(1) ಭೂಮಿಯ ಹಕ್ಕುಗಳ ಅರ್ಜಿಯ ಸಂಬಂಧದಲ್ಲಿ ಮಾಹಿತಿಯು ತನಗೆ ತಲುಪಿದ ಮೇಲೆ, ಗ್ರಾಮ ಲೆಕ್ಕಿಗಳು,-
(i) ಅದು ಉತ್ತರಾಧಿಕಾರಕ್ಕೆ, ಉತ್ತರ ಜೀವಿತಾಧಾರಕ್ಕೆ ಅಥವಾ ವಾರಸಿಗೆ ಸಂಬಂಧಿಸಿದ್ದರೆ 18ನೇ ನಮೂನೆಯಲ್ಲಿ, ಮತ್ತು
(ii) ಅದು ಇತರ ಯಾವುದೇ ರೀತಿಯದಾಗಿದ್ದರೆ 19 ಮತ್ತು 20ನೇ ನಮೂನೆಗಳಲ್ಲಿ ಬದಲಾವಣೆಯನ್ನು ನಮೂದಿಸತಕ್ಕದ್ದು.
(2) ಅಂತಹ ಯಾವುದೇ ಹಕ್ಕಿನ ಆರ್ಜನೆಯ ಬಗ್ಗೆ ಅಂಥ ಯಾವುದೇ ವರದಿಯನ್ನು ಕೊಟ್ಟಿದ್ದರೆ, ಆ ಹಕ್ಕು ಅರ್ಜಿತವಾದುದನ್ನು ವರದಿ ಮಾಡುವ ಪಕ್ಷಕಾರನ ರುಜುವನ್ನು ಗ್ರಾಮ ಲೆಕ್ಕಿಗನು ನಮೂನೆಯಲ್ಲಿ ತೆಗೆದುಕೊಳ್ಳತಕ್ಕದ್ದು ಮತ್ತು ಅದರ ಪಕ್ಕದ ಪ್ರತಿಯನ್ನು ಪಕ್ಷಕಾರನಿಗೆ ಕೊಡತಕ್ಕದ್ದು.