ರಾಜ್ಯ ಸರ್ಕಾರದ ಸ್ವತ್ತಾಗಿರುವ ಯಾವುದೇ ಸಾರ್ವಜನಿಕ ರಸ್ತೆ, ಬೀದಿ, ಓಣಿ ಅಥವಾ ದಾರಿಯು ಪೂರ್ಣವಾಗಿ ಅಥವಾ ಭಾಗಶಃ ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿಲ್ಲದಿರುವಾಗ, ಅಫಿಷಿಯಲ್ ಗೆಜೆಟ್ಟಿನಲ್ಲಿ ರಾಜ್ಯ ಸರ್ಕಾರವು 27ನೇ ನಮೂನೆಯಲ್ಲಿ ಆ ಬಗ್ಗೆ ಒಂದು ಅಧಿಸೂಚನೆಯನ್ನು ಪ್ರಕಟಿಸತಕ್ಕದ್ದು.
ರಾಜ್ಯ ಸರ್ಕಾರದ ಸ್ವತ್ತಾಗಿರುವ ಯಾವುದೇ ಸಾರ್ವಜನಿಕ ರಸ್ತೆ, ಬೀದಿ, ಓಣಿ ಅಥವಾ ದಾರಿಯು ಪೂರ್ಣವಾಗಿ ಅಥವಾ ಭಾಗಶಃ ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿಲ್ಲದಿರುವಾಗ, ಅಫಿಷಿಯಲ್ ಗೆಜೆಟ್ಟಿನಲ್ಲಿ ರಾಜ್ಯ ಸರ್ಕಾರವು 27ನೇ ನಮೂನೆಯಲ್ಲಿ ಆ ಬಗ್ಗೆ ಒಂದು ಅಧಿಸೂಚನೆಯನ್ನು ಪ್ರಕಟಿಸತಕ್ಕದ್ದು.
(1) ಪ್ರಸ್ತಾಪಗಳ ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ 94ನೇ ನಿಯಮದ ಮೇರೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಅವಧಿಯು ಮುಕ್ತಾಯವಾದ ತರುವಾಯ, ಡೆಪ್ಯುಟಿ ಕಮಿಷನರು ಉದ್ದೇಶಿತ ವಿಚಾರಣೆಯ ಮತ್ತು ಅದರ ಸ್ಥಳ ಮತ್ತು ಕಾಲ ಮತ್ತು ವಿಷಯದ ಬಗ್ಗೆ 28ನೇ ನಮೂನೆಯಲ್ಲಿ ನೋಟೀಸನ್ನು ಕೊಡತಕ್ಕದ್ದು. ಈ ನೋಟೀಸನ್ನು ಸ್ವತ್ತು ಇರುವ ಗ್ರಾಮದ ಚಾವಡಿಯಲ್ಲಿ ಮತ್ತು ಯಾವ ಸ್ವತ್ತಿನ ಸಂಬಂಧದಲ್ಲಿ ವಿಚಾರಣೆಯು ನಡೆಯುವುದೋ ಅದರ ಮೇಲೆ ಎದ್ದು ಕಾಣುವ ಸ್ಥಳದಲ್ಲಿ ವಿಚಾರಣೆಯು ನಡೆಯುವುದಕ್ಕೆ ಹತ್ತು ದಿನಗಳಿಗೆ ಕಡಿಮೆಯಿಲ್ಲದಷ್ಟು ಅವಧಿಗೆ ಮೊದಲು ಅಂಟಿಸತಕ್ಕದ್ದು.
(2) ವಿಚಾರಣೆಯ ವಿಷಯದ ಬಗ್ಗೆ ಕ್ಲೇಮು ಮಾಡಿರುವರೆಂದು ತಿಳಿದು ಬಂದಿರುವ ಅಥವಾ ಹಾಗೆ ನಂಬಲಾಗಿರುವ ಎಲ್ಲಾ ವ್ಯಕ್ತಿಗಳ ಮೇಲೆ ವಿಚಾರಣೆಗೆ ಹತ್ತು ದಿನಗಳಿಗೆ ಕಡಿಮೆಯಿಲ್ಲದಷ್ಟು ಅವಧಿಯ ಮೊದಲು ನೋಟೀಸನ್ನು ಜಾರಿ ಮಾಡತಕ್ಕದ್ದು ಮತ್ತು ಅಂಥ ಪ್ರತಿಯೊಂದು ನೋಟೀಸನ್ನು 30ನೇ ಪ್ರಕರಣದಲ್ಲಿ ಉಪಬಂಧಿಸಲಾದ ರೀತಿಯಲ್ಲಿ ಜಾರಿ ಮಾಡತಕ್ಕದ್ದು. 96. 68(5)ನೇ ಪ್ರಕರಣದ ಮೇರೆಗಿನ ಅಧಿಸೂಚನೆ ಮತ್ತು 68(6)ನೇ ಪ್ರಕರಣದ ಮೇರೆಗೆ ಡೆಪ್ಯುಟಿ ಕಮಿಷನರ ತೀರ್ಮಾನ.- ವ್ಯವಹರಣೆಗಳ ದಾಖಲೆಯನ್ನು ಮತ್ತು 68ನೇ ಪ್ರಕರಣದ (4)ನೇ ಉಪ-ಪ್ರಕರಣದ ಮೇರೆಗೆ ಡೆಪ್ಯುಟಿ ಕಮಿಷನರು ಕಳಿಸಿದ ವರದಿಯನ್ನು ಪರಿಶೀಲಿಸಿದ ತರುವಾಯ, 94ನೇ ನಿಯಮದ ಮೇರೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಸಾರ್ವಜನಿಕ ರಸ್ತೆ, ಬೀದಿ, ಓಣಿ, ದಾರಿ ಅಥವಾ ಅದರ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಮನದಟ್ಟಾದರೆ, ಅದು 29ನೇ ನಮೂನೆಯಲ್ಲಿ ಒಂದು ಅಧಿಸೂಚನೆಯನ್ನು ಅಫಿಷಿಯಲ್ ಗೆಜೆಟ್ಟಿನಲ್ಲಿ ಪ್ರಕಟಿಸತಕ್ಕದ್ದು. (2) ನಷ್ಟ ಪರಿಹಾರದ ಮೊಬಲಗಿನ ಸಂಬಂಧದಲ್ಲಿ, ಡೆಪ್ಯುಟಿ ಕಮಿಷನರು ಮಾಡಿದ ತೀರ್ಮಾನದ ಬಗ್ಗೆ 30ನೇ ನಮೂನೆಯಲ್ಲಿ ಲಿಖಿತ ನೋಟೀಸನ್ನು ಅದರಲ್ಲಿ ಆ ಆದೇಶದ ವಿಷಯ, ಒಳಾಂಶಗಳು ಮತ್ತು ದಿನಾಂಕದ ಬಗ್ಗೆ ಸಂಕ್ಷಿಪ್ತವಾಗಿ ಉಲ್ಲೇಖಿಸಿ ಯಾವ ವ್ಯಕ್ತಿಗಳಿಗೆ ನಷ್ಟ ಪರಿಹಾರವನ್ನು ಸಂದಾಯ ಮಾಡಬೇಕೋ ಆ ವ್ಯಕ್ತಿಗಳಿಗೆ 30ನೇ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಜಾರಿ ಮಾಡತಕ್ಕದ್ದು.
(1) ಪ್ರತಿ ನೂರು ಜಾನುವಾರುಗಳಿಗೆ ಹನ್ನೆರಡು ಹೆಕ್ಟೇರುಗಳಂತೆ ಪ್ರತಿಯೊಂದು ಗ್ರಾಮದ ಜಾನುವಾರಿಗೂ ಸರ್ಕಾರಿ ಭೂಮಿಯನ್ನು ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇಡತಕ್ಕದ್ದು.
ವಿವರಣೆ:- ಜಾನುವಾರನ್ನು ಲೆಕ್ಕ ಹಾಕುವಾಗ, ಆಡು, ಕುರಿ ಅಥವಾ ಕರು ಅಥವಾ ಹಸು ಅಥವಾ ಎಮ್ಮೆ ಇವುಗಳೊಂದೊಂದನ್ನೂ ಒಂದೊಂದು ಜಾನುವಾರೆಂದು ಪರಿಗಣಿಸತಕ್ಕದ್ದು.
(2) ಸಂಬಂಧಪಟ್ಟ ಗ್ರಾಮದಲ್ಲಿ ಅಥವಾ ಪಕ್ಕದ ಗ್ರಾಮದಲ್ಲಿ ಗ್ರಾಮದ ಜಾನುವಾರು ಮೇಯುವುದಕ್ಕೆ ಅನುಕೂಲವಾಗುವಂತೆ ಸಾಕಷ್ಟು ಅರಣ್ಯ ಪ್ರದೇಶವಿದ್ದರೆ, ಅದರ ವಿಸ್ತೀರ್ಣಕ್ಕನುಗುಣವಾಗಿ ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇದೆಯೆಂದು ಪ್ರದೇಶದ ವಿಸ್ತೀರ್ಣವನ್ನು ಕಡಿಮೆ ಮಾಡಬಹುದು.
(3) ಗ್ರಾಮದಲ್ಲಿ ಯಾವ ಗೋಮಾಳವೂ ಇಲ್ಲದಿದ್ದರೆ, ಅಥವಾ ಇರುವ ಭೂಮಿಯು (1)ನೇ ಉಪ- ನಿಯಮದ ಮೇರೆಗೆ ನಿಯಮಿಸಿದ ವಿಸ್ತೀರ್ಣಕ್ಕಿಂತ ಕಡಿಮೆಯಾಗಿದ್ದರೆ, ಪಕ್ಕದ ಗ್ರಾಮದಲ್ಲಿ ದೊರೆಯುವ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿಡುವುದರ ಮೂಲಕ ಆ ಕೊರತೆಯನ್ನು ತುಂಬಬಹುದು.
(4) ಯಾವುದೇ ಗ್ರಾಮದಲ್ಲಿ ಉಚಿತ ಗೋಮಾಳವನ್ನು ಪ್ರತ್ಯೇಕವಾಗಿಡುವುದರಲ್ಲಿ ಅವಶ್ಯಕವಾದ ಭೂಮಿಯ ವಿಸ್ತೀರ್ಣವನ್ನು ಡೆಪ್ಯುಟಿ ಕಮಿಷನರು ನಿರ್ಧರಿಸತಕ್ಕದ್ದು. ಗೋಮಾಳದ ವಿಸ್ತೀರ್ಣವು (1)ನೇ ಉಪನಿಯಮದಲ್ಲಿ ನಿಯಮಿಸಿದ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರಬೇಕೆಂದು ಡೆಪ್ಯುಟಿ ಕಮಿಷನರು ಅಭಿಪ್ರಾಯಪಟ್ಟರೆ, ಅವನು ಅವಶ್ಯಕವಾಗಬಹುದಾದಂಥ ಹೆಚ್ಚಿನ ವಿಸ್ತೀರ್ಣವನ್ನು ಹಾಗೆ ಪ್ರತ್ಯೇಕವಾಗಿ ಇಡಬಹುದು. ಇದರ ಬದಲಾಗಿ ಈಗಾಗಲೇ ಪ್ರತ್ಯೇಕವಾಗಿಡಲಾಗಿರುವ ಪ್ರದೇಶವು ನಿಜವಾಗಿಯೂ ಅವಶ್ಯಕವಾಗಿರುವುದಕ್ಕಿಂತ ಬಹಳ ಹೆಚ್ಚಾಗಿದೆಯೆಂದು ಅಭಿಪ್ರಾಯಪಟ್ಟರೆ, ಅವನು ಅದನ್ನು ನಿಯಮಿಸಿದ ಕನಿಷ್ಠ ಪ್ರಮಾಣಕ್ಕೆ ಇಳಿಸಬಹುದು. ಗೋಮಾಳವನ್ನು ನಿಯಮಿತ ಪರಿಮಿತಿಗಿಂತ ಕಡಿಮೆಗೆ ಇಳಿಸಬಹುದೆಂದು ಅವನು ಪರಿಗಣಿಸಿದರೆ, ವಿಭಾಗಾಧಿಕಾರಿಯ ಪೂರ್ವಾನುಮತಿಯನ್ನು ಪಡೆದ ತರುವಾಯ ಮಾತ್ರವೇ ಅವನು ಹಾಗೆ ಮಾಡತಕ್ಕದ್ದು.
ಸರ್ಕಾರಕ್ಕೆ ಸೇರಿದ್ದು ಅಧಿಭೋಗದಲ್ಲಿಲ್ಲದ ಎಲ್ಲಾ ಭೂಮಿಗಳಲ್ಲಿ, ಅಂಥ ಭೂಮಿಗಳ ಬಗ್ಗೆ, ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಕಂದಾಯ ನಿರ್ಧಾರ ಆಗಿರಲಿ ಅಥವಾ ಆಗಿರದಿರಲಿ ಮತ್ತು (ಉಚಿತ ಗೋಮಾಳಕ್ಕಾಗಿ ಗ್ರಾಮಗಳಿಗೆ ಕೊಡಲಾಗಿರುವ ಭೂಮಿಗಳ ಹೊರತು) ಹುಲ್ಲಿಗಾಗಿ ಅಥವಾ ಮೇವಿಗಾಗಿ ವಿಶೇಷವಾಗಿ ಮೀಸಲಾಗಿರುವ ಭೂಮಿಗಳಲ್ಲಿ, ಮೇಯಿಸುವ ಅಥವಾ ಇತರ ಉತ್ಪನ್ನವನ್ನು ಸಂಗ್ರಹಿಸುವ ಹಕ್ಕನ್ನು ಪ್ರತಿ ಹುಲ್ಲುಗಾವಲನ್ನಾಗಲೀ ಅಥವಾ ಪ್ರದೇಶಗಳನ್ನಾಗಲಿ ಡೆಪ್ಯುಟಿ ಕಮಿಷನರು ನಿರ್ಧರಿಸಬಹುದಾದ ಕಾಲದಲ್ಲಿ ಪ್ರತಿ ವರ್ಷವೂ ಬಹಿರಂಗ ಹರಾಜಿನ ಮೂಲಕ ಮಾರಬಹುದು.
ಪರಂತು, ಅಂಥ ಭೂಮಿಯ ಮೇಲಿನ ಖರೀದಿದಾರನಿಗೆ ಇರುವ ಹಕ್ಕು ಜೂನ್ ಮೂವತ್ತನೇ ದಿನಾಂಕದಂದು, ಅಥವಾ ಆ ಭೂಮಿಯನ್ನು ಪೂರ್ಣ ಕಂದಾಯ ನಿರ್ಧಾರಣೆಯ ಮೇಲೆ ಸಾಗುವಳಿಗಾಗಿ ಮಂಜೂರು ಮಾಡಬಹುದಾದಂಥ ಮುಂಚಿನ ದಿನಾಂಕದಂದು; ಪೂರ್ಣವಾಗಿ ಕೊನೆಗೊಳ್ಳತಕ್ಕದ್ದು.
ಡೆಪ್ಯುಟಿ ಕಮಿಷನರು, ಸಾಕಷ್ಟು ಕಾರಣಕ್ಕಾಗಿ ಮತ್ತು ವಿಭಾಗಾಧಿಕಾರಿಯ ಪೂರ್ವಾನುಮತಿಯನ್ನು ಪಡೆದು, 99ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಭೂಮಿಯಲ್ಲಿ ಮೇಯಿಸುವ ಹಕ್ಕುಗಳನ್ನು ಅಥವಾ ಇತರ ಉತ್ಪನ್ನವನ್ನು ಸಂಗ್ರಹಿಸುವ ಹಕ್ಕನ್ನು ಬಹಿರಂಗ ಹರಾಜಿನಲ್ಲಿ ಮಾರದೆ ಬೇರೆ ರೀತಿಯಲ್ಲಿ ವಿಲೆ ಮಾಡಲು ಮಂಜೂರು ಮಾಡಬಹುದು.
ಕೆರೆಗಳನ್ನು ಮತ್ತು ನೀರಾವರಿ ನಾಲೆಗಳನ್ನು ಸುಸ್ಥಿತಿಯಲ್ಲಿಡುವ ಹೊಣೆ ಹೊತ್ತ ಪ್ರಾಧಿಕಾರಿಗಳು, ಅಂಥ ಕೆರೆಗಳ ಮತ್ತು ನೀರಾವರಿ ನಾಲೆಗಳ ಏರಿಗಳ ಹಿಂಭಾಗದ ಇಳಿಜಾರು ಪ್ರದೇಶದಲ್ಲಿ ಬೆಳೆಯುವ ಹುಲ್ಲನ್ನು ಹರಾಜಿನ ಮೂಲಕ ಮಾರತಕ್ಕದ್ದು. ಅಂಥ ಹುಲ್ಲನ್ನು ಕೊಯ್ಡು ತೆಗೆದುಕೊಂಡು ಹೋಗತಕ್ಕದ್ದು ಮತ್ತು ಅಂಥ ಇಳಿಜಾರಿ ಪ್ರದೇಶದಲ್ಲಿ ಮೇಯಲು ಯಾವ ದನಕ್ಕೂ ಅವಕಾಶ ಕೊಡತಕ್ಕದ್ದಲ್ಲ.
(1) ವ್ಯವಸಾಯವಲ್ಲದ ಇತರ ಯಾವುದೇ ಉದ್ದೇಶದ ಸಂಬಂಧದಲ್ಲಿ ಕಂದಾಯ ನಿರ್ಧರಿಸಲ್ಪಟ್ಟಿರುವ ಭೂಮಿಯನ್ನು ವ್ಯವಸಾಯದ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಿದಾಗ, ಡೆಪ್ಯುಟಿ ಕಮಿಷನರು ಹಿಡುವಳಿದಾರನ ಅರ್ಜಿಯ ಮೇಲೆ, ಅಂಥ ಭೂಮಿಯ ಮೇಲಣ ವ್ಯವಸಾಯೇತರ ಕಂದಾಯವನ್ನು ತೆಗೆದು ಹಾಕುಬಹುದು ಮತ್ತು ಕಂದಾಯ ವ್ಯವಸ್ಥೆಯ ಅವಧಿಯು ಮುಕ್ತಾಯವಾಗದಿದ್ದರೆ, ಹಿಂದಿನ ವ್ಯವಸಾಯದ ಕಂದಾಯ, ಯಾವುದಾದರೂ ಇದ್ದರೆ, ಅದನ್ನು ವಿಧಿಸಬಹುದು ಮತ್ತು ಇತರ ಸಂದರ್ಭಗಳಲ್ಲಿ ವ್ಯವಸಾಯ ಭೂಮಿಗಳಿಗನುಸಾರವಾಗಿ ನಿರ್ಧರಿಸಲ್ಪಡಬಹುದಾದಂಥ ವ್ಯವಸಾಯ ಸಂಬಂಧವಾದ ಕಂದಾಯವನ್ನು ವಿಧಿಸಬಹುದು.
(2) (1)ನೇ ಉಪ-ನಿಯಮದ ಮೇರೆಗೆ ವಿಧಿಸಲಾದ ವ್ಯವಸಾಯ ಸಂಬಂಧವಾದ ಕಂದಾಯವು, ಭೂಮಿಯು ಇರುವ ಗ್ರಾಮದ ಸಾಧಾರಣ ಭೂಕಂದಾಯದ ವ್ಯವಸ್ಥೆಯಲ್ಲಿ ವಿಧಿಸಲಾದಂತೆ ಕಾಲಕಾಲಕ್ಕೆ ನಡೆಯುವ ಪರಿಕ್ಷರಣೆಗೆ ಮತ್ತು ಕಾನೂನಿನ ಇತರ ನಿಯಮಗಳಿಗೆ ಹಾಗೂ ಉಪ-ಬಂಧಗಳಿಗೆ ಒಳಪಡತಕ್ಕದ್ದು.
ಪರಂತು, ಹಿಡುವಳಿದಾರನು ಯಾವುದೇ ಅವಧಿಯ ಬಗೆಗಿನ ಯಾವುದೇ ಒಟ್ಟು ಮೊಬಲಗನ್ನು ಪರಿವರ್ತಿತ ಕಂದಾಯದಂತೆ ಸಂದಾಯ ಮಾಡಿದ್ದರೆ, ಯಾವ ಅವಧಿಯ ಬಗೆಗಿನ ಕಂದಾಯವು ಹಾಗೆ ಪರಿವರ್ತಿತವಾಗಿತ್ತೋ ಆ ಅವಧಿಯು ಮುಕ್ತಾಯವಾಗುವವರೆಗೆ ಯಾವುದೇ ಮರು ಸಂದಾಯಕ್ಕೆ ಅಥವಾ ಗೇನಿ ಅಥವಾ ಒಪ್ಪಂದದ ಷರತ್ತುಗಳಲ್ಲಿ ಯಾವುದೇ ಬದಲಾವಣೆಗೆ ಹಕ್ಕುಳ್ಳವನಾಗಿರತಕ್ಕದ್ದಲ್ಲ.
(1) ವ್ಯವಸಾಯವಲ್ಲದ ಇತರ ಯಾವುದೇ ಉದ್ದೇಶಕ್ಕಾಗಿ ಉಪಯೋಗಿಸಲಾಗಿರುವ ಮತ್ತು ಯಾವ ಭೂಮಿಯ ಸಂಬಂಧದಲ್ಲಿ ವಾರ್ಷಿಕವಾಗಿ ಸಂದಾಯ ಮಾಡಬೇಕಾದ ವ್ಯವಸಾಯೇತರ ಕಂದಾಯವನ್ನು ವಿಧಿಸಬಹುದೋ ಅಥವಾ ಈ ಅಧಿನಿಯಮದ ಪ್ರಾರಂಭಕ್ಕೆ ಮೊದಲು ಜಾರಿಯಲ್ಲಿದ್ದ ಯಾವುದೇ ಅಧಿನಿಯಮದ ಮೂಲಕ ಅಥವಾ ಕಾನೂನಿನ ಮೂಲಕ ಅಥವಾ ಅಧಿನಿಯಮದ ಅಥವಾ ಕಾನೂನಿನ ಮೇರೆಗೆ ಕಂದಾಯವನ್ನು ವಿಧಿಸಲಾಗಿದೆಯೋ ಆ ಭೂಮಿಯ ಹಿಡುವಳಿದಾರನು ಅಂಥ ವ್ಯವಸಾಯೇರ ಕಂದಾಯವನ್ನು ಪರಿವರ್ತಿಸಬೇಕೆಂದು ಡೆಪ್ಯುಟಿ ಕಮಿಷನರಿಗೆಅರ್ಜಿಯನ್ನು ಸಲ್ಲಿಸಬಹುದು.
(2) (1)ನೇ ಉಪ-ನಿಯಮದ ಮೇರೆಗೆ ಸಲ್ಲಿಸುವ ಅರ್ಜಿಯೊಂದಿಗೆ, ಸಂದರ್ಭಾನುಸಾರ, ಅಂಥ ಭೂಮಿಗೆ ಸಂಬಂಧಪಟ್ಟ ಹಕ್ಕು ದಾಖಲೆಯ ಅಥವಾ ಸ್ವತ್ತಿನ ಕಾರ್ಡಿನ ಅಥವಾ ರಿಜಿಸ್ಟರಿನ ಒಂದು ಪ್ರಮಾಣಿತ ಪ್ರತಿಯು ಇರತಕ್ಕದ್ದು ಮತ್ತು ಅಂಥ ವಾರ್ಷಿಕ ವ್ಯವಸಾಯೇತರ ಕಂದಾಯದ ಮೊಬಲಗಿನ ಐದರಷ್ಟಕ್ಕೆ ಸಮನಾದ ಮೊಬಲಗನ್ನು ಭೂಮಿಯ ಹಿಡುವಳಿದಾರನು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಿದ್ದಾನೆಂಬುದನ್ನು ತೋರಿಸುವ ಖಜಾನೆಯ ಚಲನ್ನೂ ಇರತಕ್ಕದ್ದು.
(3) ಡೆಪ್ಯುಟಿ ಕಮಿಷನರು ತಾನು ಯುಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ಮಾಡಿದ ತರುವಾಯ ಮತ್ತು ಹಿಡುವಳಿದಾರನು ಅಂಥ ಸಂದಾಯವನ್ನು ಮಾಡಿದ್ದಾನೆಂಬುದನ್ನು ಮನದಟ್ಟು ಮಾಡಿಕೊಂಡ ತರುವಾಯ ಕಂದಾಯ ಪರಿವರ್ತನೆಯ ಬಗ್ಗೆ ಆದೇಶವನ್ನು ಮಾಡತಕ್ಕದ್ದು.
(4) (ಕ) ಡೆಪ್ಯುಟಿ ಕಮಿಷನರು (3)ನೇ ಉಪಖಂಡದ ಮೇರೆಗೆ ತಾನು ಮಾಡಿದ ಆದೇಶದ ಪ್ರತಿಗಳನ್ನು, ಸಂದರ್ಭಾನುಸಾರ, ಹಕ್ಕು ದಾಖಲೆಗಳಲ್ಲಿ, ಸ್ವತ್ತು ಕಾರ್ಡಿನಲ್ಲಿ ಅಥವಾ ಸ್ವತ್ತಿನ ರಿಜಿಸ್ಟರುಗಳಲ್ಲಿ ಅವಶ್ಯಕ ನಮೂದನೆಗಳನ್ನು ಮಾಡುವ ಉದ್ದೇಶಕ್ಕಾಗಿ ಜಿಲ್ಲೆಯ ಭೂದಾಖಲೆಯ ಸಹಾಯಕ ಸೂಪರಿಂಟೆಂಡೆಂಟನಿಗೆ ಮತ್ತು ತಾಲ್ಲೂಕಿನ ತಹಸೀಲ್ದಾರನಿಗೆ ಕಳಿಸುವಂತೆ ಮಾಡತಕ್ಕದ್ದು,
(ಖ) ಡೆಪ್ಯುಟಿ ಕಮಿಷನರು ವಾರ್ಷಿಕ ವ್ಯವಸಾಯೇತರ ಕಂದಾಯದ ಪರಿವರ್ತನೆಯ ಸಂಬಂಧದಲ್ಲಿ ಹಿಡುವಳಿದಾರನಿಗೆ ಒಂದು ಪ್ರಮಾಣ ಪತ್ರವನ್ನು 44ನೇ ನಮೂನೆಯಲ್ಲಿ ಕೊಡತಕ್ಕದ್ದು.