ಮೋಜಣಿ ವ್ಯವಸ್ಥೆಯು ಜಾರಿಗೆ ಬಂದ ಮೇಲೆ, ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಮಿಷನರ ಆದೇಶದ ಮೂಲಕ ಅಥವಾ ಮೇರೆಗೆ ನಿಲ್ಲಿಸಿದ ಅಥವಾ ನಿರ್ದಿಷ್ಟಪಡಿಸಿದ ಮೇರೆ ಗುರುತಿನ ಸ್ಥಾನವನ್ನು ಮತ್ತು ವರ್ಣನೆಯನ್ನು ತೋರಿಸುವ ಒಂದು ನಕಾಶೆಯನ್ನು ಮತ್ತು ತಃಖ್ತೆಯನ್ನು ಮೋಜಣಿ ಅಧಿಕಾರಿಯು ಡೆಪ್ಯುಟಿ ಕಮಿಷನರಿಗೆಒದಗಿಸತಕ್ಕದ್ದು. ಮರು ಮೋಜಣಿ ಮಾಡುವಾಗ ಅಥವಾ ಸರ್ವೇ ನಂಬರನ್ನು ಪೋಡು ಮಾಡುವಾಗ ಅಥವಾ ಇತರ ಯಾವುದೇ ಪ್ರಾಧಿಕೃತ ಸಂದರ್ಭದಲ್ಲಿ ಮೇರೆಗಳಲ್ಲಿ ಉಂಟಾದ ತರುವಾಯದ ಯಾವುದೇ ಬದಲಾವಣೆಗನುಸಾರವಾಗಿ ನಕಾಶೆಯನ್ನು ತಿದ್ದುಪಾಟು ಮಾಡುವುದು. ಸಂದರ್ಭಾನುಸಾರ, ಭೂ ದಾಖಲೆಗಳ ಡೆಪ್ಯುಟಿ ಕಮಿಷನರ ಅಥವಾ ಕಂದಾಯವ್ಯವಸ್ಥೆಯ ಡೆಪ್ಯುಟಿ ಕಮಿಷನರ ಕರ್ತವ್ಯವಾಗಿರತಕ್ಕದ್ದು.