(1) ಅಭ್ಯರ್ಥಿ ಅಥವಾ ಅವನ ಚುನಾವಣಾ ಏಜೆಂಟನು ಪ್ರತಿಯೊಂದು ಬಾಬ್ತಿನ ದಿನನಿತ್ಯದ ವೆಚ್ಚವು ಸಾಮಾನ್ಯವಾಗಿ ಈ ಕೆಳಗಿನ ವಿವರಗಳನ್ನು ಒಳಗೊಂಡಂತೆ 43ನೇ ಪ್ರಕರಣದ ಮೇರೆಗೆ ನಮೂನೆ-11-ಎ ರಲ್ಲಿ ಚುನಾವಣಾ ವೆಚ್ಚಗಳ ಲೆಕ್ಕವನ್ನು ನಿರ್ವಹಿಸತಕ್ಕದ್ದು, ಎಂದರೆ:-
(i) ವೆಚ್ಚವನ್ನು ಖರ್ಚುಮಾಡಿದ ಮತ್ತು ಅಧಿಕೃತಗೊಳಿಸಿದ ದಿನಾಂಕ;
(ii) ವೆಚ್ಚದ ಸ್ವರೂಪ (ಉದಾಹರಣೆಗಾಗಿ, ಪ್ರಯಾಣ, ಅಂಚೆ ಚೀಟಿ ಅಥವಾ ಮುದ್ರಣ ಮತ್ತು ಅದೇ ಬಗೆಯ)
(iii) ಈ ಕೆಳಗಿನ ವೆಚ್ಚವನ್ನು ವಿಂಗಡಿಸಲಾದ ಮೊತ್ತ, ಎಂದರೆ.-
(ಎ) ಸಂದಾಯ ಮಾಡಿದ ಮೊತ್ತ;
(ಬಿ) ಬಾಕಿ ಇರುವ ಮೊಬಲಗು; ಮತ್ತು
(ಸಿ) ಸಂದಾಯ ಮಾಡಿದ ದಿನಾಂಕ;
(iv) ಹಣ ಪಡೆದವನ ಹೆಸರು ಮತ್ತು ವಿಳಾಸ;
(v) ಮೊತ್ತವನ್ನು ಸಂದಾಯ ಮಾಡಿದ ಸಂದರ್ಭದಲ್ಲಿ ವೋಚರುಗಳ ಕ್ರಮಸಂಖ್ಯೆ;
(vi) ಬಾಕಿ ಇರುವ ಮೊತ್ತದ ಸಂದರ್ಭದಲ್ಲಿ, ಯಾವುದಾದರೂ ಇದ್ದರೆ, ಬಿಲ್ಲುಗಳ ಕ್ರಮಸಂಖ್ಯೆ; ಮತ್ತು
(vii) ಬಾಕಿ ಇರುವ ಮೊತ್ತವನ್ನು ಪಾವತಿಸಬೇಕಾಗಿರುವ ವ್ಯಕ್ತಿಯ ಹೆಸರು ಮತ್ತು ವಿಳಾಸ.
(2) ವೋಚರುಗಳನ್ನು ಪಡೆಯಲು ಸಾಧ್ಯವಾಗದಂಥಹ ಅಂಚೆ ಚೀಟಿಗಳ ವೆಚ್ಚ, ರೈಲಿನಲ್ಲಿ ಮಾಡಿರುವ ಪ್ರಯಾಣ ಸ್ವರೂಪದಂತಹ ಸಂದರ್ಭವನ್ನು ಹೊರತುಪಡಿಸಿ ಪ್ರತಿಯೊಂದು ವೆಚ್ಚದ ಬಾಬ್ತುಗಾಗಿ ವೋಚರನ್ನು ಪಡೆಯತಕ್ಕದ್ದು.
(3) ಅಭ್ಯರ್ಥಿ ಅಥವಾ ಆತನ ಚುನಾವಣಾ ಏಜೆಂಟನು ಚುನಾವಣಾ ವೆಚ್ಚಗಳ ಲೆಕ್ಕದ ಜೊತೆಗೆ ಎಲ್ಲಾ ವೋಚರುಗಳನ್ನು ದಾಖಲಿಸಿ ಸಂದಾಯ ಮಾಡಿದ ದಿನಾಂಕಕ್ಕೆ ಅನುಸಾರವಾಗಿ ಮತ್ತು ಕ್ರಮಸಂಖ್ಯೆ ನೀಡಿ ವ್ಯವಸ್ಥೆ ಮಾಡತಕ್ಕದ್ದು. ಮತ್ತು (1) ನೇ ಉಪ-ನಿಯಮದ (ಇ) ಬಾಬ್ತುವಿನ ಮೇರೆಗೆ ಅಂಥ ಕ್ರಮಸಂಖ್ಯೆಗಳನ್ನು ಲೆಕ್ಕದಲ್ಲಿ ನಮೂದಿಸತಕ್ಕದ್ದು.
(4) (2) ನೇ ಉಪ-ನಿಯಮದ ಅಡಿಯಲ್ಲಿ ವೆಚ್ಚದ ಬಾಬ್ತುಗಳ ವೋಚರುಗಳನ್ನು ಪಡೆದಿರುವುದಿಲ್ಲವೋ ಅಂಥ ಸಂಬಂಧದಲ್ಲಿ (1) ನೇ ಉಪ-ನಿಯಮದ (iii) ನೇ ಖಂಡದ (ಇ) ಬಾಬ್ತುವಿನಲ್ಲಿ ನಮೂದಿಸಿದ ವಿವರಗಳನ್ನು ನೀಡುವ ಅಗತ್ಯವಿರತಕ್ಕದ್ದಲ್ಲ.
(5) ಪ್ರತಿಯೊಬ್ಬ ಅಭ್ಯರ್ಥಿಯು ರಿಟರ್ನಿಂಗ್ ಅಧಿಕಾರಿ ಮುಂದೆ ತನ್ನ ವೆಚ್ಚದ ವಿವರವನ್ನು ದಾಖಲಿಸುವಾಗ ನಮೂನೆ 11-ಬಿ ರಲ್ಲಿ ಘೋಷಣೆಯನ್ನು ಮಾಡತಕ್ಕದ್ದು ಮತ್ತು ರಿಟರ್ನಿಂಗ್ ಅಧಿಕಾರಿಯು ನಮೂನೆ 11-ಸಿ ರಲ್ಲಿ ಅದನ್ನು ಸ್ವೀಕರಿಸತಕ್ಕದ್ದು.