ನಮೂನೆ - 38 (113 ಮತ್ತು 124ನೇ ನಿಯಮವನ್ನು ನೋಡಿ)
- ಜಪ್ತಿಯಾದ ಸ್ವತ್ತಿನ ಹರಾಜು ಬಗೆಗಿನ ಇಸ್ತಿಹಾರಿನ ಮತ್ತು ಲಿಖಿತ ನೋಟೀಸಿನ ನಮೂನೆ.
ಶ್ರೀ/ಶ್ರೀಮತಿ ............................. ರವರ ಈ ಕೆಳಗೆ ನಿರ್ಧಿಷ್ಟಪಡಿಸಿದ ಸ್ವತ್ತನ್ನು ಸದರಿ .......................... ....................... ರಿಂದ ಬರಬೇಕಾದ ...................... ರೂ.ಗಳ ಭೂ ಕಂದಾಯದ ಬಾಕಿಗಾಗಿ ಜಪ್ತಿ ಮಾಡುವುದರಿಂದ ಮತ್ತು ಸದರಿ ಮೊಬಲಗನ್ನು ಸದರಿ ಜಪ್ತಿ ಹಾಗೂ ಮಾರಾಟಕ್ಕಾಗಿ ತಗುಲಿದ ಎಲ್ಲ ಕಾನೂನು ಬದ್ದವಾದ ಖರ್ಚು ವೆಚ್ಚಗಳೊಡನೆ ಕೆಳಗೆ ನಮೂದಿಸಿದ ಸವತ್ತಿನ ಮಾರಾಟದಿಂದ ವಸೂಲು ಮಾಡುವುದು ಅವಶ್ಯಕವಾಗಿರುವುದರಿಂದ:
............................... ಜಿಲ್ಲೆಯ ................................ ತಾಲ್ಲೂಕಿನ .................................. ರಲ್ಲಿ .........................ನ ತಹಶೀಲ್ದಾರನು (ಅಥವಾ ನೇಮಕ ಮಾಡಲಾದ ಇತರ ವ್ಯಕ್ತಿಯು) 19 .....................ರ ..................................... ತಿಂಗಳ ................................ ದಿನಾಂಕದಂದು ............................. ಗಂಟೆಗೆ, ಕೆಳಗೆ ನಮೂದಿಸಿದ ಷರತ್ತುಗಳಿಗೊಳಪಟ್ಟು ಅತ್ಯಂತ ಹೆಚ್ಚಿನ ಸವಾಲುದಾರನಿಗೆ, ಈ ಕೆಳಗೆ ನಿರ್ದಿಷ್ಟಪಡಿಸಿದ ಸ್ವತ್ತಿನಲ್ಲಿ ಸದರಿ ..............................ಗೆ ಇದ್ದ ಹಕ್ಕು, ಹಕ್ಕು, ಮೂಲ ಮತ್ತು ಹಿತಾಸಕ್ತಿಯನ್ನು ಬೇಷರತ್ತಾಗಿ ಮತ್ತು ಅದನ್ನು ಅಥವಾ ಅದರ ಪೈಕಿ ಯಾವುದನ್ನಾದರೂ ಅಥವಾ ದರಿಂದ ಬರುವ ಉತ್ಪತ್ತಿಯನ್ನು ವಿಲೇ ಮಾಡುವ ಬಗ್ಗೆ ಸದರಿ ..........................ನ್ನು ಹೊಂದಿದ್ದ ಅಧಿಕಾರಗಳನ್ನು ಸವಾಲುದಾರನು ತನ್ನ ಸ್ವಂತ ಪ್ರಯೋಜನಕ್ಕಾಗಿ ಕಾನೂನಿಗೆ ಅನುಸಾರವಾಗಿ ಚಲಾಯಿಸಬಹುದೆಂದು ಈ ಮೂಲಕ ನೋಟೀಸು ಕೊಡಲಾಗಿದೆ.
ಚರಸ್ವತ್ತು
| ರಾಶಿಯ ಕ್ರಮ ಸಂಖ್ಯೆ | ವಸ್ತುಗಳ ಸಂಖ್ಯೆ ಮತ್ತು ಅವುಗಳ ವರ್ಣನೆ | ಎಲ್ಲಿ ಜಪ್ತಿ ಮಾಡಲಾಯಿತು | ಈಗ ಎಲ್ಲಿ ಇಡಲಾಗಿದೆ | ಎಲ್ಲಿ ಅವುಗಳನ್ನು ನೋಡಬಹುದು | ಮಾರಾಟವು ಖಾಯಂ ಗೊಳಿಸುವಿಕೆತೆ ಒಳಪಟ್ಟಿದೆಯೇ? |
| 1 | 2 | 3 | 4 | 5 | 6 |
ಸ್ಥಿರ ಸ್ವತ್ತು
| ಗುಂಪಿನ ಕ್ರಮ ಸಂಖ್ಯೆ | ಸ್ಥಳೀಯ ಪರಿಸ್ಥಿತಿ, ಬರಬಹುದಾಧ ಅಥವಾ ಅಂದಾಜು ಮಾಡಲಾದ ಗೇಣಿ ಅಥವಾ ವಾರ್ಷಿಕ ಮೌಲ್ಯ ಮತ್ತು ಗೇಣಿಗೆ ಕೊಟ್ಟರೆ ಎಷ್ಟು ಅವಧಿಯವರೆಗೆ, ಯಾವ ಷರತ್ತುಗಳ ಮೇರೆಗೆ ಮತ್ತು ಯಾರಿಗೆ ಇವುಗಳನ್ನು ಒಳಗೊಂಡು ಗುಂಪಿನ ವರ್ಣನೆ | ಸರ್ವೆ ನಂಬರು, ಮುನಸಿಪಲ್ ನಂಬರು ಮತ್ತು ಇತರ ಹಣಕಾಸಿನ ವಿವರಣೆ | ಯಾವುದೇ ಸ್ಥಳೀಯ ಉಪಕರಣ ಗುಂಪಿಗೆ ಸಂಬಂಧಿಸಿದ ಕೊಡಬೇಕಾದ ಇತರ ಯಾವುದೇ ಹಣವೂ ಸೇರಿ ಸರ್ಕಾರಕ್ಕೆ ಸಲ್ಲಬೇಕಾದ ಮೊಬಲಗು | ಹಾಲಿ ಅಧಿಭೋಗದಾರ | ಇತರ ವಿವರಗಳು |
| 1 | 2 | 3 | 4 | 5 | 6 |
ಮಾರಾಟದ ಷರತ್ತುಗಳು
-
ಗೊತ್ತುಪಡಿಸಿದ ದಿನದಂದು ಹರಾಜು ನಡೆಯತಕ್ಕದ್ದು ಮತ್ತು ಅವಶ್ಯಕವಾದರೆ ಉದ್ಘೋಷಣೆಯಲ್ಲಿ ನಿರ್ದಿಷ್ಟಪಡಿಸಿದ ಎಲ್ಲ ಸ್ವತ್ತುಗಳು ಮಾರಾಟವಾಗುವವರೆಗೆ (ರಜಾ ದಿನಗಳ ಹೊರತು) ದಿನದಿಂದ ದಿನಕ್ಕೆ ಹರಾಜನ್ನು ಮುಂದುರಿಸತಕ್ಕದ್ದು. ಮಾರಾಟವನ್ನು ನಡೆಸುವ ಅಧಿಕಾರಿಯು ತನ್ನ ವಿವೇಚನಾನುಸಾರ, ಯಾವುದೇ ಮಾರಾಟವನ್ನು ಮೂರು ದಿನಗಳಿಗೆ ಮೀರದ ಅವಧಿಯವರೆಗೆ ಮುಂದಕ್ಕೆ ಹಾಕಬಹುದು.
-
ಯಾವ ಹಣದ ವಸೂಲಿಯ ಸಲುವಾಗಿ ಸ್ಥಿರಾಸ್ವತ್ತನ್ನು ಮಾರಾಟ ಮಾಡಲಾಗುತ್ತಿದೆಯೇ ಅಂಥ ಹಣವನ್ನು ಪಡೆಯಲು ಹಕ್ಕುಳ್ಳ ವ್ಯಕ್ತಿ ಡೆಪ್ಯುಟಿ ಕಮೀಷನರ್ ಅನುಮತಿಯಿಲ್ಲದೆ ಸವಾಲು ಮಾಡಲು ಅಥವಾ ಸ್ವತ್ತನ್ನು ಖರೀದಿ ಮಾಡಲು ಅವಕಾಶವಿರತಕ್ಕದ್ದಲ್ಲ.
-
ಯಾವ ಹಣದ ವಸೂಲಿಗಾಗಿ ಸ್ಥಿರಸ್ವತ್ತನ್ನು ಹರಾಜು ಮಾಡಲಾಗುತ್ತಿದೆಯೋ ಅಂಥ ಹಣವನ್ನು ಪಡೆಯಲು ಹಕ್ಕುಳ್ಳ ವ್ಯಕ್ತಿಯು ಡೆಪ್ಯುಟಿ ಕಮೀಷನರ್ ಅನುಮತಿಯಿಲ್ಲದೆ ತಾನಾಗಲಿ ಅಥವಾ ಇತರ ವ್ಯಕ್ತಿಯ ಮೂಲಕವಾಗಿಯಾಗಲೀ ಖರೀದಿ ಮಾಡಿದರೆ, ಮಾರಾಟದಿಂದ ಯಾರ ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆಯೋ ಆ ಬಾಕಿದಾರನು ಅಥವಾ ಯಾವನೇ ಇತರ ವ್ಯಕ್ತಿಯು ಸಲ್ಲಿಸಿದ ಅರ್ಜಿಯ ಮೇಲೆ ಉಪವಿಭಾಗದ ಅಸಿಸ್ಟೆಂಟ್ ಕಮಿಷನರು ತಾನು ಸೂಕ್ತವೆಂದು ಆಲೋಚಿಸಿದರೆ, ಆದೇಶದ ಮೂಲಕ ಆ ಹರಾಜನ್ನು ತಳ್ಳಿ ಹಾಕಬಹುದು; ಮತ್ತು ಅಂಥ ಅರ್ಜಿಯ ಹಾಗೂ ಆದೇಶಗಳ ಖರ್ಚುಗಳನ್ನು ಮತ್ತು ಮರು ಹರಾಜಿನಿಂದ ಉಂಟಾಗಬಹುದಾದ ಬೆಲೆಯಲ್ಲಿ ಕೊರತೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲ ವೆಚ್ಚಗಳನ್ನು ಯಾರಿಗಾಗಿ ಹರಾಜನ್ನು ಮೂಲತಃ ನಡೆಸಲಾಯಿತೋ ಅಂಥ ವ್ಯಕ್ತಿಯು ಸಂದಾಯ ಮಾಡತಕ್ಕದ್ದು.
-
ಹರಾಜಿನ ಮೂಲಕ ಆಗುವ ಯಾವುದೇ ಮಾರಾಟದ ಸಂಬಂಧದಲ್ಲಿ ನಡೆಯಬೇಕಾದ ಯಾವುದೇ ಕರ್ತವ್ಯವನ್ನು ಹೊಂದಿರುವ ಯಾವನೇ ಅಧಿಕಾರಿಯು ಮತ್ತು ಅಂಥ ಅಧಿಕಾರಿಯು ನೇಮಿಸಿರುವ ಅಥವಾ ಅವನಿಗೆ ಅಧೀನನಾಗಿರುವ ಯಾವನೇ ವ್ಯಕ್ತಿಯೂ ಪ್ರತ್ಯಕ್ಷವಾಗಿ ಆಗಲೀ ಪರೋಕ್ಷವಾಗಿ ಆಗಲೀ ಆ ಸ್ವತ್ತಿನ ಬಗ್ಗೆ ಸವಾಲು ಮಾಡತಕ್ಕದ್ದಲ್ಲ ಅಥವಾ ಕೊಂಡುಕೊಳ್ಳತಕ್ಕದ್ದಲ್ಲ.
-
ಹರಾಜನ್ನು ನಡೆಸುವ ಅಧಿಕಾರಿಯು ಅತ್ಯಂತ ಹೆಚ್ಚಿನ ಸವಾಲನ್ನು ಅಂಗೀಕರಿಸುವ ಅಥವಾ ನಿರಾಕರಿಸುವ ವಿವೇಚನೆಯನ್ನು ಹೊಂದಿರತಕ್ಕದ್ದು.
-
ಹರಾಜಿನ ದಿನಾಂಕದಂದು ಯಾವ ಸವಾಲುದಾರರೂ ಇಲ್ಲದಿದ್ದರೆ, ಸ್ವತ್ತನ್ನು ಸರ್ಕಾರವು ಖರೀದಿ ಮಾಡಬಹುದು.
-
ಸ್ಥಿತ ಸ್ವತ್ತಿನ ಖರೀದಿದಾರನೆಂದು ಘೋಷಿಸಲ್ಪಟ್ಟ ವ್ಯಕ್ತಿಯು ಸವಾಲಿನ ಮೊಬಲಗಿನ ಶೇಕಡಾ ಇಪ್ಪತ್ತೈದರಷ್ಟು ಹಣವನ್ನು ತಕ್ಷಣ ಸಂದಾಯ ಮಾಡತಕ್ಕದ್ದು ಮತ್ತು ಉಳಿದ ಹನವನ್ನು ಹದಿನೈದು ದಿನಗಳಲ್ಲಿ ಸಂದಾಯ ಮಾಡತಕ್ಕದ್ದು. ಚರ ಸ್ವತ್ತಿನ ಸಂದರ್ಭದಲ್ಲಿ, ಅವನು ಖರೀದಿದಾರನೆಂದು ಘೋಷಿಸಲ್ಪಟ್ಟ ಕೂಡಲೇ ಸವಾಲಿನ ಒಟ್ಟು ಮೊಬಲಗನ್ನು ಸಂದಾಯ ಮಾಡತಕ್ಕದ್ದು.
-
ಕ) 6ನೇ ಷರತ್ತಿನಲ್ಲಿ ನಮೂದಿಸಿದ ಸವಾಲಿನ ಮೊಬಲಗನ್ನು ಸಂದಾಯ ಮಾಡಲು ತಪ್ಪಿದ ಸಂದರ್ಭದಲ್ಲಿ, ಸ್ವತ್ತನ್ನು ಮರು ಹರಾಜಿಗೆ ಇಡಲಾಗುವುದು ಮತ್ತು ಮೊದಲನೇ ಹರಾಜಿನ ಸಂಬಂಧದಲ್ಲಿ ತಗುಲಿದ ವೆಚ್ಚಗಳನ್ನು ಹಾಗೂ ಖರೀದಿದಾರನು ಹಣವನ್ನು ಸಂದಾಯ ಮಾಡಲು ತಪ್ಪಿದ ಕಾರಣದಿಂದ ಆದ ಮರು ಹರಾಜಿನಲ್ಲಿ ಉಂಟಾಗಬಹುದಾದ ಬೆಲೆಯ ಕೊರತೆಯನ್ನು ಮತ್ತು ಮರು ಹರಾಜಿನ ಸಂಬಂಧದಲ್ಲಿ ತಗುಲಿದ ಎಲ್ಲ ವೆಚ್ಚಗಳನ್ನು ಭೂಕಂದಾಯದ ಬಾಕಿಯೆಂಬಂತೆ ಹಣ ಸಂದಾಯ ಮಾಡಲು ತಪ್ಪಿದ ಖರೀದಿದಾರನಿಂದ ವಸೂಲು ಮಾಡತಕ್ಕದ್ದು.
(ಖ) ಸ್ಥಿರ ಸ್ವತ್ತಿನ ಖರೀದಿದಾರನು ಸವಾಲು ಮೊಬಲಗಿನ ಬಾಕಿಯನ್ನು 6ನೇ ಷರತ್ತಿನ್ನು ನಿರ್ದಿಷ್ಟ ಪಡಿಸಿದ ಅವಧಿಯೊಳಗೆ ಸಂದಾಯ ಮಾಡಲು ತಪ್ಪಿದರೆ, ಶೇಕಡಾ ಇಪ್ಪತ್ತೈದರಂತೆ ಸಂದಾಯ ಮಾಡಿದ ಮುಂಗಡ ಹಣದಿಂದ ಹರಾಜಿನ ವೆಚ್ಚಗಳನ್ನು ಮುರಿದುಕೊಂಡ ತರುವಾಯ ಉಳಿದುದನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು ಮತ್ತು ಸ್ವತ್ತನ್ನು ಮರು ಹರಾಜು ಮಾಡತಕ್ಕದ್ದು.
(9) ಮಾರಾಟವು ಡೆಪ್ಯುಟಿ ಕಮೀಷನರನ ಸ್ಥಿರೀಕರಣಕ್ಕೆ ಒಳಪಟ್ಟಿರತಕ್ಕದ್ದು.
(10) ಹರಾಜನ್ನು ತಳ್ಳಿ ಹಾಕಿದ ಸಂದರ್ಭದಲ್ಲಿ, ಖರೀದಿದಾರನು ಠೇವಣಿಯಿಟ್ಟ ಹಣವನ್ನು ಅವನಿಗೆ ವಾಪಸ್ಸು ಕೊಡತಕ್ಕದ್ದು.
(11) ಮಾರಾಟವನ್ನು ಸ್ಥಿರೀಕರಿಸಿದ ತರುವಾಯ ಯಶಸ್ವೀ ಸವಾಲುದಾರದ ಹೆಸರಿನಲ್ಲಿ ಖರೀದಿಯ ಪ್ರಮಾಣ ಪತ್ರವನ್ನು ಕೊಡಲಾಗುವುದು.
(12) ಯಾವುದೇ ಭೂಮಿಯನ್ನು ಖರೀದಿ ಮಾಡಿದ ಮತ್ತು ಖರೀದಿಯ ಪ್ರಮಾಣ ಪತ್ರವನ್ನು ಪಡೆದ ವ್ಯಕ್ತಿಯು ಆ ಮಾರಾಟದ ದಿನಾಂಕಕ್ಕೆ ಮೊದಲನೆ ಯಾವುದೇ ಅವಧಿಯ ಬಗೆಗಿನ ಭೂಕಂದಾಯದ ಸಂದಾಯಕ್ಕೆ ಹೊಣೆಗಾರನಾಗಿರತಕ್ಕದ್ದಲ್ಲ.
ನಮೂನೆ - 39 (124 (2)ನೇ ನಿಯಮವನ್ನು ನೋಡಿ) ಅಧಿಭೋಗದಲ್ಲರದ ಭೂಮಿಯ ಅಧಿಭೋಗದ ಹಕ್ಕಿನ ಹರಾಜಿನ (ಇಸ್ತಿಹಾರಿನ ಮತ್ತು ಲಿಖಿತ ನೋಟೀಸಿನ) ನಮೂನೆ
.................................. ಜಿಲ್ಲೆಯ ................................... ತಾಲ್ಲೂಕಿನ ............................. ಹೋಬಳಿಯ .............................. ಗ್ರಾಮದಲ್ಲಿ ಇರುವ ಅಧಿಭೋಗದಲ್ಲಿಲ್ಲದ (ಕೆಳಗೆ ನಮೂದಿಸಿದ) ಭೂಮಿಯ ಅಧಿಭೋಗದ ಹಕ್ಕನ್ನು ..................................ದ 19 ...............ರ ......................... ತಿಂಗಳ ......................... ದಿನಾಂಕದಂದು ................................. ಪೂರ್ವಾಹ್ನ .......................... ಅಪರಾಹ್ನ ಸಮಯಕ್ಕೆ ಅಥವಾ ಸಮಯದ ಅನಂತರ ಬಹಿರಂಗ ಹರಾಜಿಗೆ ಇಡಲಾಗುವುದೆಂದು ಈ ಮೂಲಕ ನೋಟೀಸು ಕೊಡಲಾಗಿದೆ.
...........................................ನ ತಹಶೀಲ್ದಾರನಿಗೆ ಅರ್ಜಿ ಸಲ್ಲಿಸಿ, ಹರಾಜಿನ ದಿನಕ್ಕೆ ಮೊದಲು ಕಛೇರಿಯ ಯಾವುದೇ ಕೆಲಸದ ದಿನದಂದು ಕಛೇರಿಯ ವೇಳೆಯಲ್ಲಿ ಅಥವಾ ಹರಾಜನ್ನು ನಡೆಸುವ ಅಧಿಕಾರಿಗೆ ಅರ್ಜಿ ಸಲ್ಲಿಸಿ ಹರಾಜಿನ ಕಾಲದಲ್ಲಿ .....................................................ನು ಸಹಿ ಮಾಡಿದ ಹರಾಜಿನ ಲಿಖಿತ (ಅಥವಾ ಮುದ್ರಿತ) ಷರತ್ತುಗಳನ್ನು ನೋಡಿಕೊಳ್ಳಬಹುದು ಮತ್ತು ಸವಾಲು ಮಾಡಬಯಸುವವರು ಸವಾಲು ಮಾಡುವ ಮೊದಲು ಸದರಿ ಷರತ್ತುಗಳನ್ನು ತಿಳಿದುಕೊಂಡಿರಬೇಕೆಂದು ಎಚ್ಚರಿಕೆ ಕೊಡಲಾಗಿದೆ.
ಭೂಮಿ ವಿವರಣೆ.- (ಇಲ್ಲಿ ಭೂಮಿಯ ಪೂರ್ಣ ವಿವರಗಳನ್ನು ನೋಡಿ) ಅಂದರೆ, ಅದನ್ನು ಮೋಜಣಿ ಮಾಡಲಾಗಿದ್ದರೆ, ಅದರ ಸರ್ವೇ ನಂಬರು ಅಥವಾ ನಂಬರುಗಳು; ಮೋಜಣಿಯಾಗಿಲ್ಲದಿದ್ದರೆ, ಅದರ ಮೇರೆಗಳು, ಭೂಮಿಯ ವರ್ಗ, ಅಂದರೆ, ಅದು ಖುಷ್ಕಿ ಬೆಳೆಯ ಭೂಮಿಯೇ ಬಾಗಾಯ್ತು ಭೂಮಿಯೇ ಅಥವಾ ಕಟ್ಟಡ ನಿವೇಶನವೇ ಇತ್ಯಾದಿಯೇ, ಭೂಮಿಯ ವಿಸ್ತೀರ್ಣ ಅಥವಾ ಅದರ ಸರಿಸುಮಾರು ವಿಸ್ತೀರ್ಣ. ಸದ್ಯದಲ್ಲಿ ಆ ಭೂಮಿಯ ಬಗ್ಗೆ ಸಂದಾಯ ಮಾಡುತ್ತಿರುವ ಕಂದಾಯ ಯಾವುದಾದರೂ ಇದ್ದರೆ, ಅದು ಮತ್ತು ಹರಾಜನ್ನು ನಡೆಸುವ ಅಧಿಕಾರಿಯ ಪದನಾಮ.
(ಸಹಿ) .................................. ಡೆಪ್ಯುಟಿ ಕಮೀಷನರು, (ಅಥವಾ ಇತರ ಸಕ್ಷಮ ಅಧಿಕಾರಿ)
ದಿನಾಂಕ: ....................................