(1) ಈ ನಿಯಮಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಚುನಾವಣೆ) ನಿಯಮಗಳು, 2021 ಎಂದು ಕರೆಯತಕ್ಕದ್ದು.
(2) ಅವು ಅಧಿಕೃತ ರಾಜ್ಯ ಪತ್ರದಲ್ಲಿ ಅವುಗಳ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಚುನಾವಣೆ) ನಿಯಮಗಳು, 2021, Urban Development Department
2022 · PDF page 1
Hover any section to copy its link or text, ask Copilot about it, or bookmark it.
(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ” ಎಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020 (2020 ರ ಕರ್ನಾಟಕ ಅಧಿನಿಯಮ 53);
(ಬಿ) “ಬ್ಯಾಲೆಟ್ ಬಾಕ್ಸ್ ಅಥವಾ ಬ್ಯಾಲೆಟ್ ಪೇಪರ್” ಎಂದರೆ, ಈ ನಿಯಮಗಳಲ್ಲಿ, ಬ್ಯಾಲೆಟ್ ಬಾಕ್ಸ್ ಅಥವಾ ಬ್ಯಾಲೆಟ್ ಪೇಪರ್ ಎಂದು ಬಳಸಿರುವ ಕಡೆಗಳಲ್ಲಿ ಅನ್ವಯವಾಗುವ ಕಡೆಗಳಲ್ಲೆಲ್ಲಾ ವಿದ್ಯಾನ್ಮಾನ ಮತಯಂತ್ರವೆಂದು ಅರ್ಥೈಸತಕ್ಕದ್ದು.
(ಸಿ) “ಜಾತಿ ಪ್ರಮಾಣ ಪತ್ರ” ಎಂದರೆ, ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿಯ ಮೀಸಲಾತಿ ಇತ್ಯಾದಿ) ಅಧಿನಿಯಮ, 1990ರ ಅಡಿಯಲ್ಲಿ ಕಂದಾಯ ತಾಲ್ಲೂಕಿನ ತಹಶೀಲ್ದಾರ್ ರವರಿಂದ ನೀಡಲಾದ ಜಾತಿ ಪ್ರಮಾಣ ಪತ್ರ ಅಥವಾ ಆದಾಯ ಮತ್ತು ಜಾತಿ ಪ್ರಮಾಣಪತ್ರ;
(ಡಿ) “ಕೌನ್ಸಿಲರ್” ಎಂದರೆ, ಈ ಅಧಿನಿಯಮದ 11ನೇ ಪ್ರಕರಣದ ಮೇರೆಗೆ ನೇಮಕಗೊಂಡ ಕೌನ್ಸಿಲರ್ ಮತ್ತು ಅಧಿನಿಯಮದ 18ನೇ ಪ್ರಕರಣದ ಮೇರೆಗೆ ಕೌನ್ಸಿಲರಾ್ಗಿ ಕಾರ್ಯನಿರ್ವಹಿಸಲು ನೇಮಕಗೊಂಡ ವ್ಯಕ್ತಿಯನ್ನು ಒಳಗೊಳ್ಳುತ್ತದೆ;
(ಇ) “ಪಾಲಿಕೆ” ಎಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ;
(ಎಫ್) “ಮುಖ್ಯ ಆಯ್ತುಕರು" ಎಂದರೆ, 63ನೇ ಪ್ರಕರಣದ ಮೇರೆಗೆ ನೇಮಕಗೊಂಡ ಮುಖ್ಯ ಆಯುಕ್ತರು ಮತ್ತು ಅಧಿನಿಯಮದ 64ನೇ ಪ್ರಕರಣದ ಮೇರೆಗೆ ಮುಖ್ಯ ಆಯುಕ್ತರಾಗಿ ಕಾರ್ಯ ನಿರ್ವಹಿಸಲು ನೇಮಕಗೊಂಡ ವ್ಯಕ್ತಿಯನ್ನು ಒಳಗೊಳ್ಳುತ್ತದೆ;
(2) “ನಮೂನೆ” ಎಂದರೆ, ಈ ನಿಯಮಗಳಿಗೆ ಸೇರಿಸಲಾದ ನಮೂನೆ;
(ಎಚ್) “ಸರ್ಕಾರ” ಎಂದರೆ, ಕರ್ನಾಟಕ ಸರ್ಕಾರ;
(ಐ) "ಪ್ರಿಸೈಡಿಂಗ್ ಅಧಿಕಾರಿ” ಎಂದರೆ, ಪ್ರಿಸೈಡಿಂಗ್ ಅಧಿಕಾರಿಯಾಗಿ 17ನೇ ಪ್ರಕರಣದ ಮೇರೆಗೆ ನೇಮಕಗೊಂಡ ಯಾವುದೇ ವ್ಯಕ್ತಿ ಮತ್ತು 8ನೇ ನಿಯಮದ ಮೇರೆಗೆ ಪ್ರಿಸೈಡಿಂಗ್ ಅಧಿಕಾರಿಯ ಯಾವುದೇ ಪ್ರಕಾರ್ಯಗಳನ್ನು ನಿರ್ವಹಿಸುವ ಯಾವುದೇ ಪೋಲಿಂಗ್ ಅಧಿಕಾರಿಯನ್ನು ಒಳಗೊಳ್ಳುತ್ತದೆ;
(ಜಿ) “ಸಾರ್ವಜನಿಕ ರಜಾದಿನ” ಎಂದರೆ, ವರ್ಗಾವಣೀಯ ಲಿಖಿತಪತ್ರಗಳ ಅಧಿನಿಯಮ, 1881ರ (1881 ರ ಕೇಂದ್ರ ಅಧಿನಿಯಮ 26) 25ನೇ ಪ್ರಕರಣದ ಉದ್ದೇಶಕ್ಕಾಗಿ ಸಾರ್ವಜನಿಕ ರಜಾ ದಿನವಾಗಿರುವ ಯಾವುದೇ ದಿನ;
ಕ). “ಅರ್ಹ ಅಭ್ಯರ್ಥಿ" ಅಥವಾ “ಚುನಾಯಿಸಬೇಕಾದ ಅರ್ಹ ಅಭ್ಯರ್ಥಿ" ಎಂದರೆ, ಅಧಿನಿಯಮದ ಉಪಬಂಧಗಳು ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳ ಮೇರೆಗೆ ನಡೆಯುವ ಚುನಾವಣೆಗಳಲ್ಲಿ ಚುನಾಯಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿ;
(ಎಲ್) “ಮೀಸಲಿಟ್ಟ ಸ್ಥಾನ” ಎಂದರೆ, ಅಧಿನಿಯಮದ 7ನೇ ಪ್ರಕರಣದ ಮೇರೆಗೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಮಹಿಳೆಗಾಗಿ ಮೀಸಲಿಟ್ಟ ಸ್ನಾನ;
(ಎಂ) “ರಿಟರ್ನಿಂಗ್ ಅಧಿಕಾರಿ” ಎಂದರೆ, ರಿಟರ್ನಿಂಗ್ ಅಧಿಕಾರಿಯಾಗಿ 5ನೇ ನಿಯಮದ ಮೇರೆಗೆ ನೇಮಕಗೊಂಡ ಯಾವುದೇ ವ್ಯಕ್ತಿ ಮತ್ತು ರಿಟರ್ವಿಂಗ್ ಅಫೀಸರ್ ಯಾವುದೇ ಪ್ರಕರಣಗಳನ್ನು ನಿರ್ವಹಿಸುವ ಸಹಾಯಕ ರಿಟರ್ನಿಂಗ್ ಅಧಿಕಾರಿಯನ್ನು ಒಳಗೊಳ್ಳುತ್ತದೆ; ಮತ್ತು (ಎನ್) “ಪ್ರಕರಣ” ಎಂದರೆ, ಈ ಅಧಿನಿಯಮದ ಪ್ರಕರಣ;
(2) ಈ ನಿಯಮಗಳಲ್ಲಿ ಬಳಸಲಾದ ಆದರೆ ಪರಿಭಾಷಿಸಿಲ್ಲದ ಪದಗಳು ಮತ್ತು ಅಭಿವ್ಯಕ್ತಿಗಳು ಈ ಅಧಿನಿಯಮದಲ್ಲಿ ಅವುಗಳಿಗೆ ಗೊತ್ತಪಡಿಸಿಸಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು.
ಅಧ್ಯಾಯ-॥
(2) ರಾಜ್ಯ ಚುನಾವಣಾ ಆಯೋಗದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕ ಒಳಪಟ್ಟು, ಮುಖ್ಯ ಆಯುಕ್ತರು ಪಾಲಿಕಗೆ ಚುನಾವಣೆ ನಡೆಸುವ ಸಂಬಂಧದಲ್ಲಿ ಎಲ್ಲಾ ಕೆಲಸಗಳನ್ನು ಸಮನ್ವಯಗೊಳಿಸತಕ್ಕದ್ದು ಮತ್ತು ಮೇಲ್ವಿಚಾರಣೆ ಮಾಡತಕ್ಕದ್ದು. ಮುಖ್ಯ ಆಯ್ತುಕರು ರಾಜ್ಯ ಚುನಾವಣಾ ಆಯೋಗದ ಮೂಲಕ ಆತನಿಗೆ ವಹಿಸಿಕೊಡಬಹುದಾದಂತ ಚುನಾವಣೆಗೆ ಸಂಬಂಧಿಸಿದ ಅಂಥ ಇತರೆ ಪ್ರಕಾರ್ಯಗಳನ್ನು ಸಹ ನಿರ್ವಹಿಸತಕ್ಕದ್ದು.
(1) ಕೌನ್ಸಿಲರುಗಳ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಗೆ ಅಥವಾ ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿಮಾಡುವುದಕ್ಕಾಗಿ ನಡೆಸುವ ಚುನಾವಣೆಗೆ ರಾಜ್ಯ ಸರ್ಕಾರದ ಅಥವಾ ಸ್ಮಳೀಯ ಪ್ರಾಧಿಕಾರದ ಅಧಿಕಾರಿಗಳಾಗಿರುವ ಒಬ್ಬ ಅಥವಾ ಹೆಚ್ಚಿನ ರಿಟರ್ನಿಂಗ್ ಅಧಿಕಾರಿಗಳನ್ನು ಮುಖ್ಯ ಆಯ್ತುಕರು ನೇಮಕ ಮಾಡತಕ್ಕದ್ದು ಅಥವಾ ನಾಮ ನಿರ್ದೇಶನ ಮಾಡತಕ್ಕದ್ದು:
ಪರಂತು, ಒಬ್ಬರಿಗಿಂತ ಹೆಚ್ಚು ರಿಟರ್ನಿಂಗ್ ಅಧಿಕಾರಿಗಳನ್ನು ನಾಮನಿರ್ದೇಶಿಸಿದ್ದರೆ ಅಥವಾ ಹೆಸರಿಸಿದ್ದರೆ, ಮುಖ್ಯ ಆಯುಕ್ತರು, ಅಂಥ ಪ್ರತಿಯೊಬ್ಬ ಅಧಿಕಾರಿಯನ್ನು ಯಾವ ವಾರ್ಡಿಗೆ ಅಥವಾ ವಾರ್ಡುಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ಅಥವಾ ಹೆಸರಿಸಲಾಗಿದೆ. ಎಂಬುದನ್ನು ನಿರ್ದಿಷ್ಟಪಡಿಸತಕ್ಕದ್ದು.
(2) ಮುಖ್ಯ ಆಯುಕ್ತರು ಅದೇ ರೀತಿಯಲ್ಲಿ ರಾಜ್ಯ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳಾಗಿರುವ ಒಬ್ಬರು ಅಥವಾ ಹೆಚ್ಚಿನ ಅಸಿಸ್ಟೆಂಟ್ ರಿಟರ್ವಿಂಗ್ ಅಧಿಕಾರಿಗಳು, ರಿಟರ್ನಿಂಗ್ ಅಧಿಕಾರಿಗೆ ಆತನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುವುದಕ್ಕಾಗಿ ಹೆಸರಿಸಬಹುದು ಅಥವಾ ನಾಮ ನಿರ್ದೇಶನ ಮಾಡಬಹುದು.
(3) ಪ್ರತಿಯೊಬ್ಬ ಸಹಾಯಕ ರಿಟರ್ನಿಂಗ್ ಅಧಿಕಾರಿಯು, ರಿಟರ್ನಿಂಗ್ ಅಧಿಕಾರಿಯು ನಿರ್ದೇಶಿಸಿದ ಹಾಗೆ ರಿಟರ್ನಿಂಗ್ ಅಧಿಕಾರಿಯ ಎಲ್ಲಾ ಅಥವಾ ಯಾವುದೇ ಪ್ರಕಾರ್ಯಗಳನ್ನು ನಿರ್ವಹಿಸಲು ಸಕ್ಷಮನಾಗಿರತಕ್ಕದ್ದು.
(1) ನಗರದ ಪ್ರತಿಯೊಂದು ವಾರ್ಡಿಗೆ 14ನೇ ಪ್ರಕರಣದಲ್ಲಿ ಉಲ್ಲೇಖಿಸಿದ ಮತದಾರರ ಪಟ್ಟೆಯನ್ನು ಪ್ರತಿಯೊಂದು ಭಾಗದಲ್ಲಿ ಸೇರಿಸಬೇಕಾದ ಮತದಾರರು ವಾಸ ಮಾಡುತ್ತಿರುವ ವಾರ್ಡಿನೊಳ?ನ ಪ್ರದೇಶವನ್ನು ಗಣನೆಗೆ ತೆಗೆದುಕೊಂಡು ಒಂದು ಅಥವಾ ಹೆಚ್ಚು ಭಾಗಗಳಾಗಿ ವಿಭಜಿಸತಕ್ಕದ್ದು. ಹಾಗೆ ಮಾಡುವುದರಿಂದ ವಾರ್ಡಿನೊಳಗಿನ ಹೆಸರಿಲಾದ ಪ್ರದೇಶ, ಬೀದಿ ಅಥವಾ ರಸ್ತೆಗೆ ಸೇರಿದ ಪ್ರತಿಯೊಂದು ಭಾಗದಲ್ಲಿ ಸೇರಿಸಬೇಕಾದ ಮತದಾರರನ್ನು ಮತ್ತು ವಾರ್ಡಿನ ಹಲವಾರು ಭಾಗಗಳಿಗೆ ಸಂಬಂಧಿಸಿದಂತೆ ಹಾಗೆ ವಿಭಜಿಸಲಾದ ಮತದಾರರ ಪಟ್ಟಿಯನ್ನು ಒಟ್ಟಾಗಿ ಅಂಥ ವಾರ್ಡಿನ ಮತದಾರರ ಪಟ್ಟೆಯನ್ನು ಸಿದ್ಧಪಡಿಸತಕ್ಕದ್ದು.
(2) ಪ್ರತಿಯೊಂದು ವಾರ್ಡಿಗೆ ಸಂಬಂಧಿಸಿದ ಅಂಥ ಮತದಾರರ ಪಟ್ಟೆಯ ಒಂದು ಪ್ರತಿಯನ್ನು ಪರಿಶೀಲನೆಗಾಗಿ ಪಾಲಿಕೆಯ ಕಛೇರಿಯಲ್ಲಿಯೂ ಸಹ ಮುಕ್ತವಾಗಿ ಇಡತಕ್ಕದ್ದು.
ರಿಟರ್ನಿಂಗ್ ಅಧಿಕಾರಿಯು, ಮುಖ್ಯ ಆಯುಕ್ತರೊಂದಿಗೆ ಸಮಾಲೋಚಿಸಿ ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂಥಹ ರೀತಿಯಲ್ಲಿ ಪ್ರತಿಯೊಂದು ವಾರ್ಡಿಗೂ ಸಾಕಷ್ಟು ಸಂಖ್ಯೆಯ ಮತಗಟ್ಟೆ ಕೇಂದ್ರಗಳನ್ನು ಒದಗಿಸತಕ್ಕದ್ದು ಮತ್ತು ಹಾಗೆ ಒದಗಿಸಿದ ಮತಗಟ್ಟೆ ಕೇಂದ್ರಗಳನ್ನು ಮತ್ತು ಅವುಗಳನ್ನು ಯಾವ ಮತದಾನದ ಪ್ರದೇಶಗಳಿಗೆ ಅಥವಾ ಮತದಾರರ ಗುಂಪುಗಳಿಗೆ ಸಂಬಂಧಿಸಿದಂತೆ ಒದಗಿಸಲಾಗಿದೆ ಎಂಬುದನ್ನು ತೋರಿಸುವ ಪಟ್ಟಿಯನ್ನು ಪ್ರಕಟಿಸತಕ್ಕದ್ದು.
(1) ಈ ಅಧಿನಿಯಮದ 13ನೇ ಪ್ರಕರಣದಲ್ಲಿ ಉಲ್ಲೇಖಿಸಲಾದ ಉದ್ದೇಶಿತ ಚುನಾವಣೆಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರು, ರಾಜ್ಯ ಚುನಾವಣಾ ಆಯೋಗದ ಅನುಮತಿಯೊಂದಿಗೆ ನಮೂನೆ 1ರಲ್ಲಿ ಅಧಿಸೂಚಿಸತಕ್ಕದ್ದು.
(2) ರಾಜ್ಯ ಚುನಾವಣಾ ಆಯೋಗ, ಅಂಥ ಅಧಿಸೂಚನೆಯಲ್ಲಿ ಈ ಕೆಳಕಂಡಂತೆ:-
(i) ಅಧಿಸೂಚನೆಯು ಪ್ರಕಟಣೆಯಾದ ದಿನಾಂಕದ ನಂತರ ಏಳನೇ ದಿನವಾಗಿರತಕ್ಕದ್ದು ಅಥವಾ ಆ ದಿನ ಸಾರ್ವತ್ರಿಕ ರಜಾ ದಿನವಾಗಿದ್ದರೆ, ಆ ತರುವಾಯದ ಸಾರ್ವತ್ರಿಕ ರಜಾ ದಿನವಾಗಿಲ್ಲದಿರುವ ಮುಂದಿನ ದಿನದಂದು ನಾಮ ಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕವೆಂದು;
(ii) ನಾಮಪತ್ರಗಳನ್ನು ಸಲ್ಲಿಸುವುದಕ್ಕಾಗಿನ ಕೊನೆಯ ದಿನಾಂಕವಾಗಿರುವಂಥ ನಿಕಟೋತ್ತರದ ದಿನವಾಗಿರತಕ್ಕದ್ದು ಅಥವಾ ಆ ದಿನವು ಸಾರ್ವತ್ರಿಕ ರಜಾ ದಿನವಾಗಿದ್ದರೆ, ಸಾರ್ವತ್ರಿಕ ರಜಾ ದಿನವಾಗಿಲ್ಲದಿರುವ ಮುಂಬರುವ ದಿನವನ್ನು ನಾಮಪತ್ರಗಳ ಪರಿಶೀಲನೆ ದಿನಾಂಕವೆಂದು;
(iii) ನಾಮ ಪತ್ರಗಳ ಪರಿಶೀಲನೆಗಾಗಿನ ದಿನಾಂಕದ ತರುವಾಯ ಎರಡನೇ ದಿನವಾಗಿರತಕ್ಕದ್ದು ಅಥವಾ ಆ ದಿನವು ಸಾರ್ವತ್ರಿಕ ರಜಾ ದಿನವಾಗಿದ್ದರೆ ಸಾರ್ವತ್ರಿಕ ರಜಾ ದಿನವಾಗಿಲ್ಲದಿರುವ ಮುಂದಿನ ದಿನವನ್ನು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕವೆಂದು;
(iv) ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕದ ತರುವಾಯ ಏಳು ದಿನಕ್ಕಿಂತ ಮುಂಚಿತವಲ್ಲದ ಅವಶ್ಯವಾದರೆ ಮತದಾನವನ್ನು ನಡೆಸುವ ದಿನಾಂಕವೆಂದೂ ಮತ್ತು ಮತದಾನ ಯಾವ ವೇಳೆಯಲ್ಲಿ ನಡೆಸಬೇಕೆಂದೂ ಮತ್ತು ಯಾವುದೇ ಗೊತ್ತುಮಾಡಿದ ದಿನದಂದು ಮತದಾನ ನಡೆಸುವ ವೇಳೆಯ ಒಟ್ಟು ಅವಧಿಯು ಎಂಟು ಗಂಟೆಗಳಿಗಿಂತ ಕಡಿಮೆಯಾಗಿರತಕ್ಕದ್ದಲ್ಲ; ಮತ್ತು
(v) ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಪೂರ್ಣಗೊಳಿಸತಕ್ಕದ್ದೋ ಆ ದಿನಾಂಕ; ನಿರ್ದಿಷ್ಟಪಡಿಸತಕ್ಕದ್ದು.
(3) ರಿಟರ್ನಿಂಗ್ ಅಧಿಕಾರಿಯು (1) ನೇ ಉಪ ನಿಯಮದ ಮೇರೆಗೆ ಅಧಿಸೂಚನೆಯನ್ನು ಹೊರಡಿಸಿದ ಮೇಲೆ ನಮೂನೆ 1-ಎ ನಲ್ಲಿ ಅದನ್ನು ತನ್ನ ಕಛೇರಿಯಲ್ಲಿರುವ ಮತ್ತು ಪಾಲಿಕೆಯ ಕಛೇರಿಯಲ್ಲಿರುವ ಸೂಚನಾ ಫಲಕದ ಮೇಲೆ ಮತ್ತು ತನಗೆ ಅವಶ್ಯವೆಂದು ಭಾವಿಸುವಂಥ ಇತರ ಸ್ಥಳಗಳಲ್ಲಿ ಪ್ರದರ್ಶಿಸುವ ಮೂಲಕ ಉದ್ದೇಶಿತ ಚುನಾವಣೆಯ ಬಗ್ಗೆ ಅಂಥ ಚುನಾವಣೆಗಾಗಿ ನಾಮಪತ್ರಗಳನ್ನು ಆಹ್ವಾನಿಸಿ ಸಾರ್ವಜನಿಕ ನೋಟೀಸನ್ನು ನೀಡತಕ್ಕದ್ದು.
(4) ರಿಟರ್ನಿಂಗ್ ಅಧಿಕಾರಿಯು ಸಾರ್ವಜನಿಕ ನೋಟೀಸಿನಲ್ಲಿ, ಇತರೆ ವಿಷಯಗಳೊಂದಿಗೆ ನಾಮಪತ್ರಗಳನ್ನು ಸ್ವೀಕರಿಸುವುದಕ್ಕಾಗಿ ಇರುವ ಕೊನೆಯ ದಿನಾಂಕ, ನಾಮಪತ್ರಗಳನ್ನು ಸಲ್ಲಿಸುವ ಸ್ಥಳ, ನಾಮಪತ್ರಗಳ ಪರಿಶೀಲನೆಯ ದಿನಾಂಕ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ, ಅವಶ್ಯವಾದರೆ ಮತದಾನವನ್ನು ನಡೆಸುವ ದಿನಾಂಕ ಅಥವಾ ದಿನಾಂಕಗಳು ಮತ್ತು ಮತದಾನದ ವೇಳೆ ಮತ್ತು ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಪೂರ್ಣಗೊಳಿಸಬೇಕೋ ಆ ದಿನಾಂಕ ಇವುಗಳನ್ನು ನಿರ್ದಿಷ್ಟಪಡಿಸತಕ್ಕದ್ದು. ಇವು ಮುಖ್ಯ ಆಯುಕ್ತರು, ಆ ಬಗ್ಗೆ, (2) ನೇ ಉಪ-ನಿಯಮದ ಆಡಿಯಲ್ಲಿ ಅಧಿಸೂಚಿಸಿದ ದಿನಾಂಕಗಳಿಗೆ ಅನುಗುಣವಾಗಿರತಕ್ಕದ್ದು.
(1) ನಾಮಪತ್ರಗಳನ್ನು ಸಲ್ಲಿಸುವುದಕ್ಕಾಗಿ 10ನೇ ನಿಯಮದ ಮೇರೆಗೆ ಗೊತ್ತುಪಡಿಸಿದ ದಿನಾಂಕದಂದು ಅಥವಾ ಅದಕ್ಕೆ ಮುಂಚೆ, ಪ್ರತಿಯೊಬ್ಬ ಅಭ್ಯರ್ಥಿಯು ಖುದ್ದಾಗಿ ಅಥವಾ ಅತನ ಸೂಚಕನ ಮೂಲಕವಾಗಲಿ, ಬೆಳಗ್ಗೆ 11:00 ಗಂಟೆ ಮತ್ತು ಮಧ್ಯಾಹ್ನ 3:00 ಗಂಟಿಯ ನಡುವೆ ರಿಟರ್ವಿಂಗ್ ಅಧಿಕಾರಿಗೆ 9 ನೇ ನಿಯಮದ ಅಡಿಯಲ್ಲಿ ಉಲ್ಲೇಖಿಸಿದ ಸಾರ್ವಜನಿಕ ನೋಟೀಸಿನಲ್ಲಿ ಆ ಬಗ್ಗೆ ನಿರ್ದಿಷ್ಟಪಡಿಸಿದ ಸ್ಮಳದಲ್ಲಿ, ನಮೂನೆ-2 ರಲ್ಲಿ ಯುಕ್ತವಾಗಿ ಪೂರ್ಣಗೊಳಿಸಿದ ನಾಮಪತ್ರವನ್ನು ಉಮೇದುದಾರನು ತನ್ನನ್ನು ಬೆಂಬಲಿಸುವ ಸೂಚಕರುಗಳಾಗಿ ಅದೇ ವಾರ್ಡಿನ 6 ಜನ ಮತದಾರರುಗಳ ಸಹಿಗಳೊಂ೦ದಿಗೆ ತನ್ನ ಇತ್ತೀಚಿನ ಪಾಸ್ಪೋರ್ಟ್ ಸೈಜಿನ ಭಾವಚಿತ್ರದ ಸಹಿತವಾಗಿ ಸಹಿ ಮಾಡಿದ ನಾಮಪತ್ರವನ್ನು ಸಲ್ಲಿಸತಕ್ಕದ್ದು.
ಪರಂತು, ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯಾಗಿದ್ದರೆ, ನಾಮಪತ್ರವನ್ನು ಅದೇ ವಾರ್ಡಿನ ಒಬ್ಬ ಸೂಚಕನಿಂದ ರುಜು ಮಾಡಿದ್ದರೂ ಸಹ ಆ ವಾರ್ಡಿನಿಂದ ಚುನಾವಣೆಗೆ ಕ್ರಮಬದ್ಧವಾಗಿ ನಾಮನಿರ್ದೇಶಿತನಾಗಿರುತ್ತಾನೆಂದು ಭಾವಿಸತಕ್ಕದ್ದು:
ಮತ್ತು ಪರಂತು, ಸಾರ್ವತ್ರಿಕ ರಜಾ ದಿನದಂದು ರಿಟರ್ನಿಂಗ್ ಅಧಿಕಾರಿಗೆ ಯಾವುದೇ ನಾಮಪತ್ರವನ್ನು ಸಲ್ಲಿಸತಕ್ಕದ್ದಲ್ಲ.
(2 ಒಂದು ವಾರ್ಡಿನಲ್ಲಿ. -
(ಎ) ಯಾವುದೇ ಸ್ಥಾನವನ್ನು ಹಿಂದುಳಿದ ವರ್ಗಗಳು, ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳಿಗೆ ಮೀಸಲಾಗಿಡಲಾಗಿದೆಯೋ ಆ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಅಭ್ಯರ್ಥಿಯ ನಾಮ ಪತ್ರವು ಅವನು ಸದಸ್ಯನಾಗಿರುವಂತಹ ನಿರ್ದಿಷ್ಟ ವರ್ಗ, ಜಾತಿ ಅಥವಾ ಪಂಗಡವನ್ನು ನಿರ್ದಿಷ್ಟಪಡಿಸುವ ಮತ್ತು ಸದರಿ ವರ್ಗ, ಜಾತಿ ಅಥವಾ ಪಂಗಡ, ಹಿಂದುಳಿದ ವರ್ಗ, ಅನುಸೂಚಿತ ಜಾತಿ, ಅಥವಾ ಅನುಸೂಚಿತ ಪಂಗಡ ಆಗಿದೆಯೆಂದು ನಿರ್ದಿಷ್ಟಪಡಿಸುವ ಅವನ ಘೋಷಣೆಯನ್ನು ಒಳಗೊಂಡಿರುವ ಆತನ ನಾಮನಿರ್ದೇಶನದ ಪತ್ರದ ಹೊರತು ಆ ಸ್ಥಾನವನ್ನು ಭರ್ತಿ ಮಾಡುವುದಕ್ಕೆ ಆಯ್ಕೆಗೊಳ್ಳಲು ಅರ್ಹನಾಗಿರುವುದಾಗಿ ಭಾವಿಸತಕ್ಕದ್ದಲ್ಲ.
(ಬಿ) ಮಹಿಳೆಗಾಗಿ ಮೀಸಲಿರಿಸಿದ್ದ ವಾರ್ಡಿನಲ್ಲಿ ನಾಮಪತ್ರವನ್ನು ಸಲ್ಲಿಸುವ ಅಭ್ಯರ್ಥಿಯು ಸಲ್ಲಿಸುವ ನಾಮಪತ್ರವು ಮಹಿಳೆ ಎಂಬ ಘೋಷಣೆಯನ್ನು ಒಳಗೊಂಡಿರತಕ್ಕದ್ದು.
(3) ನಾಮಪತ್ರವನ್ನು ಸಲ್ಲಿಸಿದ ಮೇಲೆ, ರಿಟರ್ನಿಂಗ್ ಅಧಿಕಾರಿಯು ನಾಮಪತ್ರದಲ್ಲಿ ನಮೂದಿಸಿದ ಅಭ್ಯರ್ಥಿಯ ಮತ್ತು ಅವನ ಸೂಚಕನ ಹೆಸರುಗಳು ಮತ್ತು ಮತದಾರರ ಪಟ್ಟೆಯ ಸಂಖ್ಯೆಗಳು ಮತದಾರರ ಪಟ್ಟಿಯಲ್ಲಿ ನಮೂದಿಸಿದಂಂತೆಯೇ ಇದೆ ಎಂಬುದನ್ನು ಸ್ವತಃ ಮನದಟ್ಟು ಮಾಡಿಕೊಳ್ಳತಕ್ಕದ್ದು.
ಪರಂತು, ಅಭ್ಯರ್ಥಿಯ ಅಥವಾ ಅವನ ಸೂಚಕನ ಅಥವಾ ಯಾವುದೇ ಇತರೆ ವ್ಯಕ್ತಿಯ ಹೆಸರಿನ ಬಗ್ಗೆ ಯಾವುದೇ ತಪ್ಪ ಹೆಸರು ಅಥವಾ ನಿಖರವಾಗಿರದ ವಿವರಣೆ ಅಥವಾ ಲಿಪಿಕ, ತಾಂತ್ರಿಕ ಅಥವಾ ಮುದ್ರಣದೋಷ ಮತದಾರರ ಪಟ್ಟಿಯಲ್ಲಿ ಅಥವಾ ನಾಮಪತ್ರದಲ್ಲಿ ನಮೂದಿಸಿದ ಯಾವುದೇ ಸ್ಥಳದ ಬಗ್ಗೆ ಯಾವುದೇ ತಪ್ಪ ಹೆಸರು, ಅಥವಾ ವಿಖರವಾಗಿರದ ವಿವರಣೆ ಅಥವಾ ಲಿಪಿಕ, ತಾಂತ್ರಿಕ ಅಥವಾ ಮುದ್ರಣ ದೋಷಗಳು ಮತ್ತು ಮತದಾರರ ಪಟ್ಟೆಯಲ್ಲಿ ಅಥವಾ ನಾಮಪತ್ರದಲ್ಲಿರುವ ಅಂಥ ಯಾವುದೇ ವ್ಯಕ್ತಿಯ ಮತದಾರರ ಪಟ್ಟೆಯ ಸಂಖ್ಯೆಯ ಬಗೆಗಿನ ಯಾವುದೇ ಲಿಪಿಕ, ತಾಂತ್ರಿಕ ಅಥವಾ ಮುದ್ರಣ ದೋಷವು, ವ್ಯಕ್ತಿ ಅಥವಾ ಸ್ಥಳದ ಹೆಸರಿಗೆ ಸಂಬಂಧಿಸಿದ ವಿವರಣೆಯು ಸಾಮಾನ್ಯವಾಗಿ ತಿಳಿದಿರುವಂಥದ್ದಾಗಿರುವಲ್ಲಿನ ಯಾವುದೇ ಸಂದರ್ಭದಲ್ಲಿ, ಅಂಥ ವ್ಯಕ್ತಿ ಅಥವಾ ಸ್ಥಳಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟೆ ಅಥವಾ ನಾಮಪತ್ರದ ಸಂಪೂರ್ಣ ಕಾರ್ಯಚರಣೆಗೆ ಬಾಧಕವಾಗತಕ್ಕದ್ದಲ್ಲ ಮತ್ತು ರಿಟರ್ನಿಂಗ್ ಅಧಿಕಾರಿಯು ಸರಿಪಡಿಸಬೇಕಾಗಿರುವ ಅಂಥ ಯಾವುದೇ ತಪ್ಪು ಹೆಸರು ಅಥವಾ ನಿಖರವಾಗಿರದ ವಿವರಣೆ ಅಥವಾ ಲಿಪಿಕ, ತಾಂತ್ರಿಕ ಅಥವಾ ಮುದ್ರಣ ದೋಷಗಳಿಗೆ ಅನುಮತಿ ನೀಡತಕ್ಕದ್ದು ಮತ್ತು ಅಗತ್ಯವಿರುವಲ್ಲಿ, ಮತದಾರರ ಪಟ್ಟೆಯಲ್ಲಿರುವ ಅಥವಾ ನಾಮಪತ್ರಗಳಲ್ಲಿರುವ ಯಾವುದೇ ಅಂಥ ತಪ್ಪು ಹೆಸರು, ನಿಖರವಾಗಿರದ ವಿವರಣೆ, ಲಿಪಿಕ ತಾಂತ್ರಿಕ ಅಥವಾ ಮುದ್ರಣ ದೋಷಗಳನ್ನು ಗಮನಕ್ಕೆ ತೆಗೆದುಕೊಳ್ಳದಿರುವಂತೆ ನಿರ್ದೇಶಿಸತಕ್ಕದ್ದು.
(4) ಈ ನಿಯಮದಲ್ಲಿರುವುದಾವುದೂ, ಯಾವುದೇ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು, ನಾಮಪತ್ರಗಳನ್ನು ಸಲ್ಲಿಸಲು ಅಡ್ಡಿಪಡಿಸತಕ್ಕದ್ದಲ್ಲ; (ಪರಂತು ಅಂಥ ನಾಮಪತ್ರಗಳ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚಿರತಕ್ಕದ್ದಲ್ಲ)
(5) ಯಾವುದೇ ಅಭ್ಯರ್ಥಿಯು, ರಿಟರ್ನಿಂಗ್ ಅಧಿಕಾರಿಗೆ ನಾಮಪತ್ರವನ್ನು ಸಲ್ಲಿಸುವುದಕ್ಕೆ ಮುಂಚೆ ಅವನು ಐದು ಸಾವಿರ ರೂಪಾಯಿಗಳ ಮೊತ್ತ ಅಥವಾ ಅಭ್ಯರ್ಥಿಯು ಹಿಂದುಳಿದ ವರ್ಗಗಳು ಅಥವಾ ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡ ಅಥವಾ ಮಹಿಳಾ ಸದಸ್ಯರಿಗೆ ಎರಡು ಸಾವಿರದ ಐದುನೂರು ರೂಪಾಯಿಗಳ ಮೊತ್ತವನ್ನು ಠೇವಣಿ ಇಟ್ಟು ಅಥವಾ ಠೇವಣಿ ಇಡುವಂತೆ ಮಾಡಿದ ಹೊರತು ಯಾವುದೇ ವಾರ್ಡಿನಿಂದ ಚುನಾವಣೆಗೆ ಕ್ರಮಬದ್ಧವಾಗಿ ನಾಮನಿರ್ದೇಶನಗೊಂಡಿರುವುದಾಗಿ ಭಾವಿಸತಕ್ಕದ್ದಲ್ಲ:
ಪರಂತು, ಒಂದೇ ವಾರ್ಡಿನಲ್ಲಿನ ಚುನಾವಣೆಗೆ ಒಂದಕ್ಕಿಂತ ಹೆಚ್ಚು ನಾಮಪತ್ರಗಳ ಮೂಲಕ ನಾಮನಿರ್ದೇಶನಗೊಂಡಿದ್ದ ಅಭ್ಯರ್ಥಿಯಾಗಿದ್ದಲ್ಲಿ ಈ ಉಪ-ನಿಯಮದ ಮೇರೆಗೆ ಒಂದಕ್ಕಿಂತ ಹೆಚ್ಚು ಠೇವಣಿಗಳನ್ನು ಇಡಲು ಅವನನ್ನು ಅಗತ್ಯಪಡಿಸತಕ್ಕದ್ದಲ್ಲ.
(6) (5) ನೇ ಉಪ-ನಿಯಮದ ಮೇರೆಗೆ ಠೇವಣಿ ಇಡಬೇಕೆಂದು ಅಗತ್ಯಪಡಿಸಿದ ಯಾವುದೇ ಮೊತ್ತವನ್ನು (1) ನೇ ಉಪ-ನಿಯಮದ ಮೇರೆಗೆ ನಾಮಪತ್ರವನ್ನು ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಯು ಆ ಮೊತ್ತವನ್ನು ರಿಟರ್ನಿಂಗ್ ಅಧಿಕಾರಿಗೆ ನಗದಾಗಿ ಠೇವಣಿ ಇಡುವಂತೆ ಮಾಡಿದ ಹೊರತು ಅಥವಾ ಸದರಿ ಮೊತ್ತವನ್ನು ಅತನು ಸರ್ಕಾರಿ ಖಜಾನೆಯಲ್ಲಿ ಠೇವಣಿ ಇಟ್ಟಿರುವೆನೆಂದು ಅಥವಾ ಆತನ ಪರವಾಗಿ ಇಡಲಾಗಿದೆ ಎಂದು ತೋರಿಸುವ ರಶೀದಿಯನ್ನು ನಾಮಪತ್ರಕ್ಕೆ ಲಗತ್ತಿಸಿದ್ದ ಹೊರತು ಆ ಉಪ-ನಿಯಮದ ಮೇರೆಗೆ ಠೇವಣಿ ಇಡಲಾಗಿದೆ ಎಂದು ಭಾವಿಸತಕ್ಕದ್ದಲ್ಲ.
ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ 7 ನೇ ಪ್ರಕರಣದ (3) ನೇ ಉಪ-ಪ್ರಕರಣದ ಪರಂತುಕದ ಮೇರೆಗೆ ಸ್ಥಾನವನ್ನು ಮೀಸಲಿರಿಸಿದ ಸಂದರ್ಭದಲ್ಲಿ, -
(i) ಹಿಂದುಳಿದ ವರ್ಗಗಳ ಪ್ರವರ್ಗ “ಎ” ಗೆ ಸೇರಿದ ವ್ಯಕ್ತಿಗಾಗಿ ಮೀಸಲಿರಿಸಿದ್ದರೆ, ರಿಟರ್ನಿಂಗ್ ಅಧಿಕಾರಿಯು ಹಿಂದುಳಿದ ವರ್ಗಗಳ ಪ್ರವರ್ಗ “ಎ” ಮತ್ತು ಪ್ರವರ್ಗ “ಬಿ” ಇವುಗಳೆರಡಕ್ಕೂ ಸೇರಿದ ವ್ಯಕ್ತಿಯಿಂದ ನಾಮಪತ್ರಗಳನ್ನು ಸ್ವೀಕರಿಸಬಹುದು. ಆದರೆ, ನಾಮಪತ್ರವನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕ ಮತ್ತು ಸಮಯಕ್ಕೆ ಮೊದಲು ಹಿಂದುಳಿದ ವರ್ಗಗಳ ಪ್ರವರ್ಗ “ಎ” ಗೆ ಸೇರಿದ ಯಾವುದೇ ವ್ಯಕ್ತಿಯಿಂದ ನಾಮಪತ್ರವನ್ನು ಸ್ವೀಕರಿಸಿದ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳ ಪ್ರವರ್ಗ “ಬಿ” ಗೆ ಸೇರಿದ ವ್ಯಕ್ತಿಯಿಂದ ಠೇವಣಿಯ ಜೊತೆಗೆ ಸಲ್ಲಿಸಲಾದ ನಾಮಪತ್ರವನ್ನು ಹಿಂತಿರುಗಿಸತಕ್ಕದ್ದು. ಆದಾಗ್ಯೂ, ನಾಮಪತ್ರವನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಮೊದಲು ಹಿಂದುಳಿದ ವರ್ಗಗಳ ಪ್ರವರ್ಗ “ಎ” ಗೆ ಸೇರಿದ ವ್ಯಕ್ತಿಯಿಂದ ಯಾವುದೇ ನಾಮಪತ್ರವನ್ನು ಸ್ವೀಕರಿಸದಿದ್ದಾಗ ಮಾತ್ರ ಹಿಂದುಳಿದ ವರ್ಗಗಳ ಪ್ರವರ್ಗ “ಬಿ” ಗೆ ಸೇರಿದ ಅಭ್ಯರ್ಥಿಯಿಂದ ಸಲ್ಲಿಸಿದ ನಾಮ ಪತ್ರವನ್ನು ಪರಿಗಣಿಸಲು ಅವನು ಮುಂದುವರಿಯಬಹುದು; ಮತ್ತು
(ii) ಹಿಂದುಳಿದ ವರ್ಗಗಳ ಪ್ರವರ್ಗ “ಬಿ” ಗೆ ಸೇರಿದ ವ್ಯಕ್ತಿಗೆ ಮೀಸಲಿರಿಸಿದ್ದರೆ, ರಿಟರ್ನಿಂಗ್ ಅಧಿಕಾರಿಯು ಹಿಂದುಳಿದ ವರ್ಗಗಳ ಪ್ರವರ್ಗ “ಎ” ಮತ್ತು ಪ್ರವರ್ಗ “ಬಿ” ಇವುಗಳೆರಡಕ್ಕೂ ಸೇರಿದ ವ್ಯಕ್ತಿಯಿಂದ ನಾಮಪತ್ರಗಳನ್ನು ಸ್ವೀಕರಿಸಬಹುದು. ಆದರೆ, ನಾಮಪತ್ರವನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಮುಂಚೆ ಹಿಂದುಳಿದ ವರ್ಗಗಳ ಪ್ರವರ್ಗ “ಬಿ” ಗೆ ಸೇರಿದ ಯಾವುದೇ ವ್ಯಕ್ತಿಯಿಂದ ನಾಮಪತ್ರವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಪುರ್ಗ “ಎ” ಗೆ ಸೇರಿದ ವ್ಯಕ್ತಿಯಿಂದ ಠೇವಣಿಯ ಜೊತೆಗೆ ಸಲ್ಲಿಸಲಾದ ನಾಮಪತ್ರವನ್ನು ಹಿಂತಿರುಗಿಸತಕ್ಕದ್ದು. ಆದಾಗ್ಯೂ, ನಾಮಪತ್ರವನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಮುಂಚೆ ಹಿಂದುಳಿದ ವರ್ಗಗಳ ಪ್ರವರ್ಗ “ಬಿ” ಗೆ ಸೇರಿದ ವ್ಯಕ್ತಿಯಿಂದ ಯಾವುದೇ ನಾಮಪತ್ರವನ್ನು ಸ್ವೀಕರಿಸದೆ ಇದ್ದಾಗ ಮಾತ್ರ ಹಿಂದುಳಿದ ವರ್ಗಗಳ ಪ್ರವರ್ಗ “ಎ” ಗೆ ಸೇರಿದ ಅಭ್ಯರ್ಥಿಯಿಂದ ಸಲ್ಲಿಸಿದ ನಾಮಪತ್ರವನ್ನು ಪರಿಗಣಿಸಲು ಅವನು ಮುಂದುವರಿಯಬಹುದು.
ರಿಟರ್ನಿಂಗ್ ಅಧಿಕಾರಿಯು 12ನೇ ನಿಯಮದ ಮೇರೆಗೆ ನಾಮಪತ್ರಗಳನ್ನು ಸ್ವೀಕರಿಸಿದ ಮೇಲೆ, ಅವುಗಳನ್ನು ನೀಡಲಾದ ವ್ಯಕ್ತಿಗೆ ನಾಮಪತ್ರಗಳನ್ನು ಪರಿಶೀಲಿಸುವುದಕ್ಕೆ ನಿಗದಿಪಡಿಸಿದ ಒಂದೇ ದಿನಾಂಕ, ಸಮಯ ಮತ್ತು ಸ್ಥಳವನ್ನು ತಿಳಿಸತಕ್ಕದ್ದು ಮತ್ತು ನಾಮಪತ್ರದ ಮೇಲೆ ಅದರ ಕ್ರಮಸಂಖ್ಯೆಯನ್ನು ನಮೂದಿಸತಕ್ಕದ್ದು ಮತ್ತು ನಾಮಪತ್ರವನ್ನು ಆತನಿಗೆ ನೀಡಲಾದ ದಿನಾಂಕ ಮತ್ತು ಸಮಯವನ್ನು ಸೂಚಿಸಿದ ಪ್ರಮಾಣಪತ್ರದ ಮೇಲೆ ದಾಖಲು ಮಾಡಿ ತನ್ನ ರುಜು ಹಾಕತಕ್ಕದ್ದು ಮತ್ತು ತದನಂತರ, ಆದಷ್ಟು ಬೇಗನೆ, ನಾಮಪತ್ರದಲ್ಲಿ ಒಳಗೊಂಡಿರುವ ಅಭ್ಯರ್ಥಿ ಮತ್ತು ಅವನ ಸೂಚಕನ ವಿವರಗಳಂಂತಹವೇ ವಿವರಗಳನ್ನು ನಮೂನೆ 3 ರಲ್ಲಿ ನಾಮಪತ್ರದ ನೋಟೀಸನ್ನು ತನ್ನ ಕಛೇರಿಯಲ್ಲಿ ಎದ್ದು ಕಾಣುವ ಜಾಗದಲ್ಲಿ ಅಂಟಿಸುವಂತೆ ಮಾಡತಕ್ಕದ್ದು.
(1) 00ನೇ ನಿಯಮದ ಮೇರೆಗೆ ನಾಮಪತ್ರಗಳ ಪರಿಶೀಲನೆಗಾಗಿ ನಿಗದಿಪಡಿಸಲಾದ ದಿನಾಂಕದಂದು ಅಭ್ಯರ್ಥಿಗಳು, ಅವರ ಚುನಾವಣೆ ಏಜಿಂಟ್ಗಳು, ಪ್ರತಿಯೊಬ್ಬ ಅಭ್ಯರ್ಥಿಯ ಒಬ್ಬ ಸೂಚಕರು ಮತ್ತು ಪ್ರತಿಯೊಬ್ಬ ಅಭ್ಯರ್ಥಿಯಿಂದ ಲಿಖಿತದಲ್ಲಿ ಕ್ರಮಬದ್ಧವಾಗಿ ಅಧಿಕೃತಗೊಳಿಸಿದ ಒಬ್ಬ ಇತರೆ ವ್ಯಕ್ತಿ, ಆದರೆ ಇತರೆ ಯಾವನೇ ವ್ಯಕ್ತಿ ಅಲ್ಲ, ರಿಟರ್ನಿಂಗ್ ಅಧಿಕಾರಿಯು ಗೊತ್ತುಪಡಿಸಬಹುದಾದಂತಹ ಸಮಯ ಮತ್ತು ಸ್ಮಳದಲ್ಲಿ ಹಾಜರಿರಬಹುದು ಮತ್ತು ರಿಟರ್ನಿಂಗ್ ಅಧಿಕಾರಿಯು 12ನೇ ನಿಯಮದಲ್ಲಿ ಹೇಳಲಾದ ಸಮಯದೊಳಗೆ ಮತ್ತು ಆ ರೀತಿಯಲ್ಲಿ ನೀಡಲಾಗಿರುವ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲಿಸುವುದಕ್ಕೆ ಎಲ್ಲ ಯುಕ್ತ ಸೌಲಭ್ಯಗಳನ್ನು ಅವರಿಗೆ ನೀಡತಕ್ಕದ್ದು.
(2) ರಿಟರ್ನಿಂಗ್ ಅಧಿಕಾರಿಯು, ಆ ನಾಮಪತ್ರಗಳನ್ನು ಆಗ ಪರಿಶೀಲಿಸತಕ್ಕದ್ದು ಮತ್ತು ಯಾವುದೇ ನಾಮಪತ್ರಕ್ಕೆ ಮಾಡಬಹುದಾದ ಎಲ್ಲಾ ಆಕ್ಷೇಪಣೆಗಳನ್ನು ತೀರ್ಮಾನಿಸತಕ್ಕದ್ದು ಮತ್ತು ಅಂಥ ಆಕ್ಷೇಪಣೆಯ ಅಥವಾ ತನ್ನ ಸ್ವಪ್ರೇರಣೆಯಿಂದ ತನಗೆ ಅಗತ್ಯವೆಂದು ಭಾವಿಸಬಹುದಾದಂಥ ಸಂಕ್ಚಿಪ್ತ ವಿಚಾರಣೆಯ ತರುವಾಯ, ಕೆಳಕಂಡ ಯಾವುದೇ ಕಾರಣದ ಮೇಲೆ ಯಾವುದೇ ನಾಮಪತ್ರವನ್ನು ತಿರಸ್ಕರಿಸಬಹುದು, ಎಂದರೆ:-
(i) ನಾಮನಿರ್ದೇಶನಗಳ ಪರಿಶೀಲನೆಗಾಗಿ ನಿಗದಿಪಡಿಸಲಾದ ದಿನಾಂಕದಂದು ಅಭ್ಯರ್ಥಿಯು, ಈ ಅಧಿನಿಯಮದ ಉಪಬಂಧಗಳ ಮೇರೆಗೆ ಸ್ಮಾನವನ್ನು ಭರ್ತಿಮಾಡಲು ಆಯ್ಕೆಯಾಗುವುದಕ್ಕ ಅರ್ಹನಾಗಿಲ್ಲದಿದ್ದರೆ ಅಥವಾ ಅನರ್ಹನಾಗಿದ್ದರೆ;
(ii) ಅಧಿನಿಯಮ ಅಥವಾ ಈ ನಿಯಮಗಳ ಯಾವುದೇ ಉಪಬಂಧಗಳನ್ನು ಪಾಲಿಸಲು ವಿಫಲವಾಗಿದ್ದರೆ;
(iii) ನಾಮಪತ್ರದ ಮೇಲೆ ಅಭ್ಯರ್ಥಿಯ ಅಥವಾ ಸೂಚಕನ ಸಹಿಯ ನೈಜವಾದುದು ಆಗಿಲ್ಲದಿದ್ದರೆ.
(3) (2) ನೇ ಉಪ-ನಿಯಮದ (ii) ನೇ ಅಥವಾ (ii) ನೇ ಖಂಡದಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಅಭ್ಯರ್ಥಿಯು, ಯಾವ ನಾಮಪತ್ರದ ಸಂಬಂಧದಲ್ಲಿ ಅಕ್ರಮ ಮಾಡಿಲ್ಲವೋ ಆ ಸಂಬಂಧದಲ್ಲಿ ಮತ್ತೊಂದು ನಾಮಪತ್ರದ ಮೂಲಕ ಯುಕ್ತವಾಗಿ ನಾಮನಿರ್ದೇಶನಗೊಂಡಿದ್ದರೆ, ನಾಮಪತ್ರದ ಸಂಬಂಧಿಸಿದಂತೆ ಯಾವುದೇ ಅಕ್ರಮದ ಕಾರಣದ ಮೇಲೆ ಯಾವನೇ ಅಭ್ಯರ್ಥಿಯ ನಾಮಪತ್ರದ ನಿರಾಕರಣೆಯನ್ನು ಅಧಿಕೃತಗೊಳಿಸಲಾಗಿದೆಯೆಂದು ಭಾವಿಸತಕ್ಕದ್ದು.
(4) ರಿಟರ್ನಿಂಗ್ ಅಧಿಕಾರಿಯು ಗಂಭೀರ ಸ್ವರೂಪದ್ದಲ್ಲದಂಥ ಯಾವುದೇ ದೋಷದ ಕಾರಣದ ಮೇಲೆ ಯಾವುದೇ ನಾಮಪತ್ರವನ್ನು ತಿರಸ್ಕರಿಸತಕ್ಕದ್ದಲ್ಲ.
(5) ರಿಟರ್ನಿಂಗ್ ಅಧಿಕಾರಿಯು 10ನೇ ನಿಯಮದ ಮೇರೆಗೆ ಅ ಬಗ್ಗೆ ಗೊತ್ತುಪಡಿಸಿದ ದಿನಾಂಕದಂದು ಪರಿಶೀಲನೆ ನಡೆಸತಕ್ಕದ್ದು ಮತ್ತು ದೊಂಬಿ ಅಥವಾ ಬಹಿರಂಗ ಹಿಂಸೆ ಅಥವಾ ತನ್ನ ನಿಯಂತ್ರಣ ಮೀರಿದ ಕಾರಣಗಳಿಂದಾಗಿ ಅಂಥ ವ್ಯವಹರಣೆಗಳಿಗೆ ಅಡಚಣೆಯಾದ ಹೊರತು ವ್ಯವಹರಣೆಗಳ ಯಾವುದೇ ಮುಂದೂಡಿಕೆಗೆ ಅವಕಾಶ ನೀಡತಕ್ಕದ್ದಲ್ಲ;
ಪರಂತು, ರಿಟರ್ನಿಂಗ್ ಅಧಿಕಾರಿಯು ಆಕ್ಷೇಪಣೆಯನ್ನು ಎತ್ತಿದಾಗ ಅಥವಾ ಯಾವನೇ ಇತರ ವ್ಯಕ್ತಿಯು ಆಕ್ಷೇಪಣೆ ಮಾಡಿದಾಗ, ಸಂಬಂಧಪಟ್ಟ ಅಭ್ಯರ್ಥಿಯು, ಪರಿಶೀಲನೆಗಾಗಿ ನಿಗದಿಪಡಿಸಿದ ದಿನಾಂಕದಂದು ಮುಂಬರುವ ದಿನದ ಮರು ದಿನವನ್ನು ಮೀರದ ಅದನ್ನು ಖಂಡಿಸಲು ಅವಕಾಶ ನೀಡಬಹುದು ಮತ್ತು ವ್ಯವಹರಣೆಗಳನ್ನು ಮುಂದೂಡಿದ ದಿನಾಂಕದಂದು ರಿಟರ್ನಿಂಗ್ ಅಧಿಕಾರಿಯು ತನ್ನ ತೀರ್ಪನ್ನು ದಾಖಲು ಮಾಡತಕ್ಕದ್ದು.
(6) ರಿಟರ್ನಿಂಗ್ ಅಧಿಕಾರಿಯು, ಪ್ರತಿಯೊಂದು ನಾಮಪತ್ರದ ಮೇಲೆ ಅದನ್ನು ಅಂಗೀಕರಿಸಿದ ಅಥವಾ ತಿರಸ್ಕರಿಸಿದ ಬಗೆಗಿನ ತನ್ನ ತೀರ್ಮಾನವನ್ನು ಹಿಂಬರಹ ಮಾಡತಕ್ಕದ್ದು. ಮತ್ತು ನಾಮಪತ್ರವನ್ನು ತಿರಸ್ಕರಿಸಿದ್ದರೆ, ಅಂಥ ತಿರಸ್ಕರಿಸುವಿಕೆಗೆ ತನ್ನ ಕಾರಣಗಳನ್ನು ಬರಹದಲ್ಲಿ ಸಂಕ್ಷಿಪ್ತ ವಿವರಣೆಯನ್ನು ದಾಖಲು ಮಾಡತಕ್ಕದ್ದು.
(7) ಎಲ್ಲಾ ನಾಮಪತ್ರಗಳನ್ನು ಸ್ವೀಕರಿಸಿದ ತರುವಾಯ ಕೂಡಲೇ ಪರಿಶೀಲನೆ ಮಾಡತಕ್ಕದ್ದು ಮತ್ತು ಅದನ್ನು ಸ್ವೀಕರಿಸಿದ ಅಥವಾ ತಿರಸ್ಕರಿಸಿದ ಬಗೆಗಿನ ತೀರ್ಮಾನವನ್ನು ದಾಖಲು ಮಾಡಿದ ಕೂಡಲೆ, ರಿಟರ್ನಿಂಗ್ ಅಧಿಕಾರಿಯು ಸಿಂಧುವಾಗಿ ನಾಮನಿರ್ದೇಶನಗೊಂಡ ಅಭ್ಯರ್ಥಿಗಳು ಅಂದರೆ, ಯಾರ ನಾಮನಿರ್ದೇಶನಗಳು ಸಿಂಧುವೆಂದು ಕಂಡುಬಂದಿರುವುವೋ ಆ ಅಭ್ಯರ್ಥಿಗಳ ಪಟ್ಟೆಯನ್ನು 4ನೇ ನಮೂನೆಯಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ಅವನು ತನ್ನ ಕಛೇರಿಯ ನೋಟೀಸ್ ಬೋರ್ಡಿಗೆ ಅಂಟಿಸತಕ್ಕದ್ದು.
(8) ಈ ನಿಯಮದ ಉದ್ದೇಶಕ್ಕಾಗಿ, ತತ್ಕಾಲದಲ್ಲಿ ಜಾರಿಯಲ್ಲಿರುವ ಒಂದು ವಾರ್ಡಿನ ಮತದಾರರ ಪಟ್ಟೆಯಲ್ಲಿ ನಮೂದನೆಯಾದ ಒಂದು ಪ್ರಮಾಣಿತ ಪ್ರತಿಯು, ಆ ನಮೂದನೆಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಯು, ಆ ವಾರ್ಡಿನ ಮತದಾರನೆಂಬುದಕ್ಕೆ ನಿರ್ಣಾಯಕ ಸಾಕ್ಷಿ ಆಗಿರತಕ್ಕದ್ದು.