(1) 57ನೇ ನಿಯಮದ ಮೇರೆಗೆ ಅಥವಾ ಈ ನಿಯಮಗಳ ಇತರೆ ಯಾವುದೇ ಉಪಬಂಧದ ಮೇರೆಗೆ ಮತಪತ್ರವನ್ನು ಯಾರಿಗೆ ಕೊಡಲಾಗಿದೆಯೋ ಆ ಪ್ರತಿಯೊಬ್ಬ ಮತದಾರನು, ಮತದಾನ ಕೇಂದ್ರದೊಳಗೆ ಮತದಾನ ಗೋಪ್ಯತೆಯನ್ನು ಕಾಪಾಡತಕ್ಕದ್ದು ಮತ್ತು ಆ ಉದ್ದೇಶಕ್ಕಾಗಿ, ಇದರಲ್ಲಿ ಇನ್ನುಮುಂದೆ ಹೇಳಲಾದ ಮತದಾನದ ಬಗೆಗಿನ ಪ್ರಕ್ರಿಯೆಯನ್ನು ಪಾಲಿಸತಕ್ಕದ್ದು.
(2) ಮತದಾರನು ಮತಪತ್ರವನ್ನು ಸ್ವೀಕರಿಸಿದ ಮೇಲೆ ಕೂಡಲೇ.
(i) ಮತ ಚಲಾಯಿಸಲು ಇರುವ ಒಂದು ಕಂಪಾರ್ಟ್ಮೆಂಟ್ (ವಿಭಾಗ) ಕ್ಕೆ ಹೋಗತಕ್ಕದ್ದು;
(ii) ಅವನು ಯಾರಿಗೆ ಮತ ಹಾಕಲು ಉದ್ದೆಶಿಸಿರುವನೋ ಆ ಅಭ್ಯರ್ಥಿಯ ಚಿಹ್ನೆಯ ಮೇಲೆ ಅಥವಾ ಪಕ್ಕದಲ್ಲಿ ಆ ಉದ್ದೇಶಕ್ಕಾಗಿ ಒದಗಿಸಲಾದ ಸಾಧನದಿಂದ ಮತಪತ್ರದ ಮೇಲೆ ಗುರುತು ಮಾಡತಕ್ಕದ್ದು;
(ii) ಅವರ ಮತವನ್ನು ಗುಟ್ಟಾಗಿರುವ ಹಾಗೆ ಮತಪತ್ರವನ್ನು ಮಡಿಚತಕ್ಕದ್ದು;
(iv) ಅಗತ್ಯವಿದ್ದರೆ, ಪ್ರಿಸೈಡಿಂಗ್ ಅಧಿಕಾರಿಗೆ ಮತಪತ್ರದ ಮೇಲಿನ ವಿಶಿಷ್ಟ ಗುರುತನ್ನು ತೋರಿಸತಕ್ಕದ್ದು;
(ಗ ಮಡಿಚಿದ ಮತಪತ್ರವನ್ನು ಮತ ಪೆಟ್ಟಿಗೆಯೊಳಗೆ ಹಾಕತಕ್ಕದ್ದು; ಮತ್ತು
(vi) ಮತದಾನ ಕೇಂದ್ರದಿಂದ ಹೊರಹೋಗತಕ್ಕದ್ದು.
(3) ಪ್ರತಿಯೊಬ್ಬ ಮತದಾರನು, ವಿನಾಕಾರಣ ವಿಳಂಬ ಮಾಡದೆ ಮತ ಚಲಾಯಿಸತಕ್ಕದ್ದು.
(4) ಬೇರೊಬ್ಬ ಮತದಾರನು ಅದರ ಒಳಗಡೆ ಇರುವಾಗ ಮತದಾನ ಕಂಪಾರ್ಟ್ಮೆಂಟ್ (ವಿಭಾಗ)ಗೆ ಯಾರೇ ಮತದಾರನು ಪ್ರವೇಶಿಸಲು ಅವಕಾಶ ಮಾಡಿಕೂಡತಕ್ಕದ್ದಲ್ಲ.
(5) ಮತಪತ್ರವನ್ನು ಯಾರಿಗೆ ನೀಡಲಾಗಿದೆಯೋ ಆ ಮತದಾರನು, ಪ್ರಿಸೈಡಿಂಗ್ ಅಧಿಕಾರಿಯು ಎಚ್ಚರಿಕೆ ನೀಡಿದ ತರುವಾಯ, (2) ನೇ ಉಪ-ನಿಯಮದಲ್ಲಿ ಹೇಳಲಾದಂತಹ ಪ್ರಕ್ರಿಯೆಯನ್ನು ಪಾಲಿಸಲು ನಿರಾಕರಿಸಿದರೆ, ಅವನಿಗೆ ನೀಡಲಾದ ಮತಪತ್ರವನ್ನು, ಅದರ ಮೇಲೆ ಅವನು ಮತವನ್ನು ದಾಖಲಿಸಿರಲಿ ಅಥವಾ ದಾಖಲಿಸದಿರಲಿ, ಪ್ರಿಸೈಡಿಂಗ್ ಅಧಿಕಾರಿ ಅಥವಾ ಪ್ರಿಸೈಡಿಂಗ್ಕ ಅಧಿಕಾರಿಯ ನಿರ್ದೇಶನದ ಮೇರೆಗೆ. ಪೋಲಿಂಂಗ್. ಅಧಿಕಾರಿಯು. ಅವನಿಂದ ಅದನ್ನು ವಾಪಸ್ಸು ತೆಗೆದುಕೊಳ್ಳತಕ್ಕದ್ದು.
(6) ಮತಪತ್ರವನ್ನು ವಾಪಸ್ಸು ಪಡೆದ ತರುವಾಯ, ಪಿಸೈಡಿಂಗ್ ಅಧಿಕಾರಿಯು, “ರದ್ದುಪಡಿಸಲಾಗಿದೆ; ಮತದಾನ ಪ್ರಕ್ರಿಯೆಯನ್ನು ಉಲ್ಲಂಘಿಸಲಾಗಿದೆ” ಎಂಬ ಪದಗಳನ್ನು ಅದರ ಹಿಂಭಾಗದಲ್ಲಿ ದಾಖಲಿಸತಕ್ಕದ್ದು ಮತ್ತು ಆ ಪದಗಳ ಕೆಳಗೆ ತನ್ನ ಸಹಿಯನ್ನು ಹಾಕತಕ್ಕದ್ದು.
(7) “ರದ್ದುಪಡಿಸಲಾಗಿದೆ; ಮತದಾನ ಪ್ರಕ್ರಿಯೆಯನ್ನು ಉಲ್ಲಂಘಿಸಲಾಗಿದೆ” ಎಂಬ ಪದಗಳನ್ನು ದಾಖಲು ಮಾಡಿರುವಂಥ ಎಲ್ಲ ಮತಪತ್ರಗಳನ್ನು, ಪ್ರತ್ಯೇಕವಾದ ಲಕೋಟಿಯಲ್ಲಿಡತಕ್ಕದ್ದು. ಅದರ ಮೇಲ್ಭಾಗದಲ್ಲಿ “ಮತ ಪತ್ರಗಳು; ಮತದಾನ ಪ್ರಕ್ರಿಯೆಯನ್ನು ಉಲ್ಲಂಘಿಸಲಾಗಿದೆ” ಎಂಬ ಪದಗಳನ್ನು ಬರೆಯತಕ್ಕದ್ದು.
(8) (5) ನೇ ಉಪ-ನಿಯಮದ ಮೇರೆಗೆ ಯಾವ ಮತದಾರನವಿಂದ ಮತಪತ್ರವನ್ನು ವಾಪಸ್ಸು ಪಡೆದುಕೂಳ್ಳಲಾಗಿದೆಯೋ ಆ ಮತದಾರನು ಹೊಣೆಯಾಗಬಹುದಾದಂಥ ಯಾವುದೇ ಇತರೆ ದಂಡನೆಗೆ ಬಾಧಕವಾಗದಂತೆ, ಅಂಥ ಮತಪತ್ರದ ಮೇಲೆ ಯಾವುದಾದರೂ ಮತಪತ್ರವನ್ನು ದಾಖಲಿಸಿದ್ದರೆ, ಅದನ್ನು ಎಣಿಕೆ ಮಾಡತಕ್ಕದ್ದಲ್ಲ.