(1) ಚುನಾವಣೆಯಲ್ಲಿ ಯಾವುದೇ ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ ನಿಲ್ಲುವ ಅಭ್ಯರ್ಥಿಗೆ ಆ ಪಕ್ಷಕ್ಕಾಗಿ ಕಾಯ್ದಿರಿಸಿದ ಚಿಹ್ನೆಯನ್ನೇ ಹಂಚಿಕೊಡತಕ್ಕದ್ದು ಮತ್ತು ಇತರೆ ಚಿಹ್ನೆಯನ್ನು ಹಂಚಿಕೆ ಮಾಡತಕ್ಕದ್ದಲ್ಲ.
(2) ಕಾಯ್ದಿರಿಸಿದ ಚಿಹ್ನೆಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ ನಿಲ್ಲುವ ಅಭ್ಯರ್ಥಿಯನ್ನು ಹೊರತುಪಡಿಸಿ ಯಾವುದೇ ಇತರೆ ಅಭ್ಯರ್ಥಿಯು ಆಯ್ಕೆಮಾಡಿಕೊಳ್ಳತಕ್ಕದ್ದಲ್ಲ ಅಥವಾ ಹಂಚಿಕೆ ಮಾಡತಕ್ಕದ್ದಲ್ಲ.
(3) ಚುನಾವಣೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ ನಿಲ್ಲುವ ಅಭ್ಯರ್ಥಿಯನ್ನು ಹೊರತುಪಡಿಸಿ, ಯಾವುದೇ ಅಭ್ಯರ್ಥಿಗೆ ಇದರಲ್ಲಿ ಇನ್ನುಮುಂದೆ ಉಪಬಂಧಿಸಲಾದ ನಿಯಮಗಳಿಗನುಸಾರವಾಗಿ, ಮುಕ್ತ ಚಿಹ್ನೆಗಳೆಂದು ನಿರ್ದಿಷ್ಟಪಡಿಸಿದ ಚಿಹ್ನೆಗಳಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳತಕ್ಕದ್ದು ಮತ್ತು ಹಂಚಿಕೆ ಮಾಡತಕ್ಕದ್ದು.
ಪರಂತು, ಚುನಾವಣೆಯಲ್ಲಿ, ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ನಿಲ್ಲುವ ಅಭ್ಯರ್ಥಿಯ ಸಂದರ್ಭದಲ್ಲಿ, ಅಂಥ ಅಭ್ಯರ್ಥಿಯು ಆಯ್ಕೆಮಾಡಿಕೊಂಡ ಮುಕ್ತ ಚಿಹ್ನೆಯನ್ನು ಹಂಚಿಕೆ ಮಾಡತಕ್ಕದ್ದು ಮತ್ತು ಬೇರೆ ಯಾವುದನ್ನೂ ಅಲ್ಲ ಮತ್ತು ಎರಡು ಅಥವಾ ಹೆಚ್ಚು ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಂದ ನಿಲ್ಲುವ ಅಭ್ಯರ್ಥಿಗಳು ಒಂದೇ ಮುಕ್ತ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡಿದ್ದರೆ, ರಿಟರ್ನಿಂಗ್ ಅಧಿಕಾರಿಯು ಅಂಥ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಂದ ನಿಲ್ಲಿಸಿದ ಯಾವ ಅಭ್ಯರ್ಥಿಗಳಿಗೆ ಯಾವ ಮುಕ್ತ ಚಿಹ್ನೆಯನ್ನು ಹಂಚತಕ್ಕದ್ದು ಎಂಬುದುನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸತಕ್ಕದ್ದು ಮತ್ತು ಯಾರಿಗೆ ಚೀಟಿ ಬರುತ್ತದೆಯೋ ಆ ಅಭ್ಯರ್ಥಿಗೆ ಆ ಮುಕ್ತ ಚಿಹ್ನೆಯನ್ನು ಹಂಚಿಕೊಡತಕ್ಕದ್ದು ಮತ್ತು ಬೇರೆ ಯಾರಿಗೂ ಅಲ್ಲ, ಉಳಿಸಿರುವ ಮುಕ್ತ ಚಿಹ್ನೆಗಳನ್ನು ಇತರ ಅಭ್ಯರ್ಥಿಗಳಿಗೆ ಹಂಚಿಕೆ ಮಾಡತಕ್ಕದ್ದು.
ವಿವರಣೆ: ಈ ನಿಯಮ ಮತ್ತು 20ನೇ ನಿಯಮದ ಉದ್ದೇಶಕ್ಕಾಗಿ, “ಮಾನ್ಯತೆ ಪಡೆಯದ ರಾಜಕೀಯ ಪಕ್ಷ” ಎಂಬ ಅಭಿವ್ಯಕ್ತಿ ಎಂದರೆ, ಜನತಾ ಪ್ರಾತಿವಿಧ್ಯ ಅಧಿನಿಯಮ 1951 (1951 ರ ಕೇಂದ್ರ ಅಧಿನಿಯಮ ಸಂಖ್ಯೆ 43) ರ29 ಎ ಪ್ರಕರಣದ ಮೇರೆಗೆ ರಾಜಕೀಯ ಪಕ್ಷವೆಂದು ನೋಂದಾಯಿತವಾದ ರಾಜಕೀಯ ಪಕ್ಷ ಮತ್ತು ಬೆಂಗಳೂರಿನಲ್ಲಿ ತನ್ನ ನೋಂದಾಯಿತ ಕಛೇರಿ ಅಥವಾ ಶಾಖಾ ಕಛೇರಿಯನ್ನು ಹೊಂದಿರುವ ಮತ್ತು ಚುನಾವಣಾ ಚಿಹ್ನೆ (ಕಾಯ್ದಿರಿಸಿದ ಮತ್ತು ಹಂಚಿಕೆ) ಆದೇಶ, 1968 ರ ಅರ್ಥವ್ಯಾಪ್ತಿಯೊಳಗೆ ಕರ್ನಾಟಕದಲ್ಲಿ ಮಾನ್ಯತೆ ಪಡೆಯದಿರುವ ರಾಷ್ಟ್ರೀಯ ಪಕ್ಷ ಅಥವಾ ಮಾನ್ಯತೆ ಪಡೆದ ರಾಜ್ಯ ಪಕ್ಷ.
(4) ಚುನಾವಣೆಯಲ್ಲಿ ಕೇವಲ ಒಬ್ಬ ಅಭ್ಯರ್ಥಿಯಿಂದ ಆಯ್ಕೆಮಾಡಿಕೊಳ್ಳಲಾದ ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿಯು ಒಂದು ಮುಕ್ತ ಚಿಹ್ಮೆಯನ್ನು ಆಯ್ಕೆಮಾಡಿಕೂಂಡಿರುವುದನ್ನು ಹೊರತುಪಡಿಸಿ, ರಿಟರ್ನಿಂಗ್ ಅಧಿಕಾರಿಯು ಆ ಚಿಹ್ನೆಯನ್ನು ಆ ಅಭ್ಯರ್ಥಿಗೆ ಹಂಚಿಕ ಮಾಡತಕ್ಕದ್ದು ಮತ್ತು ಬೇರಾರಿಗೂ ಹಂಚಿಕೆ ಮಾಡತಕ್ಕದ್ದಲ್ಲ.
(5) ಯಾವುದೇ ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯಿಂದ ಒಂದನ್ನು ಆಯ್ಕೆಮಾಡಿಕೊಂಂಡಿರುವುದರ ಹೊರತಾಗಿ ಅದೇ ಮುಕ್ತ ಚಿಹ್ನೆಯನ್ನು ಒಬ್ಬನಿಗಿಂತ ಹೆಚ್ಚು ಅಭ್ಯರ್ಥಿಗಳು ಆಯ್ಕೆಮಾಡಿಕೊಂಡಿದ್ದಲ್ಲಿ, ಆಗ,-
() ರಿಟರ್ನಿಂಗ್ ಅಧಿಕಾರಿಯು, ಅಭ್ಯರ್ಥಿಗಳಲ್ಲಿ ಯಾರಿಗೆ ಆ ಮುಕ್ತ ಚಿಹ್ಮೆಯನ್ನು ನೀಡಬೇಕೆಂಬುದನ್ನು ಚೀಟಿ ಎತ್ತುವ ಮೂಲಕ ವಿರ್ಧರಿಸತಕ್ಕದ್ದು ಮತ್ತು ಆ ಚೀಟಿ ಯಾವ ಅಭ್ಯರ್ಥಿಯ ಪರವಾಗಿರುತ್ತದೆಯೋ ಆ ಅಭ್ಯರ್ಥಿಗೆ ಹಂಚಿಕ ಮಾಡತಕ್ಕದ್ದು ಇತರೇ ಬೇರಾರಿಗೂ ಅಲ್ಲ; ಮತ್ತು
(ii) ನಿರ್ದಿಷ್ಟಪಡಿಸಿದ ಮುಕ್ತ ಚಿಹ್ನೆಗಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿದ್ದಲ್ಲಿ, ರಿಟರ್ನಿಂಗ್ ಅಧಿಕಾರಿಯು, ಉಳಿದ ಅಭ್ಯರ್ಥಿಗಳಿಗೆ ತನ್ನ ವಿವೇಚನಾನುಸಾರ ಯಾವುದೇ ಇತರೆ ಚಿಹ್ನೆಯನ್ನು ಹಂಚಿಕೆ ಮಾಡತಕ್ಕದ್ದು.
ವಿವರಣೆ ಅಭ್ಯರ್ಥಿಯ ಈ ನಿಯಮಗಳ ಉದ್ದೇಶಕ್ಕಾಗಿ ಒಂದು ರಾಜಕೀಯ ಪಕ್ಷದಿಂದ ಸ್ಪರ್ಧಿಸುತ್ತಿರುವುದಾಗಿ ಭಾವಿಸತಕ್ಕದ್ದು, ಒಂದುವೇಳೆ,-
(ಎ) ಅಭ್ಯರ್ಥಿಯು ಆ ಬಗ್ಗೆ ತನ್ನ ನಾಮಪತ್ರದಲ್ಲಿ ಘೋಷಣೆ ಮಾಡಿದ್ದರೆ ಮತ್ತು ಮಾಡಿದ್ದಾಗ ಮಾತ್ರ:
(ಬಿ) ಆ ಬಗ್ಗೆ ಲಿಖಿತದಲ್ಲಿ ನೋಟೀಸನ್ನು ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕದಂದು ಅಪರಾಹ್ನ 3:00 ಗಂಟೆಗೂ ಮುಂಚೆ ರಿಟರ್ನಿಂಗ್ ಅಧಿಕಾರಿಗೆ ನೀಡಿದ್ದರೆ ಮತ್ತು ನೀಡಿದ್ದಾಗ ಮಾತ್ರ: ಮತ್ತು
(ಸಿ) ಸದರಿ ನೋಟೀಸಿಗೆ ಪಕ್ಷದ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಪಕ್ಷದ ಇತರೆ ಯಾವನೇ ಪದಾಧಿಕಾರಿಯು ರುಜು ಮಾಡಿದ್ದರೆ ಮತ್ತು ಅಧ್ಯಕ್ಷ, ಕಾರ್ಯದರ್ಶಿ ಅಥವಾ ಅಂಥ ಇತರೆ ಪದಾಧಿಕಾರಿಯ ಅಂಥ ನೋಟೀಸನ್ನು ಕಳುಹಿಸುವುದಕ್ಕೆ ಪಕ್ಷದಿಂದ ಅಧಿಕೃತಗೊಳಿಸಿದ್ದರೆ, ಅಧ್ಯಕ್ಷ, ಕಾರ್ಯದರ್ಶಿ ಅಥವಾ ಇತರೆ ಪದಾಧಿಕಾರಿಯ ಹೆಸರು ಮತ್ತು ಮಾದರಿ ರುಜುವನ್ನು ಮುಂಚಿತವಾಗಿಯೇ ಆ ವಾರ್ಡಿನ ರಿಟರ್ನಿಂಗ್ ಅಧಿಕಾರಿಗೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿದ್ದರೆ ಮತ್ತು ಹಾಗೆ ಮಾಡಿದ್ದಾಗ ಮಾತ್ರ, ರಾಷ್ಟ್ರೀಯ ಪಕ್ಷದ ಸಂದರ್ಭದಲ್ಲಿ, ರಾಜ್ಯ ಮಟ್ಟದಲ್ಲಿನ ಪಕ್ಷಗಳ ಘಟಕದ ಅಧ್ಯಕ್ಷ ಅಥವಾ ಘಟಕದ ಅದರಿಂದ ಅಧಿಕೃತಗೊಂಡಿರತಕ್ಕಂತಹ ಯಾವುದೇ ಇತರೆ ಪದಾಧಿಕಾರಿಯಿಂದ ಮಾಡಬಹುದಾದಂತೆ ಅಧಿಕೃತಗೊಳಿಸಿದ್ದರೆ ಮಾತ್ರ ನಿಲ್ಲಿಸಿದೆ ಎಂದು ಭಾವಿಸತಕ್ಕದ್ದು.
(6) ಒಂದು ರಾಜಕೀಯ ಪಕ್ಷವು ಕರ್ನಾಟಕದಲ್ಲಿ ಅಥವಾ ಯಾವುದೇ ಇತರೆ ರಾಜ್ಯದಲ್ಲಿ ನೋಂದಾಯಿತ ಮತ್ತು ಮಾನ್ಯತೆ ಪಡೆದ ಪಕ್ಷವಾಗಿದ್ದರೆ, ಅಂತಹ ಪಕ್ಷವು ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೆ, ಆ ಪಕ್ಷದ ಅಭ್ಯರ್ಥಿಗಳಿಗೆ ಇತರೆ ರಾಜ್ಯದಲ್ಲಿ ನೀಡಿರುವ ಚಿಹ್ನೆಗಳನ್ನೇ ಅಂತಹ ಚಿಹ್ನೆಗಳು ಮುಕ್ತ ಚಿಹ್ನೆಗಳ ಪಟ್ಟೆಯಲ್ಲಿ ಇಲ್ಲದಿದ್ದರೂ ಸಹ, ಈ ಕೆಳಗಿನ ಷರತ್ತುಗಳನ್ನು ಪೂರೈಸಿದಲ್ಲಿ ಸ್ವತ: ಹಂಚಿಕೆ ಮಾಡಬಹುದು, ಎಂದರೆ:-
(i) ಅಂತಹ ಪಕ್ಷದ ಅಧ್ಯಕ್ಷನು ರಾಜ್ಯ ಚುನಾವಣಾ ಆಯೋಗವು, ಚುನಾವಣಾ ವೇಳಾಪಟ್ಟೆಯನ್ನು ಪ್ರಕಟಿಸಿದ ಮೂರು ದಿನಗಳೊಳಗೆ ತಮ್ಮ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇಂತಹುದೇ ನಿರ್ದಿಷ್ಟ ಚಿಹ್ನೆಯನ್ನು ಹಂಚಿಕೆ ಮಾಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಲಿಖಿತದಲ್ಲಿ ಮನವಿಯನ್ನು ಸಲ್ಲಿಸತಕ್ಕದ್ದು.
(ii) ಇತರೆ ರಾಜ್ಯಗಳಲ್ಲಿ ಮಾನ್ಯತೆ ಪಡೆದ ಒಂದಕ್ಕಿಂತ ಹೆಚ್ಚು, ಪಕ್ಷಗಳು ತಮ್ಮ ಪಕ್ಷಕ್ಕೆ ಕಾಯ್ದಿರಿಸಿದ ಚಿಹ್ನೆಯಾಗಿ ಒಂದೇ ಚಿಹ್ನೆಯನ್ನು ಆಯ್ಕೆಮಾಡಿಕೊಂಡಿದ್ದರೆ ಮತ್ತು ಅಂತಹ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ಅದೇ ಚಿಹ್ನೆಯನ್ನು ನೀಡಲು ಮನವಿಯನ್ನು ಸಲ್ಲಿಸಿದ್ದರೆ, ರಾಜ್ಯ ಚುನಾವಣಾ ಆಯೋಗವು ಚೀಟಿ ಎತ್ತುವ ಮುಖಾಂತರ ಅಂತಹ ಪಕ್ಷದ ಅಭ್ಯರ್ಥಿಗೆ ಚಿಹ್ನೆಯನ್ನು ಹಂಚಿಕೆ ಮಾಡತಕ್ಕದ್ದು, ಇತರೆ ಪಕ್ಷದ ಅಭ್ಯರ್ಥಿಗಳು ಮುಕ್ತ ಚಿಹ್ನೆಗಳಲ್ಲಿ ಉಳಿದ ಯಾವುದಾದರೂ ಒಂದನ್ನು ಆಯ್ಕೆಮಾಡಿಕೊಳ್ಳತಕ್ಕದ್ದು.
(iii) ಯಾವ ಪಕ್ಷವು ತನ್ನನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದೆ ಎಂಬುದನ್ನು ನಾಮಪತ್ರದಲ್ಲಿ ಅಭ್ಯರ್ಥಿಯು ಘೋಷಣೆ ಮಾಡತಕ್ಕದ್ದು. ಅಂದರೆ, ವ್ಯತಿರಿಕ್ತವಾಗುವಂತಹ ಅಂಶಗಳು ನಾಮಪತ್ರ ಅಥವಾ ನಮೂನೆ ಸಿ ಅಥವಾ “ಡಿ” ಯಲ್ಲಿ ಕಂಡುಬಂದ ಸಂದರ್ಭದಲ್ಲಿ, ಅಂತಹ ಅಭ್ಯರ್ಥಿಗೆ ಕಾಯ್ದಿರಿಸಿದ ಚಿಹ್ನೆಯನ್ನು ಹಂಚಿಕೆ ಮಾಡತಕ್ಕದ್ದಲ್ಲ ಮತ್ತು ಅಂಥಹ ಅಭ್ಯರ್ಥಿಗೆ ಮುಕ್ತ ಚಿಹ್ನೆಗಳ ಪಟ್ಟೆಯಿಂದ ಚುನಾವಣಾ ಆಯುಕ್ತರ ಮೂಲಕ ಚಿಹ್ನೆಯನ್ನು ಹಂಚಿಕೆಮಾಡತಕ್ಕದ್ದು.
(iv) ಅರ್ಜಿಯನ್ನು ತಿರಸ್ಕರಿಸಲು ಯಾವುದೇ ಸಮಂಜಸವಾದ ಕಾರಣಗಳು ಇಲ್ಲವೆಂದು ರಾಜ್ಯ ಚುನಾವಣಾ ಆಯೋಗ ಮನವರಿಕೆ ಮಾಡಿಕೊಳ್ಳತಕ್ಕದ್ದು. ಆದರೆ ಮುಂದೆ ನಡೆಯುವ ಯಾವುದೇ ಇತರೆ ಚುನಾವಣೆಗೆ ಅದೇ ಚಿಹ್ನೆಯನ್ನು ಹಂಚಿಕೆ ಮಾಡುವಂತೆ ಕ್ಲೇಮು ಮಾಡುವಂತಿಲ್ಲ