಾಗಿ ಆತನ ಅಭ್ಯರ್ಥಿತನವನ್ನು ಹಿಂಪಡೆಯದಂಥ ಕೇವಲ ಒಬ್ಬ ಅಭ್ಯರ್ಥಿಯಿದ್ದರೆ, ಪ್ರಿಸೈಡಿಂಗ್ ಅಧಿಕಾರಿಯು, ತಕ್ಷಣವೇ ಅಂತಹ ಅಭ್ಯರ್ಥಿಯು ಮೇಯರ್ ಆಗಿ ವಿದ್ಯುಕ್ತವಾಗಿ ಚುನಾಯಿತನಾಗಿರುವನೆಂದು ಘೋಷಿಸತಕ್ಕದ್ದು.
(2) ಸಿಂಧುವಾಗಿ ನಾಮನಿರ್ದೇಶನಗೊಂಡಿರುವಂಥ ಮತ್ತು ಅವರ ಅರಧಭ್ಯರ್ಥಿತನವನ್ನು ಹಿಂಪಡೆಯದಂಥ ಅಭ್ಯರ್ಥಿಗಳ ಸಂಖ್ಯೆಯು ಒಂ೦ದಕ್ಕಿಂತ ಹೆಚ್ಚಾಗಿದ್ದರೆ, ಆಗ ಪ್ರಿಸೈಡಿಂಗ್ ಅಧಿಕಾರಿಯು, ಇದರಲ್ಲಿ ಇನ್ನುಮುಂದೆ ಉಪಬಂಧಿಸಲಾದಂಂತೆ ಚುನಾವಣೆಯನ್ನು ನಡೆಸಲು ಮುಂದುವರಿಯತಕ್ಕದ್ದು.
(3) ಮತಗಳನ್ನು ಕ್ಕ ಎತ್ತುವ ಮೂಲಕ ತೆಗೆದುಕೂಳ್ಳತಕ್ಕದ್ದು ಮತ್ತು ಯಾರೇ ಅಭ್ಯರ್ಥಿಯ ಪರವಾಗಿ ಮತ್ತು ವಿರುದ್ಧವಾಗಿ ಮತ್ತು ಮತ ಚಲಾಯಿಸುವ ಕೌನ್ಸಿಲರುಗಳು, ಅದಕ್ಕ ಸಹಿ ಮಾಡುವ ಮೂಲಕ ಅಥವಾ ಸಮುಚಿತ ಅಂಕಣದಲ್ಲಿ ಎಡಗೈ ಹೆಬ್ಬೆರಳ ಗುರುತನ್ನು ಹಾಕುವ ಮೂಲಕ, ನಡವಳಿ ರಿಜಿಸ್ಪರಿನಲ್ಲಿ ಅವರ ಮತಗಳನ್ನು ದಾಖಲಿಸತಕ್ಕದ್ದು.
(4) ಸಭೆಯಲ್ಲಿ ಹಾಜರಿರುವ ಯಾರೇ ಸದಸ್ಯನು, ಅವನನ್ನ ಹಾಗೆ ಆಯ್ಕೆ ಮಾಡಿದರೆ, ಮತದಾನದಿಂದ ವಿಮುಖನಾಗಬಹುದು.
(5) ಹಾಜರಿರುವ ಮತ್ತು ಮತ ಚಲಾಯಿಸಲು ಬಯಸುವ ಎಲ್ಲಾ ಕೌನ್ಸಿಲರುಗಳಿಂಂದ ಮತದಾನದ ನಂತರ, ಪ್ರಿಸೈಡಿಂಗ್ ಅಧಿಕಾರಿಯು, ಅತ್ಯಧಿಕ ಸಂಖ್ಯೆಯ ಸಿಂಧುವಾದ ಮತಗಳನ್ನು ಪಡೆದಿರುವಂಥ ಅಭ್ಯರ್ಥಿಯು ವಿದ್ಯುಕ್ತನಾಗಿ ಚುನಾಯಿತನಾಗಿದ್ದಾನೆಂದು ಫೋಷಿಸತಕ್ಕದ್ದು.
(6) ಯಾರೇ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳ ನಡುವೆ ಸಿಂಧುವಾದ ಮತಗಳು ಸಮಾನವಾಗಿರುವುದು ಕಂಡುಬಂದರೆ ಮತ್ತು ಒಂದು ಮತದ ಸೇರ್ಪಡೆಯು, ಆ ಅಭ್ಯರ್ಥಿಗಳಲ್ಲಿ ಯಾರಾದರೊಬ್ಬರು ಚುನಾಯಿತರಾಗಿದ್ದಾರೆಂದು ಫೋಷಿಸುವಾಗ, ಪ್ರಿಸೈಡಿಂಗ್ ಅಧಿಕಾರಿಯು, ಆತನು ನಿರ್ಧರಿಸಬಹುದಾದಂತಹ ರೀತಿಯಲ್ಲಿ, ಚೀಟಿ ಎತ್ತುವ ಮೂಲಕ ಆ ಅಭ್ಯರ್ಥಿಗಳ ನಡುವೆ ಕೂಡಲೇ ನಿರ್ಧರಿಸತಕ್ಕದ್ದು ಮತ್ತು ಯಾರಿಗೆ ಚೀಟಿ ಬಿದ್ದಿರುತ್ತದೆಯೋ ಆ ಅಭ್ಯರ್ಥಿಯು ಒಂದು ಹೆಚ್ಚಿನ ಮತವನ್ನು ಪಡೆದಿರುವನೆಂಂದು ಮುಂದುವರೆಯತಕ್ಕದ್ದು. ಅವನು ಆ ತರುವಾಯ ಚೀಟಿಯು ಬಿದ್ದಿರುವಂಥ ಅಭ್ಯರ್ಥಿಯು ವಿದ್ಯುಕ್ತವಾಗಿ ಚುನಾಯಿತನಾಗಿದ್ದಾನೆಂದು ಫೋಷಿಸತಕ್ಕದ್ದು.
(7) ಪ್ರಿಸೈಡಿಂಗ್ ಅಧಿಕಾರಿಯು, ಹಾಜರಿರುವ ಎಲ್ಲಾ ಶಕೌನ್ಸಿಲರುಗಳ ಹೆಸರುಗಳನ್ನು ಒಳಗೊಂಡಿರುವಂಥ ಮತ್ತು ವಿಭಾಗದ ಸಂದರ್ಭದಲ್ಲಿ, ತಟಸೃತೆಯನ್ನು ಒಳಗೊಂಡಂತೆ ಮತದಾನ ರೀತಿಯನ್ನು ಒಳಗೊಂಡಿರುವಂಥ ಸಭೆಯ ನಡವಳಿಗಳ ದಾಖಲೆಯನ್ನು ಇಡುವಂತೆ ಮಾಡತಕ್ಕದ್ದು. ನಡವಳಿಗಳಿಗೆ ಪ್ರಿಸೈಡಿಂಗ್ ಅಧಿಕಾರಿ ಮತ್ತು ಹಾಜರಿರುವ ಕೌನ್ಸಿಲರುಗಳು ಸಹಿ ಮಾಡಿರತಕ್ಕದ್ದು. ನಡವಳಿಗಳನ್ನು ಯಾರೇ ಕೌನ್ಸಿಲರವನಿಗೆ ಪರಿಶೀಲನೆಗೆ ಲಭ್ಯವಿರುವಂತೆ ಮಾಡತಕ್ಕದ್ದು.
ವಿವರಣೆ: ಈ ನಿಯಮದ ಉದ್ದೇಶಕ್ಕಾಗಿ ‘ಹಾಜರಿರುವ ಕೌನ್ಸಿಲರ್ಗಳು’ ಎಂದರೆ, ಸಭೆಯಲ್ಲಿ ಹಾಜರಿರುವ ಮತ್ತು ಈ ನಿಯಮದ ಮೇರೆಗೆ ವಿದ್ಯುಕ್ತವಾಗಿ ಚುನಾಯಿತನಾದ ಒಬ್ಬ ಕೌನ್ಸಿಲರನನ್ನು ಘೋಷಿಸುವ ಮುಂಚೆ ಅಥವಾ ಸಭೆಯ ಪ್ರಾರಂಭಕ್ಕೂ ಮುಂಚೆ, ಮೇಯರ್ನ ಹುದ್ದೆಗಾಗಿ 121 ನೇ ನಿಯಮದ (4) ನೇ ಉಪ-ನಿಯಮದ ಮೇರೆಗೆ ಅಭ್ಯರ್ಥಿತನದ ಹಿಂಪಡೆಯುವಿಕೆಯ ನಂತರ ಯಾರ ಹೆಸರನ್ನು ದಾಖಲಿಸಲಾಗಿದೆಯೋ ಆ ಕೌನ್ಸಿಲರ್. 123. ಉಪಮೇಯರ್ನ ಚುನಾವಣೆ.- (1) ಮೇಯರ್ನ ಚುನಾವಣೆಯ ನಂತರ ಪ್ರಿಸೈಡಿಂಗ್ ಅಧಿಕಾರಿಯು ಉಪ-ಮೇಯರ್ನ ಚುನಾವಣೆಯನ್ನು ನಡೆಸಲು ಮುಂದುವರಿಯತಕ್ಕದ್ದು.
(2) ಈ ಅಧ್ಯಾಯದಲ್ಲಿ ಮೇಯರ್ ಚುನಾವಣೆಗೆ ಅನ್ವಯಿಸಬಹುದಾದ ನಿಯಮಗಳ ಉಪಬಂಧಗಳು ಉಪಮೇಯರ್ ಚುನಾವಣೆಗೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು. 124. ಮೇಯರ್ ಮತ್ತು ಉಪಮೇಯರ್ ಹುದ್ದೆಗಳ ಮೀಸಲಾತಿ.- (1) ಪಾಲಿಕೆಯಲ್ಲಿನ ಮೇಯರ್ ಮತ್ತು ಉಪಮೇಯರ್ ಹುದ್ದೆಗಳ ಮೀಸಲಾತಿಯನ್ನು ಕಾಲಕಾಲಕ್ಕೆ ಸರ್ಕಾರವು ಪ್ರಕಟಿಸತಕ್ಕದ್ದು.
(2) ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕಾಗಿ ಮೀಸಲಿರಿಸಿದ ಮೇಯರ್ ಮತ್ತು ಉಪಮೇಯರ್ ಹುದ್ದೆಗಳನ್ನು, ನಗರದ ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅತ್ಯಧಿಕ ಶೇಕಡಾವಾರು ಜನಸಂಖ್ಯೆಯನ್ನು ಹೊಂದಿರುವ ಪಾಲಿಕೆಗೆ ಸರ್ಕಾರವು ಹಂಚಿಕೆ ಮಾಡತಕ್ಕದ್ದು;
ಪರಂತು, ಪಾಲಿಕೆಯಲ್ಲಿರುವ ಮೇಯರ್ ಮತ್ತು ಉಪಮೇಯರ್ ಎರಡೂ ಹುದ್ದೆಗಳನ್ನು, ಕೇವಲ ಪರಿಶಿಷ್ಟ ಜಾತಿಗಳ ಪ್ರವರ್ಗದ ಪರವಾಗಿ ಹಂಚಿಕೆ ಮಾಡತಕ್ಕದ್ದಲ್ಲ.
(3) ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಹುದ್ದೆಗಳನ್ನು, ಹಿಂದುಳಿದ ವರ್ಗಗಳಿಗಾಗಿ ಮೀಸಲಿಡತಕ್ಕದ್ದು ಮತ್ತು ಮೀಸಲಿರಿಸದ ಪ್ರವರ್ಗದ ಹುದ್ದೆಗಳನ್ನು, ಸರ್ಕಾರವು ಯುಕ್ತವಾದುದೆಂದು ಭಾವಿಸಬಹುದಾದಂತಹ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಪಾಲಿಕೆಗೆ ಸರ್ಕಾರವು ಹಂಚಿಕೆ ಮಾಡತಕ್ಕದ್ದು.
(4) ಉಪ-ಪ್ರಕರಣ (1) ರಲ್ಲಿ ಉಲ್ಲೇಖಿಸಿದ ಪ್ರತಿಯೊಂದು ಪ್ರವರ್ಗದಲ್ಲಿ ಮಹಿಳೆಯರಿಗಾಗಿ ಮೀಸಲಿರಿಸಿದ ಮೇಯರ್ ಮತ್ತು ಉಪಮೇಯರ್ ಹುದ್ದೆಗಳನ್ನು, ಅದು ಯುಕ್ತವಾದು ಭಾವಿಸಬಹುದಾದಂತೆ ಸರ್ಕಾರವು ಹಂಚಿಕೆ ಮಾಡತಕ್ಕದ್ದು:
ಪರಂತು, ಪಾಲಿಕೆಯ ಮೇಯರ್ ಮತ್ತು ಉಪ-ಮೇಯರ್ ಎರಡೂ ಹುದ್ದೆಗಳನ್ನು ಮಹಿಳೆಯರಿಗಾಗಿ ಮೀಸಲಿಡತಕ್ಕದ್ದಲ್ಲ.
(5) ರಾಜ್ಯದ ನಗರ ಪಾಲಿಕೆಗಳಲ್ಲಿನ ಮೇಯರ್ ಮತ್ತು ಉಪ-ಮೇಯರ್ ಹುದ್ದೆಗಳನ್ನು, ತರುವಾಯದ ಅವಧಿಗಳಿಗಾಗಿ ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡಗಳು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ, ಅದು ಯುಕ್ತವೆಂದು ಭಾವಿಸಬಹುದಾದಂಂತಹ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಕಾಲಕಾಲಕ್ಕೆ ಸರ್ಕಾರವು ನಿಗದಿಪಡಿಸತಕ್ಕದ್ದು.
ಪರಂತು, ಯಾವುದೇ ಪ್ರವರ್ಗಕ್ಕೆ ಮಾಡಲಾದ ಮೀಸಲಾತಿಯು ಶೇಕಡಾ 0.5 8,03 ಕಡಿಮೆಯಿದ್ದರೆ, ಆಗ ಮೇಯರ್ ಮತ್ತು ಉಪ-ಮೇಯರ್ ಹುದ್ದೆಯನ್ನು ಅಂತಹ ಪ್ರವರ್ಗಕ್ಕೆ ಮೀಸಲಿಡತಕ್ಕದ್ದಲ್ಲ. 125. ಸ್ಮಾಯಿ ಸಮಿತಿಯ ಸದಸ್ಯರ ಚುನಾವಣೆ.- ಉಪ-ಮೇಯರ್ ಚುನಾವಣೆಯ ನಂತರ, ಪ್ರಿಸೈಡಿಂಗ್ ಅಧಿಕಾರಿಯು 4 ನೇ ಪ್ರಕರಣದ ಅನುಸಾರವಾಗಿ ಸ್ಮಾಯಿ ಸಮಿತಿಗಳ ಸದಸ್ಯರ ಚುನಾವಣೆಯನ್ನು ನಡೆಸಲು ಮುಂದುವರಿಯತಕ್ಕದ್ದು. 126. ಸ್ಮಾಯಿ ಸಮಿತಿಗಳಿಗೆ ಅಧ್ಯಕ್ಷರ ಚುನಾವಣೆ.- (1) ಸ್ಮಾಯಿ ಸಮಿತಿಯ ಸದಸ್ಯರು, ಅದರ ಮೊದಲನೇ ಸಭೆಯಲ್ಲಿ ಅದರ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡತಕ್ಕದ್ದು. (2) ಸ್ಥಾಯಿ ಸಮಿತಿಯ ಪದ-ನಿಮಿತ್ತ ಸದಸ್ಯನಾಗಿರುವಂಥ ಮೇಯರ್ನು, ಅಧ್ಯಕ್ಷರನ್ನು ಆಯ್ಕೆ ಮಾಡುವ ಉದ್ದೇಶಕ್ಕಾಗಿ ಸ್ಮಾಯಿ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು. 127. ನಡೆವಳಿಗಳ ದಾಖಲೆ.- ಸಭೆಯ ವಿಕಟ ತರುವಾಯ ಪ್ರಿಸೈಡಿಂಗ್ ಅಧಿಕಾರಿಯು, (ಎ) ಸಭೆಯ ನಡವಳಿಗಳ ದಾಖಲೆಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದರಲ್ಲಿ ಮಾಡಲಾದ ಪ್ರತಿಯೊಂದು ಸರಿಪಡಿಕೆಯಲ್ಲಿ ಆತನ ಚಿಕ್ಕ ರುಜುವಿನೊಂದಿಗೆ ಅನುಪ್ರಮಾಣೀಕರಿಸತಕ್ಕದ್ದು. ಅವರು, ಸಭೆಯಲ್ಲಿ ಹಾಜರಿರುವ ಯಾರೇ ಕೌನಿಲರನಿಗೆ, ಅವನು ಹಾಗೆ ಮಾಡಲು ಬಯಸಿದರೆ, ಅಂತಹ ದಾಖಲೆಗೆ ಆತನ ಸಹಿಯನ್ನು ಹಾಕಲು ಅನುಮತಿಸಬಹುದು; ಮತ್ತು
(ಬಿ) ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸುವುದಕ್ಕಾಗಿ ಪಾಲಿಕೆಗೆ, ಮೇಯರ್ ಮತ್ತು ಉಪಮೇಯರ್ ಆಗಿ ಚುನಾಯಿತರಾದ ವ್ಯಕ್ತಿಯ ಹೆಸರನ್ನು ಕಳುಹಿಸಿಕೊಡತಕ್ಕದ್ದು.
ಅಧ್ಯಾಯ-./ 128. ಚುನಾವಣಾ ತಕರಾರು ಅರ್ಜಿ.- (1) ಮೇಯರ್, ಉಪಮೇಯರ್, ಸದಸ್ಯರು ಮತ್ತು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು, ಪಾಲಿಕೆಯ ಸ್ಥಳೀಯ ಮಿತಿಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲಾ ನ್ಯಾಯಧೀಶರು 130 ಮತ್ತು 131 ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಒಂದು ಅಥವಾ ಹೆಚ್ಚು ಕಾರಣಗಳ ಮೇಲೆ, ಅಂಥ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯು ಸಲ್ಲಿಸಿದ ಚುನಾವಣಾ ಅರ್ಜಿಯ ಹೊರತು ಪಶ್ನಿಸತಕ್ಕದ್ದಲ್ಲ. ಈ ನಿಯಮದ ಮೇರೆಗೆ ಚುನಾವಣಾ ಅರ್ಜಿಯ, ಖರ್ಚುಗಳಿಗಾಗಿ ಭದ್ರತೆಯಾಗಿ ಎರಡು ನೂರು ರೂಪಾಯಿಗಳ ಠೇವಣಿ ಇಡತಕ್ಕದ್ದು.
(2) ಉಪ-ನಿಯಮ (1) 3 ಮೇರೆಗೆ ಪ್ರತಿಯೊಂದು ತಕರಾರು ಅರ್ಜಿಯನ್ನು, ತಕರಾರು ಅರ್ಜಿಯಲ್ಲಿ ನಮೂದಿಸಿದ ಪ್ರತಿವಾದಿಗಳಾಗಿರುವಂಂತೆ ಅನೇಕ ಪ್ರತಿಗಳಲ್ಲಿ ಇರತಕ್ಕದ್ದು ಮತ್ತು ಪ್ರತಿಯೊಂದು ಅಂತಹ ಪ್ರತಿಯನ್ನು, ತಕರಾರು ಅರ್ಜಿಯ ಯಥಾಪ್ರತಿಯೆಂದು ಅವನ ಸಹಿಯ ಮೇಲೆ ಅರ್ಜಿದಾರನು ದೃಢೀಕರಿಸತಕ್ಕದ್ದು.
(3) ಅರ್ಜಿದಾರನು, ಆತನ ಅರ್ಜಿಗೆ ಪ್ರತಿವಾದಿಗಳಾಗಿ ಸೇರಿಕೊಳ್ಳತಕ್ಕದ್ದು, ಅದರಲ್ಲಿ ಅರ್ಜಿದಾರನು ಚುನಾಯಿತ ಅಭ್ಯರ್ಥಿಯ ಚುನಾವಣೆಯು ಅನೂರ್ಜಿತಗೊಂಡಿದೆ ಎಂದು ಕ್ಲೇಮು ಮಾಡತಕ್ಕದ್ದು, ಅವನು ಅಥವಾ ಯಾರೇ ಇತರ ಅಭ್ಯರ್ಥಿಯು ಯುಕ್ತವಾಗಿ ಚುನಾಯಿತವಾಗಿದ್ದಾನೆಂದು ಮುಂದಿನ ಘೋಷಣೆಯನ್ನು ಮಾಡತಕ್ಕದ್ದು, ಅರ್ಜಿದಾರನಲ್ಲದೆ ಇತರ ಎಲ್ಲಾ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಚುನಾಯಿತ ಅಭ್ಯರ್ಥಿಯು ಅಂತಹ ಯಾವುದೇ ಘೋಷಣೆಯನ್ನು ಮಾಡತಕ್ಕದ್ದಲ್ಲ.
(4) ಉಪ-ವಿಯಮ (1) ರ ಮೇರೆಗೆ ತಕರಾರು ಅರ್ಜಿಯು,-
(ಎ). ಅರ್ಜಿದಾರನು ಅವಲಂಬಿಸಿರುವಂಥ ಸಂಕ್ಷಿಪ್ತ ಮುಖ್ಯ ಹೇಳಿಕೆಗಳನ್ನು ಒಳಗೊಂಡಿರತಕ್ಕದ್ದು; ಮತ್ತು
(ಬಿ) ವಾದಪತ್ರಗಳ ಸತ್ಯಾಪನೆಗಾಗಿ ಸಿವಿಲ್ ಪ್ರಕ್ರಿಯಾ ಸಂಹಿತೆ, 1908 ರ ಕೇಂದ್ರ ಅಧಿನಿಯಮ ಸಂಖ್ಯೆ 5) ರಲ್ಲಿ ಹೇಳಲಾದ ರೀತಿಯಲ್ಲಿ ಸತ್ಯಾಪನೆ ಮಾಡಲಾದಂ೦ತೆ ಅರ್ಜಿದಾರನಿಂದ ಸಹಿ ಮಾಡಿರತಕ್ಕದ್ದು.
(ii) ಆ ಅರ್ಜಿಯ ಯಾವುದೇ ಷೆಡ್ಯೂಲ್ ಅಥವಾ ಅನುಬಂ೦ಧಕ್ಕೆ ಅರ್ಜಿದಾರವಿಂಂದ ಸಹಿ ಮಾಡತಕ್ಕದ್ದು ಮತ್ತು ಆ ಅರ್ಜಿಯಲ್ಲಿರುವಂಥ ರೀತಿಯಲ್ಲಿಯೇ ತಪಾಸಣೆ ಮಾಡತಕ್ಕದ್ದು.
(5) ಅರ್ಜಿದಾರನು, ಈ ಕೆಳಗಿನ ಯಾವುದೇ ಘೋಷಣೆಗಳನ್ನು ಕ್ಷೇಮು ಮಾಡಬಹುದು, ಎಂದರೆ:-
(ಎ) ಚುನಾಯಿತ ಅಭ್ಯರ್ಥಿಯ ಚುನಾವಣೆಯು ಅನೂರ್ಜಿತ ಆಗಿರತಕ್ಕದ್ದು; ಅಥವಾ
(ಬಿ) ಚುನಾಯಿತ ಅಭ್ಯರ್ಥಿಯ ಚುನಾವಣೆಯು ಅನೂರ್ಜಿತ ಆಗಿರತಕ್ಕದ್ದು ಮತ್ತು ಅವನು ಅವನಷ್ಟಕ್ಕೆ ಅಥವಾ ಯಾರೇ ಇತರ ಅಭ್ಯರ್ಥಿಯನ್ನು ವಿದ್ಯುಕ್ತವಾಗಿ ಚುನಾಯಿಸತಕ್ಕದ್ದು.
129... ಕಾರ್ಯವಿಧಾನ.- ಜಿಲ್ಲಾ ನ್ಯಾಯಾಧೀಶರು. ತನ್ನದೆ... ಯುಕ್ತವಾದುದೆಂದು ಭಾವಿಸಬಹುದಾದಂತಹ ವಿಚಾರಣೆಯ ನಂತರ ಮತ್ತು ನಡವಳಿಗಳಿಗೆ ಸಂಬಂಧಿಸಿದಂತೆ ಪಕ್ಷಕಾರರಿಗೆ ಅಹವಾಲನ್ನು ಹೇಳಿಕೊಳ್ಳುವ ಅವಕಾಶವನ್ನು ನೀಡಿದ ತರುವಾಯ,-
(ಎ) ಮನವಿಯನ್ನು ವಜಾ ಮಾಡುವುದು,
(ಬಿ) ಚುನಾಯಿತ ಅಭ್ಯರ್ಥಿಯ ಆಯ್ಕೆಯು ಅನೂರ್ಜಿತವಾಗಿದೆಯೆಂಂದು ಘೋಷಿಸುವುದು: ಅಥವಾ (A) ಚುನಾಯಿತ ಅಭ್ಯರ್ಥಿಯ ಚುನಾವಣೆಯ ಈ ಬಗ್ಗೆ ಅನೂರ್ಜಿತವಾಗಿದೆ ಮತ್ತು ಅರ್ಜಿದಾರ ಅಥವಾ ಯಾರೇ ಇತರ ಅಭ್ಯರ್ಥಿಯನ್ನು ವಿದ್ಯುಕ್ತವಾಗಿ ಆಯ್ಕೆ ಮಾಡತಕ್ಕದ್ದು.
(i) ಮತದ ಅನುಚಿತ ಸ್ವೀಕಾರ ಅಥವಾ ತಿರಸ್ಕಾರದ ಅಥವಾ
(ii) ಅಧಿನಿಯಮ ಅಥವಾ ನಿಯಮಗಳ ಉಪಬಂಧಗಳನ್ನು ಪಾಲಿಸದಿರುವುದು, ಎಂದು ಅನನುಪಾಲನೆಯಿಂದ
(ಬಿ) ಯಾರೇ ಅಭ್ಯರ್ಥಿಯ ನಾಮನಿರ್ದೇಶನವನ್ನು ತಪ್ಪಾಗಿ ತಿರಸ್ಕರಿಸಲಾಗಿದೆಯೆಂದು ಅಥವಾ ವಿಜಯ ಅಭ್ಯರ್ಥಿಯ ಅಥವಾ ಅವನ ಅಭ್ಯರ್ಥಿತನವನ್ನು ಹಿಂಪಡೆಯದಂಥ ಯಾರೆ ಇತರ ಅಭ್ಯರ್ಥಿಯನ್ನು ತಪ್ಪಾಗಿ ಅಂಗೀಕರಿಸಲಾಗಿದೆಯೆಂದು;
1 ರಿಂದ 27 ರ ವರೆಗಿನ ನಿಗದಿತ ನಮೂನೆಗಳನ್ನು ಈ ಅಧಿಸೂಚನೆಗೆ ಲಗತ್ತಿಸಲಾಗಿದೆ.