ಅಂಥ ಪ್ರತಿಯೊಂದು ಅಪೀಲು, ಆವೇದನ, ಅರ್ಜಿಯು,
(ಎ) ಟೈಪು ಮಾಡಲ್ಪಟ್ಟಿರತಕ್ಕದ್ದು ಅಥವಾ ಸ್ಪಷ್ಟವಾಗಿ ಶಾಯಿಯಲ್ಲಿ ಬರೆಯಲ್ಪಟ್ಟಿರತಕ್ಕದ್ದು;
(ಬಿ) ಆಯಾ ಸಭದರ್ಭಾನುಸಾರ ಅಪೀಲುದಾರನ ಅಥವಾ ಅರ್ಜಿದಾರನ ಮತ್ತು ಪ್ರತಿವಾದಿಯ ಅಥವಾ ಪ್ರತಿ ಪಕ್ಷಕಾರನ ಹೆಸರನ್ನು, ಅವನ ತಂದೆಯ ಹೆಸರನ್ನು ಮತ್ತು ಅಂಚೆಯ ವಿಳಾಸವನ್ನು ನಿರ್ದಿಷ್ಟಪಡಿಸತಕ್ಕದ್ದು;
(ಸಿ) ಮೊಕದ್ದಮೆಯ ಸಂಗತಿಗಳ ಬಗೆಗಿನ ಸಂಕ್ಷಿಪ್ತ ವಿವರಣೆಯನ್ನು ಒಳಗೊಂಡಿರತಕ್ಕದ್ದು;
(ಡಿ) ಯಾವ ಮುಖ್ಯ ಕಾನೂನಿನ ಮೇರೆಗೆ ಅದನ್ನು ಸಲ್ಲಿಸಲಾಯಿತೋ ಅದರ ಉಪಬಂಧಗಳನ್ನು ತಿಳಿಸತಕ್ಕದ್ದು;
(ಇ) ಅಪೀಲಿಗೆ, ಆವೇದನಕ್ಕೆ ಅಥವಾ ಅರ್ಜಿಗೆ ಇರುವ ಆಧಾರಗಳನ್ನು ಮತ್ತು ಕ್ಲೇಮು ಮಾಡಲಾದ ಪರಿಹಾರವನ್ನು ಸ್ಪಷ್ಟವಾಗಿ ತಿಳಿಸತಕ್ಕದ್ದು;
(ಎಫ್) ಕಾಲ ಪರಿಮಿತಿಯ ಅವಧಿಯು ಕಳೆದ ತರುವಾಯ ಹೂಡಲಾಗಿದರೆ, ಆ ವಿಳಂಬದ ಕಾರಣವನ್ನು ತಿಳಿಸತಕ್ಕದ್ದು;
ಪರಂತು, ಅಪೀಲುದಾರನು, ಆವೇದನಕಾರನು ಅಥವಾ ಅರ್ಜಿದಾರನು ವಿಳಂಬವನ್ನು ಕ್ಷಮಿಸಬೇಕೆಂದು ಕೇಳಿದಾಗ, ಅದಕ್ಕೆ ಕಾರಣವಾದ ಸಂದರ್ಭಗಳನ್ನು ವಿವರಿಸಿ ಒಂದು ಪ್ರತ್ಯೇಕ ಅರ್ಜಿಯನ್ನು ಶಪಥಪತ್ರದೊಂದಿಗೆ ಕೊಡತಕ್ಕದ್ದು; ಅದಕ್ಕೆ ತಪ್ಪಿದರೆ ಅಪೀಲು ಆವೇದನ, ಅಥವಾ ಅರ್ಜಿಯನ್ನು ಪ್ರಾರಂಭದಲ್ಲಿಯೇ ವಜಾ ಮಾಡತಕ್ಕದ್ದು. ಪ್ರತಿಯೊಂದು ಅಪೀಲು, ಆವೇದನ ಅಥವಾ ಅರ್ಜಿಯೊಂದಿಗೆ ಯಾವ ಆದೇಶದ ಸಂಬಂಧದಲ್ಲಿ ಆ ಅಪೀಲನ್ನು, ಆವೇದನವನ್ನು ಅಥವಾ ಅರ್ಜಿಯನ್ನು ಸಲ್ಲಿಸಲಾಗಿದೆಯೋ ಆ ಆದೇಶದ ಪ್ರಮಾಣಿತ ಪ್ರತಿಯು ಮತ್ತು ಎಷ್ಟು ಜನ ಪ್ರತಿವಾದಿಗಳು ಅಥವಾ ಪ್ರತಿಪಕ್ಷಕಾರರು ಇರುವರೋ ಅಷ್ಟು ಅಪೀಲು ಜ್ಞಾಪನ, ಆವೇದನ ಅಥವಾ ಅರ್ಜಿಗಳ ಯಥಾಪ್ರತಿಗಳೊಡನೆ ಇರತಕ್ಕದ್ದು;
ಮತ್ತು ಪರಂತು, ನ್ಯಾಯಾಧಿಕರಣಕ್ಕೆ ಸಲ್ಲಿಸಿದ ಪ್ರತಿಯೊಂದು ಅಪೀಲು, ಆವೇದನ ಅಥವಾ ಅರ್ಜಿಯೊಡನೆ ಅಂಥ ಅಪೀಲು, ಆವೇದನ ಅಥವಾ ಅರ್ಜಿಯ ಎರಡು ಯಥಾಪ್ರತಿಗಳು ಮತ್ತು ಯಾವ ಆದೇಶದ ಸಂಬಂಧದಲ್ಲಿ ಅಪೀಲನ್ನು, ಆವೇದನವನ್ನು ಅಥವಾ ಅರ್ಜಿಯನ್ನು ಸಲ್ಲಿಸಲಾಗಿದೆಯೋ ಆ ಆದೇಶದ ಒಂದು ಪ್ರಮಾಣಿತ ಪ್ರತಿಯು ಮತ್ತು ಎರಡು ಯಥಾಪ್ರತಿಗಳೊಡನೆ ಮತ್ತು ಎಷ್ಟು ಜನ ಪ್ರತಿವಾದಿಗಳು ಅಥವಾ ಪ್ರತಿಪಕ್ಷಕಾರರು ಇರುವರೋ ಅಷ್ಟು ಅಂಥ ಆದೇಶ ಮತ್ತು ಅಪೀಲಿನ, ಆವೇದನದ ಅಥವಾ ಅರ್ಜಿಯ ಯಥಾಪ್ರತಿಗಳು ಇರತಕ್ಕದ್ದು.