(1) ಯಾವುದೇ ಗ್ರಾಮದ, ಪಟ್ಟಣದ ಅಥವಾ ನಗರದ ಪರಿಮಿತಿಗಳಲ್ಲಿ ಇರುವ ಭೂಮಿಯನ್ನು ಮತ್ತು ಯಾವುದರ ಮೇರೆಯನ್ನು ಡೆಪ್ಯುಟಿ ಕಮಿಷನರು ಅಥವಾ ಮೋಜಣಿ ಅಧಿಕಾರಿಯು 148ನೇ ಪ್ರಕರಣದ ಮೇರೆಗೆ ನಿರ್ಧರಿಸಿದ್ದಾನೆಯೋ ಆ ಭೂಮಿಯನ್ನು ಕಟ್ಟಡ ನಿವೇಶನಗಳ ವಿವರವಾದ ಮೋಜಣಿ ಕೆಲಸಕ್ಕೆ ಒಂದು ರೂಪರೇಖೆಯನ್ನು ತಯಾರಿಸುವುದಕ್ಕೆ ಸುತ್ತು ಮೋಜಣಿ ಪದ್ಧತಿಯ ಮೂಲಕ, ದುರ್ಬೀನು ಮೋಜಣಿ ಮಾಡತಕ್ಕದ್ದು ಮತ್ತು ಈ ಕೆಳಕಂಡ ದಾಖಲೆಗಳನ್ನು ತಯಾರಿಸತಕ್ಕದ್ದು ಅಂದರೆ:-
(ಎ) ಸುತ್ತು ಮೋಜಣಿಯ ಸೂಚಿಕಾ ನಕಾಶೆ;
(ಬಿ) ರೇಖೆಗಳೂ ಸೇರಿದಂತೆ ಸುತ್ತು ಮೋಜಣಿ ಪುಸ್ತಕ,
(2) (1)ನೇ ಉಪನಿಯಮದಲ್ಲಿ ಉಲ್ಲೇಖಿತವಾದ ದಾಖಲೆಗಳನ್ನು ತಯಾರಿಸಿದ ತರುವಾಯ, ಕಟ್ಟಡ ನಿವೇಶನಗಳನ್ನು ಮೋಜಣಿ ಮಾಡತಕ್ಕದ್ದು ಮತ್ತು ಅಡ್ಡಣಿಗೆ ಸಲಕರಣೆಗಳಿಂದ ನಕಾಶೆ ತಯಾರಿಸತಕ್ಕದ್ದು ಮತ್ತು ಈ ಕೆಳಕಂಡ ದಾಖಲೆಗಳನ್ನು ತಯಾರಿಸತಕ್ಕದ್ದು, ಅಂದರೆ:-
(ಎ) ವಿವರವಾದ ಮೂಲ ನಕಾಶೆ;
(ಬಿ) ಕೆಳಗಿನವುಗಳನ್ನು ಒಳಗೊಂಡಿರುವ ಕ್ಷೇತ್ರ ಪುಸ್ತಕ;
(i) ನಕಾಸೆಯಲ್ಲಿನ ಚಾಲ್ತಿ ಸಂಖ್ಯೆ;
(ii) ಪೌರಸಭೆಯ ಅಥವಾ ನಗರಾಭಿವೃದ್ಧಿ ಮಂಡಳಿಯ ಅಥವಾ ಪಂಚಾಯತಿಯ ಅಥವಾ ರೆವಿನ್ಯೂಇಲಾಖೆಯ ದಾಖಲೆಗಳಲ್ಲಿ ನಿರ್ದಿಷ್ಟಪಡಿಸಿದ ಭೂಮಿ ಅಥವಾ ಕಟ್ಟಡ ನಿವೇಶನಗಳ ವರ್ಣನೆ ಮತ್ತು ದಾಖಲೆಗಳಲ್ಲಿ ಕಂಡು ಬರುವಂತೆ ಅಥವಾ ಬೇರೆ ರೀತಿ ಗೊತ್ತು ಮಾಡಲ್ಪಟ್ಟಂತೆ ಸದರಿ ಹಿಡುವಳಿದಾರನ ಹೆಸರು.