ಕೌನ್ಸಿಲರುಗಳ ಚುನಾವಣೆಗಾಗಿ ಉಪಬಂಧಗಳು, ಕೌನ್ಸಿಲರುಗಳ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.
(1) ಚುನಾವಣೆಯಲ್ಲಿ ಬಳಸಲಾದ ಎಲ್ಲಾ ಮತಪೆಟ್ಟಿಗೆಗಳನ್ನು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ಅಭಿರಕ್ಷೆಯಲ್ಲಿ ಇಡತಕ್ಕದ್ದು.
(2) ರಿಟರ್ನಿಂಗ್ ಅಧಿಕಾರಿಯು ಈ ಕೆಳಗಿನವುಗಳನ್ನು ಸುರಕ್ಷಿತ ಅಭಿರಕ್ಷೆಯಲ್ಲಿ ಇಡತಕ್ಕದ್ದು, ಎಂದರೆ:-
(i) ಅವುಗಳಿಗೆ ಲಗತ್ತಿಸಿದ ಪಕ್ಕಾ ಪ್ರತಿಗಳೊಂದಿಗೆ ಬಳಸಿಲ್ಲದ ಮತಪತ್ರಗಳ ಪ್ಯಾಕೆಟ್ಗಳು;
(ii) ಸಿಂಧುವಾದ, ಟೆಂಡರ್ಡ್ ಅಥವಾ ತಿರಸ್ಕರಿಸಿದ ಬಳಸಿಲ್ಲದ ಮತಪತ್ರಗಳ ಪ್ಯಾಕೆಟ್ಗಳು;
(iii) ಬಳಸಿದ ಮತಪತ್ರಗಳ ಪಕ್ಕಾ ಪ್ರತಿಗಳ ಪ್ಯಾಕೆಟ್ಗಳು;
(iv) ಮತದಾರರ ಪಟ್ಟಿಯ ಗುರುತು ಮಾಡಿದ ಪ್ರತಿಯ ಪ್ಯಾಕೆಟ್ಗಳು;
(v) ಮತದಾರರ ಘೋಷಣೆಗಳು ಮತ್ತು ಅವರ ಸಹಿಗಳ ಅನುಪ್ರಮಾಣೀಕರಿಸಿದ ಪ್ಯಾಕೆಟ್ಗಳು; ಮತ್ತು
(vi) ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರ ಕಾಗದ ಪತ್ರಗಳು.
(1) ರಿಟರ್ನಿಂಗ್ ಅಧಿಕಾರಿಯು ಅಭಿರಕ್ಷೆಯಿರುವಲ್ಲಿ,-
(ಎ) ಅವುಗಳಿಗೆ ಲಗತ್ತಿಸಿದ ಪಕ್ಕಾ ಪ್ರತಿಗಳೊಂದಿಗೆ ಬಳಸಿಲ್ಲದ ಮತಪತ್ರಗಳ ಪ್ಯಾಕೆಟ್ಗಳು;
(ಬಿ) ಸಿಂಧುವಾದ, ಟೆಂಡರ್ಡ್ ಅಥವಾ ತಿರಸ್ಕರಿಸಿದ, ಬಳಸಿದ ಮತಪತ್ರಗಳ ಪ್ಯಾಕೆಟ್ಗಳು;
(ಸಿ) ಬಳಸಿದ ಮತಪತ್ರಗಳ ಪಕ್ಕಾ ಪ್ರತಿಗಳ ಪ್ಯಾಕೆಟ್ಗಳು;
(@) ಮತದಾರರ ಪಟ್ಟೆಯ ಗುರುತು ಮಾಡಿದ ಪ್ರತಿಯ ಪ್ಯಾಕಟ್ಗಳು; ಮತ್ತು
(ಇ) ಮತದಾರರ ಘೋಷಣೆಗಳ ಮತ್ತು ಅವರ ಸಹಿಗಳನ್ನು ಅನುಪ್ರಮಾಣೀಕರಿಸಿದ ಪ್ಯಾಕೆಟ್ಗಳನ್ನು - ಸಕ್ಷಮ ಸ್ಯಾಯಾಲಯ ಅಥವಾ ನ್ಯಾಯಾಧಿಕರಣದ ಆದೇಶಗಳ ಮೇರೆಗೆ ಹೊರತುಪಡಿಸಿ ಯಾರೇ ವ್ಯಕ್ತಿ ಅಥವಾ ಪ್ರಾಧಿಕಾರವು ಅವುಗಳನ್ನು ತೆರೆಯತಕ್ಕದ್ದಲ್ಲ ಮತ್ತು ಅದರ ಒಳಾಂಶಗಳನ್ನು ಪರಿಶೀಲಿಸಿತಕ್ಕದ್ದಲ್ಲ ಅಥವಾ ಅದರ ಮುಂದೆ ಹಾಜರುಪಡಿಸತಕ್ಕದ್ದಲ್ಲ.
(2) ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ಷರತ್ತುಗಳಿಗೆ ಮತ್ತು ಅಂತಹ ಶುಲ್ಕದ ಸಂದಾಯಕ್ಕೂಳಪಟ್ಟು,-
(ಎ) ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರೆ ಕಾಗದಪತ್ರಗಳನ್ನು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರತಕ್ಕದ್ದು; ಮತ್ತು
(ಬಿ) ಅವುಗಳ ಪ್ರತಿಗಳನ್ನು ಅರ್ಜಿಯ ಆಧಾರದ ಮೇಲೆ ಒದಗಿಸತಕ್ಕದ್ದು.
(3) 78ನೇ ನಿಯಮದ ಮೇರೆಗೆ ರಿಟರ್ವಿಂಗ್ ಅಧಿಕಾರಿಯು ಕಳುಹಿಸಿದ ವಿವರಪಟ್ಟೆಕೆಗಳ ಪ್ರತಿಗಳನ್ನು, ಪ್ರತಿಯೊಂದು ಅಂತಹ ಪ್ರತಿಗಾಗಿ ಎರಡು ರೂಪಾಯಿಗಳ ಶುಲ್ಕದ ಸಂದಾಯದ ಮೇಲೆ ರಿಟರ್ನಿಂಗ್ ಅಧಿಕಾರಿಯು ಒದಗಿಸತಕ್ಕದ್ದು. 12. ಚುನಾವಣಾ ಕಾಗದಪತ್ರಗಳ ವಿಲೆ.- ರಾಜ್ಯ ಚುನಾವಣಾ ಆಯೋಗ ಅಥವಾ ಸಕ್ಷಮ ನ್ಯಾಯಾಲಯ ಅಥವಾ ನ್ಯಾಯಾಧಿಕರಣವು ತದ್ವಿರುದ್ಧವಾಗಿ... ನೀಡಿದ ಯಾವುದೇ ನಿರ್ದೇಶನಗಳಿಗೊಳಪಟ್ಟು,- (ಎ) ಬಳಸಿಲ್ಲದ ಮತಪತ್ರಗಳ ಪ್ಯಾಕಟ್ಗಳನ್ನು ಆರು ತಿಂಗಳ ಅವಧಿಯವರೆಗೆ ಇಟ್ಟುಕೂಂ೦ಡಿರತಕ್ಕದ್ದು... ಮತ್ತು. ಆ. ನಂತರ ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ರೀತಿಯಲ್ಲಿ ನಾಶಗೊಳಿಸತಕ್ಕದ್ದು; ಮತ್ತು
(ಬಿ) 110 ನೇ ವಿಯಮದ (1) ನೇ ಉಪ-ನಿಯಮದಲ್ಲಿ ಉಲ್ಲೇಖಿಸಿದ ಇತರ ಪ್ಯಾಕೆಟ್ಗಳನ್ನು, ಒಂದು ವರ್ಷದಲ್ಲಿ ಅವಧಿಯವರೆಗೆ ಇಟ್ಟುಕೊಂಡಿರತಕ್ಕದ್ದು ಮತ್ತು ಅವುಗಳನ್ನು ಆನಂತರ ನಾಶಪಡಿಸತಕ್ಕದ್ದು:
ಪರಂತು, ಬಳಸಿದ ಮತಪತ್ರಗಳ ಪಕ್ಕಾಪ್ರತಿಗಳನ್ನು ಒಳಗೊಂಡಿರುವ ಪ್ಯಾಕಟ್ಗಳನ್ನು ರಾಜ್ಯ ಚುನಾವಣಾ ಆಯೋಗದ ಪೂರ್ವನುಮೋದನೆಯೊಂದಿಗೆ ಹೊರತುಪಡಿಸಿ ನಾಶಪಡಿಸತಕ್ಕದ್ದಲ್ಲ.
(A) ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಇತರ ಕಾಗದಪತ್ರಗಳನ್ನು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂತಹ ಅವಧಿಯವರೆಗೆ ಇಟ್ಟುಕೊಂಡಿರತಕ್ಕದ್ದು.
(1) 2 ನೇ ನಿಯಮದ ಮೇರೆಗೆ ಮಾಡಿದ ಠೇವಣಿಯನ್ನು, ಅದನ್ನು ಮಾಡಿರುವ ವ್ಯಕ್ತಿಗೆ ಅಥವಾ ಆತನ ಕಾನೂನು ಸಮ್ಮತ ಪ್ರತಿನಿಧಿಗೆ ಹಿಂದಿರುಗಿಸತಕ್ಕದ್ದು ಅಥವಾ ನಿಗಮಕ್ಕೆ ಮುಟ್ಟುಗೋಲು ಮಾಡತಕ್ಕದ್ದು.
() ಈ ನಿಯಮದಲ್ಲಿ ನಮೂದಿಸಿದ ಸಂದರ್ಭಗಳಲ್ಲಿ ಹೊರತುಪಡಿಸಿ, ಠೇವಣಿಯನ್ನು ಚುನಾವಣೆಯ ಫಲಿತಾಂಶವನ್ನು ಫೋಷಿಸಿದ ನಂತರ ಕಾರ್ಯ ಸಾಧ್ಯವಾದಷ್ಟು ಬೇಗನೆ ಹಿಂದಿರುಗಿಸತಕ್ಕದ್ದು.
(3) ಒಂದು ವೇಳೆ ಅಭ್ಯರ್ಥಿಯನ್ನು ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತೋರಿಸಿರದಿದ್ದರೆ ಅಥವಾ ಆತನು ಮತದಾನದ ಪ್ರಾರಂಭಕ್ಕೂ ಮುಂಚೆ ಮೃತಪಟ್ಟರೆ, ಸಂದರ್ಭಾನುಸಾರ, ಪಟ್ಟೆಯ ಪ್ರಕಟಣೆಯ ನಂತರ ಅಥವಾ ಮರಣದ ನಂತರ ಕಾರ್ಯಸಾಧ್ಯವಾದಷ್ಟು ಬೇಗನೆ ಠೇವಣಿಯನ್ನು ಹಿಂದಿರುಗಿಸತಕ್ಕದ್ದು.
(4) ಉಪ-ನಿಯಮ (3) ರ ಉಪಬಂಧಗಳಿಗೊಳಪಟ್ಟು, ಮತದಾನವು ನಡೆದಂಥ ಚುನಾವಣೆಯಲ್ಲಿ ಅಭ್ಯರ್ಥಿಯು ಚುನಾಯಿತನಾಗದಿದ್ದರೆ ಮತ್ತು ಆತನು ಪಡೆದ ಸಿಂಧುವಾದ ಮತಗಳು ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯಿಂದ ಭಾಗಿಸಿದಾಗ ಎಲ್ಲಾ ಅಭ್ಯರ್ಥಿಗಳು ಪಡೆದ ಸಿಂಧುವಾದ ಮತಗಳ ಆರನೇ ಒಂದರಷ್ಟು ಭಾಗವನ್ನು ಮೀರದಿದ್ದರೆ, ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.
ಪರಂತು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳ ಅಥವಾ ಮಹಿಳೆಯರು ಸಂದರ್ಭದಲ್ಲಿ ಅವರು ಪಡೆದ ಸಿಂಧುವಾದ ಮತಗಳ ಸಂಖ್ಯೆಯು, ಚಲಾವಣೆಯಾದ ಸಿಂಧುವಾದ ಮತಗಳ ಒಟ್ಟು ಸಂಖ್ಯೆಯ ಹದಿನಾರನೇ ಒಂದು ಭಾಗಕ್ಕಿಂತ ಕಡಿಮೆಯಿದ್ದ ಹೊರತು ಠೇವಣಿಯನ್ನು ಮುಟ್ಟುಗೋಲು ಹಾಕಿಕೂಳ್ಳತಕ್ಕದ್ದಲ್ಲ.
(5) (2) (3) ಮತ್ತು (4) ನೇ ಉಪನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿನ ವಾರ್ಡುಗಳಲ್ಲಿ ಸ್ಪರ್ಧಿಸಿದ್ದರೆ, ಠೇವಣಿಗಳಲ್ಲಿ ಒಂದಕ್ಕಿಂತ ಹೆಚ್ಚಿನ ಠೇವಣಿಯನ್ನು ಹಿಂದಿರುಗಿಸತಕ್ಕದ್ದಲ್ಲ ಮತ್ತು ಉಳಿದವುಗಳನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.