ನಮೂನೆ-Iv
(19(5)ನೇ ನಿಯಮವನ್ನು ನೋಡಿ)
ಬೇಸಾಯೇತರ ಉದ್ದೇಶಕ್ಕಾಗಿ ಸರ್ಕಾರಿ ಭೂಮಿಯ ಹಂಗಾಮಿ ಅಧಿಭೋಗಕ್ಕಾಗಿ ಇರುವ ಗುತ್ತಿಗೆ ಪತ್ರದ ನಮೂನೆ.
(ಈ ಪದಾವಳಿಯು ಅವರ ಪದದ ಉತ್ತರಾಧಿಕಾರಿಗಳನ್ನು ಮತ್ತು ಅವರಿಂದ ಅಧಿಕಾರ ಪಡೆದವರನ್ನು ಒಳಗೊಳ್ಳತಕ್ಕದ್ದು). ಕರ್ನಾಟಕ ರಾಜ್ಯಪಾಲರು, ಒಂದು ಪಕ್ಷವಾಗಿ ಮತ್ತು ....................................................ನಲ್ಲಿ ವಾಸಿಸುವ, ಇದರಲ್ಲಿ ಇನ್ನು ಮುಂದೆ “ಗುತ್ತಿಗೆಗೆ ಪಡೆದವನು” ಎಂದು ಕರೆಯಲಾಗುವ (ಈ ಪದಾವಳಿಯು ಅವನ ವಾರಸುದಾರರು, ನಿರ್ವಾಹಕರು, ಆಡಳಿತಗಾರರು, ಕಾನೂನು ಸಮ್ಮತ ಪ್ರತಿನಿಧಿಗಳನ್ನು ಅವನಿಂದ ಅಧಿಕಾರ ಪಡೆದವರನ್ನು ಒಳಗೊಳ್ಳತಕ್ಕದ್ದು) ಇನ್ನೊಂದು ಪಕ್ಷವಾಗಿ ಒಂದು ಸಾವಿರದ ಒಂಬೈನೂರ ........................................ರ .....................................ನೆಯ .................................ರಂದು ಒಪ್ಪಿಕೊಂಡ ಗುತ್ತಿಗೆಯ ಪತ್ರವು ಕೆಳಕಂಡಂತಿದೆ.-
ಕರ್ನಾಟಕ ರಾಜ್ಯಪಾಲರು ಕೆಳಗಿನ ಅನುಸೂಚಿಯಲ್ಲಿ ವಿವರಿಸಿರುವ ಭೂಮಿಯನ್ನು ಗುತ್ತಿಗೆ ಪಡೆಯುವವನಾದ ....................................ನು (ಹೆಸರು ಮತ್ತು ವಿಳಾಸ) ಒಪ್ಪಿಕೊಂಡ ಕೆಳಕಂಡ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ...................................... ರಿಂದ (ದಿನಾಂಕ, ತಿಂಗಳು, ವರ್ಷ) ಪ್ರಾರಂಭವಾಗುವ .................................... ವರ್ಷಗಳ/ತಿಂಗಳುಗಳ ಅವಧಿಯವರೆಗೆ ಹಂಗಾಮಿ ಅಧಿಭೋಗಕ್ಕಾಗಿ ಮೇಲೆ ಹೇಳಿದ ಗುತ್ತಿಗೆಗೆ ಪಡೆಯುವವನಿಗೆ ಈ ಮೂಲಕ ಗುತ್ತಿಗೆಗೆ ಕೊಡುತ್ತಾರೆ.
(1) ಈ ಗುತ್ತಿಗೆ ವ್ಯವಹಾರವು ಸ್ಪಷ್ಟವಾಗಿ ಅನ್ಯಾಯಯುತವಾಗಿದೆಯೆಂದು ಅಥವಾ ಸಂಗತಿಯ ತಪ್ಪು ತಿಳಿವಳಿಕೆಯಿಂದ ಅಥವಾ ಸುಳ್ಳು ನಿರೂಪಣೆಯಿಂದ ಅಥವಾ ಮೋಸದಿಂದ ಆಗಿದೆಯೆಂದು ಅಥವಾ ಅದನ್ನು ಮಾಡುವ ವಿಧಾನದಲ್ಲಿ ಕ್ರಮಲೋಪವಾಗಿದೆಯೆಂದು ಕಂಡು ಬಂದರೆ ಅದನ್ನು ವಜಾ ಮಾಡಲು ಅವಕಾಶವಿರತಕ್ಕದ್ದು.
(2) ಗುತ್ತಿಗೆಯನ್ನು ಹಾಗೆ ವಜಾ ಮಾಡಿದ ಸಂದರ್ಭಧಲ್ಲಿ ವಜಾ ಮಾಡಿದುದರಿಂದಾಗಿ ತನಗೆ ಉಂಟಾದ ಯಾವುದೇ ನಷ್ಟಕ್ಕೆ ಪರಿಹಾರವನ್ನು ಪಡೆಯಲು ಗುತ್ತಿಗೆಗೆ ಪಡೆದವನು ಹಕ್ಕುಳ್ಳವನಾಗಿರತಕ್ಕದ್ದಲ್ಲ.
(3) ಗುತ್ತಿಗೆ ಪತ್ರವು ಒಳಗೊಂಡಿರುವ ಷರತ್ತುಗಳನ್ನು ತಾನು ಪೂರೈಸುವುದಕ್ಕಾಗಿ ಮತ್ತು ಪಾಲಿಸುವುದಕ್ಕಾಗಿ ಭದ್ರತೆಯಾಗಿ ಮತ್ತು ಭದ್ರತೆಗಾಗಿ ................................. ರೂ.ಗಳ ಮೊಬಲಗನ್ನು ಗುತ್ತಿಗೆಗೆ ಪಡೆದವನು ಸಂದಾಯ ಮಾಡತಕ್ಕದ್ದು. ಗುತ್ತಿಗೆ ಪತ್ರದಲ್ಲಿರುವ ಯಾವುದೇ ಷರತ್ತನ್ನು ಗುತ್ತಿಗೆಗೆ ಪಡೆದವನು ಪೂರೈಸಲು ಮತ್ತು ಪಾಲಿಸಲು ತಪ್ಪಿದ ಸಂದರ್ಭದಲ್ಲಿ ಜಿಲ್ಲೆಯ ಡೆಪ್ಯುಟಿ ಕಮೀಷನರ ಆದೇಶದ ಮೇರೆಗೆ (ಇದರಲ್ಲಿ ಇನ್ನು ಮುಂದೆ ಡೆಪ್ಯುಟಿ ಕಮೀಷನರೆಂದು ಉಲ್ಲೇಖಿಸಲಾಗಿದೆ) ಕರ್ನಾಟಕ ಸರಕಾರಕ್ಕೆ (ಇದರಲ್ಲಿ ಇನ್ನು ಮುಂದರ ಸರಕಾರವೆಂದು ಕರೆಯಲಾಗಿದೆ) ಹಾಗೆ ಠೇವನಿಯಿಡಲಾದ ಮೊಬಲಗನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿರತಕ್ಕದ್ದು.
(4) ಗುತ್ತಿಗೆಯು ಜಾರಿಯಲ್ಲಿರುವಷ್ಟು ಕಾಲದವರೆಗೆ, ರಾಜ್ಯದ ಸಾಮಾನ್ಯ ರಾಜಸ್ವಕ್ಕೆ ಜಮೆ ಮಾಡುವುದಕ್ಕಾಗಿ, ಎಲ್ಲ ವಜಾವಟ್ಟುಗಳನ್ನು ಕಳೆದು ಪ್ರತಿ ವರ್ಷವೂ ................................. ರೂ.ಗಳ ಮೊಬಲಗನ್ನು ಮತ್ತು ಆ ಭೂಮಿಯ ಬಗ್ಗೆ ಫಲವಾಗಿ ಪೌರ ನಿಗಮಕ್ಕೆ / ಪೌರಸಭೆಗೆ ಸರ್ಕಾರವು ಸಂದಾಯ
ಮಾಡಬೇಕಾಗಿರುವ ದರಗಳ, ಕರಗಳ, ಕಂದಾಯಗಳ ಮತ್ತು ಖರ್ಚುಗಳ ಬಗ್ಗೆ ಅವನು ಆ ಭೂಮಿಯನ್ನು ಅಧಿಭೋಗಕ್ಕೆ ತೆಗೆದುಕೊಂಡುದರಿಂದಾಗಿ ........................... ರೂ.ಗಳ ಹೆಚ್ಚಿನ ಮೊಬಲಗನ್ನು ಸಂದಾಯ ಮಾಡತಕ್ಕದ್ದು. ಒಟ್ಟು ಮೊಬಲಗನ್ನು ಸರಕಾರಕ್ಕೆ ಮುಂಗಡವಾಗಿ ವಾರ್ಷಿಕವಾಗಿ/ ಮಾಸಿಕವಾಗಿ ಸಂದಾಯ ಮಾಡತಕ್ಕದ್ದು. ಅಂಥ ಸಂದಾಯಗಳಲ್ಲಿ ಮೊದಲನೆಯದನ್ನು ...........................ರ ...................................ರಂದು ಮತ್ತು ತರುವಾಯದ ವಾರ್ಷಿಕ/ಮಾಸಿಕ ಸಂದಾಯಗಳನ್ನು ಮುಂದಿನ ವರ್ಷಗಳ/ತಿಂಗಳುಗಳ ಅದೇ ದಿನಾಂಕದಂದು ಸಂದಾಯ ಮಾಡತಕ್ಕದ್ದು.
(5) ಪೌರ ನಿಗಮ/ಪೌರಸಭೆಯು ತನಗೆ ಬರಬೇಕಾದ ಮೇಲ್ಕಂಡ ಮೊಬಲಗುಗಳಲ್ಲಿ ವ್ಯತ್ಯಾಸ ಮಾಡಿದ ಸಂದರ್ಭದಲ್ಲಿ, ಪೌರನಿಗಮ ಪೌರಸಭೆಯು ಕರ ವಿಧಿಸಿದುದರಿಂದಾಗಿ (4)ನೇ ಷರತ್ತಿನಲ್ಲಿ ಗುತ್ತಿಗೆಗೆ ಪಡೆದವನು ಸಂದಾಯ ಮಾಡಬೇಕಾದ ಮೊಬಲಗೆಂದು ಸೂಚಿಸಿದ ಮೊಬಲಗುಗಳಲ್ಲಿಯ ಎರಡನೇ ಭಾಗವನ್ನು ನೋಟೀಸನ್ನು ಕೊಡದೆ ಪರಿಷ್ಕರಿಸಲು ಸರಕಾರವು ಸ್ವತಂತ್ರವಾಗಿರತಕ್ಕದ್ದು ಮತ್ತು ಹಾಗೆ ಪರಿಷ್ಕೃತವಾದ ತರುವಾಯ ಬಾಕಿ ಇರುವ ಯಾವುದೇ ಮೊಬಲಗನ್ನು ಗುತ್ತಿಗೆಗೆ ಪಡೆದವನು ಕೂಡಲೇ ಸಂದಾಯ ಮಾಡತಕ್ಕದ್ದು.
(6) ಗುತ್ತಿಗೆಯ ಬಗ್ಗೆ ಸಂದಾಯ ಮಾಡಬೇಕಾದ ಯಾವುದೇ ಮೊಬಲಗುಗಳನ್ನು, ಅವುಗಳನ್ನು ಸಂದಾಯ ಮಾಡಬೇಕಾದ ದಿನಾಂಕಗಳಂದು ಸಂದಾಯ ಮಾಡಲು ತಪ್ಪಿದರೆ, ಅವುಗಳನ್ನು ಹಾಗೆ ಸಂದಾಯ ಮಾಡಬೇಕಾದ ದಿನಾಂಕಗಳಿಂದ ಅದನ್ನು ಸಂದಾಯ ಮಾಡಿದ ದಿನಾಂಕದವರೆಗೆ ವರ್ಷಕ್ಕೆ ಶೇಕಡಾ ಹನ್ನೆರಡರ ದರದಲ್ಲಿ ಅಂಥ ಮೊಬಲಗುಗಳ ಬಗ್ಗೆ ಬಡ್ಡಿಯನ್ನು ಸಂದಾಯ ಮಾಡತಕ್ಕದ್ದು.
(7) ಗುತ್ತಿಗೆಗೆ ಪಡೆದವನು ಭೂಮಿಗೆ ವಿನಾಶಕಾರಿಯಾಗುವ ಅಥವಾ ಖಾಯಂ ಆಗಿ ಹಾನಿಕಾರವಾಗುವ ಯಾವ ಕೆಲಸವನ್ನು ಮಾಡತಕ್ಕದ್ದಲ್ಲ.
(8) ಗುತ್ತಿಗೆಗೆ ಪಡೆದವನು ಅದನ್ನು ಯಾರ ಉದ್ದೇಶಕ್ಕಾಗಿ ಕೊಡಲಾಗಿದೆಯೋ ಆ ಉದ್ದೇಶದ ಹೊರತು ಬೇರೆ ಉದ್ದೇಶಕ್ಕೆ ಅದನ್ನು ಉಪಯೋಗಿಸತಕ್ಕದ್ದಲ್ಲ.
(9) ಗುತ್ತಿಗೆಗೆ ಪಡೆದವನು ಇದಕ್ಕೆ ಅನುಬಂಧಿಸಿರುವ ನಕ್ಷೆಗೆ (ಗಳಿಗೆ) ಅನುಸಾರವಾಗಿ ...................ನ್ನು ನಿರ್ಮಿಸಬಹುದು.
(10) ಭೂಮಿ ಮತ್ತು ಅದರ ಮೇಲಿನ ಕಟ್ಟಡವನ್ನು (ಗಳನ್ನು) ರಾಜಕೀಯ ಸಭೆಗಳಿಗೆ ಉಪಯೋಗಿಸತಕ್ಕದ್ದಲ್ಲ.
(11) (9)ನೇ ಷರತ್ತಿನಲ್ಲಿ ಉಪಬಂಧಿಸಿದಂತೆ ಹೊರತು, ಡೆಪ್ಯುಟಿ ಕಮೀಷನರ ಲಿಖಿತ ಪೂರ್ವಾನುಮತಿಯಿಲ್ಲದೆ ಭೂಮಿಯ ಮೇಲೆ ಖಾಯಂ ಮತ್ತು ಹಂಗಾಮಿ ಸ್ವರೂಪದ ಯಾವುದೇ ಕಟ್ಟಡಗಳನ್ನು ಬೇಲಿಗಳನ್ನು ಅಥವಾ ರಚನೆಗಳನ್ನು ಗುತ್ತಿಗೆಗೆ ಪಡೆದವನು ನಿರ್ಮಿಸತಕ್ಕದ್ದಲ್ಲ.
(12) ಗುತ್ತಿಗೆಗೆ ಪಡೆದವನು ಸದರಿ ಭೂಮಿಯನ್ನು ಸರಕಾರಕ್ಕೆ ಸಮಾಧಾನವಾಗುವ ರೀತಿಯಲ್ಲಿ ಸ್ವಚ್ಛವಾದ ಮತ್ತು ನಿರ್ಮಲವಾದ ಸ್ಥಿತಿಯಲ್ಲಿಡತಕ್ಕದ್ದು ಮತ್ತು ಮೇಲೆ ಹೇಳಿದಂತೆ ಅದರ ಮೇಲೆ ನಿರ್ಮಸಿದ ರಚನೆಗಳು,
ಯಾವುವಾದರೂ ಇದ್ದರೆ, ಅವುಗಳನ್ನು ಡೆಪ್ಯುಟಿ ಕಮೀಷನರಿಗೆ ಸಮಾಧಾನವಾಗುವ ರೀತಿಯಲ್ಲಿ ಒಳ್ಳೆಯ ಮತ್ತು ಬಹುಮಟ್ಟಿನ ದುರಸ್ತು ಸ್ಥಿತಿಯಲ್ಲಿ ಇಡತಕ್ಕದ್ದು.
(13) ಸರಕಾರದ ಅಧಿಕಾರಿಗಳು ಮತ್ತು ನೌಕರರು ಕೆಲಸಗಾರರೊಡನೆ ಅಥವಾ ಕೆಲಸಗಾರರಿಲ್ಲದೆ ಮೇಲೆ ಹೇಳಿದ ಭೂಮಿಗಳ ಸ್ಥಿತಿಗತಿಗಳನ್ನು ಪರಿಶೀಲಿಸುವುದಕ್ಕಾಗಿ ಯಾವುದೇ ಕಾಲದಲ್ಲಿ ಪ್ರವೇಶಿಸಲು ಗುತ್ತಿಗೆಗೆ ಪಡೆದವನು ಅನುಮತಿ ಕೊಡತಕ್ಕದ್ದು.
(14) ಈ ಗುತ್ತಿಗೆ ಅಥವಾ ಅದರ ಯಾವುದೇ ಭಾಗದಿಂದ ದೊರಕುವ ಸೌಲಭ್ಯಗಳನ್ನು ಸರ್ಕಾರ ಲಿಖಿತ ಪೂರ್ವಾನುಮತಿಯಿಲ್ಲದೆ ಗುತ್ತಿಗೆಗೆ ಪಡೆದವನು ಬೇರೊಬ್ಬರಿಗೆ ಅದನ್ನು ವಹಿಸಿಕೊಡತಕ್ಕದ್ದಲ್ಲ ಅಥವಾ ಒಳಗುತ್ತಿಗೆಗೆ ಕೊಡತಕ್ಕದ್ದಲ್ಲ.
(15) (ಕ) ಗುತ್ತಿಗೆಗೆ ಕೊಡುವ ಕಾಲದಲ್ಲಿ ಇದ್ದ ಹಾಗೂ ಗುತ್ತಿಗೆಗೆ ಕೊಡಲಾದ ಭೂಮಿಯ ಮೇಲೆ ತರುವಾಯ ಬೆಳೆಯಬಹುದಾದ (ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಲಾದ ಎಲ್ಲ ಗಂಧದ ಮರಗಳ ಮತ್ತು ಅವುಗಳ ಶಾಖೆಗಳ ಮತ್ತು ಬೇರುಗಳ ಮೇಲಿನ ಹಕ್ಕನ್ನು ಸರಕಾರವು ತನಗೆ ಮೀಸಲಾಗಿರಿಸಿಕೊಂಡಿದೆ ಮತ್ತು ಅಂಥ ಯಾವುವೇ ಮರಗಳನ್ನು ಅಥವಾ ಅವುಗಳ ಬೇರುಗಳನ್ನು ಮತ್ತು ಶಾಖೆಗಳನ್ನು ಕಡಿಯಲು ಅಥವಾ ಆಗೆಯಲು ಮತ್ತು ಆ ಭೂಮಿಯಿಂದ ಅವುಗಳನ್ನು ಸಾಗಿಸಲು ಮತ್ತು ತನ್ನ ಇಷ್ಟಾನುಸಾರ ಅವುಗಳನ್ನು ವಿಲೆ ಮಾಡಲು ಸರಕಾರವು ಸ್ವತಂತ್ರವಾಗಿರತಕ್ಕದ್ದು. ಡೆಪ್ಯುಟಿ ಕಮೀಷನರನ ಅನುಮತಿಯಿಲ್ಲದೆ ಅವುಗಳನ್ನು ಕಡಿಯಲು ಅಥವಾ ಸಾಗಿಸಲು ಅಥವಾ ಕಡಿಯುವಂತೆ ಮಾಡಲು ಅಥವಾ ಸಾಗಿಸುವಂತೆ ಮಾಡಲು ಗುತ್ತಿಗೆಗೆ ಪಡೆದವನು ಹಕ್ಕುಳ್ಳವನಾಗಿರತಕ್ಕದ್ದಲ್ಲ;
(ಖ) ಗಂಧದ ಮರಗಳನ್ನು ಕಳ್ಳತನ ಅಥವಾ ಹಾನಿಯಿಂದ ರಕ್ಷಿಸುವುದಕ್ಕಾಗಿ ಮತ್ತು ಆ ಭೂಮಿಯ ಮೇಲೆ ಬೆಳೆಯುವ ಚಿಕ್ಕ ಗಿಡಗಳನ್ನು ಜಾಗರೂಕತೆಯಿಂದ ರಕ್ಷಿಸುವುದಕ್ಕಾಗಿ ಡೆಪ್ಯುಟಿ ಕಮೀಷನರಿಗೆ ಸಮಾಧಾನವಾಗುವ ರೀತಿಯಲ್ಲಿ ಎಲ್ಲ ಸೂಕ್ತ ಕ್ರಮಗಳನ್ನು ಗುತ್ತಿಗೆಗೆ ಪಡೆದವನು ಕೈಗೊಳ್ಳತಕ್ಕದ್ದು;
(ಗ) ಸರಕಾರದ ಅಧಿಕಾರಿಗಳು ಗಂಧದ ಮರದ ಮೇಲೆ ಮಾಡಿದ ಗುರುತುಗಳು ಸುರಕ್ಷಿತವಾಗಿರುವಂತೆ ಮತ್ತು ಅವುಗಳನ್ನು ಯಾರೂ ಕೆಡಿಸದಂತೆ ನೋಡಿಕೊಳ್ಳಲು ಗುತ್ತಿಗೆಗೆ ಪಡೆದವನು ಕ್ರಮಗಳನ್ನು ಕೈಗೊಳ್ಳತಕ್ಕದ್ದು; ಮತ್ತು
(ಘ) ಮೇಲಿನ (ಕ), (ಖ) ಅಥವಾ (ಗ)ಗಳಲ್ಲಿ ನಮೂದಿಸಿದ ಯಾವುವೇ ಷರತ್ತುಗಳನ್ನು ಉಲ್ಲಂಘಿಸಿದ ಅಥವಾ ಅವುಗಳಲ್ಲಿ ಯಾವುದನ್ನೇ ಆಗಲಿ ಪಾಲಿಸಲು ತಪ್ಪಿದ ಸಂದರ್ಭದಲ್ಲಿ, ಅಂಥ ಉಲ್ಲಂಘನೆ ಅಥವಾ ಕರ್ತವ್ಯ ಲೋಪದಿಂದಾಗಿ ಉಂಟಾಗುವ ನಷ್ಟ ಅಥವಾ ಹಾನಿಯ ಬಗ್ಗೆ ಡೆಪ್ಯುಟಿ ಕಮೀಷನರು ನಿರ್ಧರಿಸುವಂಥ ಪರಿಹಾರವನ್ನು ಗುತ್ತಿಗೆಗೆ ಪಡೆದವನು ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು. ಅಲ್ಲದೆ ಆ ಗುತ್ತಿಗೆಯನ್ನು ರದ್ದುಗೊಳಿಸಲು ಮತ್ತು ಆ ಭೂಮಿಯನ್ನು ಪುನಃ ತನ್ನ ವಶಕ್ಕೆ ತೆಗೆದುಕೊಳ್ಳಲು ಸರಕಾರವು ಸ್ವತಂತ್ರವಾಗಿರತಕ್ಕದ್ದು. ಮತ್ತು ಅನಂತರ ಆ ಇಡೀ ಭೂಮಿಯು ಸರಕಾರದಲ್ಲಿ ಪೂರ್ಣವಾಗಿ ನಿಹಿತವಾಗತಕ್ಕದ್ದು. ಆ ಸಂದರ್ಭದಲ್ಲಿ ಗುತ್ತಿಗೆಗೆ ಪಡೆದವನಿಗೆ ಯಾವುದೇ ನಷ್ಟ ಪರಿಹಾರವನ್ನು ಪಡೆಯಲು ಹಕ್ಕಿರತಕ್ಕದ್ದಲ್ಲ.
(16) ಡೆಪ್ಯುಟಿ ಕಮೀಷನರ ಅಭಿಪ್ರಾಯದಲ್ಲಿ ....................................... ಉದ್ದೇಶಕ್ಕಾಗಿ ಭೂಮಿಯನ್ನು ಯೋಗ್ಯವಾದುದನ್ನಾಗಿ ಮಾಡುವುದಕ್ಕಾಗಿ ಮರಗಳನ್ನು, ಸಸಿಗಳನ್ನು, ತೋಪುಗಳನ್ನು ಅಥವಾ ಪೊದೆಗಳನ್ನು ಬೇರು ಸಹಿತ ಕೀಳುವುದು, ಕಡಿಯುವುದು ಅಥವಾ ನಾಶ ಮಾಡುವುದು ಅವಶ್ಯಕವಾದರೆ ಅವುಗಳನ್ನು ಗುತ್ತಿಗೆಗೆ ಪಡೆದವನು ಬೇರು ಸಹಿತ ಕೇಳಬಹುದು, ಕಡಿಯಬಹುದು ಅಥವಾ ನಾಶ ಮಾಡಬಹುದು ಮತ್ತು ಅವುಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದು ಮತ್ತು ತಾನು ಇಷ್ಟ ಪಡುವ ಯಾವುದೇ ರೀತಿಯಲ್ಲಿ ಅವುಗಳನ್ನು ವಿಲೇ ಮಾಡಬಹುದು, ಗುತ್ತಿಗೆಗೆ ಪಡೆದವನು ........................................................... ಉದ್ದೇಶಕ್ಕಾಗಿ ಭೂಮಿಯನ್ನು ಯೋಗ್ಯವನ್ನಾಗಿ ಮಾಡುವುದಕ್ಕಾಗಿ ಏರಿಯ ದಾರಿಗಳನ್ನು ತೆಗೆದು ಹಾಕಿ ಮತ್ತು ಆ ಭೂಮಿಯಲ್ಲಿನ ತಗ್ಗು ಪ್ರದೇಶಗಳನ್ನು ಭರ್ತಿ ಮಾಡಿ ನೆಲವನ್ನು ಮಟ್ಟ ಮಾಡಬಹುದು ಮತ್ತು ಅದರ ಮೇಲಿನ ಹುಲ್ಲನ್ನು ಕಾಲಕಾಲಕ್ಕೆ ಕೊಯ್ಯಬಹುದು ಮತ್ತು ಅವನು ಇಷ್ಟಪಡುವ ಯಾವುದೇ ರೀತಿಯಲ್ಲಿ ಅದನ್ನು ವಿಲೆ ಮಾಡಬಹುದು ಮತ್ತು ಸರ್ಕಾರದ ಅಭಿಪ್ರಾಯದಲ್ಲಿ ಅಂಥ ಉದ್ದೇಶಗಳಿಗಾಗಿ ಅವಶ್ಯಕವಾಗಿರುವ ಯಾವುದೇ ಕೆಲಸವನ್ನು ಆ ಭೂಮಿಯಲ್ಲಿ ಮಾಡಬಹುದು.
ಟಿಪ್ಪಣಿ.- ಮರಗಳು ಬೆಲೆಯುಳ್ಳವುಗಳಾಗಿದ್ದರೆ, ಹಾಗೆ ಕಡಿದ ಮರಗಳನ್ನು ಡೆಪ್ಯುಟಿ ಕಮೀಷನರಿಗೆ ಅಥವಾ ಈ ಬಗ್ಗೆ ಅವರಿಂದ ನಿಯೋಜಿತನಾದ ಯಾವನೇ ಅಧಿಕಾರಿಗೆ ವಿಲೆಗಾಗಿ ಒಪ್ಪಿಸಬೇಕೆಂದು ಗೊತ್ತುಪಡಿಸಬಹುದು.
(17) ಗೇಣಿ ಪಡೆದವನು ಡೆಪ್ಯುಟಿ ಕಮೀಷನರಿಂದ ನೋಟೀಸನ್ನು ಪಡೆದ ಮೇಲೆ, ಅನಧಿಕೃತ ಕಟ್ಟಡ, ಬೇಲಿ ಅಥವಾ ರಚನೆಯನ್ನು ಕೊಡಲೇ ತೆಗೆದುಹಾಕತಕ್ಕದ್ದು ಮತ್ತು ಅಂಥ ಯಾವುದೇ ನೋಟೀಸಿಗೆ ಅನುಗುಣವಾಗಿ ತಕ್ಷಣ ನಡೆಯಲು ತಪ್ಪಿದರೆ, ಅದನ್ನು ತೆಗೆದು ಹಾಕಲು ಡೆಪ್ಯುಟಿ ಕಮೀಷನರಿಗೆ ಅಧಿಕಾರವಿರತಕ್ಕದ್ದು ಮತ್ತು ಡೆಪ್ಯುಟಿ ಕಮೀಷನರು ಅಥವಾ ಅವನ ಪರವಾಗಿ ಮಾಡಿದ ತಗಾದೆಯ ಮೇರೆಗೆ ಅವುಗಳನ್ನು ತೆಗೆದು ಹಾಕುವುದಕ್ಕೆ ತಗುಲಿದ ಖರ್ಚನ್ನು ಸಂದಾಯ ಮಾಡಿ ಅವುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳತಕ್ಕದ್ದು. ಮೇಲೆ ಹೇಳಿದಂತೆ ತಗಾದೆ ಮಾಡಿದಾಗ ತನ್ನ ವಶಕ್ಕೆ ತೆಗೆದುಕೊಳ್ಳದ ಅಥವಾ ತೆಗೆದು ಹಾಕಿದುದರ ಖರ್ಚನ್ನು ಮತ್ತು ಇಟ್ಟುಕೊಂಡುದಕ್ಕಾಗಿ ತಗುಲಿದ ಖರ್ಚನ್ನು ಗುತ್ತಿಗೆಗೆ ಪಡೆದವನು ಸಂದಾಯ ಮಾಡದಿದ್ದರೆ, ಈ ಷರತ್ತಿನ ಮೇರೆಗೆ ತೆಗೆದು ಹಾಕಲಾದ ಯಾವುದೇ ವಸ್ತುವಿನ ಬಗ್ಗೆ ಗುತ್ತಿಗೆಗೆ ಪಡೆದವನಿಗೆ ಯಾವ ಕ್ಲೇಮು ಇರತಕ್ಕದ್ದಲ್ಲ.
(18) ಡೆಪ್ಯುಟಿ ಕಮೀಷನರ ಪೂರ್ವಾನುಮತಿ ಇಲ್ಲದೆ (6)ನೇ ಷರತ್ತಿನಲ್ಲಿ ಉಪಬಂಧಿಸಿರುವುದರ ಹೊರತು, ಭೂಮಿಯನ್ನು ಅಥವಾ ಅದರ ಮೇಲಿನ ಯಾವುದೇ ರಚನೆಯನ್ನು ಅಥವಾ ಭೂಮಿಯ ಅಥವಾ ರಚನೆಯ ಯಾವುದೇ ಭಾಗವನ್ನು ಉಪಯೋಗಿಸಲು ಯಾವನೇ ವ್ಯಕ್ತಿಗೆ ಅನುಮತಿ ಕೊಡತಕ್ಕದ್ದಲ್ಲ.
(19) ಈ ಮಂಜೂರಾತಿಯು ಕೊನೆಗೊಂಡಾಗ ಅಥವಾ ರದ್ದಾದಾಗ, ಗುತ್ತಿಗೆಗೆ ಪಡೆದವನು ಸದರಿ ಭೂಮಿಯನ್ನು ಮೇಲೆ ಹೇಳಿದ ಷರತ್ತುಗಳಿಗನುಗುಣವಾಗಿ ಸುಸ್ಥಿತಿಯಲ್ಲಿರುವಂತೆ ಸರ್ಕಾರಕ್ಕೆ ವಾಪಸ್ಸು ಕೊಡತಕ್ಕದ್ದು.
(20) ಮೇಲೆ ಹೇಳಿದ ಷರತ್ತುಗಳಲ್ಲಿ ಅನುಮತಿ ಕೊಟ್ಟಿರುವಂತೆ ಹೊರತು, ಸದರಿ ಭೂಮಿ ಮತ್ತು ಅದರ ಮೇಲಿನ ಇತರ ಸರ್ಕಾರಿ ಸ್ವತ್ತಿಗೆ ಉಂಟು ಮಾಡಿದ ಎಲ್ಲ ಅಥವಾ ಯಾವುದೇ ಹಾನಿ ಅಥವಾ ನಷ್ಟದ ಬಗ್ಗೆ ಗುತ್ತಿಗೆಗೆ ಪಡೆದವನು ಸರ್ಕಾರಕ್ಕೆ ಜವಾಬ್ದಾರನಾಗಿರತಕ್ಕದ್ದು.
(21) ಮೇಲಿನ(1)ನೇ ಷರತ್ತಿನಲ್ಲಿ ನಿರ್ದಿಷ್ಟಪಡಿಸಿದ ಮೊಬಲಗನ್ನು ಅಥವಾ ಅದರ ಯಾವುದೇ ಭಾಗವು, ಅವುಗಳನ್ನು ಸಂದಾಯ ಮಾಡಬೇಕಾದ ತರುವಾಯ, ಆ ಬಗ್ಗೆ ವಿದ್ಯುಕ್ತವಾಗಿ ಕೇಳಿರಲಿ ಅಥವಾ ಇಲ್ಲದಿರಲಿ, ಹದಿನೈದು ದಿನಗಳವರೆಗೆ ಸಂದಾಯವಾಗುದೆ ಉಳಿದಿದ್ದರೆ ಅಥವಾ ಇದರಲ್ಲಿ ಅಡಕವಾಗಿರುವ ಗುತ್ತಿಗೆಯ ಯಾವುವೇ ಷರತ್ತುಗಳನ್ನು ಗುತ್ತಿಗೆಗೆ ಪಡೆದವನು ಉಲ್ಲಂಘಿಸಿದ್ದರೆ, ಸರ್ಕಾರವು ಗುತ್ತಿಗೆಯನ್ನು ಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಬಹುದು, ಮತ್ತು ಅದನ್ನು ತನ್ನ ಹತೋಟಿಯಲ್ಲಿ ತೆಗೆದುಕೊಳ್ಳಬಹುದು ಅಥವಾ ಎಲ್ಲ ಭೂಮಿ ಅಥವಾ ಅದರ ಯಾವುದೇ ಭಾಗವನ್ನು ಮತ್ತು ಅದರ ಮೇಲಿರುವ ಯಾವುವೇ ಕಟ್ಟಡಗಳನ್ನು, ಬೇಲಿಗಳನ್ನು ಮತ್ತು ರಚನೆಗಳನ್ನು ಬೇರೆ ರೀತಿಯ ವಿಲೆ ಮಾಡಬಹುದು ಮತ್ತು ಅದರ ಬಗ್ಗೆ ಯಾವುದೇ ನಷ್ಟ ಪರಿಹಾರವನ್ನು ಪಡೆಯಲು ಗುತ್ತಿಗೆಗೆ ಪಡೆದವನಿಗೆ ಹಕ್ಕಿರತಕ್ಕುದಲ್ಲ.
(22) ಮೇಲಿನ (4) ಅಥವಾ (5)ನೇ ಷರತ್ತುಗಳಲ್ಲಿ ನಿರ್ದಿಷ್ಟಪಡಿಸಿದ ಮೊಬಲಗು ಅಥವಾ ಅದರ ಯಾವುದೇ ಭಾಗವು ಬಾಕಿ ಇದ್ದರೆ, ಅದನ್ನು ಭೂಕಂದಾಯದ ಬಾಕಿಯಂತೆ ಗುತ್ತಿಗೆಗೆ ಪಡೆದವನಿಂದ ವಸೂಲು ಮಾಡಲು ಸಹ ಸರ್ಕಾರಕ್ಕೆ ಅಧಿಕಾರವಿರತಕ್ಕದ್ದು.
(23) ಕರ್ನಾಟಕ ರಾಜ್ಯಪಾಲರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಡೆಪ್ಯುಟಿ ಕಮೀಷನರು .................... ತಿಂಗಳಿನ ಲಿಖಿತ ನೋಟೀಸನ್ನು ಕೊಟ್ಟ ತರುವಾಯ ಈ ಮೂಲಕ ಕೊಡಲಾಗಿರುವ ಗುತ್ತಿಗೆಯನ್ನು ರದ್ದುಗೊಳಿಸಬಹುದು ಮತ್ತು ಮೇಲೆ ಹೇಳಿದ ಯಾವುವೇ ಷರತ್ತುಗಳನ್ನು ಹಿಂದೆಯೇ ಉಲ್ಲಂಘಿಸಿದ್ದ ಸಂಬಂಧದಲ್ಲಿ ಕೈಕೊಳ್ಳಬಹುದಾದ ಯಾವುದೇ ಕ್ರಮ ಅಥವಾ ಪರಿಹಾರೋಪಾಯದ ಬಗ್ಗೆ ಸರ್ಕಾರಕ್ಕಿರುವ ಯಾವುದೇ ಹಕ್ಕಿಗೆ ಬಾಧಕ ಉಂಟಾಗದಂತೆ ಗುತ್ತಿಗೆಗೆ ಪಡೆದವನು ಡೆಪ್ಯುಟಿ ಕಮೀಷನರಿಗೆ ................................ ತಿಂಗಳಿನ ಲಿಖಿತ ನೋಟೀಸನ್ನು ಕೊಡುವುದರ ಮೂಲಕ ಆ ಗುತ್ತಿಗೆಯನ್ನು ಮುಕ್ತಾಯಗೊಳಿಸಬಹುದು. ಹಾಗೆ ರದ್ದುಗೊಳಿಸುವ ಅಥವಾ ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಭೂಮಿಯ ಮೇಲೆ ತಾನು ನಿರ್ಮಿಸಿದ ರಚನೆಗಳು ಅಥವಾ ಭೂಮಿಯ ಬಗ್ಗೆ ತಾನು ಮಾಡಿದ ಯಾವುವೇ ಅಭಿವೃದ್ಧಿಗಳ ಸಂಬಂಧದಲ್ಲಿ ತನ್ನ ಅಧಿಭೋಗಕ್ಕೆ ಅಡ್ಡಿ ಮಾಡಿದುದರಿಂದ ಉಂಟಾದ ನಷ್ಟದ ಸಂಬಂಧದಲ್ಲಿ ಯಾವ ನಷ್ಟ ಪರಿಹಾರವನ್ನೂ ಪಡೆಯಲು ಗುತ್ತಿಗೆಗೆ ಪಡೆದವನಿಗೆ ಹಕ್ಕಿರತಕ್ಕದ್ದಲ್ಲ. ಆದರೆ ಗುತ್ತಿಗೆಯ ರದ್ದಿಯಾತಿ ಅಥವಾ ಮುಕ್ತಾಯವು ಜಾರಿಗೆ ಬರುವುದಕ್ಕಿಂತ ಮೊದಲು ಅಥವಾ ಆ ಸಂಬಂಧದಲ್ಲಿ ಡೆಪ್ಯುಟಿ ಕಮೀಷನರು ಅವಕಾಶ ಕೊಡಬಹುದಾದ ಕಾಲದೊಳಗೆ ನೋಟೀಸಿಲ್ಲದೆ ಗುತ್ತಿಗೆಯನ್ನು ರದ್ದುಗೊಳಿಸಿದರೆ ಅಂಥ ರಚನೆಗಳನ್ನು ಗುತ್ತಿಗೆಗೆ ಪಡೆದವನು ತೆಗೆದುಹಾಕಬಹುದು.
(24) (21) ಅಥವಾ (23)ನೇ ಷರತ್ತಿನ ಮೇರೆಗೆ ಗುತ್ತಿಗೆಯನ್ನು ರದ್ದು ಮಾಡಿದಾಗ, ಅಂಥ ಮುಕ್ತಾಯದ ದಿನಾಂಕದವರೆಗೆ ದಾಮಾಷಾ ಗುತ್ತಿಗೆ ಮೊಬಲಗನ್ನು ವಿಧಿಸಲು ಸರ್ಕಾರವು ಸ್ವತಂತ್ರವಾಗಿರತಕ್ಕದ್ದು.
(25) ಗುತ್ತಿಗೆಗೆ ಪಡೆದವನು (3)ನೇ ಷರತ್ತಿನ ಮೇರೆಗೆ ಠೇವಣಿ ಇಟ್ಟ ಮತ್ತು ಅವನಿಗೆ ಹಿಂದಿರುಗಿಸಬಹುದಾದಂಥ ........................... ರೂ.ಗಳ ಮೊಬಲಗನ್ನು ಅಥವಾ ಅದರ ಭಾಗವನ್ನು ಗುತ್ತಿಗೆಯು ಮುಕ್ತಾಯವಾದಾಗ ಅಥವಾ ಮೊದಲೇ ಅಂತ್ಯಗೊಂಡಾಗ ಅವನಿಗೆ ಹಿಂದಿರುಗಿಸತಕ್ಕದ್ದು.
(26) ಸರ್ಕಾರ ಅಥವಾ ಅದರ ಅಧಿಕಾರಿಗಳ ಮತ್ತು ಗುತ್ತಿಗೆಗೆ ಪಡೆದವನ ನಡುವೆ, ಗುತ್ತಿಗೆಗೆ ಸಂಬಂಧಿಸಿ ಅಥವಾ ಅದರಿಂದ ಉದ್ಭವಿಸುವ ಅಥವಾ ಗುತ್ತಿಗೆ ಪತ್ರದಲ್ಲಿರುವ ಎಲ್ಲ ಅಥವಾ ಯಾವುವೇ ಉಪಬಂಧಗಳ ಬಗ್ಗೆ ಅರ್ಥ ಮಾಡುವಲ್ಲಿ ಯಾವುದೇ ವಿಷಯ ಅಥವಾ ವಸ್ತುವಿನ ಬಗ್ಗೆ ಯಾವುದೇ ಪಕ್ಷದ ಹಕ್ಕುಗಳು, ಕರ್ತವ್ಯಗಳು ಅಥವಾ ಹೊಣೆಗಾರಿಕೆಗಳನ್ನು ಕುರಿತು ಇನ್ನು ಮುಂದೆ ಯಾವುದೇ ಕಾಲದಲ್ಲಿ ಯಾವುದೇ ವಿವಾದ ಅಥವಾ ಭಿನ್ನಾಭಿಪ್ರಾಯ ಉಂಟಾದರೆ, ಸದರಿ ವಿವಾದವನ್ನು ಅಥವಾ ಭಿನ್ನಾಭಿಪ್ರಾಯವನ್ನು ಆ ಕಾಲದಲ್ಲಿರುವ ಡೆಪ್ಯುಟಿ ಕಮೀಷನರ ಮಧ್ಯಸ್ಥಿಕೆಗಾಗಿ ಕಳುಹಿಸತಕ್ಕದ್ದು ಮತ್ತು ಅವನ ತೀರ್ಮಾನವು ಅಂತಿಮವಾಗಿರತಕ್ಕದ್ದು.
(27) ಭೂಮಿಗೆ ಸೇರಿದ ಅಥವಾ ಅದಕ್ಕೆ ಸೇರಿದೆಯೆಂದು ಪ್ರತೀತಿಯಿರುವ ಅಥವಾ ಅದಕ್ಕೆ ಸಾಮಾನ್ಯವಾಗಿ ಹೊಂದಿಕೊಂಡಿರುವ ಅಥವಾ ಅದನ್ನು ಅನುಭವಿಸುತ್ತಿರುವ ಎಲ್ಲ ಹಕ್ಕುಗಳು, ಅನುಭೋಗದ ಹಕ್ಕುಗಳು ಮತ್ತು ಲಗತ್ತಾದವುಗಳು ಗುತ್ತಿಗೆಯಲ್ಲಿ ಸೇರಿವೆ. ಭೂಮಿಯ ಮೂಲಕ ಅಥವಾ ಭೂಮಿಯನ್ನು ಸುತ್ತುವರಿಯುವ ರಸ್ತೆಗಳು ಮತ್ತು ದಾರಿಗಳು ಮತ್ತು ನದಿಗಳು, ಹಳ್ಳಗಳು ಮತ್ತು ನಾಲೆಗಳ ಬಗ್ಗೆ ಅಸ್ತಿತ್ವದಲ್ಲಿರುವ ಸರ್ಕಾರದ ಮತ್ತು ಸಾರ್ವಜನಿಕರ ರೂಢಿಗತ ಹಕ್ಕುಗಳು ಮತ್ತು ಭೂಮಿಯ ಪಕ್ಕದಲ್ಲಿರುವ ಗಣಿಗಳು ಮತ್ತು ಕಲ್ಲಿನ ಗಣಿಗಳ ಬಗ್ಗೆ ಸರ್ಕಾರದ ಹಕ್ಕುಗಳನ್ನು ಕಾದಿರಿಸಲಾಗಿದೆ ಮತ್ತು ಅವುಗಳಿಗೆ ಗುತ್ತಿಗೆಯಿಂದಾಗಿ ಯಾವ ಬಾಧಕವೂ ಇಲ್ಲ.