(1) ಯಾವುದೇ ವಿಭಾಗ, ಜಿಲ್ಲೆ, ಉಪವಿಭಾಗ, ತಾಲ್ಲೂಕು, ವಲಯ ಅಥವಾ ಗ್ರಾಮವನ್ನು ರದ್ದುಗೊಳಿಸಬೇಕೆಂದು ಅಥವಾ ಅವುಗಳಲ್ಲಿ ಯಾವುದಾದರ ಪರಿಮಿತಿಗಳನ್ನಾದರೂ ಬದಲಾಯಿಸಬೇಕೆಂದು ರಾಜ್ಯ ಸರ್ಕಾರವು ಉದ್ದೇಶಿಸಿದಾಗ, ಆಕ್ಷೇಪಣೆಗಳೇನಾದರೂ ಇದ್ದರೆ ತಿಳಿಸಬೇಕೆಂದು ಕೇಳುವ ಪ್ರಸ್ತಾಪದ ನೋಟೀಸನ್ನು ಅಫೀಷಿಯಲ್ ಗೆಜೆಟ್ಟಿನಲ್ಲಿ ಪ್ರಕಟಿಸುವುದರ ಜೊತೆಗೆ ಈ ಕೆಳಗೆ ಸೂಚಿಸಿರುವ ಸ್ಥಳ ಅಥವಾ ಸ್ಥಳಗಳಲ್ಲೂ ಸಹ ಪ್ರಕಟಿಸುವಂತೆ ಮಾಡತಕ್ಕದ್ದು:-
(i) ಒಂದು ವಿಭಾಗದ, ಪರಿಮಿತಿಗಳ ರದ್ದಿಯಾತಿಯ ಅಥವಾ ಬದಲಾವಣೆಯ ಸಂದರ್ಭದಲ್ಲಿ,-
(ಎ) ಸಂಬಂಧಪಟ್ಟ ವಿಭಾಗಾಧಿಕಾರಿಯ ಕಛೇರಿಗಳಲ್ಲಿ;
(ಬಿ) ಸಂಬಂಧಪಟ್ಟ ವಿಭಾಗಗಳ ಎಲ್ಲ ಜಿಲ್ಲೆಗಳ ಡೆಪ್ಯುಟಿ ಕಮೀಷನರುಗಳ ಕಛೇರಿಗಳಲ್ಲಿ;
(ಸಿ) ಸಂಬಂಧಪಟ್ಟ ವಿಭಾಗಗಳ ಎಲ್ಲ ಉಪವಿಭಾಗಗಳ ಪ್ರಭಾರದಲ್ಲಿರುವ ಅಸಿಸ್ಟೆಂಟ್ ಕಮೀಷನರ್ ಕಛೇರಿಗಳಲ್ಲಿ;
(ಡಿ) ಸಂಬಂಧಪಟ್ಟ ವಿಭಾಗಗಳ ಎಲ್ಲ ತಾಲ್ಲೂಕುಗಳ ತಹಸೀಲ್ದಾರರುಗಳ ಕಛೇರಿಗಳಲ್ಲಿ;
(ii) ಒಂದು ಜಿಲ್ಲೆಯ ಪರಿಮಿತಿಗಳ ರದ್ದಿಯಾತಿಯ ಅಥವಾ ಬದಲಾವಣೆಯ ಸಂದರ್ಭದಲ್ಲಿ,-
(ಎ) ಸಂಬಂಧಪಟ್ಟ ಜಿಲ್ಲೆಗಳ ಡೆಪ್ಯುಟಿ ಕಮಿಷನರ ಕಛೇರಿಗಳಲ್ಲಿಲ
(ಬಿ) ಸಂಬಂಧಪಟ್ಟ ಜಿಲ್ಲೆಗಳ ಎಲ್ಲ ಉಪವಿಭಾಗಗಳ ಪ್ರಭಾರದಲ್ಲಿರುವ ಅಸಿಸ್ಟೆಂಟ್ ಕಮಿಷನರ ಕಛೇರಿಗಳಲ್ಲಿ;
(ಸಿ) ಸಂಬಂಧಪಟ್ಟ ಜಿಲ್ಲೆಗಳ ಎಲ್ಲ ತಾಲ್ಲೂಕುಗಳ ತಹಶೀಲ್ದಾರರ ಕಛೇರಿಗಳಲ್ಲಿ;
(iii) ಒಂದು ಉಪವಿಭಾಗದ ಪರಿಮಿತಿಗಳ ರದ್ದಿಯಾತಿಯ ಅಥವಾ ಬದಲಾವಣೆಯ ಸಂದರ್ಭಗಳಲ್ಲಿ,-
(ಎ) ಸಂಬಂಧಪಟ್ಟ ಉಪವಿಭಾಗದ ಎಲ್ಲ ತಾಲ್ಲೂಕುಗಳ ತಹಶೀಲ್ದಾರರ ಕಛೇರಿಗಳಲ್ಲಿ;
(iv) ಒಂದು ತಾಲ್ಲೂಕಿನ ಪರಿಮಿತಿಗಳ ರದ್ದಿಯಾಯಿಯ ಅಥವಾ ಬದಲಾವಣೆಯ ಸಂದರ್ಭದಲ್ಲಿ,-
(ಎ) ಸಂಬಂಧಪಟ್ಟ ತಾಲ್ಲೂಕುಗಳ ತಹಶೀಲ್ದಾರರ ಕಛೇರಿಗಳಲ್ಲಿ;
(ಬಿ) ಸಂಬಂಧಪಟ್ಟ ಉಪವಿಭಾಗದ ಅಸಿಸ್ಟೆಂಟ್ ಕಮೀಷನರುಗಳ ಕಛೇರಿಗಳಲ್ಲಿ
(ಸಿ) ಸಂಬಂಧಪಟ್ಟ ತಾಲ್ಲೂಕುಗಳ ಎಲ್ಲ ಗ್ರಾಮಗಳ ಚಾವಡಿಗಳಲ್ಲಿ;
(ಡಿ) ಸಂಬಂಧಪಟ್ಟ ಗ್ರಾಮಗಳ ಇತರ ಯಾವುದೇ ಪ್ರಮುಖ ಸ್ಥಳಗಳಲ್ಲಿ;
(v) ಒಂದು ವಲಯದ ಪರಿಮಿತಿಗಳ ರದ್ದಿಯಾತಿಯ ಅಥವಾ ಬದಲಾವಣೆಯ ಸಂದರ್ಭದಲ್ಲಿ,-
(ಎ) ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರ ಕಛೇರಿಗಳಲ್ಲಿ;
(ಬಿ) ಸಂಬಂಧಪಟ್ಟ ವಲಯ ಅಥವಾ ವಲಯಗಳ ಎಲ್ಲ ಗ್ರಾಮಗಳ ಚಾವಡಿಗಳಲ್ಲಿ,-
(vi) ಒಂದು ಗ್ರಾಮದ ಪರಿಮಿತಿಗಳ ರದ್ದಿಯಾತಿಯ ಅಥವಾ ಬದಲಾವಣೆಯ ಸಂದರ್ಭದಲ್ಲಿ,-
(ಎ) ಸಂಬಂಧಪಟ್ಟ ಎಲ್ಲ ಗ್ರಾಮಗಳ ಚಾವಡಿಗಳಲ್ಲಿ;
(ಬಿ) ಜನರು ಸಾಮಾನ್ಯವಾಗಿ ಸೇರುವ ಇತರ ಯಾವುದೇ ಪ್ರಮುಖ ಸ್ಥಳದಲ್ಲಿ
(2) 6ನೇ ಪ್ರಕರಣದ ಮೇರೆಗೆ ಪ್ರಕಟಿಸಿದ ಪ್ರತಿಯೊಂದು ನೋಟೀಸಿನಲ್ಲೂ ಯಾವ ದಿನಾಂಕದಂದು ಅಥವಾ ಯಾವ ದಿನಾಂಕದ ತರುವಾಯ ಪ್ರಸ್ತಾಪವನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂಬುದನ್ನು ನಿರ್ದಿಷ್ಟಪಡಿಸತಕ್ಕದ್ದು, ಮತ್ತು ಅಂಥ ದಿನಾಂಕವು ಅಫಿಷಿಯಲ್ ಗೆಜೆಟ್ಟಿನಲ್ಲಿ ನೋಟೀಸು ಪ್ರಕಟವಾದ ದಿನಾಂಕದಿಂದ ಒಂದು ತಿಂಗಳಿನ ಒಳಗೆ ಇರತಕ್ಕದ್ದಲ್ಲ.