107ನೇ ಪ್ರಕರಣದ ಮೇರೆಗಿನ 1ನೇಯ ನಮೂನೆಯಲ್ಲಿ ಸಾಮಾನ್ಯ ನೋಟೀಸನ್ನು ಅಂಥ ನೋಟೀಸನ್ನು ಡಂಗುರ ಬಾರಿಸುವುದರ ಮೂಲಕ ಸೂಚಿಸಿದ ಮೇಲೆ, ಮೋಜಣಿ ನಡೆಸಬೇಕಾಗಿರುವ ಗ್ರಾಮದ ಚಾವಡಿಯಲ್ಲಿ ಪ್ರಕಟಿಸತಕ್ಕದ್ದು.
(1) 108ನೇ ಪ್ರಕರಣದ ಮೇರೆಗೆ ನಿಯಮಿಸಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆ ವಿಸ್ತೀರ್ಣವನ್ನುಳ್ಳ ಪ್ರತಿಯೊಂದು ಹಿಡುವಳಿಯನ್ನು ಪ್ರತ್ಯೇಕವಾಗಿ ಅಳೆಯತಕ್ಕದ್ದು, ವರ್ಗೀಕರಿಸತಕ್ಕದ್ದು, ಕರನಿರ್ಧಾರಣೆ ಮಾಡತಕ್ಕದ್ದು ಮತ್ತು ಮೇರೆ ಗುರುತುಗಳಿಂದ ನಿರ್ದಿಷ್ಟಪಡಿಸತಕ್ಕದ್ದು ಮತ್ತು ಭೂದಾಖಲೆಗಳಲ್ಲಿ ಅದನ್ನು ಒಂದು ಸರ್ವೇ ನಂಬರಾಗಿ ನಮೂದಿಸತಕ್ಕದ್ದು.
(ii) ಯಾವ ಹಿಡುವಳಿಯ ವಿಸ್ತೀರ್ಣವು ಗೊತ್ತು ಮಾಡಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆಯಿದೆಯೋ ಅಂಥ ಪ್ರತಿಒಂದು ಹಿಡುವಳಿಯನ್ನು ಪ್ರತ್ಯೇಕವಾಗಿ ಅಳೆಯತಕ್ಕದ್ದು ಮತ್ತು ಕರನಿರ್ಧಾರಣೆ ಮಾಡತಕ್ಕದ್ದು ಮತ್ತು ಈ ಮುಂದೆ ಉಲ್ಲೇಖಿಸಿರುವ ನಿಯಮಗಳ ಉಪಬಂಧಕ್ಕನುಸಾರವಾಗಿ ಯಾವ ಸರ್ವೇ ನಂಬರಿನಲ್ಲಿ ಅಡಕವಾಗಬೇಕೆಂದು ನಿರ್ದೇಶಿಸಲಾಗಿದೆಯೋ ಆ ಸರ್ವೇ ನಂಬರನ್ನು ಒಂದು ಉಪವಿಭಾಗವಾಗಿ ಭೂದಾಖಲೆಗಳಲ್ಲಿ ನಮೂದಿಸತಕ್ಕದ್ದು.
(1) ಕೈಗೊಳ್ಳಲಾದ ಮೋಜಣಿಯ ರೀತಿಗನುಸಾರವಾಗಿ ಈ ಕೆಳಕಂಡ ಪುಸ್ತಕಗಳಲ್ಲಿ ಮತ್ತು ನಮೂನೆಗಳಲ್ಲಿ ಅಳತೆಗಳನ್ನು ನಮೂದಿಸತಕ್ಕದ್ದು.-
(ಎ) ಸುತ್ತು ಮೋಜಣಿ ಪುಸ್ತಕ ಮತ್ತು ಸೂಚಿನಕಾಶೆ
(ಬಿ) ಟಿಪ್ಪಣಿ ಪುಸ್ತಕ ಅಥವಾ ಅಡ್ಡಣಿಗೆ ಹಾಳೆ
(ಸಿ) ಪಕ್ಕಾ ಪುಸ್ತಕ ಅಥವಾ ಗುಣಾಕಾರ ಪುಸ್ತಕ (ಮೂಲ ಮೋಜಣಿ)
(2) (1)ನೇಯ ಉಪನಿಯಮದಲ್ಲಿ ನಮೂದಿಸಿದ ಪುಸ್ತಕಗಳು ಮತ್ತು ನಮೂನೆಗಳ ಜೊತೆಗೆ ಅವಶ್ಯಕವಾದಗಲೆಲ್ಲಾ ಈ ಕೆಳಕಂಡ ಪುಸ್ತಕಗಳನ್ನು ಮತ್ತು ನಮೂನೆಗಳನ್ನು ತಯಾರಿಸಬಹುದು ಮತ್ತು ಇಡಬಹುದು.-
(ಎ) ಖಾಯಂದಾರ ತಃಖ್ತೆ.
(ಬಿ) ಪಹನಿ ತಃಖ್ತೆ
(ಸಿ) ವಸೂಲ್ ಬಾಕಿ
(ಡಿ) ಜೋಡಿದಾರ ತಃಖ್ತೆ
(ಇ) ಲಾವಣಿ ಫೈಸಲ್ ಪತ್ರಿಕೆ
(ಎಫ್) ಮರಗಳ ವಿವರಣಾ ಪತ್ರ (ಗಿಡಪತ್ರಿಕೆ)
(ಜಿ) ಗೋಮಾಳದ ವಿವರಣೆ ಪತ್ರ (ಹುಲ್ಬನ್ನಿ ತಃಖ್ತೆ)
(ಹೆಚ್) ಬಂಜರು ಭೂಮಿಗಳ ವಿವರಣೆ ಪತ್ರ (ಬಂಜರು ತಃಖ್ತೆ)
(ಐ) ಕಮ್ಮಿ ಜಾಸ್ತಿ ಪತ್ರಿಕೆ
(ಞಜೆ) ಖುಷ್ಕಿ, ತರಿ ಮತ್ತು ಬಾಗಾಯಿತು ಭೂಮಿ ಅಥವಾ ಪ್ಲಾಂಟೇಷನ್ ಭೂಮಿಗಳ ಜಂತ್ರಿಗಳು.
(1) ರನಿರ್ಧಾರಣೆಯ ಉದ್ದೇಶಕ್ಕಾಗಿ, ಎಲ್ಲಾ ಭೂಮಿಗಳನ್ನು ಅವುಗಳ ಉತ್ಪಾದನಾ ಗುಣಗಳಿಗನುಸಾರವಾಗಿ ವರ್ಗೀಕರಿಸತಕ್ಕದ್ದು. ಮೋಜಣಿಯು ಅನ್ವಯಿಸುವ ರಾಜ್ಯದ ವಿವಿಧ ಪ್ರದೇಶಗಳಿಗೆ ಮತ್ತು ಸಾಗುವಳಿಯ ಸ್ವರೂಪಕ್ಕೆ ಸಂಬಂಧಪಟ್ಟಂತೆ ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಮಿಷನರ ಆದೇಶಗಳ ಮೇರೆಗೆ ವರ್ಗಗಳ ಸಂಖ್ಯೆಯನ್ನು ಮತ್ತು ಅವುಗಳ ಸಾಪೇಕ್ಷ ಮೌಲ್ಯವನ್ನು ಆಣೆಯಲ್ಲಿ (16 ಅಣೆಗಳು ಅಂದರೆ ಶೇಕಡಾ 100ರ ವರ್ಗೀಕರಣ ಮೌಲ್ಯ) ಗೊತ್ತು ಮಾಡತಕ್ಕದ್ದು, ಮತ್ತು ವರ್ಗೀಕರಣದ ಫಲಿತಾಂಶವನ್ನು ಈ ಕೆಳಕಂಡ ಪುಸ್ತಕಗಳಲ್ಲಿ ಮತ್ತು ನಮೂನೆಗಳಲ್ಲಿ ನಮೂದಿಸತಕ್ಕದ್ದು:
(ಎ) ಪ್ರತಿ ಪುಸ್ತಕ
(ಬಿ) ಬಾಗಾಯಿತು ತಃಖ್ತೆ
(ಸಿ) ದರವಾರಿ
(ಡಿ) ವರ್ಗಾ ಮಾಡುವವನ ರಿಜಿಸ್ಟ್ರರು
(ಇ) ಮಣ್ಣಿನ ಮತ್ತು ನೀರಿನ ಕರ ನಿರ್ಧಾರಣೆಯ ವಿಭಾಗವನ್ನು ಸೂಚಿಸುವ ವಿವರಣೆ ಪತ್ರ.
(ಎಫ್) ಅಕಾರ್ ಬಂದ್
(2) ಕೃಷಿ ಯೋಗ್ಯವಲ್ಲವೆಂದು ಸೇರಿಸಲ್ಪಟ್ಟ ಭೂಮಿಯನ್ನು “ಪೋಟ್ ಖರಾಬ್” ಎಂದು ವರ್ಗೀಕರಣದಲ್ಲಿ ಭಾವಿಸತಕ್ಕದ್ದು. ಪೋಟ್ ಖರಾಬ್ ಭೂಮಿಗಳನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು,-
(ಎ) ಹಿಡುವಳಿದಾರನ ಹೊಲದ ಮನೆಗಳು ಅಥವಾ ಕಣಗಳೂ ಸೇರಿ ಮೋಜಣಿ ಕಾಲದಲ್ಲಿ ವ್ಯವಸಾಯಕ್ಕೆ ಅನುಪಯುಕ್ತವೆಂದು ವರ್ಗೀಕರಿಸಲ್ಪಟ್ಟವುಗಳು:-
(ಬಿ) (i) ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಾಗಿರುವುದರಿಂದ ಅಥವಾ ಕೊಟ್ಟಿರುವುದರಿಂದ;
(ii) ಅದು ರಸ್ತೆಯಿಂದ ಅಥವಾ ಅಂಗೀಕೃತ ಕಾಲುದಾರಿಯಿಂದ ಅಥವಾ ಹಿಡುವಳಿದಾರರಲ್ಲದ ಇತರ ವ್ಯಕ್ತಿಗಳಿಂದ ನೀರಾವರಿಗೆ, ಕುಡಿಯುವುದಕ್ಕೆ ಅಥವಾ ಗೃಹೋದ್ದೇಶಗಳಿಗೆ ಉಪಯೋಗಿಸಲ್ಪಡುವ ಕೆರೆ ಅಥವಾ ತೊರೆಯಿಂದ ಆವೃತ್ತವಾಗಿರುವುದರಿಂದ;
(iii) ಹೂಳೂವ ಅಥವಾ ಸುಡುವ ಭೂಮಿಯಾಗಿ ಉಪಯೋಗಿಸಲ್ಪಟ್ಟಿರುವುದರಿಂದ;
(iv) ಗ್ರಾಮೀಣ ಮಣ್ಣಿನ ಪಾತ್ರೆಗಳನ್ನು ಮಾಡಲು ಕೊಟ್ಟಿರುವುದರಿಂದ ಕರನಿರ್ಧಾರಣೆ ಮಾಡಲ್ಪಡದವುಗಳು.