Annexure
ವಿ. ನಂಜಯ್ಯ, ಅಧೀನ ಕಾರ್ಯದರ್ಶಿ.
ಅಧಿಸೂಚನೆ ಬೆಂಗಳೂರು, ದಿನಾಂಕ: 17ನೇ ಜೂನ್, 1966
ಎಸ್.ಓ. 4783.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12)ರ 195ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಇದಕ್ಕೆ ಅನುಬಂಧಿಸಲಾದಂಥ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸದರಿ ಅಧಿನಿಯಮದ ಉಪಬಂಧಗಳ ಮೇರೆಗೆ ಡೆಪ್ಯುಟಿ ಕಮೀಷನರನಿಗೆ ಪ್ರದತ್ತವಾದ ಅಧಿಕಾರಗಳನ್ನು ರೆವೆನ್ಯೂ ಉಪವಿಭಾಗಗಳ ಆಡಳಿತವನ್ನು ಹೊಂದಿರುವ ಅಸಿಸ್ಟೆಂಟ್ ಕಮೀಷನರುಗಳಿಗೆ ಈ ಮೂಲಕ ವಹಿಸಿಕೊಡುತ್ತಾನೆ ಮತ್ತು ಸದರಿ ಅಸಿಸ್ಟೆಂಟ್ ಕಮೀಷನರುಗಳು ಆಯಾ ರೆವೆನ್ಯೂ ಉಪವಿಭಾಗಗಳಲ್ಲಿ ಅಧಿಕಾರಗಳನ್ನು ಚಲಾಯಿಸತಕ್ಕದ್ದು:-