ರಾಜ್ಯ ಸರ್ಕಾರವು ಆಗಿಂದಾಗ್ಗೆ, ಕೇಳಬಹುದಾದಂಥ ನ್ಯಾಯಾಧಿಕರಣದ ಕೆಲಸಕ್ಕೆ ಸಂಬಂಧಪಟ್ಟಂಥ ಮಾಹಿತಿಯನ್ನು, ವರದಿಯನ್ನು, ಅಂಕಿ ಅಂಶಗಳನ್ನು ಮತ್ತು ವಿವರಣಾ ಪಟ್ಟಿಕೆಯನ್ನು ನ್ಯಾಯಾಧಿಕರಣವು ಒದಗಿಸತಕ್ಕದ್ದು.
ನ್ಯಾಯಾಧಿಕರಣಕ್ಕೆ ರಾಜ್ಯ ಸರ್ಕಾರವು ನೇಮಕ ಮಾಡುವ ಕಾರ್ಯದರ್ಶಿಯು ಇರತಕ್ಕದ್ದು. ರಾಜ್ಯ ಸರ್ಕಾರವು ತಾನು ಯುಕ್ತವೆಂದು ಭಾವಿಸಿದರೆ, ಒಬ್ಬ ಅಥವಾ ಹೆಚ್ಚು ಮಂದಿ ಸಹಾಯಕ ಕಾರ್ಯದರ್ಶಿಗಳನ್ನು ನ್ಯಾಯಾಧಿಕರಣಕ್ಕೆ ನೇಮಕ ಮಾಡಬಹುದು. ಅವರು ನ್ಯಾಯಾಧಿಕರಣದ ಅಧ್ಯಕ್ಷನು ಅವರಿಗೆ ವಹಿಸಬಹುದಾದ ಕಾರ್ಯದರ್ಶಿಯ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.
ಅಧ್ಯಕ್ಷನಿಗೆ ಈ ಕೆಳಕಂಡ ಅಧಿಕಾರಗಳಿರತಕ್ಕದ್ದು.-
(ಎ) ತಾನು ಸೇರಿ ನ್ಯಾಯಾಧಿಕರಣದ ಸದಸ್ಯರ ಪೈಕಿ ಆರಿಸಿದ ಸದಸ್ಯರನ್ನೊಳಗೊಂಡ ನ್ಯಾಯ ಪೀಠಗಳನ್ನು ರಚಿಸುವುದಕ್ಕೆ;
(ಬಿ) ಈ ನಿಯಮಗಳ ಯಾವುವೇ ಉದ್ದೇಶಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಲು ಯಾರೇಸದಸ್ಯನನ್ನು ನಿಯೋಜಿಸುವುದು;
(ಸಿ) ಇರುವ ವ್ಯವಹಾರವನ್ನು ನ್ಯಾಯಪೀಠಗಳಿಗೆ ಹಂಚುವುದಕ್ಕೆ ಮತ್ತು ಒಂದು ನ್ಯಾಯಪೀಠದಿಂದ ಇನ್ನೊಂದು ನ್ಯಾಯಪೀಠಕ್ಕೆ ಅಪೀಲುಗಳನ್ನು ಅಥವಾ ಅರ್ಜಿಗಳನ್ನು ವರ್ಗಾಯಿಸುವುದು; ಮತ್ತು
(ಡಿ) ನ್ಯಾಯಾಧಿಕರಣದ ಪ್ರಕಾರ್ಯಗಳಿಗೆ ಮತ್ತು ಕೆಲಸಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಪರಿಶೀಲಿಸುವುದಕ್ಕಾಗಿ ನ್ಯಾಯಾಧಿಕರಣದ ಸದಸ್ಯರ ಸಭೆಯನ್ನು ಕರೆಯುವುದು.-