107ನೇ ಪ್ರಕರಣದ ಮೇರೆಗಿನ 1ನೇಯ ನಮೂನೆಯಲ್ಲಿ ಸಾಮಾನ್ಯ ನೋಟೀಸನ್ನು ಅಂಥ ನೋಟೀಸನ್ನು ಡಂಗುರ ಬಾರಿಸುವುದರ ಮೂಲಕ ಸೂಚಿಸಿದ ಮೇಲೆ, ಮೋಜಣಿ ನಡೆಸಬೇಕಾಗಿರುವ ಗ್ರಾಮದ ಚಾವಡಿಯಲ್ಲಿ ಪ್ರಕಟಿಸತಕ್ಕದ್ದು.
(1) 108ನೇ ಪ್ರಕರಣದ ಮೇರೆಗೆ ನಿಯಮಿಸಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆ ವಿಸ್ತೀರ್ಣವನ್ನುಳ್ಳ ಪ್ರತಿಯೊಂದು ಹಿಡುವಳಿಯನ್ನು ಪ್ರತ್ಯೇಕವಾಗಿ ಅಳೆಯತಕ್ಕದ್ದು, ವರ್ಗೀಕರಿಸತಕ್ಕದ್ದು, ಕರನಿರ್ಧಾರಣೆ ಮಾಡತಕ್ಕದ್ದು ಮತ್ತು ಮೇರೆ ಗುರುತುಗಳಿಂದ ನಿರ್ದಿಷ್ಟಪಡಿಸತಕ್ಕದ್ದು ಮತ್ತು ಭೂದಾಖಲೆಗಳಲ್ಲಿ ಅದನ್ನು ಒಂದು ಸರ್ವೇ ನಂಬರಾಗಿ ನಮೂದಿಸತಕ್ಕದ್ದು.
(ii) ಯಾವ ಹಿಡುವಳಿಯ ವಿಸ್ತೀರ್ಣವು ಗೊತ್ತು ಮಾಡಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆಯಿದೆಯೋ ಅಂಥ ಪ್ರತಿಒಂದು ಹಿಡುವಳಿಯನ್ನು ಪ್ರತ್ಯೇಕವಾಗಿ ಅಳೆಯತಕ್ಕದ್ದು ಮತ್ತು ಕರನಿರ್ಧಾರಣೆ ಮಾಡತಕ್ಕದ್ದು ಮತ್ತು ಈ ಮುಂದೆ ಉಲ್ಲೇಖಿಸಿರುವ ನಿಯಮಗಳ ಉಪಬಂಧಕ್ಕನುಸಾರವಾಗಿ ಯಾವ ಸರ್ವೇ ನಂಬರಿನಲ್ಲಿ ಅಡಕವಾಗಬೇಕೆಂದು ನಿರ್ದೇಶಿಸಲಾಗಿದೆಯೋ ಆ ಸರ್ವೇ ನಂಬರನ್ನು ಒಂದು ಉಪವಿಭಾಗವಾಗಿ ಭೂದಾಖಲೆಗಳಲ್ಲಿ ನಮೂದಿಸತಕ್ಕದ್ದು.
(1) ಕೈಗೊಳ್ಳಲಾದ ಮೋಜಣಿಯ ರೀತಿಗನುಸಾರವಾಗಿ ಈ ಕೆಳಕಂಡ ಪುಸ್ತಕಗಳಲ್ಲಿ ಮತ್ತು ನಮೂನೆಗಳಲ್ಲಿ ಅಳತೆಗಳನ್ನು ನಮೂದಿಸತಕ್ಕದ್ದು.-
(ಎ) ಸುತ್ತು ಮೋಜಣಿ ಪುಸ್ತಕ ಮತ್ತು ಸೂಚಿನಕಾಶೆ
(ಬಿ) ಟಿಪ್ಪಣಿ ಪುಸ್ತಕ ಅಥವಾ ಅಡ್ಡಣಿಗೆ ಹಾಳೆ
(ಸಿ) ಪಕ್ಕಾ ಪುಸ್ತಕ ಅಥವಾ ಗುಣಾಕಾರ ಪುಸ್ತಕ (ಮೂಲ ಮೋಜಣಿ)
(2) (1)ನೇಯ ಉಪನಿಯಮದಲ್ಲಿ ನಮೂದಿಸಿದ ಪುಸ್ತಕಗಳು ಮತ್ತು ನಮೂನೆಗಳ ಜೊತೆಗೆ ಅವಶ್ಯಕವಾದಗಲೆಲ್ಲಾ ಈ ಕೆಳಕಂಡ ಪುಸ್ತಕಗಳನ್ನು ಮತ್ತು ನಮೂನೆಗಳನ್ನು ತಯಾರಿಸಬಹುದು ಮತ್ತು ಇಡಬಹುದು.-
(ಎ) ಖಾಯಂದಾರ ತಃಖ್ತೆ.
(ಬಿ) ಪಹನಿ ತಃಖ್ತೆ
(ಸಿ) ವಸೂಲ್ ಬಾಕಿ
(ಡಿ) ಜೋಡಿದಾರ ತಃಖ್ತೆ
(ಇ) ಲಾವಣಿ ಫೈಸಲ್ ಪತ್ರಿಕೆ
(ಎಫ್) ಮರಗಳ ವಿವರಣಾ ಪತ್ರ (ಗಿಡಪತ್ರಿಕೆ)
(ಜಿ) ಗೋಮಾಳದ ವಿವರಣೆ ಪತ್ರ (ಹುಲ್ಬನ್ನಿ ತಃಖ್ತೆ)
(ಹೆಚ್) ಬಂಜರು ಭೂಮಿಗಳ ವಿವರಣೆ ಪತ್ರ (ಬಂಜರು ತಃಖ್ತೆ)
(ಐ) ಕಮ್ಮಿ ಜಾಸ್ತಿ ಪತ್ರಿಕೆ
(ಞಜೆ) ಖುಷ್ಕಿ, ತರಿ ಮತ್ತು ಬಾಗಾಯಿತು ಭೂಮಿ ಅಥವಾ ಪ್ಲಾಂಟೇಷನ್ ಭೂಮಿಗಳ ಜಂತ್ರಿಗಳು.
(1) ರನಿರ್ಧಾರಣೆಯ ಉದ್ದೇಶಕ್ಕಾಗಿ, ಎಲ್ಲಾ ಭೂಮಿಗಳನ್ನು ಅವುಗಳ ಉತ್ಪಾದನಾ ಗುಣಗಳಿಗನುಸಾರವಾಗಿ ವರ್ಗೀಕರಿಸತಕ್ಕದ್ದು. ಮೋಜಣಿಯು ಅನ್ವಯಿಸುವ ರಾಜ್ಯದ ವಿವಿಧ ಪ್ರದೇಶಗಳಿಗೆ ಮತ್ತು ಸಾಗುವಳಿಯ ಸ್ವರೂಪಕ್ಕೆ ಸಂಬಂಧಪಟ್ಟಂತೆ ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಮಿಷನರ ಆದೇಶಗಳ ಮೇರೆಗೆ ವರ್ಗಗಳ ಸಂಖ್ಯೆಯನ್ನು ಮತ್ತು ಅವುಗಳ ಸಾಪೇಕ್ಷ ಮೌಲ್ಯವನ್ನು ಆಣೆಯಲ್ಲಿ (16 ಅಣೆಗಳು ಅಂದರೆ ಶೇಕಡಾ 100ರ ವರ್ಗೀಕರಣ ಮೌಲ್ಯ) ಗೊತ್ತು ಮಾಡತಕ್ಕದ್ದು, ಮತ್ತು ವರ್ಗೀಕರಣದ ಫಲಿತಾಂಶವನ್ನು ಈ ಕೆಳಕಂಡ ಪುಸ್ತಕಗಳಲ್ಲಿ ಮತ್ತು ನಮೂನೆಗಳಲ್ಲಿ ನಮೂದಿಸತಕ್ಕದ್ದು:
(ಎ) ಪ್ರತಿ ಪುಸ್ತಕ
(ಬಿ) ಬಾಗಾಯಿತು ತಃಖ್ತೆ
(ಸಿ) ದರವಾರಿ
(ಡಿ) ವರ್ಗಾ ಮಾಡುವವನ ರಿಜಿಸ್ಟ್ರರು
(ಇ) ಮಣ್ಣಿನ ಮತ್ತು ನೀರಿನ ಕರ ನಿರ್ಧಾರಣೆಯ ವಿಭಾಗವನ್ನು ಸೂಚಿಸುವ ವಿವರಣೆ ಪತ್ರ.
(ಎಫ್) ಅಕಾರ್ ಬಂದ್
(2) ಕೃಷಿ ಯೋಗ್ಯವಲ್ಲವೆಂದು ಸೇರಿಸಲ್ಪಟ್ಟ ಭೂಮಿಯನ್ನು “ಪೋಟ್ ಖರಾಬ್” ಎಂದು ವರ್ಗೀಕರಣದಲ್ಲಿ ಭಾವಿಸತಕ್ಕದ್ದು. ಪೋಟ್ ಖರಾಬ್ ಭೂಮಿಗಳನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು,-
(ಎ) ಹಿಡುವಳಿದಾರನ ಹೊಲದ ಮನೆಗಳು ಅಥವಾ ಕಣಗಳೂ ಸೇರಿ ಮೋಜಣಿ ಕಾಲದಲ್ಲಿ ವ್ಯವಸಾಯಕ್ಕೆ ಅನುಪಯುಕ್ತವೆಂದು ವರ್ಗೀಕರಿಸಲ್ಪಟ್ಟವುಗಳು:-
(ಬಿ) (i) ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಾಗಿರುವುದರಿಂದ ಅಥವಾ ಕೊಟ್ಟಿರುವುದರಿಂದ;
(ii) ಅದು ರಸ್ತೆಯಿಂದ ಅಥವಾ ಅಂಗೀಕೃತ ಕಾಲುದಾರಿಯಿಂದ ಅಥವಾ ಹಿಡುವಳಿದಾರರಲ್ಲದ ಇತರ ವ್ಯಕ್ತಿಗಳಿಂದ ನೀರಾವರಿಗೆ, ಕುಡಿಯುವುದಕ್ಕೆ ಅಥವಾ ಗೃಹೋದ್ದೇಶಗಳಿಗೆ ಉಪಯೋಗಿಸಲ್ಪಡುವ ಕೆರೆ ಅಥವಾ ತೊರೆಯಿಂದ ಆವೃತ್ತವಾಗಿರುವುದರಿಂದ;
(iii) ಹೂಳೂವ ಅಥವಾ ಸುಡುವ ಭೂಮಿಯಾಗಿ ಉಪಯೋಗಿಸಲ್ಪಟ್ಟಿರುವುದರಿಂದ;
(iv) ಗ್ರಾಮೀಣ ಮಣ್ಣಿನ ಪಾತ್ರೆಗಳನ್ನು ಮಾಡಲು ಕೊಟ್ಟಿರುವುದರಿಂದ ಕರನಿರ್ಧಾರಣೆ ಮಾಡಲ್ಪಡದವುಗಳು.
ಯಾವುದೇ ವರ್ಗದ ಸಂಬಂಧದಲ್ಲಿ ಪ್ರಮಾಣ ಭೂತವಾದ ದರವನ್ನು ಸರಾಸರಿ ಇಳುವರಿ ಮತ್ತು ಆ ವರ್ಗದಲ್ಲಿ ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡಾ 66ಕ್ಕೆ ಕಡಿಮೆಯಿಲ್ಲದ ಭಾಗದಲ್ಲಿ ಬೆಳೆದ ಬೆಳೆಗಳ ಮೌಲ್ಯಕ್ಕೆ ಸಂಬಂಧಪಟ್ಟಂತೆ ನಿರ್ಧರಿಸತಕ್ಕದ್ದು. ಈ ಉದ್ದೇಶಕ್ಕಾಗಿ ಆಯ್ದ ಬೆಳೆಗಳು ಸಾಧ್ಯವಾದಷ್ಟು ಮಟ್ಟಿಗೆ ಅಂಥ ವರ್ಗದಲ್ಲಿ ಬೆಳೆದ ಮುಖ್ಯ ಬೆಳೆಗಳಾಗಿರತಕ್ಕದ್ದು. ಮುಖ್ಯ ಬೆಳೆಗಳನ್ನು ಬೆಳೆಯುವ ಪ್ರದೇಶವು ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡಾ 66ಕ್ಕಿಂತ ಕಡಿಮೆ ಇರುವ ಸಂದರ್ಭಗಳಲ್ಲಿ; ಅಂಥ ವರ್ಗದಲ್ಲಿ ಬೆಳೆಯಬಹುದಾದ ಮತ್ತು ಆ ಉದ್ದೇಶಕ್ಕಾಗಿ ಆರಿಸಬಹುದಾದ ಇತರ ಬೆಳೆಗಳನ್ನು ಈ ಉದ್ದೇಶಕ್ಕಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾದ ಬೆಳೆಯಾಗಿರುವ ಒಟ್ಟು ಪ್ರದೇಶವನ್ನು ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡಾ 66ಕ್ಕಿಂತ ಕಡಿಮೆಯಿಲ್ಲದಂತೆ ಮಾಡುವುದಕ್ಕಾಗಿ, ಗಮನಕ್ಕೆ ತೆಗೆದುಕೊಳ್ಳತಕ್ಕದ್ದು.
ವಿವರಣೆ.- ಒಂದು ವರ್ಗದ ಭೂಮಿಯಲ್ಲಿನ ಬೆಳೆಗಳು ಮುಖ್ಯ ಬೆಳೆಗಳಾಗಿ ಸೇರಿಸಲ್ಪಡುವುದಕ್ಕೆ ಅವಶ್ಯಕವಾದ ಶೇಕಡಾವಾರ ಒಳಗೊಂಡಿಲ್ಲದಿದ್ದಲ್ಲಿ, ಕಂದಾಯ ವ್ಯವಸ್ಥೆಯ ಅಧಿಕಾರಿಯು ಸ್ಥಳೀಯ ವಿಚಾರಣೆಗಳಿಂದ ನಿರ್ಧರಿಸಲ್ಪಟ್ಟಂತೆ ಅಂಥ ಬೆಳೆಗಳ ಇಳುವರಿ ಮತ್ತು ಬೆಲೆಯ ಆಧಾರದ ಮೇಲೆ ಮತ್ತು ಇತರ ಸಂಬಂಧಪಟ್ಟ ಸಂದರ್ಭಗಳ ಮೇಲೆ ಆ ವರ್ಗದ ಭೂಮಿಯ ಪ್ರಮಾಣಭೂತವಾದ ದರವನ್ನು ಲೆಕ್ಕ ಮಾಡತಕ್ಕದ್ದು.
(1) (ಪ್ರದೇಶದ ವಿಷಯವನ್ನು ತಿಳಿಯುವ ಉದ್ದೇಶಗಳಿಗಾಗಿ) ಸ್ಥೂಲ ಪ್ರವಾಸಗಳನ್ನು ಕೈಗೊಳ್ಳುವುದರ ಮೂಲಕ; ಸಭೆಗಳನ್ನು ಮತ್ತು ಚರ್ಚೆಗಳನ್ನು ನಡೆಸುವುದರ ಮೂಲಕ, ಮಳೆ, ಮಣ್ಣು, ಬೆಳೆಗಳು ಮತ್ತು ಸಾಗುವಳಿಗಳು, ಇಳುವರಿ ಮತ್ತು ಮುಖ್ಯ ಬೆಳೆಗಳ ಬೆಲೆಗಳ ಸಂಬಂಧದಲ್ಲಿ ಅಂಕಿ ಅಂಶವನ್ನು ಸಂಗ್ರಹಿಸುವುದರ ಮೂಲಕ ಕಂದಾಯ ವ್ಯವಸ್ಥೆಯ ಅಧಿಕಾರಿಯು ಒಂದು ವಲಯದಲ್ಲಿ ಕಂದಾಯ ವ್ಯವಸ್ಥೆಯ ಕಾರ್ಯಗಳನ್ನು ಪ್ರಾರಂಭಿಸತಕ್ಕದ್ದು.
(2) ಕಂದಾಯ ವ್ಯವಸ್ಥೆಯ ಅಧಿಕಾರಿಯು ಅನಂತರ ವರ್ಗಗಳ ರಚನೆಯ ಮುಖ್ಯ ಬೆಳೆಗಳ ಆಯ್ಕೆಯ ಮತ್ತು ಪ್ರಾತಿನಿಧಿಕ ಗ್ರಾಮಗಳ ಆಯ್ಕೆಯ ಸಂಬಂಧದಲ್ಲಿ ತನ್ನ ಸಲಹೆಗಳನ್ನೊಳಗೊಂಡ ಪ್ರಾರಂಭಿಕ ವರದಿಯನ್ನು ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಮಿಷನರಿಗೆಒಪ್ಪಿಸತಕ್ಕದ್ದು.
(3) ಅಂಥ ಪ್ರಾರಂಭಿಕ ವರದಿಯು ತನಗೆ ಬಂದ ಮೇಲೆ, ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಮಿಷನರು ತಾನು ಸೂಕ್ತವೆಂದು ಭಾವಿಸುವಂಥ ಮಾರ್ಪಾಡುಗಳೊಡನೆ ಆ ಸಲಹೆಗಳನ್ನು ಅನುಮೋದಿಸತಕ್ಕದ್ದು:
(1) ಪ್ರಾರಂಭಿಕ ವರದಿಗೆ ಕಮಿಷನರ ಅನುಮೋದನೆಯು ದೊರೆತ ಮೇಲೆ, ಕಂದಾಯ ವ್ಯವಸ್ಥೆಯ ಅಧಿಕಾರಿಯ ತೀವ್ರ ವಿಚಾರಣೆಯನ್ನು ನಡೆಸತಕ್ಕದ್ದು ಮತ್ತು ಆ ವಲಯದ ಸಂಬಧದಲ್ಲಿ ಈ ಕೆಳಕಂಡ ವಿಷಯಗಳ ಬಗ್ಗೆ ಮತ್ತು ಕೆಳಗೆ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಮಾಹಿತಿಗಳನ್ನು ಸಂಗ್ರಹಿಸತಕ್ಕದ್ದು.
(ಎ) ಭೂಮಿಯ ಮೇಲ್ಮೈ ವಿನ್ಯಾಸ.- ಕಂದಾಯ ವ್ಯವಸ್ಥೆಯ ಅಧಿಕಾರಿಯು, ಭೂಮಿಯ ಮೇಲ್ಮೈ ವಿನ್ಯಾಸದ, ಸಂಬಂಧದಲ್ಲಿ,-
(i) ತಾನು ಸ್ವತಃ ಮಾಡಿದ ಸಮೀಕ್ಷೆಗಳ, ಮತ್ತು
(ii) ಹಿಂದಿನ ಕಂದಾಯ ವ್ಯವಸ್ಥೆಯ ವರದಿಗಳಲ್ಲಿ ಮತ್ತು ಜಿಲ್ಲಾ ಗೆಜೆಟಿಯರುಗಳಲ್ಲಿ ದೊರೆಯಬಹುದಾದ ಮಾಹಿತಿಯ ಮೇಲೆ ತನ್ನ ಮಾಹಿತಿಯನ್ನು ಆಧರಿಸತಕ್ಕದ್ದು.
(ಬಿ) ವಾಯುಗುಣ ಮತ್ತು ಮಳೆ.- ಕಂದಾಯ ವ್ಯವಸ್ಥೆಯ ಅಧಿಕಾರಿಯ ವಾಯುಗುಣದ ಸಂಬಂಧದಲ್ಲಿ ಸ್ವತಃ ವಿಚಾರಣೆಯನ್ನು ನಡೆಸುವುದರ ಮೂಲಕ ಮತ್ತು ಜನಾರೋಗ್ಯ ಇಲಾಖೆಯಿಂದ ಪಡೆದ ವಿವರಗಳ ಮೇಲೆ ತನ್ನ ಮಾಹಿತಿಯನ್ನು ಆಧರಿಸತಕ್ಕದ್ದು.
ಕೊನೆಯದಾಗಿ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದ ತರುವಾಯದ ವರ್ಷಗಳಿಗೆ ಸಂಬಂಧಿಸಿದಂತೆ ಅವನು ಅಂಕಿ ಅಂಶಗಳ ಇಲಾಖೆಯಿಂದ ಅಥವಾ ಸಂಬಧಪಟ್ಟ ತಾಲ್ಲೂಕಿನ ತಹಶೀಲ್ದಾರನಿಂದ ಮಳೆಯ ಅಂಕಿಅಂಶಗಳನ್ನು ಸಂಗ್ರಹಿಸತಕ್ಕದ್ದು ಅಥವಾ ಅಂಥ ವಿವರಗಳನ್ನು ಸರ್ಕಾರಿ ಪ್ರಕಟಣೆಗಳು ಅಥವಾ ಇತರ ಸರ್ಕಾರಿ ದಾಖಲೆಗಳಿಂದ ಪಡೆಯಬಹುದು. ವಿಚಾರಣೆಯ ನಿಕಟಪೂರ್ವದ 10 ವರ್ಷಗಳ ಋತುಮಾನ ಸ್ಥಿತಿಗಳ ಸಂಬಂಧದಲ್ಲಿನ ಮಾಹಿತಿಯನ್ನು ವಲಯದ ಸಾಮಾನ್ಯ ಋತುಮಾನದ ಸ್ಥಿತಿಯನ್ನು ತೋರಿಸಲು ಅದು ಸಾಕಾಗುವುದೆಂದು ಅವನು ಅಭಿಪ್ರಾಯ ಪಟ್ಟರೆ, ಇದೇ ರೀತಿ ಸಂಗ್ರಹಿಸತಕ್ಕದ್ದು.
(ಸಿ) ಮುಖ್ಯ ಬೆಳೆಗಳ ಇಳುವರಿ.- ಮುಖ್ಯ ಬೆಳೆಗಳ ಸರಾಸರಿ ಇಳುವರಿಯನ್ನು ಗೊತ್ತುಮಾಡುವುದಕ್ಕಾಗಿ, ಕಂದಾಯ ವ್ಯವಸ್ಥೆಯ ಅಧಿಕಾರಿಯು ಈ ಕೆಳಕಂಡ ಎರಡು ವಿಧಾನಗಳನ್ನು ಅನುಸರಿಸತಕ್ಕದ್ದು.
(i) ವ್ಯವಸಾಯ ಇಲಾಖೆಯು, ಅಂಕಿ ಅಂಶಗಳ ಇಲಾಖೆಯು, ಮತ್ತು ರೆವಿನ್ಯೂ ಇಲಾಖೆಯು ಬೆಳೆ ಕೊಯ್ಯುವ ಪ್ರಯೋಗಗಳ ಫಲಿತಾಂಶಗಳ ಸಂಬಂಧದಲ್ಲಿ ದಾಖಲು ಮಾಡಿರುವ ಮಾಹಿತಿಯನ್ನು ಸಂಗ್ರಹಿಸುವುದರ ಮೂಲಕ;
ವಿವರಣೆ:
(ii) ಮೋಜಣಿ, ಭೂಕಂದಾಯ ವ್ಯವಸ್ತೆ ಮತ್ತು ಭೂದಾಖಲೆಗಳ ಕಮಿಷನರು ಕೊಟ್ಟಿರುವ ಸೂಚನೆಗಳಿಗನುಸಾರವಾಗಿ (ಪ್ರತಿಯೊಂದು ಪ್ರಾತಿನಿಧಿಕ ಗ್ರಾಮದಲ್ಲಿ ಪ್ರತಿಯೊಂದು ಮುಖ್ಯ ಬೆಳೆಯ ಬಗ್ಗೆ ವಿಚಾರಣಾ ವರ್ಷದಲ್ಲಿ ಸುಗ್ಗಿಯ ಕಾಲದಲ್ಲಿ ನಡೆಸಿದ ಬೆಳೆಕೊಯ್ಯುವ ಪ್ರಯೋಗಗಳ ಮೂಲಕ.
(iii) ಮೋಜಣಿ, ಭೂಕಂದಾಯ ವ್ಯವಸ್ಥೆ ಕಾಯಾಚರಣೆಯು ಪ್ರಾರಂಭವಾಗುವುದಕ್ಕೆ ಮೊದಲು ಎಲ್ಲ ಜಮೀನುಗಳಲ್ಲಿ ಕುಯಿಲು ಆಗಿದ್ದರೆ, ಕಂದಾಯ ವ್ಯವಸ್ಥೆಯ ಅಧಿಕಾರಿಯು ಸ್ಥಳೀಯ ವಇಚಾರಣೆಯ ಮತ್ತು ದೊರೆಯಬಹುದಾದ ಇತರ ಅಂಕಿಅಂಶಗಳ ಆಧಾರದ ಮೇಲೆ ತನ್ನ ತೀರ್ಮಾನವನ್ನು ಕೊಡತಕ್ಕದ್ದು, ಸರಾಸರಿ ಇಳುವರಿಯನ್ನು ಕಂಡುಹಿಡಿಯುವ ಉದ್ದೇಶಕ್ಕಾಗಿ, ಒಂದೇ ಜಮೀನಿನಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು ಬೆಳೆದಾಗ, ಕೊಯಿಲು ಮಾಡಿದ ಮೊದಲ ಬೆಳೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.
(ಡಿ) ಮುಖ್ಯ ಬೆಳೆಗಳ ಬೆಲೆಗಳು:- ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ದಾಖಲೆಗಳ ಕಮಿಷನರು ನಿರ್ದಿಷ್ಟಪಡಿಸಬಹುದಾದಂಥ ಅವಧಿಯಲ್ಲಿ ಇರುವ ವಿವಿಧ ಮುಖ್ಯ ಬೆಳೆಗಳ ಬೆಲೆಗಳ ಬಗ್ಗೆ ಮಾಹಿತಿಯನ್ನು ತಾಲ್ಲೂಕಿನ ತಹಸೀಲುದಾರನಿಂದ ಅಥವಾ ವ್ಯವಸಾಯ ಇಲಾಖೆಯಿಂದ ಪಡೆಯತಕ್ಕದ್ದು ಅಥವಾ ಸಂಬಂಧಪಟ್ಟ ಆಡಳಿತ ವರದಿಗಳಿಂದ ಸಂಗ್ರಹಿಸತಕ್ಕದ್ದು.
(2) (1)ನೇ ಉಪನಿಯಮದಲ್ಲಿ ಉಲ್ಲೇಖಿತವಾದ ವಿಷಯಗಳ ಜೊತೆಗೆ ಕಂದಾಯ ವ್ಯವಸ್ಥೆಯ ಅಧಿಕಾರಿಯು ಈ ಕೆಳಕಂಡ ವಿಷಯಗಳ ಸಂಬಂಧದಲ್ಲಿ ಈ ಕೆಳಗೆ ಸೂಚಿಸಿದ ರೀತಿಯಲ್ಲೂ ಮಾಹಿತಿನ್ನು ಸಂಗ್ರಹಿಸಬಹುದು:-
(ಎ) ಮಾರುಕಟ್ಟೆ ಸೌಲಭ್ಯಗಳು.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಮಾರುಕಟ್ಟೆಯ ಸೌಲಭ್ಯಗಳ ಬಗ್ಗೆ ತಾನು ಮಾಡಿದ ವೈಯಕ್ತಿಕ ವಿಚಾರಣೆಯ ಮೇರೆ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು.
(ಬಿ) ಸಂಚಾರ ಮಾರ್ಗಗಳು.- ಕಂದಾಯ ವ್ಯವಸ್ಥೆಯ ಅಧಿಕಾರಿಯು ತನ್ನ ಸ್ವಂತ ಸಮೀಕ್ಷೆಯಿಂದ ಮತ್ತು ಲೋಕೋಪಯೋಗಿ ಇಲಾಖೆಯಿಂದ ಪಡೆದ ವಿವರಗಳಿಗೆ ಸಂಬಂಧಪಟ್ಟಂತೆ ಸಂಚಾರ ಮಾರ್ಗಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು.
(ಸಿ) ಪಶುಸಂಗೋಪನೆಯ ಮಟ್ಟ.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಪಶುಸಂಗೋಪನೆಯ ಮಟ್ಟದ ಸಂಬಂಧದಲ್ಲಿ ತಾನು ಸ್ವತಃ ಸಮೀಕ್ಷೆಯಿಂದ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು.
(ಡಿ) ಜನಸಂಖ್ಯೆ ಮತ್ತು ಕೆಲಸಗಾರರ ಸರಬರಾಜು.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಅಂಕಿ ಅಂಶಗಳ ಇಲಾಖೆಯಿಂದ ಅಥವಾ ಬೇರೆ ರೀತಿಯಲ್ಲಿ ವೃತ್ತಿಗನುಸಾರವಾಗಿ ಜನಸಂಖ್ಯೆಯ ಅಂಕಿ ಅಂಶವನ್ನು ಪಡೆಯತಕ್ಕದ್ದು, ಪ್ರತಿಯೊಂದು ಪ್ರಾತಿನಿಧಿಕ ಗ್ರಾಮದಲ್ಲಿ ದೊರೆಯುವ ಕೆಲಸಗಾರರ ಬಗ್ಗೆ ಅವನು ಸ್ವಂತ ವಿಚಾರಣೆಯ ಮೂಲಕ ತಿಳಿದುಕೊಳ್ಳತಕ್ಕದ್ದು.
(ಇ) ಕೃಷಿ ಸಂಪನ್ಮೂಲಗಳು.- ಕಂದಾಯ ವ್ಯವಸ್ಥೆಯ ಅಧಿಕಾರಿಯು, ಸಂದರ್ಭಾನುಸಾರ, ತಹಸೀಲುದಾರನಿಂದ ಅಥವಾ ವ್ಯವಸಾಯ ಇಲಾಖೆಯಿಂದ ಅಥವಾ ಪಶುಸಂಗೋಪನಾ ಇಲಾಖೆಯಿಂದ ಪಶುಸಂಪತ್ತಿನ, ವ್ಯವಸಾಯದ ಉಪಕರಣಗಳ ಮತ್ತು ಇತರ ಕೃಷಿ ಸಂಪನ್ಮೂಲಗಳ ಬಗ್ಗೆ ಮಾಹಿತಿಯನ್ನು ಪಡೆಯತಕ್ಕದ್ದು.
(ಎಫ್) ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಅಧಿಭೋಗದಲ್ಲಿರುವ ಮತ್ತು ಸಾಗುವಳಿಯಾದ ಭೂಮಿಯ ವಿಸ್ತೀರ್ಣದಲ್ಲಿ ಆಗಿರುವ ಬದಲಾವಣೆ.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಸಾಗುವಳಿಯ ವಿವರಗಳ ಮತ್ತು ಬೆಳೆಗಳ ಬಗ್ಗೆ ಹಾಗೂ ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಅಧಿಭೋಗದಲ್ಲಿರುವ ಮತ್ತು ಸಾಗುವಳಿಯಾಗಿರುವ ಭೂಮಿಯ ವಿಸ್ತೀರ್ಣದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಸಹಶೀಲುದಾರನಿಂದ ಮಾಹಿತಿಯನ್ನು ಪಡೆಯತಕ್ಕದ್ದು.
(ಜಿ) ಕೂಲಿ:- ಕಂದಾಯ ವ್ಯವಸ್ಥೆಯ ಅಧಿಕಾರಿಯು ಆ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಕೂಲಿಯ ಬಗ್ಗೆ ತಹಶೀಲುದಾರನಿಂದ ಮಾಹಿತಿಯನ್ನು ಪಡೆಯತಕ್ಕದ್ದು ಮತ್ತು ಈ ಅಂಕಿಅಂಶಗಳನ್ನು ಸ್ವತಃ ವಿಚಾರಿಸುವ ಮೂಲಕ ಪರೀಕ್ಷಿಸತಕ್ಕದ್ದು.
(ಎಚ್) ಮುಖ್ಯ ಬೆಳೆಗಳನ್ನು ಬೆಳೆಯಲು ತಗಲುವ ಸಾಮಾನ್ಯ ವೆಚ್ಚಗಳು.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಕೆಲವು ವ್ಯವಸಾಯಗಾರರ ಲೆಕ್ಕಗಳನ್ನು, ದೊರೆತರೆ ಪರೀಕ್ಷಿಸುವುದರ ಮೂಲಕ ಅಥವಾ ಸ್ವತಃ ವಿಚಾರಿಸಿ ಸಾಗುವಳಿಗೆ ತಗಲುವ ಸಾಮಾನ್ಯ ವೆಚ್ಚಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು.
(3) ವ್ಯವಸಾಯೋದ್ದೇಶಕ್ಕಾಗಿ ಉಪಯೋಗಿಸಿದ ಭೂಮಿಗಳ ಮಾರಾಟ.- ಕಂದಾಯ ವ್ಯವಸ್ಥೆಯ ಅಧಿಕಾರಿಯು ತಾನು ಆಯ್ಕೆ ಮಾಡಿದ ಪ್ರಾತಿನಿಧಿಕ ಗ್ರಾಮಗಳಲ್ಲಿ ಆ ವಿಚಾರಣೆಗೆ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಮಾರಾಟ ಮಾಡಿದ ಭೂಮಿಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಪರೀಕ್ಷಿಸತಕ್ಕದ್ದು, ಕಂದಾಯ ವ್ಯವಸ್ಥೆಯ ಅಧಿಕಾರಿಯು ನಿಜವಾದುದಲ್ಲವೆಂದು ತಾನು ಅಭಿಪ್ರಾಯ ಪಡುವ ಎಲ್ಲಾ ಮಾರಾಟಗಳನ್ನು ಈ ಉದ್ದೇಶಕ್ಕಾಗಿ ಹೊರತುಪಡಿಸತಕ್ಕದ್ದು.
ಭೂಮಿಯಲ್ಲಿನ ಬೆಳೆಗಳ ಸರಾಸರಿ ಇಳುವರಿಯನ್ನು ತಿಳಿಯುವ ಉದ್ದೇಶಕ್ಕಾಗಿ, ಪ್ರತಿಯೊಂದು ಪ್ರಾತಿನಿಧಿಕ ಗ್ರಾಮದಲ್ಲೂ ಪ್ರತಿಯೊಂದು ಮುಖ್ಯ ಬೆಳೆಗಳನ್ನು ಬೆಳೆಯುವ ಭೂಮಿಯ ವಿಸ್ತೀರ್ಣದ ಬಗ್ಗೆ ಗ್ರಾಮಲೆಕ್ಕಿಗನಿಂದ ಮಾಹಿತಿಯನ್ನು ಪಡೆಯತಕ್ಕದ್ದು. ಈ ಮಾಹಿತಿಯನ್ನು ಅದು “ಉತ್ತಮ ದರ್ಜೆ ಭೂಮಿಯೇ”, “ಮಧ್ಯಮ ದರ್ಜೆ ಭೂಮಿಯೇ” ಅಥವಾ “ಕಳೆದ ದರ್ಜೆಯ ಭೂಮಿಯೇ” ಎಂಬುದರ ಬಗ್ಗೆ ಅದರ ವರ್ಗೀಕರಣ ಮೌಲ್ಯಕ್ಕೆ ಸಂಬಂಧಿಸಿದಂತೆ ಸರ್ವೇ ನಂಬರು ಪ್ರಕಾರ ಸೂಚಿಸಿ ಸಂಕಲಿಸತಕ್ಕದ್ದು.
109ನೇ ಪ್ರಕರಣದ (2)ನೇ ಖಂಡದ ಮೇರೆಗೆ ಪ್ರತಿಯೊಂದು ಪೋಡಿನ ಕಂದಾಯವು ಅಂಥ ಸರ್ವೇ ನಂಬರಿನ ಬೇರೆ ಬೇರೆ ಭಾಗಗಳ ಸಾಪೇಕ್ಷ ವರ್ಗೀಕರಣ ಮೌಲ್ಯಕ್ಕೆ ಅನುಸಾರವಾಗಿ ಲೆಕ್ಕ ಹಾಕಿದ ಸರ್ವೇ ನಂಬರಿನ ಕಂದಾಯದ ದಾಮಾಷಾ ಪ್ರಕಾರ ಪ್ರಮಾಣಬದ್ಧ ಇರತಕ್ಕದ್ದು. ಒಂದು ಸರ್ವೇ ನಂಬರಿನ ಎಲ್ಲಾ ಪೋಡುಗಳ ಹೊಸ ಕಂದಾಯದ ಒಟ್ಟು ಮೊಬಲಗು ಆ ನಂಬರಿನ ಒಟ್ಟು ಕಂದಾಯಕ್ಕೆ ಹೆಚ್ಚಾಗಿ ಅಥವಾ ಕಡಿಮೆಯಾಗಿ ಆ ಲೆಕ್ಕಾಚಾರದಿಂದ ಕಂಡು ಬಂದರೆ, ಆ ಮೊಬಲಗನ್ನು ಆ ಒಟ್ಟು ಸರ್ವೇನಂಬರಿನ ಕಂದಾಯಕ್ಕೆ ಸಮವಾಗುವಂತೆ ಮಾಡುವುದಕ್ಕಾಗಿ ಅತ್ಯಂತ ಹೆಚ್ಚಿನ ಪಾಲುಗಳಿಂದ ಕಳೆಯುವ ಮೂಲಕ ಅಥವಾ ಅದಕ್ಕೆ ಸೇರಿಸುವುದರ ಮೂಲಕ ಪೋಡುಗಳಿಗೆ ಆ ವ್ಯತ್ಯಾಸದ ಮೊಬಲಗನ್ನು ಸಮನಾಗಿ ಹಂಚತಕ್ಕದ್ದು;
ಒಂದು ಪೋಡಿನ ಕಂದಾಯವನ್ನು ಲೆಕ್ಕ ಹಾಕುವಾಗ ಒಂದು ಪೈಸೆಗಿಂತ ಕಡಿಮೆಯಾದುದನ್ನು ಒಂದು ಪೈಸೆಯಾಗಿ ಪರಿಗಣಿಸತಕ್ಕದ್ದು:-
ಪೋಡುಗಳ ವಿಸ್ತೀರ್ಣ ಮತ್ತು ಕಂದಾಯವನ್ನು ಈ ಕೆಳಕಂಡ ಭೂದಾಖಲೆಗಳಲ್ಲಿ ನಮೂದಿಸತಕ್ಕದ್ದು.-
(i) ಪೋಡು ಸರ್ವೇ ಟಿಪ್ಪಣಿ ಪುಸ್ತಕ ಅಥವಾ ಅಡ್ಡಣಿಗೆ ಹಾಳೆ
(ii) ಪೋಡು ಸವರ್ಎಯ ಪಕ್ಕಾಪುಸ್ತಕ ಅಥವಾ ಗುಣಾಕಾರದ ಪುಸ್ತಕ
(iii) ಪ್ರತಿ ಪೋಡ್ ಪುಸ್ತಕ
(iv) ಪೋಡು ಸರ್ವೇ ಕಂದಾಯದ ಹಂಚಿಕೆಯ ಬಗ್ಗೆ ವಿವರಣೆ
(v) ಪೋಡು ಸರ್ವೇ ಭೂಕಂದಾಯದ ಮತ್ತು ನೀರು ಕಂದಾಯದ ವಿಂಗಡಣೆ
(vi) ಪೋಡು ಸರ್ವೇ ಗ್ರಾಮದ ಉಪಯೋಗಕ್ಕಾಗಿ ಭೂಮಿಯ ವಿಸ್ತೀರ್ಣ, ಕಂದಾಯ, ಕರನಿರ್ಧಾರಣೆ ಮತ್ತು ಹಿಡುವಳಿದಾರರ ಹೆಸರುಗಳು ಇತ್ಯಾದಿಗಳನ್ನು ಸೂಚಿಸುವ ವಿವರಗಳು.
(vii) ಸರ್ವೇ ನಂಬರುಗಳಲ್ಲಿನ ಪೋಡುಗಳನ್ನು ಸೂಚಿಸುವ ನಕಾಶೆ.
(1) 118ನೇ ಪ್ರಕರಣದ (5)ನೇ ಖಂಡದ ಮೇರೆಗೆ ಒಪ್ಪಿಸಿದ ವರದಿಯು ತಮಗೆ ಬಂದ ಮೇಲೆ ಸಂಬಂಧಪಟ್ಟ ಜಿಲ್ಲೆಗಳ ಡೆಪ್ಯೂಟಿ ಕಮೀಷನರುಗಳು ಅದರ ಪ್ರತಿಗಳನ್ನು ತಮ್ಮ ಕಛೇರಿಗಳಲ್ಲಿ ಇಟ್ಟುಕೊಂಡು ಅದನ್ನು ಪ್ರಕಟಿಸುವಂತೆ ಮಾಡತಕ್ಕದ್ದು. ಕಂದಾಯ ವ್ಯವಸ್ಥೆಯ ವರದಿಯನ್ನು ಹಾಗೆ ಪ್ರಕಟಿಸಲಾಗಿದೆ ಎಂಬ ಅಂಶವನ್ನು ಡೆಪ್ಯೂಟಿ ಕಮಿಷನರು ಅಫಿಷಿಯಲ್ ಗೆಜೆಟ್ಟಿನಲ್ಲಿ ಅಧಿಸೂಚಿಸತಕ್ಕದ್ದು ಅಂಥ ನೋಟೀಸುಗಳ ಪ್ರತಿಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಕಛೇರಿಗಳಲ್ಲಿ ಅಂಟಿಸುವಂತೆ ಅವನು ಮಾಡತಕ್ಕದ್ದು.
(2) ಡೆಪ್ಯೂಟಿ ಕಮಿಷನರು 119ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ನೋಟೀಸನ್ನು 4ನೇ ನಮೂನೆಯಲ್ಲಿ ಗ್ರಾಮದಲ್ಲಿ ಚಾವಡಿಯ ಸೂಚನಾ ಫಲಕದ ಮೇಲೆ ಅಂಟಿಸುವುದರ ಮೂಲಕ ಪ್ರಕಟಿಸುವಂತೆ ಮಾಡತಕ್ಕದ್ದು.
122ನೇ ಪ್ರಕರಣದ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು 121ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ತಾನು ಆದೇಶವನ್ನು ಮಾಡಿದ ತರುವಾಯ, ಪ್ರತಿಯೊಂದು ವಲಯದಲ್ಲಿರುವ ವಿವಿಧ ವರ್ಗಗಳ ಪೈಕಿ ಪ್ರತಿಯೊಂದಕ್ಕೂ ಅಧಿಕೃತ ದರವನ್ನು ನಿರ್ದಿಷ್ಟಪಡಿಸಿ ಅಫಿಷಿಯಲ್ ಗೆಜೆಟ್ಟಿನಲ್ಲಿ 5ನೇ ನಮೂನೆಯಲ್ಲಿ ಒಂದು ನೋಟೀಸನ್ನು ಪ್ರಕಟಿಸುವಂತೆ ಮಾಡತಕ್ಕದ್ದು, ಮತ್ತು ಅಂಥ ನೋಟೀಸು ಪ್ರಕಟವಾದ ತರುವಾಯ ರಾಜ್ಯ ಸರ್ಕಾರವು, 122ನೇ ಪ್ರಕರಣದ ಮೇರೆಗೆ ಹೊರಡಿಸಿದ ಅಧಿಸೂಚನೆಯ ಮೂಲಕ ಭೂಕಂದಾಯವನ್ನು ವಿಧಿಸತಕ್ಕ ದಿನಾಂಕವನ್ನು ನಿರ್ದಿಷ್ಟಪಡಿಸತಕ್ಕದ್ದು.
(1) 32ನೇ ನಿಯಮದ ಮೇರೆಗೆ ನೋಟೀಸನ್ನು ಪ್ರಕಟಿಸಿದ ತರುವಾಯ ಮತ್ತು ಯಾವ ದಿನಾಂಕದಿಂದ ಭೂಕಂದಾಯವನ್ನು ವಿಧಿಸತಕ್ಕುದೆಂದು ನಿರ್ದಿಷ್ಟಪಡಿಸಿ 122ನೇ ಪ್ರಕರಣದ ಮೇರೆಗೆ ಅಧಿಸೂಚನೆಯನ್ನು ಹೊರಡಿಸಿದ ತರುವಾಯ ಡೆಪ್ಯೂಟಿ ಕಮಿಷನರು ಪ್ರತಿಯೊಂದು ಗ್ರಾಮದ ಚಾವಡಿಯಲ್ಲಿ ಅಂಥ ಗ್ರಾಮಕ್ಕೆ ಅನ್ವಯಿಸಬಹುದಾದ ಅಧಿಕೃತ ದರವನ್ನು ಮತ್ತು ಅಂಥ ದರಗಳಲ್ಲಿ ಭೂಕಂದಾಯವನ್ನು ವಿಧಿಸತಕ್ಕ ದಿನಾಂಕವನ್ನು ಸೂಚಿಸಿ “5ಕ” ನಮೂನೆಯಲ್ಲಿ ನೋಟೀಸನ್ನು ಪ್ರಕಟಿಸುವಂತೆ ಮಾಡತಕ್ಕದ್ದು.
(2) ಡೆಪ್ಯೂಟಿ ಕಮಿಷನರು ಪ್ರತಿಯೊಂದು ತಾಲ್ಲೂಕಿನಲ್ಲೂ ಆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಅನ್ವಯಿಸುವ ಅಧಿಕೃತ ದರಗಳನ್ನು ಮತ್ತು ಅಂಥ ದರಗಳಲ್ಲಿ ಭೂಕಂದಾಯವನ್ನು ವಿಧಿಸತಕ್ಕ ದಿನಾಂಕವನ್ನು ಸೂಚಿಸಿ “5ಖ” ನಮೂನೆಯಲ್ಲಿ ಒಂದು ನೋಟೀಸನ್ನು ಪ್ರಕಟಿಸುವಂತೆಯೂ ಮಾಡತಕ್ಕದ್ದು.
(i) ‘ಉತ್ತಮ ದರ್ಜೆಯ ಭೂಮಿಗಳು’ ಎಂದರೆ:-
(ಕ) ಪ್ಲಾಂಟೇಷನ್ ಭೂಮಿಯ ಸಂದರ್ಭಧಲ್ಲಿ ಶೇಕಡಾ 87ಕ್ಕಿಂತ ಮತ್ತು
(ಖ) ಇತರ ಭೂಮಿಗಳ ಸಂದರ್ಭದಲ್ಲಿ ಶೇಕಡಾ 69ಕ್ಕಿಂತ ಕಡಿಮೆಯಿಲ್ಲದ ವರ್ಗೀಕರಣ ಮೌಲ್ಯವನ್ನು ಹೊಂದಿರುವ ಭೂಮಿಗಳು;
(ii) ‘ಕಳೆದ ದರ್ಜೆಯ ಭೂಮಿಗಳು’ ಎಂದರೆ:-
(ಎ) ಪ್ಲಾಂಟೇಷನ್ ಭೂಮಿ ಸಂದರ್ಭದಲ್ಲಿ ಶೇಕಡಾ 75ಕ್ಕಿಂತ ಮತ್ತು
(ಬಿ) ಇತರ ಭೂಮಿಗಳ ಸಂದರ್ಭದಲ್ಲಿ ಶೇಕಡಾ 37ಕ್ಕಿಂತ ಕಡಿಮೆಯಿಲ್ಲದ ವರ್ಗೀಕರಣ ಮೌಲ್ಯವನ್ನು ಹೊಂದಿರುವ ಭೂಮಿಗಳು;
(iii) ‘ಸ್ಥಳೀಯ ವಿಚಾರಣೆ’ ಎಂದರೆ, ಪ್ರತಿಯೊಂದು ಆಯ್ದ ಗ್ರಾಮದಲ್ಲಿ ಕಂದಾಯ ವ್ಯವಸ್ಥೆಯ ಅಧಿಕಾರಿಯು ಕೈಗೊಂಡ ಕಂದಾಯ ವ್ಯವಸ್ಥೆಯ ವಿಚಾರಣೆ.
(iv) ‘ಮಧ್ಯಮ ದರ್ಜೆಯ ಭೂಮಿಗಳು’ ಎಂದರೆ:-
(ಎ) ಪ್ಲಾಂಟೇಷನ್ ಭೂಮಿಯ ಸಂದರ್ಭಧಲ್ಲಿ ಶೇಕಡಾ 75ಕ್ಕಿಂತ ಮತ್ತು
(ಬಿ) ಇತರ ಭೂಮಿಗಳ ಸಂದರ್ಭದಲ್ಲಿ ಶೇಕಡಾ 37ಕ್ಕಿಂತ ಕಡಿಮೆಯಿಲ್ಲದ ವರ್ಗೀಕರಣ ಮೌಲ್ಯವನ್ನು ಹೊಂದಿರುವ ಭೂಮಿಗಳು; 5. “ಮುಖ್ಯ ಬೆಳೆಗಳು” ಎಂದರೆ ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡಾ 20ಕ್ಕೆ ಕಡಿಮೆಯಿಲ್ಲದ ಪ್ರದೇಶದಲ್ಲಿ ಬೆಳೆದ ಎಲ್ಲಾ ಬೆಳೆಗಳು ಮತ್ತು ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡ 5ಕ್ಕೆ ಕಡಿಮೆಯಿಲ್ಲದ ಪ್ರದೇಶದಲ್ಲಿ ಬೆಳೆದ ನಗದು ಬೆಳೆಗಳು. (6) “ಆಯ್ದ ಗ್ರಾಮ’ ಎಂದರೆ, ಸ್ಥಳೀಯ ವಿಚಾರಣೆ ನಡೆಸುವ ಉದ್ದೇಶಕ್ಕಾಗಿ ಕಂದಾಯ ವ್ಯವಸ್ಥೆಯ ಅಧಿಕಾರಿಯು ಆಯ್ದಕೊಂಡ ಒಂದು ಗ್ರಾಮ.
ಕಂದಾಯದ ಅಧಿಕೃತ ದರಗಳನ್ನು ರಾಜ್ಯ ಸರ್ಕಾರವು ಮಂಜೂರು ಮಾಡಿರುವಾಗ ಪ್ರತಿಯೊಂದು ಸರ್ವೇ ನಂಬರಿನ ಅಥವಾ ಪೋಡಿನ ಸಂಬಂಧದಲ್ಲಿ ವಿಧಿಸಬೇಕಾದ ಕಂದಾಯವನ್ನು ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಮಿಷನರು ತಯಾರಿಸಿದ ಲೆಕ್ಕಾಚಾರದ ಕೋಷ್ಟಕಗಳಿಗನುಸಾರವಾಗಿ ಅದರಲ್ಲಿ ಅಡಕವಾಗಿರುವ ಭೂಮಿಯ ಸಾಪೇಕ್ಷ ಮೌಲ್ಯಕ್ಕನುಸಾರವಾಗಿ ನಿರ್ಧರಿಸತಕ್ಕದ್ದು.