ಅನುಸೂಚಿ
| ಜಿಲ್ಲೆ | ತಾಲ್ಲೂಕು | ಪಟ್ಟಣ ಅಥವಾ ಗ್ರಾಮ | ಸರ್ವೆ ನಂಬರು | ವಿಸ್ತೀರ್ಣ ಎಕರೆಗಳು | ಮೇರೆಗಳು | |||
| ಉತ್ತರ | ದಕ್ಷಿಣ | ಪೂರ್ವ | ಪಶ್ಚಿಮ | |||||
| 1 | 2 | 3 | 4 | 5 | 6 | |||
ಕರ್ನಾಟಕ ರಾಜ್ಯಪಾಲರ ಪರವಾಗಿ ಮತ್ತು ಅವರಿಗಾಗಿ ಮತ್ತು ಅವರ ಆದೇಶದ ಮೂಲಕ ಮತ್ತು ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ (ಹೆಸರು ಮತ್ತು ಪದನಾಮ) ಮತ್ತು ಮೇಲೆ ಹೇಳಿದ ಗುತ್ತಿಗೆಗೆ ಪಡೆದವನು ಇದಕ್ಕೆ ಒಪ್ಪಿ ಈ ...............................ನೆಯ .......................................ರಂದು ತಮ್ಮ ಸಹಿ ಮಾಡಿದ್ದಾರೆ.
-
..................................ರ ಸಮಕ್ಷಮದಲ್ಲಿ ಮೇಲೆ ಹೇಳಿದ ........................ ರು ಸಹಿ ಮಾಡಿದ್ದಾರೆ. 1.
-
..................................ರ ಸಮಕ್ಷಮದಲ್ಲಿ ಮೇಲೆ ಹೇಳಿದ ........................ ರು ಸಹಿ ಮಾಡಿದ್ದಾರೆ.
ನಮೂನೆV
(28(i)ನೇ ನಿಯಮವನ್ನು ನೋಡಿ)
ಬೇಸಾಯೇತರ ಉದ್ದೇಶಗಳಿಗಾಗಿ ಭೂಮಿಯ ಮಂಜೂರಾತಿ ಪಡೆದ ವ್ಯಕ್ತಿಗಳು ಬರೆದು ಕೊಡಬೇಕಾದ ಒಪ್ಪಂದದ ನಮೂನೆ.
..........................................ನೇ ತಹಶೀಲ್ದಾರನಿಗೆ,
....................................................... ತಾಲ್ಲೂಕಿನ ..............................ನ ನಿವಾಸಿಯಾದ ನಾನು, .......................... ಕ. ಖ ತಾಲ್ಲೂಕಿನ .................................. ಗ್ರಾಮದ .................... ಸರ್ವೆ ನಂಬರಿನಲ್ಲಿ ಇರುವ ಭೂಮಿಯ (ಅಥವಾ ಇದರಲ್ಲಿ ಕೆಳಗೆ ವಿವರಿಸಿರುವ ಸಂದರ್ಭಾನುಸಾರ ಕಟ್ಟಡ ನಿವೇಶನದ ಅಥವಾ ಬೇರೆ ರೀತಿಯ) ಅಧಿಭೋಗದ ಹಕ್ಕನ್ನು ಈ ಮೂಲಕ ಸ್ವೀಕರಿಸುತ್ತೇವೆ ಮತ್ತು ಸದರಿ ಭೂಮಿಯು ಅಧಿಭೋಗದಾರನೆಂದು ಸರ್ಕಾರಿ ದಾಖಲೆಗಳಲ್ಲಿ ನನ್ನ ಹೆಸರನ್ನು ನಮೂದಿಸಬೇಕೆಂದು ಪ್ರಾರ್ಥಿಸುತ್ತೇನೆ.
ಸದರಿ ಭೂಮಿಯನ್ನು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಮತ್ತು ಅದರ ಮೇರೆಗೆ ಜಾರಿಯಲ್ಲಿರುವ ನಿಯಮಗಳ ಉಪಬಂಧಗಳಿಗೊಳಪಟ್ಟು, 19..............ರ ..................... ತಿಂಗಳ .................. ದಿನಾಂಕದಿಂದ ನನಗೆ ಶಾಶ್ವತವಾಗಿ ಮಂಜೂರು ಮಾಡಲಾಗಿದೆ; ಮತ್ತು ನಾನು ಸದರಿ ಭೂಮಿಯ ಸಂಬಂಧದಲ್ಲಿ ಕಾನೂನು ಬದ್ಧವಾಗಿ ಸಂದಾಯ ಮಾಡಬೇಕಾದ ಭೂಕಂದಾಯವನ್ನು ಕಾಲ ಕಾಲಕ್ಕೆ ಸಂದಾಯ ಮಾಡುವ ಹೊಣೆಯನ್ನು ಹೊರುತ್ತೇನೆ (ಅಥವಾ ಸದರಿ ಭೂಮಿಯ ಬಗ್ಗೆ ಸಂದಾಯ ಮಾಡಬೇಕಾದ ಭೂಕಂದಾಯದ ವಿನಾಯಿತಿಯನ್ನು ನಿಲ್ಲಿಸುವುದು ಯುಕ್ತವೆಂದು ರಾಜ್ಯ ಸರ್ಕಾರವು ಅಲೋಚಿಸಿದಾ, ಸಂದರ್ಭಾನುಸಾರ, ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅಥವಾ ಅನ್ಯಥಾ ಕಾನೂನುಬದ್ಧವಾಗಿ ವಿಧಿಸಬಹುದಾದ ಕಂದಾಯವನ್ನು ಸಂದಾಯ ಮಾಡುವ ಹೊಣೆಯನ್ನು ಹೊರುತ್ತೇನೆ).
ನಾನು ಮಂಜೂರಾತಿಯ ಯಾವುವೇ ಷರತ್ತುಗಳನ್ನು ಉಲ್ಲಂಘಿಸಿದ್ದರೆ, ಸದರಿ ಅಧಿನಿಯಮದ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳ ಉಪಬಂಧಗಳ ಮೇರೆಗೆ ನಾನು ಹೊಣೆಯಾಗಬಹುದಾದಂಥ ಇತರ ಯಾವುದೇ ದಂಡಕ್ಕೆ ಬಾಧಕ ಉಂಟಾಗದಂತೆ, ಡೆಪ್ಯುಟಿ ಕಮೀಷನರು, ಅವನು ನಿರ್ದೇಶಿಸಬಹುದಾದಂಥ ಜುಲ್ಮಾನೆಯನ್ನು ಮತ್ತು/ಅಥವಾ ಕಂದಾಯವನ್ನು ನಾನು ಸಂದಾಯ ಮಾಡಿದ ಮೇಲೆ ಸದರಿ ಭೂಮಿನ್ನು ನನ್ನ ಅಧಿಭೋಗದಲ್ಲಿ ಮುಂದುವರಿಸಬಹುದು.
19 .............. ತಿಂಗಳ ....................... ದಿನಾಂಕ ..................... ಸ್ಥಳ
(ಸಹಿ) ಕ.ಖ.
ಈ ಒಪ್ಪಂದ ಪತ್ರಕ್ಕೆ ಸಹಿ ಮಾಡಿರುವ ಕ, ಖ ಇವರು ಯಾವ ವ್ಯಕ್ತಿಯನ್ನು ಪ್ರತಿನಿಧಿಸುತ್ತಾರೋ ಅವರೇ ಎಂದು ಮತ್ತು ಅದಕ್ಕೆ ನಮ್ಮ ಸಮಕ್ಷಮದಲ್ಲಿ ತಮ್ಮ ಸಹಿ ಮಾಡಿದ್ದಾರೆಂದು ನಮ್ಮ ಸ್ವಂತ ತಿಳುವಳಿಕೆಯ ಮೇರೆಗೆ ನಾವು ಘೋಷಿಸುತ್ತೇವೆ.
(ಸಹಿ) ಗ. ಘ.
(ಸಹಿ) ಙ. ಚ.
ನಮಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ಜಾಗರೂಕತೆಯಿಂದ ವಿಚಾರಣೆಯನ್ನು ಮಾಡಿದ ತರುವಾಯ, ನಾವು ದೊರಕಿಸಲು ಸಾಧ್ಯವಾದಂಥ ನಿಖರವಾದ ಮಾಹಿತಿಯ ಮೇರೆಗೆ ಈ ಒಪ್ಪಂದ ಪತ್ರವನ್ನು ಬರೆದುಕೊಟ್ಟ ವ್ಯಕ್ತಿಯು ಮೇಲಿನ ಭೂಮಿಯ ಬಗ್ಗೆ ಕಾಲಕಾಲಕ್ಕೆ ಸಲ್ಲಬೇಕಾದ ಭೂಕಂದಾಯವನ್ನು ಸಕಾಲದಲ್ಲಿ ಸಂದಾಯ ಮಾಡಲು ಜವಬ್ದಾರನಾಗಿರುವನೆಂದು ರಾಜ್ಯ ಸರ್ಕಾರವು ಒಪ್ಪುವುದಕ್ಕೆ ಯೋಗ್ಯನಾದ ವ್ಯಕ್ತಿಯೆಂದು ನಾವು ಘೋಷಿಸುತ್ತೇವೆ.
(ಸಹಿ) ಛ, ಜ
(ಸಹಿ) ಝ, ಞ
ಗ್ರಾಮ ಲೆಕ್ಕಿಗ
ನಮೂನೆVI
(28(2)ನೇ ನಿಯಮವನ್ನು ನೋಡಿ)
ಬೇಸಾಯೇತರ ಉದ್ದೇಶಗಳಿಗಾಗಿ ಭೂಮಿಯ ಮಂಜೂರಾತಿಯನ್ನು ಪಡೆದಿರುವ ವ್ಯಕ್ತಿಗಳು ಬರೆದು ಕೊಡಬೇಕಾದ ಒಪ್ಪಂದದ ನಮೂನೆ.
..........................................ನೇ ತಹಶೀಲ್ದಾರನಿಗೆ,
....................................................... ತಾಲ್ಲೂಕಿನ ..............................ನ ನಿವಾಸಿಯಾದ ನಾನು, .......................... ಕ. ಖ ತಾಲ್ಲೂಕಿನ .................................. ಗ್ರಾಮದ .................... ಸರ್ವೆ ನಂಬರಿನಲ್ಲಿ ಇರುವ ಭೂಮಿಯ (ಅಥವಾ ಇದರಲ್ಲಿ ಕೆಳಗೆ ವಿವರಿಸಿರುವ ಸಂದರ್ಭಾನುಸಾರ ಕಟ್ಟಡ ನಿವೇಶನದ ಅಥವಾ ಬೇರೆ ರೀತಿಯ) ಅಧಿಭೋಗದ ಹಕ್ಕನ್ನು ಈ ಮೂಲಕ ಸ್ವೀಕರಿಸುತ್ತೇವೆ ಮತ್ತು ಸದರಿ ಭೂಮಿಯು ಅಧಿಭೋಗದಾರನೆಂದು ಸರ್ಕಾರಿ ದಾಖಲೆಗಳಲ್ಲಿ ನನ್ನ ಹೆಸರನ್ನು ನಮೂದಿಸಬೇಕೆಂದು ಪ್ರಾರ್ಥಿಸುತ್ತೇನೆ.
ಭೂ ಕಂದಾಯ ಅಧಿನಿಯಮ, 1964ರ ಮತ್ತು ಅದರ ಮೇರೆಗೆ ಜಾರಿಯಲ್ಲಿರುವ ನಿಯಮಗಳ ಉಪಬಂಧಗಳಿಗೆ ಒಳಪಟ್ಟು ಮತ್ತು ನಾನು ನನ್ನ ವಾರಸುದಾರರು, ನನ್ನಿಂದ ವಹಿಸಿಕೊಂಡವರು ಮತ್ತು ಕಾನೂನು ಸಮ್ಮತ ಪ್ರತಿನಿಧಿಗಳು ಯಾವ ಕಾಲದಲ್ಲೇ ಆಗಲಿ ವಿಭಜನೆಯ, ವಾರಸುದಾರಿಕೆ, ಗುತ್ತಿಗೆ, ಅಡಮಾನ ಅಥವಾ ಬೇರೆ ಯಾವುದೇ ರೀತಿಯಲ್ಲಿ ಸದರಿ ಭೂಮಿಯನ್ನು ವರ್ಗಾವಣೆ ಮಾಡತಕ್ಕದ್ದಲ್ಲ ಅಥವಾ ಅದನ್ನು ವಿಭಜಿಸುವ ಹಾಗೆ ಅದರ ಯಾವುದೇ ಭಾಗವನ್ನು ಇತರ ಯಾವನೇ ವ್ಯಕ್ತಿಯು ಸಾಗುವಳಿ ಮಾಡತಕ್ಕದ್ದಲ್ಲ ಅಥವಾ ಅಧಿಭೋಗಿಸತಕ್ಕದ್ದಲ್ಲ, ಉಪಯೋಗಿಸತಕ್ಕದ್ದಲ್ಲ ಎಂಬ ಷರತ್ತಿನ ಮೇರೆಗೆ 19..............ನೆಯ ದಿನಾಂಕದಿಂದ ಶಾಶ್ವತವಾಗಿ ಸದರಿ ಭೂಮಿಯನ್ನು ನನಗೆ ಮಂಜೂರು ಮಾಡಲಾಗಿದೆ.
ಮೇಲೆ ಹೇಳಿದ ಯಾವುವೇ ಷರತ್ತುಗಳನ್ನು ಪಾಲಿಸಲು ನಾನು ತಪ್ಪಿದರೆ, ಸದರಿ ಅಧಿನಿಯಮದ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳ ಮೇರೆಗೆ ನಾನು ಗುರಿಯಾಗಬಹುದಾದಂಥ ಇತರ ಯಾವುವೇ ದಂಡಗಳಿಗೆ ಬಾಧಕ ಉಂಟಾಗದಂತೆ ನನ್ನ ಸದರಿ ಭೂಮಿಯನ್ನು, ಡೆಪ್ಯುಟಿ ಕಮೀಷನರು ಕ್ಷಿಪ್ರವಾಗಿ ಮುಟ್ಟುಗೊಳು ಹಾಕಿಕೊಳ್ಳಲು ಅವಕಾಶವಿರತಕ್ಕದ್ದು, ಮತ್ತು ಸದರಿ ಭೂಮಿಯ ಸಂಬಂಧದಲ್ಲಿ ನಾನು ಮಾಡಿದ ಅಥವಾ ನಿರ್ವಹಿಸಿದ ಯಾವುದರ ಬಗ್ಗೆಯೂ ನಷ್ಟ ಪರಿಹಾರವನ್ನು ಕ್ಲೇಮು ಮಾಡಲು ನನಗೆ ಹಕ್ಕುಳ್ಳವನಾಗಿರತಕ್ಕದ್ದಲ್ಲ.
19 .............. ತಿಂಗಳ ....................... ದಿನಾಂ ..................... ಸ್ಥಳ
(ಸಹಿ) ಕ.ಖ.
ಈ ಒಪ್ಪಂದ ಪತ್ರಕ್ಕೆ ಸಹಿ ಮಾಡಿರುವ ಕ, ಖ ಅವನು ಯಾವ ವ್ಯಕ್ತಿಯನ್ನು ಪ್ರತಿನಿಧಿಸುತ್ತಾರೋ ಅವನೇ ಎಂದು ಮತ್ತು ಅದಕ್ಕೆ ನಮ್ಮ ಸಮಕ್ಷಮದಲ್ಲಿ ನಮ್ಮ ಸಹಿ ಮಾಡಿದ್ದಾರೆಂದು ನಮ್ಮ ಸ್ವಂತ ತಿಳುವಳಿಕೆಯ ಮೇರೆಗೆ ನಾವು ಘೋಷಿಸುತ್ತೇವೆ.
(ಸಹಿ) ಗ. ಘ.
(ಸಹಿ) ಙ. ಚ.
ನಮಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ಜಾಗರೂಕತೆಯಿಂದ ವಿಚಾರಣೆಯನ್ನು ಮಾಡಿದ ತರುವಾಯ, ನಾವು ದೊರಕಿಸಲು ಸಾಧ್ಯವಾದಂಥ ನಿಖರವಾದ ಮಾಹಿತಿಯ ಮೇರೆಗೆ ಈ ಒಪ್ಪಂದ ಪತ್ರವನ್ನು ಬರೆದುಕೊಟ್ಟ ವ್ಯಕ್ತಿಯು ಮೇಲಿನ ಭೂಮಿಯ ಬಗ್ಗೆ ಕಾಲಕಾಲಕ್ಕೆ ಸಲ್ಲಬೇಕಾದ ಭೂಕಂದಾಯವನ್ನು ಸಕಾಲದಲ್ಲಿ ಸಂದಾಯ ಮಾಡಲು ಜವಬ್ದಾರನಾಗಿರುವನೆಂದು ರಾಜ್ಯ ಸರ್ಕಾರವು ಒಪ್ಪುವುದಕ್ಕೆ ಯೋಗ್ಯ ವ್ಯಕ್ತಿಯೆಂದು ನಾವು ಘೋಷಿಸುತ್ತೇವೆ.
(ಸಹಿ) ಛ, ಜ
(ಸಹಿ) ಝ, ಞ
ಗ್ರಾಮ ಲೆಕ್ಕಿಗ
ನಮೂನೆVII
(29ನೇ ನಿಯಮವನ್ನು ನೋಡಿ) (ಸಾಗುವಳಿ ಚೀಟಿಯನ್ನು ಕೊಡುವ ಬಗೆಗಿನ ಪ್ರಮಾಣ ಪತ್ರ)
ಅಧಿಭೋಗದಲ್ಲಿರದ ಸರ್ಕಾರಿ ಭೂಮಿಯನ್ನು ಸಾಗುವಳಿಗಾಗಿ ವಿಲೆ ಮಾಡುವುದಕ್ಕೆ ಮತ್ತು ಅಧಿಭೋಗದ ಹಕ್ಕುಗಳನ್ನು ಕೊಡುವುದಕ್ಕೆ ಸಂಬಂಧಪಟ್ಟ ನಿಯಮಗಳ ಮೇರೆಗೆ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಯನ್ನು ಮಾರಾಟ ಮಾಡಲಾಗಿದೆ. ಮತ್ತು ಕ, ಖ ನು ಅದನ್ನು ಬಹಿರಂಗ ಹರಾಜಿನಲ್ಲಿ ಅಥವಾ ನಿಗದಿತ ಬೆಲೆಗೆ ಕೊಂಡುಕೊಂಡಿದ್ದಾನೆ ಮತ್ತು ಅದನ್ನು ಕ್ರಮಬದ್ಧವಾಗಿ ಸ್ಥಿರೀಕರಿಸಲಾಗಿದೆ ಮತ್ತು ಕ, ಖ ಅದರ ಖರೀದಿದಾರನೆಂದು ಘೋಷಿಸಲಾಗಿದೆ. ಮತ್ತು ಸದರಿ ಕ, ಖ ನು ಖರೀದಿ ಹಣದ ಪೂರ್ತಾ ಮೊಬಲಗಾದ ............................................................ ರೂ.ಗಳನ್ನು ಸರಕಾರಿ ಖಜಾನೆಗೆ ...........................
......................... ನಂಬರಿನಲ್ಲಿ ಸಂದಾಯ ಮಾಡಿದ್ದಾನೆ .................................................................... ತಾಲ್ಲೂಕಿನ ............................................................ ತಹಸೀಲ್ದಾರನಾದ .............................................. ಗ.ಘ
ಎಂಬ ನಾನು ಕ, ಖ, ನಿಗೆ ಸದರಿ ಭೂಮಿಯನ್ನು ಅಧಿಭೋಗಿಸಲು ಅನುಮತಿ ಕೊಟ್ಟಿದ್ದೇನೆ ಮತ್ತು ಭೂಕಂದಾಯ ಅಧಿನಿಯಮದ ಉಪಬಂಧಗಳ ಮೇರೆಗೆ ಅಪೀಲಿನಲ್ಲಿ ಅಥವಾ ಪುನರೀಕ್ಷಣೆಯಲ್ಲಿ ಆಗಬಹುದಾದ ರದ್ದಿಯಾತಿ ಅಥವಾ ಮಾರ್ಪಾಡಿಗೆ ಒಳಪಟ್ಟು, ಇನ್ನೂ ಮುಂದೆ ನಮೂದಿಸಿದ ಉಪಬಂಧಕ್ಕೆ ಒಳಪಟ್ಟು ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ನಿಯಮಗಳ ಮೇರೆಗೆ ಗೊತ್ತು ಮಾಡಲಾದಂತೆ ಆ ಭೂಮಿಯ ಬಗೆಗಿನ ಭೂಕಂದಾಯವನ್ನು ನಿಯತವಾಗಿ ಸಂದಾಯ ಮಾಡುವುದಕ್ಕೆ ಸಹ ಒಳಪಟ್ಟು, ಸದರಿ ಭೂಮಿಯನ್ನು ಕ, ಖ, ನಿಗೆ, ಅವನ ವಾರಸುದಾರರಿಗೆ ಅವನ ವೈಯಕ್ತಿಕ ಪ್ರತಿನಿಧಿಗಳಿಗೆ ಮತ್ತು ಅವನಿಂದ ಹಕ್ಕನ್ನು ವಹಿಸಿಕೊಂಡವರಿಗೆ, ಈ ಮೂಲಕ ಮಂಜೂರು ಮಾಡಿದ್ದೇನೆ ಮತ್ತು ಸ್ಥಿರೀಕರಿಸಿದ್ದೇನೆ.
(1) ಪರಂತು, ಈ ಕಂದಾಯವನ್ನು ಭೂಕಂದಾಯದ ಅಧಿನಿಯಮದ ಉಪಬಂಧದ ಮೇರೆಗೆ ಈ ಸಂಬಂಧದಲ್ಲಿ ಕಾಲಕಾಲಕ್ಕೆ ನಿಯಮಿಸಿದ ನಿಯಮಗಳ ಮೇರೆಗೆ ಪ್ರತಿಯೊಂದು ಕಂದಾಯ ವರ್ಷಕ್ಕೆ ಸಂದಾಯ ಮಾಡತಕ್ಕದ್ದು; ಮತ್ತು ಅದಕ್ಕೆ ತಪ್ಪಿದರೆ, ಅದನ್ನು ಭೂಕಂದಾಯದ ಅಧಿನಿಯಮದಲ್ಲಿ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳಲ್ಲಿ ನಿಯಮಿಸಿದ ರೀತಿಯಲ್ಲಿ ಬಲಾತ್ಕಾರ ಕ್ರಮದಿಂದ ವಸೂಲು ಮಾಡತಕ್ಕದ್ದು.
(2) ಮತ್ತೂ ಪರಂತು, ಈ ಹಕ್ಕು ಪತ್ರವು ಸಾಮಾನ್ಯ, ಪೌರಸಭಾ ಅಥವಾ ಇತರ ಸ್ಥಳೀಯ ಉದ್ದೇಶಗಳಿಗಾಗಿ ಕಾನೂನಿನ ಮೂಲಕ ವಿಧಿಸಲಾದಂಥ ಅಥವಾ ವಿಧಿಸಬಹುದಾದಂಥ ಭೂಕಂದಾಯವಲ್ಲದ ಇತರ ದರಗಳ, ಕರಗಳ ಮತ್ತು ಉಪಕರದ ಸಂಬಂಧದಲ್ಲಿ ಮೇಲೆ ಹೇಳಿದ ಭೂಮಿಯ ಹೊಣೆಗಾರಿಕೆಯನ್ನು ಯಾವ ರೀತಿಯಲ್ಲೂ ಬಾಧಿಸುವುದಿಲ್ಲ.
(3) ಮತ್ತೂ ಪರಂತು, ಗ್ರಾಮದ ದುರಸ್ತಿ ಮಾಡಲಾದ ದೊಡ್ಡ ಮತ್ತು ಸಣ್ಣ ಕೆರೆಗಳ ಸಂಬಂಧದಲ್ಲಿ, ಸದರಿ ಕ, ಖ, ನ ಮೇಲೆ ಅಥವಾ ಸದರಿ ಭೂಮಿಯ ಇತರೆ ಕಾನೂನುಬದ್ಧ ಒಡೆಯನ ಮೇಲೆ ಅವನು ಸದರಿ ಸರ್ವೆ ನಂಬರಿನ ಅಧಿಭೋಗದಾರ ಅಥವಾ ಇತರ ಕಾನೂನುಬದ್ಧ ಒಡೆಯನಾಗಿರುವ ಕಾರಣದಿಂದಾಗಿ, ಅವುಗಳನ್ನು ಸುಸ್ಥಿತಿಯಲ್ಲಿಡುವ ಬಗ್ಗೆ ರೂಢಿತಗ ಹೊಣೆಯನ್ನು ಹೊರಿಸಲಾಗಿರುವುದರಿಂದ ಅವನು ತನ್ನ ಸ್ವಂತ ವೆಚ್ಚದಲ್ಲಿ ಇನ್ನು ಮುಂದೆ ಎಲ್ಲ ಕಾಲಗಳಲ್ಲೂ ಅವುಗಳನ್ನು ಸುಸ್ಥಿತಿಯಲ್ಲಿ ಇಡತಕ್ಕದ್ದು ಮತ್ತು ಆಭೂಮಿಯ ಸುತ್ತ ಮತ್ತು ಅದರಲ್ಲಿ ಮೇರೆ ಗುರುತುಗಳನ್ನು ನಿಲ್ಲಿಸತಕ್ಕದ್ದು, ದುರಸ್ತು ಮಾಡತಕ್ಕದ್ದು ಮತ್ತು ಅವುಗಳನ್ನು ಸುಸ್ಥಿತಿಯಲ್ಲಿ ಇಡತಕ್ಕದ್ದು. ಹಾಗೆ ಮಾಡಲು ತಪ್ಪಿದರೆ, ಸರಕಾರವು ಅವನಿಗೆ ಕ್ರಮಬದ್ಧವಾದ ನೋಟೀಸನ್ನು ಕೊಟ್ಟ ಅನಂತರ, ಈ ಬಗ್ಗೆ ಅವನ ಹೊಣೆಗಾರಿಕೆಯಿರುವಷ್ಟರ ಮಟ್ಟಿಗೆ ಸದರಿ ಕೆರೆಯನ್ನು ಸುಸ್ಥಿತಿಯಲ್ಲಿಡುವಂತೆ ಮತ್ತು ಸದರಿ
ಮೇರೆ ಗುರುತುಗಳನ್ನು ದುರಸ್ತಿ ಮಾಡುವಂತೆ ಮಾಡಲು ಮತ್ತು ಹಾಗೆ ಸುಸ್ಥಿತಿಯಲ್ಲಿ ಇಡುವುದಕ್ಕೆ ಹಾಗೂ ದುರಸ್ತಿ ಮಾಡಿಸುವುದಕ್ಕೆ ತಗುಲುವ ವೆಚ್ಚವನ್ನು ಭೂಕಂದಾಯದ ಬಾಕಿಯಂತೆ ಸದರಿ ಕ, ಖ, ನಿಂದ ಅಥವಾ ಇತರ ಕಾನೂನು ಬದ್ದ ಒಡೆಯನಿಂದ ವಸೂಲು ಮಾಡಲು ರಾಜ್ಯ ಸರ್ಕಾರಕ್ಕೆ ಕಾನೂನು ಬದ್ಧವಾದ ಅಧಿಕಾರವಿರತಕ್ಕದ್ದು.
(4) ಮತ್ತೂ ಪರಂತು, ಹಕ್ಕು ಪತ್ರದಲ್ಲಿರುವ ಯಾವುದು, ಸರ್ಕಾರಕ್ಕೆ ಅಥವಾ ಸದರಿ ಭೂಮಿಗೆ ಲಗತ್ತಾಗಿರುವ ಅಥವಾ ಅದರ ಹತ್ತಿರದಲ್ಲಿರುವ ಭೂಮಿಯ ಮಾಲೀಕರಿಗೆ ಅಥವಾ ಇಡೀ ಗ್ರಾಮಸ್ಥರಿಗೆ ಸದರಿ ಭೂಮಿಯ ಮೂಲಕ ಅಥವಾ ಅದರ ಅಂಚಿನಲ್ಲಿ ಹಾದುಹೋಗುವ ಎಲ್ಲ ರಸ್ತೆಗಳ ಮತ್ತು ದಾರಿಗಳ ಮತ್ತು ಹಳ್ಳಗಳ ಬಗ್ಗೆ ಇರುವ ಅಥವಾ ರೂಢಿಗತವಾದ ಹಕ್ಕುಗಳನ್ನು ಬಾಧಿಸತಕ್ಕದ್ದಲ್ಲ.
(5) ಮತ್ತೂ ಪರಂತು, ಸದರಿ ಕ, ಖ, ನಿಗೆ ಅವನ ವಾರಸುದಾರರಿಗೆ, ವೈಯಕ್ತಿಕ ಪ್ರತಿನಿಧಿಗಳಿಗೆ ಅಥವಾ ಅವನಿಂದ ಹಕ್ಕು ಪಡೆದವರಿಗೆ, ಸದರಿ ಭೂಮಿಯ ಮೇಲೆ ಅಥವಾ ಅದರಲ್ಲಿ ಅಥವಾ ಅದರೆ ಯಾವುದೇ ಭಾಗದಲ್ಲಿ ಇದೆಯೆಂದು ತಿಳಿದುಬಂದಿರುವ ಅಥವಾ ಇಲ್ಲಿಂದ ಮುಂದೆ ಯಾವುದೇ ಕಾಲದಲ್ಲಿ ದೊರೆಯಬಹುದಾದ ಅಮೂಲ್ಯ ರತ್ನಗಳು, ಬಂಗಾರ ಮತ್ತು ಇತರ ಲೋಹಗಳು ಅಥವಾ ಕಲ್ಲಿದ್ದಲು ಅಥವಾ ಕಲ್ಲುಗಳು ಅಥವಾ ಅಮೂಲ್ಯ ರತ್ನಗಳನ್ನು, ಬಂಗಾರವನ್ನು ಅಥವಾ ಇತರ ಲೋಹಗಳನ್ನು ಅಥವಾ ಕಲ್ಲಿದ್ದಲನ್ನು ಹೊಂದಿರುವಂಥ ಅಥವಾ ಹೊಂದಿದೆಯೆಂದು ಭಾವಿಸಲಾದ ಬಂಡೆಗಳಲ್ಲಿ ಅಥವಾ ಅವುಗಳ ಬಗ್ಗೆ ಯಾವುದೇ ಹಕ್ಕನ್ನು, ಹಕ್ಕು ಮೂಲವನ್ನು ಅಥವಾ ಹಿತಾಸಕ್ತಿಯನ್ನು ಈ ಹಕ್ಕು ಪತ್ರವು ಕೊಡುವುದೆಂದು ಅಥವಾ ಯಾವುದೇ ರೀತಿಯಲ್ಲಿ ನಿಹಿತಗೊಳಿಸುವುದೆಂದು ಯಾವ ರೀತಿಯಲ್ಲೂ ಭಾವಿಸತಕ್ಕದ್ದಲ್ಲ. ಈಗ ಜಾರಿಯಲ್ಲಿರುವ ಅಥವಾ ಕಾಲಕಾಲಕ್ಕೆ ಈ ಬಗ್ಗೆ ನಿಯಮಿಸಬಹುದಾದಂಥ ಷರತ್ತುಗಳಿಗೊಳಪಟ್ಟು ಅವುಗಳೆಲ್ಲವನ್ನು ರಾಜ್ಯ ಸರಕಾರಕ್ಕೆ ಈ ಮೂಲಕ ಮೀಸಲಾಗಿರಿಸಲಾಗಿದೆ. ಸದರಿ ಭೂಮಿಯ ಮೇಲೆ ಅಥವಾ ಅದರೊಳಗೆ ದೊರೆಯಬಹುದಾದ, ಆದರೆ ಲೋಹಗಳು ಅಥವಾ ಕಲ್ಲಿದ್ದಲು ಅಥವಾ ಅಮೂಲ್ಯ ರತ್ನಗಳು ಇವುಗಳನ್ನುಳಿದ ಇತರ ಯಾವುದೇ ಸುಣ್ಣದ ಕಲ್ಲು, ಗ್ರಾನೈಟ್ ಮತ್ತು ಸಾಮಾನ್ಯ ಲೋಹಗಳನ್ನು, ಸದರಿ ಕ, ಖ, ಅವನ ವಾರಸುದಾರರು, ವೈಯಕ್ತಿಕ ಪ್ರತಿನಿಧಿಗಳು ಅಥವಾ ಅವನಿಂದ ಹಕ್ಕು ವಹಿಸಿಕೊಂಡವರು ಯಾವಾಗಲೂ ಅವುಗಳನ್ನು ಉಚಿತವಾಗಿ ಉಪಯೋಗಿಸಲು ಅವಕಾಶವಿರತಕ್ಕದ್ದು. ಆದರೆ ಅವುಗಳನ್ನು ಮಾರುವುದಕ್ಕಾಗಿ ಸಾಗಿಸದೆ ಸದರಿ ಕ, ಖ ನು ಅವನ ವಾರಸುದಾರರು, ವೈಯಕ್ತಿಕ ಪ್ರತಿನಿಧಿಗಳು ಅವನಿಂದ ಹಕ್ಕು ವಹಿಸಿಕೊಂಡವನು ತಮ್ಮ ನಿಜವಾದ ಖಾಸಗಿ ಉಪಯೋಗಕ್ಕಾಗಿ ವಿನಿಯೋಗಿಸಿಕೊಳ್ಳಬಹುದು.
(6) ಮತ್ತು ಪರಂತು, ರಾಜ್ಯ ಸರ್ಕಾರಕ್ಕೆ ಈ ಮೂಲಕ ಮೀಸಲಾಗಿರುವ ಗಂಧದ ಮರಗಳ ಹಕ್ಕನ್ನು, ಅಂಥ ಮರಗಳ ಬಗ್ಗೆ ಲಾಭಾಂಶಗಳನ್ನು ಕೊಡುವ ವಿಷಯದಲ್ಲಿ ಇರುವ ಅಥವಾ ರಚಿಸಲ್ಪಡಬಹುದಾದ ನಿಯಮಗಳು ಅನುಮತಿಸುವ ಮಟ್ಟಿಗಿನ ಹೊರತು. ಸದರಿ ಕ, ಖ, ನಿಗೆ ಅವನ ವಾರಸುದಾರರಿಗೆ, ವೈಯಕ್ತಿಕ ಪ್ರತಿನಿಧಿಗಳಿಗೆ ಅಥವಾ ಅವನಿಂದ ಹಕ್ಕುವಹಿಸಿಕೊಂಡವರಿಗೆ ಈ ಹಕ್ಕು ಪತ್ರವು ಯಾವುದೇ ರೀತಿಯಿಂದ ಕೊಡುವುದು ಅಥವಾ ನಿಹಿತಗೊಳಿಸುವುದು ಎಂದು ಭಾವಿಸತಕ್ಕದ್ದಲ್ಲ.
(7) ಮತ್ತು ಪರಂತು, ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ದಿನಾಂಕ ............................. ರಿಂದ, ಹದಿನೈದು ವರ್ಷಗಳ (15 ವರ್ಷಗಳ) ಅವಧಿಯವರೆಗೆ ಪರಭಾರೆ ಮಾಡತಕ್ಕದ್ದಲ್ಲ:
ವಿವರಣೆ: ಈ ಪರಂತುಕದ ಉದ್ದೇಶಗಳಿಗಾಗಿ ಈ ಕೆಳಗಿನವುಗಳನ್ನು ಪರಭಾರೆಯೆಂದು ಪರಿಗಣಿಸತಕ್ಕದ್ದಲ್ಲ:
(ಕ) ಅಂಥ ಭೂಮಿಯನ್ನು ಅಭಿವೃದ್ಧಿಗೊಳಿಸುವುದಕ್ಕಾಗಿ ಅಥವಾ ಅಂಥ ಭೂಮಿಯ ಸಾಗುವಳಿಗಾಗಿ ದನ ಅಥವಾ ಬೇಸಾಯೋಪಕರಣಗಳನ್ನು ಕೊಳ್ಳುವುದಕ್ಕಾಗಿ ತೆಗೆದುಕೊಂಡ ಸಾಲಗಳಿಗೆ ಭದ್ರತೆಯಾಗಿ ರಾಜ್ಯ ಸರ್ಕಾರಕ್ಕೆ ಅಥವಾ ಸಹಕಾರ ಸಂಘಕ್ಕೆ ಅಥವಾ ಭಾರತ ಕಾಫಿ ಮಂಡಲಿಗೆ ಅಥವಾ ಅನುಸೂಚಿತ ಬ್ಯಾಂಕಿಗೆ ಅಥವಾ ಕೃಷಿ ಪುನರ್ವಿತ್ತ ನಿಗಮಕ್ಕೆ ಅಥವಾ ಕರ್ನಾಟಕ ರಾಜ್ಯ ಕೃಷಿ ಕೈಗಾರಿಕಾ ನಿಗಮಕ್ಕೆ ಮಾಡಿದ ಭೂಮಿಯ ಅಡಮಾನ; ಮತ್ತು
(ಖ) ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ರ ಉಪಬಂಧಗಳಿಗನುಸಾರವಾಗಿ ಭೂಮಿಯನ್ನು ಗೇಣಿಗೆ ಕೊಡುವುದು.
(8) ಮತ್ತೂ ಪರಂತು, ಮಂಜೂರಾತಿಯು ಸಾಮಾನ್ಯವಾಗಿ ಭೂಕಂದಾಯ ಅಧಿನಿಯಮದ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳ ಉಪಬಂಧಗಳಿಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿಗೆ ಸಹ ಒಳಪಟ್ಟಿರತಕ್ಕದ್ದು.
(9) ಭೂಸಾರ ಸಂರಕ್ಷಣಾ ಅಧಿಕಾರಿಯು ನಿರ್ದೇಶಿಸುವಂತೆ ಮಂಜೂರಾತಿ ಪಡೆದವನು ಭೂಸಾರ ಸಂರಕ್ಷಣಾ ಕಾರ್ಯಕ್ರಮಗಳನ್ನು ಕೈಕೊಳ್ಳುವುದಕ್ಕೆ ಬದ್ಧನಾಗಿರತಕ್ಕದ್ದು.
ನಮೂನೆVIII
(28ಕ ನಿಯಮವನ್ನು ನೋಡಿ)
ಬಿಟ್ಟುಕೊಡಲಾದ ಭೂಮಿಯ ಬದಲಾಗಿ ಬೇರೆ ಭೂಮಿಯ ಮಂಜೂರಾತಿಗೆ ಹಾಕುವ ಅರ್ಜಿ.
-
ಅರ್ಜಿದಾರನ ಹೆಸರು ಮತ್ತು ವಯಸ್ಸು
-
ವಿಳಾಸ ಮತ್ತು ವೃತ್ತಿ
-
ತಂದೆಯ ಹೆಸರು
-
ಬಿಟ್ಟುಕೊಡಬೇಕೆಂದು ಉದ್ದೇಶಿಸಿದ ಭೂಮಿಯ ವಿವರಗಳು:
(i) ಸರ್ವೆ ನಂಬರು ಮತ್ತು ಪೋಡಿನ ಸಂಖ್ಯೆ:
(ii) ವಿಸ್ತೀರ್ಣ: ಖುಷ್ಕಿ .............................
ತರಿ ..............................
ಬಾಗಾಯ್ತು ...................................
(iii) ಮೌಲ್ಯ
- ಕೇಳಲಾಗಿರುವ ಭೂಮಿಯ ವಿಸ್ತೀರ್ಣಕ್ಕೆ ವಿವರಗಳು, ಅಂದರೆ, ಸರ್ವೇ ನಂಬರು, ಗ್ರಾಮ, ತಾಲ್ಲೂಕು, ಭೂಮಿಯು ಇರುವ ಉಪವಿಭಾಗ (ರೆವೆನ್ಯೂ)
ಅನುಸೂಚಿ
ಭೂಮಿಯ ವಿವರ
| ಜಿಲ್ಲೆ | ತಾಲ್ಲೂಕು | ಗ್ರಾಮ | ಹೆಸರು | ಯಾವುದಾದರೂ ಇದ್ದರೆ | ಮೇರೆ ಗಳು | ಸರ್ವೆ ನಂಬರು | ವಿಸ್ತೀರ್ಣ | ಕಂದಾಯ |
| 1 | 2 | 3 | 4 | 5 | 6 | 7 | 8 | |
| ಒಟ್ಟು ಫೋಟ್ ಖರಾಬ್ ಖುಷ್ಕಿ ತರಿ ಬಾಗಾಯ್ತು |
ಯಾವ ಉದ್ದೇಶಕ್ಕಾಗಿ ಫೋಟ್ ಖರಾಬಿಗೆ ಅನುಮತಿಸಲಾಗಿದೆಯೋ ಅದನ್ನು ಇಲ್ಲಿ ನಿರ್ದಿಷ್ಟವಾಗಿ ನಮೂದಿಸಬೇಕು.
19 .............. ತಿಂಗಳ ....................... ದಿನಾಂಕ .....................
ತಹಸೀಲ್ದಾರ
ರೆವೆನ್ಯೂ ಸಚಿವಾಲಯ
ಅಧಿಸೂಚನೆ
ಬೆಂಗಳೂರು, ದಿನಾಂಕ 11ನೇ ಜೂನ್ 1970
ಜಿ.ಎಸ್.ಆರ್. 215: ಕರ್ನಾಟಕ ಭೂಕಂದಾಯ ಅಧಿನಿಯಮ, 1964 (1964ರ 12ನೇ ಕರ್ನಾಟಕ ಅಧಿನಿಯಮದ)ರ 197ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸಿದೆ. ಅದರ ಕರಡನ್ನು ಸದರಿ ಅಧಿನಿಯಮದ 197ನೇ ಪ್ರಕರಣದ(1)ನೇ ಉಪಪ್ರಕರಣದಲ್ಲಿ ಅಗತ್ಯಪಡಿಸಿದಂತೆ 1970ನೇ ಏಪ್ರಿಲ್ 3ನೇ ದಿನಾಂಕದ ಕರ್ನಾಟಕ ಗೆಜೆಟ್ಟಿನ ವಿಶೇಷ ಸಂಚಿಕೆಯಲ್ಲಿ 1970ರ ಏಪ್ರಿಲ್ 3ನೇ ದಿನಾಂಕದ ಜಿ.ಎಸ್.ಆರ್. 109ನೇ ನಂಬರಿನ ಅಧಿಸೂಚನೆ ಎಂದು ಪ್ರಕಟಿಸಲಾಗಿದೆ.
ಕರ್ನಾಟಕ ಭೂಕಂದಾಯ (ಭೂಮಿಗಳ ಅನಧಿಕೃತ ಅಧಿಭೋಗವನ್ನು ಕ್ರಮಗೊಳಿಸುವ) ನಿಯಮಗಳು, 1970.
ನಿಯಮಗಳ ಅನುಕ್ರಮಣಿಕೆ
-
ಹೆಸರು ಮತ್ತು ಪ್ರಾರಂಭ
-
ಪರಿಭಾಷೆಗಳು
-
ಸಲ್ಲಿಸಬೇಕಾದ ಅರ್ಜಿ
-
ಅನುಸರಿಸಬೇಕಾದ ಕ್ರಮ
-
ಕೆಲವು ಭೂಮಿಗಳನ್ನು ಮಂಜೂರು ಮಾಡತಕ್ಕದ್ದಲ್ಲ
-
ಬೇಸಾಯೋದ್ದೇಶಗಳಿಗಾಗಿ ಮತ್ತು ಸೌದೆಗಾಗಿ ಮರದ ತೋಪುಗಳನ್ನು ಬೆಳೆಸುವುದಕ್ಕಾಗಿ ಉಪಯೋಗಿಸಲಾದ ಭೂಮಿಗಳ ಮಂಜೂರಾತಿಯ ಬಗ್ಗೆ ನಿರ್ಬಂಧಗಳು.
-
ಪ್ಲಾಂಟೆಷನ್ ಬೆಳೆಗಳನ್ನು ಬೆಳೆಸುವುದಕ್ಕಾಗಿ ಉಪಯೋಗಿಸಲು ಭೂಮಿಗಳನ್ನು ಮಂಜೂರು ಮಾಡುವ ಬಗ್ಗೆ ನಿರ್ಬಂಧಗಳು.
-
ಗೋಡಂಬಿ ಬೆಳೆಗಾಗಿ ಉಪಯೋಗಿಸಿದ ಭೂಮಿ ಮಂಜೂರಾತಿಯ ಬಗ್ಗೆ ನಿರ್ಬಂಧಗಳು.
-
ಬೇಸಾಯೇತರ ಉದ್ದೇಶಕ್ಕಾಗಿ ಉಪಯೋಗಿಸಲಾದ ಭೂಮಿಗಳ ಮಂಜೂರಾತಿಯ ಬಗ್ಗೆ ನಿರ್ಬಂಧಗಳು
-
ವಿಧಿಸಬೇಕಾದ ಬೆಲೆ
-
ಈಗಾಗಲೇ ಕಂದಾಯ ನಿರ್ಧರಿಸಿರದ ಭೂಮಿಯ ಬಗ್ಗೆ ಅದನ್ನು ಮಂಜೂರು ಮಾಡುವುದಕ್ಕೆ ಮೊದಲು ಕಂದಾಯ ನಿರ್ಧರಿಸತಕ್ಕದ್ದು.
-
ಮಂಜೂರಾತಿಯ ರದ್ದಿಯಾತಿ.
-
ನಿಯಮಗಳ ಸಡಿಲಿಕೆ.
ಕರ್ನಾಟಕ ಭೂಕಂದಾಯ (ಭೂಮಿಗಳ ಅನಧಿಕೃತ ಅಧಿಭೋಗವ ಕ್ರಮಗೊಳಿಸುವ) ನಿಯಮಗಳು, 1970
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಭೂಕಂದಾಯ (ಭೂಮಿಗಳ ಅನಧಿಕೃತ ಅಧಿಭೋಗವನ್ನು ಕ್ರಮಗೊಳಿಸುವ ವಿನಿಯಮ ನಿಯಮಗಳು, 1970 ಎಂದು ಕರೆಯತಕ್ಕದ್ದು.
(2) ಅವು ಕೂಡಲೇ ಜಾರಿಗೆ ಬರತಕ್ಕದ್ದು.
- ಪರಿಭಾಷೆಗಳು.- ಈ ನಿಯಮಗಳಲ್ಲಿ, ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯವಿರದಿದ್ದರೆ,-
(ಕ) ‘ಅಧಿನಿಯಮ’ ಎಂದರೆ, ಕರ್ನಾಟಕ ಭೂಕಂದಾಯ ಅಧಿನಿಯಮ, 1964;
(ಖ) ‘ನಮೂನೆ’ ಎಂದರೆ ಈ ನಿಯಮಗಳಿಗೆ ಅನುಬಂಧಿಸಿರುವ ನಮೂನೆ;
(ಗ) ‘ಭೂರಹಿತ ಬಡ ವ್ಯಕ್ತಿಗಳು’ ಎಂದರೆ ರಾಜ್ಯದಲ್ಲಿ ಎಲ್ಲಿಯೇ ಆಗಲಿ ಅಥವಾ ಬೇರೆ ಕಡೆಗೆ ಎಲ್ಲಿಯೇ ಆಗಲಿ, ಯಾವುದೇ ಭೂಮಿಯ ಒಡೆತನವನ್ನು ಹೊಂದಿರದ ಮತ್ತು ಎಲ್ಲಾ ಮೂಲಗಳಿಂದ ವರ್ಷಕ್ಕೆ ಎರಡು ಸಾವಿರ ರೂಪಾಯಿಗಳಿಗೆ ಮೀರದ ವರಮಾನವುಳ್ಳ ವ್ಯಕ್ತಿ;
(ಘ) ‘ಅನಧಿಕೃತ ಅಧಿಭೋಗದಲ್ಲಿರುವ ವ್ಯಕ್ತಿ’ ಎಂದರೆ 94ನೇ ಪ್ರಕರಣದಲ್ಲಿ ಉಲ್ಲೇಖಿತವಾದ ಭೂಮಿಯ ಅನಧಿಕೃತ ಅಧಿಭೋಗದಲ್ಲಿರುವ ವ್ಯಕ್ತಿ; ಮತ್ತು ಅವನಿಂದ ಪಡೆದ ಹಕ್ಕಿನ ಮೇಲೆ ಕ್ಲೇಮು ಮಾಡುವ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಒಳಗೊಳ್ಳತಕ್ಕದ್ದು;
(ಙ) ‘ಪ್ಲಾಂಟೇಷನ್ ಬೆಳೆಗಳು’ ಎಂದರೆ ಏಲಕ್ಕಿ, ಕಾಫಿ, ಮೆಣಸು, ರಬ್ಬರ್ ಮತ್ತು ಟಿ;
(ಚ) ‘ಸಾಕಷ್ಟು ಭೂಮಿಯ ಹಿಡುವಳಿದಾರ’ ಅಂದರೆ ನಾಲ್ಕು ಹೆಕ್ಟೇರುಗಳಿಗೆ ಕಡಿಮೆಯಿಲ್ಲದ ಬಾಗಾಯ್ತು ಅಥವಾ ಖಾತ್ರಿ ನೀರಾವರಿ ಸೌಕರ್ಯವನ್ನುಳ್ಳ ತರಿಭೂಮಿಯನ್ನು ಅಥವಾ ಎಂಟು ಹೆಕ್ಟೇರುಗಳಿಗೆ
ಕಡಿಮೆಯಿಲ್ಲದೆ ಖುಷ್ಕಿ, ಭೂಮಿ ಅಥವಾ ಮಳೆ ನೀರಿನ ಆಸರೆಯುಳ್ಳ ತರಿ ಭೂಮಿಯನ್ನು ಹೊಂದಿರುವ ವ್ಯಕ್ತಿ.
ವಿವರಣೆ.- ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವರ್ಗಗಳ ಭೂಮಿಯ ಒಡೆಯನಾಗಿದ್ದರೆ, ಈ ಖಂಡದ ಉದ್ದೇಶಕ್ಕಾಗಿ ಅವನು ಹೊಂದಿರುವ ಭೂಮಿಯ ವಿಸ್ತೀರ್ಣವನ್ನು ಬೇರೆ ಬೇರೆ ವರ್ಗಗಳ ಭೂಮಿಗಳ ವಿಸ್ತೀರ್ಣವನ್ನು ಅದಕ್ಕೆ ಸಮನಾದ ಭೂಮಿಯ ವಿಸ್ತೀರ್ಣಕ್ಕೆ ಪರಿವರ್ತಿಸುವುದರ ಮೂಲಕ ಈ ಕೆಳಕಂಡಂತೆ ನಿರ್ಧರಿಸತಕ್ಕದ್ದು:-
ಬಾಗಾಯ್ತು ಭೂಮಿಯ ಒಂದು ಹೆಕ್ಟೇರು ಅಥವಾ ಖಾತ್ರಿ ನೀರಾವರಿ ಸೌಕರ್ಯವುಳ್ಳ ಒಂದು ಹೆಕ್ಟೇರು ತರಿ ಭೂಮಿಯು ಇವನ್ನು ಮಳೆ ನೀರಿನ ಆಸರೆಯ ತರಿ ಭೂಮಿಯ ಅಥವಾ ಖುಷ್ಕಿ ಭೂಮಿಯ ಎರಡು ಹೆಕ್ಟೇರುಗಳಿಗೆ ಸಮವೆಂದು ಭಾವಿಸತಕ್ಕದ್ದು.
(2) ಈ ನಿಯಮಗಳಲ್ಲಿ ಉಪಯೋಗಿಸಲಾದ, ಆದರೆ ಪರಿಭಾಷಿಸಿರದ ಪದಗಳಿಗೆ ಮತ್ತು ಪದಾವಳಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ ಮತ್ತು ಅದರ ಮೇರೆಗಿನ ನಿಯಮಗಳಲ್ಲಿ ಅವುಗಳಿಗೆ ಕೊಡಲಾದ ಅರ್ಥವೇ ಇರತಕ್ಕದ್ದು.
-
ಸಲ್ಲಿಸಬೇಕಾದ ಅರ್ಜಿ.- ಅನಧಿಕೃತ ಅಧಿಭೋಗದಲ್ಲಿರುವ ವ್ಯಕ್ತಿಯು ತಾನು ಅನಧಿಕೃತವಾಗಿ ಅಧಿಭೋಗಿಸುತ್ತಿರುವ ಭೂಮಿಯನ್ನು ತನಗೆ ಮಂಜೂರು ಮಾಡಬೇಕೆಂದು ಅಪೇಕ್ಷಿಸಿದರೆ ಅವನು 1ನೇ ನಮೂನೆಯಲ್ಲಿ ಡೆಪ್ಯುಟಿ ಕಮೀಷನರಿಗೆ ಅರ್ಜಿಯನ್ನು ಸಲ್ಲಿಸಬಹುದು.
-
ಅನುಸರಿಸಬೇಕಾದ ಕ್ರಮ.- (1) 3ನೇ ನಿಯಮದ ಮೇರೆಗಿನ ಅರ್ಜಿಯು ಬಂದ ಮೇಲೆ, ಅರ್ಜಿದಾರನು ಒದಗಿಸಿರುವ ವಿವರಗಳನ್ನು ಡೆಪ್ಯುಟಿ ಕಮೀಷನರು ತಾನು ಅವಶ್ಯಕವೆಂದು ಭಾವಿಸುವಂಥ ವಿಚಾರಣೆಯ ಮೂಲಕ ಪರಿಶೀಲಿಸಿದ ತರುವಾಯ ಮತ್ತು ಮಂಜೂರು ಮಾಡಬಹುದಾದಂಥ ಭೂಮಿಯ ವಿಸ್ತೀರ್ಣವನ್ನು ಮತ್ತು ವಿಧಿಸಬಹುದಾದ ಬೆಲೆಯನ್ನು ನಿರ್ಧರಿಸಿದ ತರುವಾಯ, ಉದ್ದೇಶಿತ ಮಂಜೂರಿಯ ಬಗೆಗಿನ ಆಕ್ಷೇಪಣೆಗಳನ್ನು ನೋಟೀಸಿನಲ್ಲಿ ನಿರ್ದಿಷ್ಟಪಡಿಸುವ ದಿನಾಂಕದೊಳಗೆ ತಿಳಿಸಬೇಕೆಂದು ಕೋರಿ 2ನೇ ನಮೂನೆಯಲ್ಲಿ ನೋಟೀಸನ್ನು ಭೂಮಿ ಇರುವ ಗ್ರಾಮದ ಚಾವಡಿಯಲ್ಲಿ ಮತ್ತು ಸಂಬಂಧಪಟ್ಟ ಪಂಚಾಯಿತಿ ಕಛೇರಿಯಲ್ಲಿ ಪ್ರಕಟಿಸತಕ್ಕದ್ದು ಮತ್ತು ಅಂಥ ದಿನಾಂಕವು ನೋಟೀಸಿನ ದಿನಾಂಕದಿಂದ ಹದಿನೈದು ದಿನಗಳಿಗೆ ಕಡಿಮೆಯಿರತಕ್ಕದ್ದಲ್ಲ.
(2) ಅಂಥ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿರುವ ದಿನಾಂಕವು ಮುಗಿದ ತರುವಾಯ, ಮತ್ತು ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ತರುವಾಯ ಮತ್ತು ಅವಶ್ಯಕವೆಂದು ಪರ್ಯಾಲೋಚಿಸಲಾದ ಯಾವುದೇ ಹೆಚ್ಚಿನ ವಿಚಾರಣೆಯ ತರುವಾಯ, ಡೆಪ್ಯುಟಿ ಕಮಿಷನರು ಎಷ್ಟು ವಿಸ್ತೀರ್ಣದ ಭೂಮಿಯನ್ನು ಮಂಜೂರು ಮಾಡಬಹುದು, ಯಾವ ಬೆಲೆಗೆ ಮಾಡಬಹುದು ಮತ್ತು ಯಾವ ಷರತ್ತುಗಳಿಗೆ ಒಳಪಟ್ಟು ಮಾಡಬಹುದು ಎಂಬುದನ್ನು ನಿರ್ಧರಿಸತಕ್ಕದ್ದು.
(3) ಅನಂತರ ಡೆಪ್ಯುಟಿ ಕಮೀಷನರು, ತಾನು ನಿರ್ದಿಷ್ಟಪಡಿಸಬೇಕಾದ ಹಾಗೂ ನೋಟೀಸನ್ನು ಕೊಟ್ಟ ದಿನಾಂಕದಿಂದ ಹದಿನೈದು ದಿನಗಳಿಗೆ ಕಡಿಮೆಯಿಲ್ಲದ ದಿನಾಂಕದೊಳಗೆ, ನಿರ್ದಿಷ್ಟಪಡಿಸಿದ ಷರತ್ತುಗಳ ಮೇಲೆ ಮಂಜೂರಾತಿಯನ್ನು ಅಂಗೀಕರಿಸಲು ಅವನು ಇಚ್ಛಿಸುತ್ತಾನೆಯೇ ಎಂಬುದನ್ನು ಸೂಚಿಸಬೇಕೆಂದು ಮತ್ತು ಹಾಗೆ ಇಚ್ಛಿಸಿದರೆ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಹಾಗೂ ನೋಟೀಸನ್ನು ಕೊಟ್ಟ ದಿನಾಂಕದಿಂದ ಮೂವತ್ತು ದಿನಗಳಿಗೆ
ಹೆಚ್ಚಾಗಿರದ ದಿನಾಂಕದ ವೇಳೆಗೆ, ಗೊತ್ತು ಮಾಡಿದ ಬೆಲೆಯನ್ನು ಜಮೆ ಮಾಡಬೇಕೆಂದು ಕೋರಿ IIIನೇ ನಮೂನೆಯಲ್ಲಿ ಅರ್ಜಿದಾರನಿಗೆ ಒಂದು ನೋಟೀಸನ್ನು ಕೊಡತಕ್ಕದ್ದು.
ಪರಂತು ಡೆಪ್ಯುಟಿ ಕಮಿಷನರು, ಸದರಿ ದಿನಾಂಕದೊಳಗೆ ಅರ್ಜಿದಾರನು ತನಗೆ ಸಲ್ಲಿಸಿದ ಅರ್ಜಿಯ ಮೇಲೆ ಮತ್ತು ಲಿಖಿತದಲ್ಲಿ ಅಭಿಲೇಖಿಸಬೇಕಾದ ಕಾರಣಗಳಿಗಾಗಿ ಬೆಲೆಯನ್ನು ಜಮೆ ಮಾಡುವ ಕಾಲವನ್ನು ಮುಂದುವರೆಸಬಹುದು. ಅಂಥ ಯಾವುದೇ ಮುಂದುವರಿಸಿದ ದಿನಾಂಕವು ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದಿಂದ ತೊಂಬತ್ತು ದಿನಗಳಿಗಿಂತ ಹೆಚ್ಚಾಗಿರತಕ್ಕದ್ದಲ್ಲ.
(4) ಅರ್ಜಿದಾರನು ತನ್ನ ಸಮ್ಮತಿಯನ್ನು ವ್ಯಕ್ತಪಡಿಸಿದರೆ ಮತ್ತು ನಿರ್ದಿಷ್ಟಪಡಿಸಿದ ದಿನಾಂಕ ಅಥವಾ ಮುಂದುವರಿಸಿದ ಕಾಲದೊಳಗೆ ಆ ಬೆಲೆಯನ್ನು ಜಮೆ ಮಾಡಿದರೆ, ಡೆಪ್ಯುಟಿ ಕಮೀಷನರು ಮಂಜೂರು ಮಾಡತಕ್ಕದ್ದು ಮತ್ತು ಆ ಬಗ್ಗೆ ಆದೇಶವನ್ನು ಹೊರಡಿಸತಕ್ಕದ್ದು.
(5) ಅರ್ಜಿದಾರನು ತನ್ನ ಸಮ್ಮತಿಯನ್ನು ವ್ಯಕ್ತಪಡಿಸಲು ಅಥವಾ ನಿರ್ದಿಷ್ಟಪಡಿಸಿರುವ ದಿನಾಂಕದೊಳಗೆ ಅಥವಾ ಮುಂದುವರೆಸಿದ ಕಾಲದೊಳಗೆ ಆ ಬೆಲೆಯನ್ನು ಜಮೆ ಮಾಡಲು ತಪ್ಪಿದರೆ ಅವನ ಅರ್ಜಿಯನ್ನು ತಿರಸ್ಕರಿಸತಕ್ಕದ್ದು.
- ಕೆಲವು ಭೂಮಿಗಳನ್ನು ಮಂಜೂರು ಮಾಡತಕ್ಕದ್ದಲ್ಲ.- ಗೋಮಾಳ, ಗುಂಡು ತೋಪು, ಕೆರೆಯ ಅಂಗಳ, ಪೋಟ್ ಖರಾಬ್, ಖರಾಬ್ ಹಳ್ಳ, ಈಚಲುವನ-ಇವುಗಳಿಗಾಗಿ ಮೀಸಲಿರಿಸಿದ ಭೂಮಿಗಳನ್ನು ಅಥವಾ ನಿಕಟ ಭವಿಷ್ಯದಲ್ಲಿ ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಅಗತ್ಯವಾಗಿರುವ ಅಥವಾ ಅಗತ್ಯವಾಗುವ ಸಂಭವವಿರುವ ಭೂಮಿಗಳನ್ನು ಮಂಜೂರು ಮಾಡತಕ್ಕದ್ದಲ್ಲ:
ಪರಂತು, ಗೋಮಾಳ ಭೂಮಿಗಳ ಸಂಬಂಧದಲ್ಲಿ, ಯಾವುದೇ ಗ್ರಾಮದ ಬಗ್ಗೆ ದೊರೆಯಬಹುದಾದ ಮೇವಿನ ಭೂಮಿಯು ಪ್ರತಿ ನೂರು ದನಗಳಿಗೆ ಹನ್ನೆರಡು ಹೆಕ್ಟೇರುಗಳಂತೆ ಲೆಕ್ಕಾಚಾರ ಮಾಡಿದ ವಿಸ್ತೀರ್ಣವನ್ನು ಮೀರಿದಾಗ ಅದನ್ನು ಮಂಜೂರು ಮಾಡಬಹುದು.
(2) (i) ಮೈಸೂರು, ಬೆಂಗಳೂರು ನಗರಗಳ ಪೌರಸಭಾ ಪರಿಮಿತಿಗಳೊಳಗೆ ಮತ್ತು ಬೆಂಗಳೂರು ನಗರದ ಪೌರಸಭಾ ಪರಿಮಿತಿಯಿಂದ ಹದಿನಾರು ಕಿಲೋ ಮೀಟರುಗಳೊಳಗೆ ಇರುವ ಯಾವುದೇ ಗ್ರಾಮದಲ್ಲಿ; ಅಥವಾ
(ii) ಮೈಸೂರು, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರಗಳ, ಕೋಲಾರದ ಚಿನ್ನದ ಗಣಿಯ ಪ್ರದೇಶದ ಮತ್ತು ಬಾಗಲಕೋಟೆ ಪಟ್ಟಣದ, ಪೌರಸಭಾ ಪರಿಮಿತಿಯೊಳಗೆ ಮತ್ತು ಸದರಿ ಸ್ಥಳಗಳ ಪೌರಸಭಾ ಪರಿಮಿತಿಗಳಿಂದ ಏಳು ಕಿಲೋಮೀಟರುಗಳೊಳಗೆ ಇರುವ ಯಾವುದೇ ಗ್ರಾಮದಲ್ಲಿ; ಅಥವಾ
(iii) ಜಿಲ್ಲಾ ಕೇಂದ್ರ ಸ್ಥಳಗಳ ಮತ್ತು ಗದಗ, ಬೆಟಗೇರಿ ಮತ್ತು ದಾಂಡೇಲಿ ಪಟ್ಟಣಗಳ ಪೌರಸಭಾ ಪರಿಮಿತಿಯೊಳಗೆ ಮತ್ತು ಸದರಿ ಸ್ಥಳಗಳ ಪೌರಸಭಾ ಅಥವಾ ಪಟ್ಟಣ ಪರಿಮಿತಿಗಳಿಂದ ಐದು ಕಿಲೋಮೀಟರುಗಳೊಳಗೆ ಇರುವ ಯಾವುದೇ ಗ್ರಾಮದಲ್ಲಿ; ಅಥವಾ
(iv) ತಾಲ್ಲೂಕು ಕೇಂದ್ರ ಸ್ಥಳಗಳ ಮತ್ತು ರೈಲ್ವೆ ಸಂಪರ್ಕ ಹೊಂದಿರುವ ಪಟ್ಟಣಗಳ ಪೌರಸಭಾ ಪರಿಮಿತಿಗಳೊಳಗೆ ಮತ್ತು ಸದರಿ ಸ್ಥಳಗಳ ಪೌರಸಭಾ ಅಥವಾ ಪಟ್ಟಣ ಪರಿಮಿತಿಗಳಿಂದ ಮೂರು ಕಿಲೋಮೀಟರುಗಳಲ್ಲಿರುವ ಯಾವುದೇ ಗ್ರಾಮದಲ್ಲಿ; ಅಥವಾ
(v) ಇತರ ಪೌರಸಭೆಗಳ, ಇತರ ತಾಲ್ಲೂಕು ಕೇಂದ್ರ ಸ್ಥಳಗಳ ಮತ್ತು ಪಟ್ಟಣ ಪಂಚಾಯಿತಿಗಳ ಪರಿಮಿತಿಗಳೊಳಗೆ ಮತ್ತು ಸದರಿ ಸ್ಥಳಗಳಿಂದ ಒಂದೂವರೆ ಕಿಲೋ ಮೀಟರುಗಳೊಳಗೆ ಇರುವ ಯಾವುದೇ ಗ್ರಾಮದಲ್ಲಿ;
- ಇರುವ ಯಾವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ.
ಪರಂತು, ಕಟ್ಟಡ ನಿವೇಶನಗಳ ಸಂದರ್ಭದಲ್ಲಿ, ಜಿಲ್ಲಾ ಕೇಂದ್ರ ಸ್ಥಳಗಳ ಪೌರ ಸಭಾ ಪರಿಮಿತಿಗಳನ್ನು ಹೊರತುಪಡಿಸಿ, (ii), (iv) ಮತ್ತು (v)ನೇ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ಪರಿಮಿತಿಗಳೊಳಗೆ ಮತ್ತು ಅಂತರಳೊಳಗೆ ನಿವೇಶನಗಳಿದ್ದರೆ, ಅವುಗಳನ್ನು ಮಂಜೂರು ಮಾಡಬಹುದು.
ವಿವರಣೆ.- ಈ ಉಪನಿಯಮದ ಉದ್ದೇಶಕ್ಕಾಗಿ, ಗ್ರಾಮದ ಕೇಂದ್ರ ಸ್ಥಳ ಗ್ರಾಮ ಠಾಣೆ ಅಥವಾ ಚಾವಡಿಯ ಈ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿದ ಅಂತರದೊಳಗೆ ಇದ್ದರೆ, ಅಂಥ ಇಡೀ ಗ್ರಾಮವು ಈ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿರುವ ದೂರದೊಳಗಿದೆಯೆಂದು ಭಾವಿಸತಕ್ಕದ್ದು.
ಪರಂತು, ಕಟ್ಟಡ ನಿವೇಶನಗಳ ಸಂಬಂಧದಲ್ಲಿ, ಜಿಲ್ಲಾ ಕೇಂದ್ರ ಸ್ಥಳಗಳ ಪೌರ ಸಭಾ ಪರಿಮಿತಿಗಳನ್ನು ಹೊರತುಪಡಿಸಿ, (ii), (iv) ಮತ್ತು (v)ನೇ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ಪರಿಮಿತಿಗಳೊಳಗೆ ಮತ್ತು ಅಂತರಗಳೊಳಗೆ ನಿವೇಶನಗಳಿದ್ದರೆ, ಅವುಗಳನ್ನು ಮಂಜೂರು ಮಾಡಬಹುದು.
- ಬೇಸಾಯೋದ್ದೇಶಗಳಿಗಾಗಿ ಮತ್ತು ಸೌದೆಗಾಗಿ ಮರದ ತೋಪುಗಳನ್ನು ಬೆಳೆಸುವುದಕ್ಕೆ ಉಪಯೋಗಿಸಲಾದ ಭೂಮಿಗಳ ಮಂಜೂರಾತಿಯ ಬಗ್ಗೆ ನಿರ್ಬಂಧಗಳು.-
(1) ಅನಧಿಕೃತ ಅಧಿಭೋಗದಲ್ಲಿರುವ ಭೂಮಿಯನ್ನು ಪ್ಲಾಂಟೇಷನ್ ಬೆಳೆಗಳನ್ನು ಅಥವಾ ಗೋಡಂಬಿ ಮರಗಳನ್ನು ಬೆಳೆಸುವುದರ ಹೊರತು ಬೇಸಾಯೋದ್ದೇಶಗಳಿಗಾಗಿ ಮತ್ತು ಸೌದೆ ಮರದ ತೋಪುಗಳಿಗಾಗಿ ಉಪಯೋಗಿಸಿದಾಗ, ಕೆಳಕಂಡ ಸಂದರ್ಭದಲ್ಲಿ ಅವುಗಳನ್ನು ಮಂಜೂರು ಮಾಡತಕ್ಕದ್ದಲ್ಲ.-
(i) ಅರ್ಜಿದಾರನು ಆ ಭೂಮಿಯು ಇರುವ ತಾಲ್ಲೂಕಿನ ಪರಿಮಿತಿಯೊಳಗೆ 1968ರ ಜುಲೈ 1ನೇ ದಿನಾಂಕಕ್ಕಿಂತ ಮೊದಲು ಖಾಯಂನಿವಾಸಿಯಾಗಿಲ್ಲದಿದ್ದರೆ ಮತ್ತು ಭೂಮಿಯನ್ನು ಖುದ್ದಾಗಿ ಸಾಗುವಳಿ ಮಾಡುವ ನೈಜ ಬೇಸಾಯಗಾರನಾಗಿರದಿದ್ದರೆ; ಮತ್ತು
(ii) ಅರ್ಜಿದಾರನು ಸಾಕಷ್ಟು ಭೂಮಿಯಿರುವ ಹಿಡುವಳಿದಾರನಾಗಿದ್ದರೆ-
(2) ಅರ್ಜಿದಾರನು ಭೂರಹಿತ ವ್ಯಕ್ತಿಯಾಗಿರುವಲ್ಲಿ,-
(i) ಅನಧಿಕೃತ ಅಧಿಭೋಗದಲ್ಲಿರುವ ಭೂಮಿಯ ವಿಸ್ತೀರ್ಣವು ಒಂದು ಹೆಕ್ಟೇರು ತರಿ ಅಥವಾ ಬಾಗಾಯ್ತು ಭೂಮಿಗಿಂತ ಅಥವಾ ಎರಡು ಹೆಕ್ಟೇರು ಖುಷ್ಕಿ ಭೂಮಿ ಅಥವಾ ಮಳೆಯ ಆಸರೆಯ ತರಿ ಭೂಮಿಗಿಂತ ಹೆಚ್ಚಾಗಿರದಿದ್ದರೆ ಅವನಿಗೆ ಅವನ ಅನಧಿಕೃತ ಅಧಿಭೋಗದಲ್ಲಿರುವ ಇಡೀ ಭೂಮಿಯನ್ನು ಮಂಜೂರು ಮಾಡಬಹುದು; ಮತ್ತು
(ii) ಅವನ ಅನಧಿಕೃತ ಅಧಿಭೋಗದಲ್ಲಿರುವ ಭೂಮಿಯ ವಿಸ್ತೀರ್ಣವು (1)ನೇ ಖಂಡದಲ್ಲಿ ನಿರ್ದಿಷ್ಟಪಡಿಸಿದ ವಿಸ್ತೀರ್ಣಕ್ಕಿಂತ ಹೆಚ್ಚಾಗಿದ್ದರೆ, ಅವನಿಗೆ ಅಂಥ ವಿಸ್ತೀರ್ಣಕ್ಕಿಂತ ಹೆಚ್ಚಾದ ಯಾವುದೇ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ.
(2ಕ) ಅರ್ಜಿದಾರನು ಭೂ ಒಡೆಯನಾಗಿದ್ದರೆ, ಅವನಿಗೆ ಮಂಜೂರು ಮಾಡಬಹುದಾದ ಭೂಮಿಯ ವಿಸ್ತೀರ್ಣವು ಅವನು ಈಗಾಗಲೇ ಹೊಂದಿರುವ ಭೂಮಿಯ ವಿಸ್ತೀರ್ಣವೂ ಸೇರಿ ಸಾಕಷ್ಟು ಭೂಮಿಯಿರುವ ಹಿಡುವಳಿದಾರನಿಗೆ ನಿಯಮಿಸಿರುವ ಕನಿಷ್ಠ ಹಿಡುವಳಿಯ ಮಿತಿಯನ್ನು ಮೀರತಕ್ಕದ್ದಲ್ಲ.
(3) (1)ನೇ ಉಪನಿಯಮದಲ್ಲಿ ಏನೇ ಇದ್ದರೂ, ಅರ್ಜಿದಾರನು ಈಗಾಗಲೇ ಹೊಂದಿರುವ ಇತರ ಭೂಮಿಗೆ ಲಗತ್ತಾಗಿರುವ ಅಥವಾ ಹತ್ತಿರದಲ್ಲಿರುವ ಭೂಮಿಯನ್ನು ತರಿ ಅಥವಾ ಬಾಗಾಯ್ತು ಭೂಮಿಯ ಸಂಬಂಧದಲ್ಲಿ ಅರ್ಧ ಹೆಕ್ಟೇರಿನಷ್ಟು ಮತ್ತು ಖುಷ್ಕಿ ಭೂಮಿಯ ಸಂಬಂಧದಲ್ಲಿ ಒಂದು ಹೆಕ್ಟೇರಿನಷ್ಟು ಸಾಧ್ಯವಾದಷ್ಟು ಮಟ್ಟಿಗೆ, ಮತ್ತು ಅದನ್ನು ಮೀರದೆ, ಈಗಾಗಲೇ ಅವನು ಹೊಂದಿರುವ ಇತರ ಭೂಮಿಯ ಹೆಚ್ಚಿನ ಅನುಭೋಗಕ್ಕಾಗಿ ಅಥವಾ ಹೆಚ್ಚಿನ ಸಾಗುವಳಿಗಾಗಿ ಅಂಥ ಭೂಮಿಯ ಅಗತ್ಯವಾಗಿದೆಯೆಂದು ಡೆಪ್ಯುಟಿ ಕಮೀಷನರು ಅಭಿಪ್ರಾಯಪಟ್ಟರೆ, ಅದನ್ನು ಅವನು ಮಂಜೂರು ಮಾಡಬಹುದು.
- ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸುವುದಕ್ಕಾಗಿ ಉಪಯೋಗಿಸುವ ಭೂಮಿಗಳನ್ನು ಮಂಜೂರು ಮಾಡುವ ಬಗ್ಗೆ ನಿರ್ಬಂಧಗಳು.- ಅನಧಿಕೃತ ಅಧಿಭೋಗದಲ್ಲಿರುವ ಭೂಮಿಯನ್ನು ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸುವುದಕ್ಕಾಗಿ ಉಪಯೋಗಿಸಿದಾಗ, ಅಂಥ ಭೂಮಿಯನ್ನು ಐದು ಹೆಕ್ಟೇರುಗಳಿಗೆ ಮೀರದಂತೆ, ಅರ್ಜಿದಾರನಿಗೆ ಮಂಜೂರು ಮಾಡಬಹುದು;
ಪರಂತು, ಅರ್ಜಿದಾರನು ಈಗಾಗಲೇ ಹೊಂದಿರುವ ಇತರ ಭೂಮಿಯ ವಿಸ್ತೀರ್ಣವು ಮಂಜೂರು ಮಾಡಿದ ಭೂಮಿಯ ವಿಸ್ತೀರ್ಣವೂ ಸೇರಿ ಇಪ್ಪತ್ತೆರಡು ಹೆಕ್ಟೇರುಗಳಿಗೆ ಮೀರತಕ್ಕದ್ದಲ್ಲ:
ಮತ್ತೂ ಪರಂತು, ಅರ್ಜಿದಾರನು, ಭೂಮಿಯು ಇರುವ ತಾಲ್ಲೂಕಿನ ಪರಿಮಿತಿಗಳೊಳಗೆ 1968ರ ಜುಲೈ 1ನೇ ದಿನಾಂಕಕ್ಕೆ ಮೊದಲು ಖಾಯಂ ನಿವಾಸಿಯಾಗಿಲ್ಲದಿದ್ದರೆ, ಅವನಿಗೆ ಯಾವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ.
- ಗೋಡಂಬಿ ಬೆಳೆಗಾಗಿ ಉಪಯೋಗಿಸಿದ ಭೂಮಿಗಳ ಮಂಜೂರಾತಿಯ ಬಗ್ಗೆ ನಿರ್ಬಂಧಗಳು.- ಅನಧಿಕೃತ ಅಧಿಭೋಗದಲ್ಲಿರುವ ಭೂಮಿಯನ್ನು ಗೋಡಂಬಿಯನ್ನು ಬೆಳೆಸಲು ಉಪಯೋಗಿಸಿದಾಗ, ಐದು ಹೆಕ್ಟೇರುಗಳಿಗಿಂತ ಹೆಚ್ಚಾಗಿ, ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ.
ಪರಂತು, ಮಂಜೂರು ಮಾಡಲಾದ ಭೂಮಿಯು ಅರ್ಜಿದಾರನು ಈಗಾಗಲೇ ಹೊಂದಿರುವ, ಮತ್ತು ಗೋಡಂಬಿ ಬೆಳೆಗಾಗಿ ಉಪಯೋಗಿಸುವ ಇತರ ಭೂಮಿಗಳೂ ಸೇರಿ ಹತ್ತು ಹೆಕ್ಟೇರುಗಳಿಗೆ ಮೀರತಕ್ಕದ್ದಲ್ಲ:
ಮತ್ತು ಪರಂತು, ಅರ್ಜಿದಾರನು ಭೂಮಿಯು ಇರುವ ತಾಲ್ಲೂಕಿನ ಪರಿಮಿತಿಗಳೊಳಗೆ 1968ರ ಜುಲೈ 1ನೇ ದಿನಾಂಕಕ್ಕೆ ಮೊದಲು ಖಾಯಂ ನಿವಾಸಿಯಾಗಿರದಿದ್ದರೆ, ಯಾವ ಭೂಮಿಯನ್ನು ಅವನಿಗೆ ಮಂಜೂರು ಮಾಡತಕ್ಕದ್ದಲ್ಲ.
-
ಬೇಸಾಯೇತರ ಉದ್ದೇಶಕ್ಕಾಗಿ ಉಪಯೋಗಿಸಲಾದ ಭೂಮಿಗಳ ಮಂಜೂರಾತಿಯ ಬಗ್ಗೆ ನಿರ್ಬಂಧಗಳು.- ಅನಧಿಕೃತವಾಗಿ ಅಧಿಭೋಗದಲ್ಲಿರುವ ಭೂಮಿಯನ್ನು ಅಧಿಭೋಗದಾರನು ವಾಸದ ಮನೆಗಾಗಿ ಸಂಪೂರ್ಣವಾಗಿ ಉಪಯೋಗಿಸಿದರೆ, ಐದು ಎಕರೆಗೆ ಹೆಚ್ಚಾಗಿಲ್ಲದ ಭೂಮಿಯನ್ನು ಅವನಿಗೆ ಮಂಜೂರು ಮಾಡತಕ್ಕದ್ದಲ್ಲ.
-
ವಿಧಿಸಬೇಕಾದ ಬೆಲೆ.- (1) ಈ ನಿಯಮಗಳ ಮೇರೆಗೆ ಮಂಜೂರು ಮಾಡಲಾದ ಭೂಮಿಗಳ ಬಗ್ಗೆ ವಿಧಿಸಬೇಕಾದ ಬೆಲೆಯನ್ನು (3)ನೇ ಉಪನಿಯಮದ ಉಪಬಂಧಗಳಿಗೊಳಪಟ್ಟು, ಡೆಪ್ಯುಟಿ ಕಮೀಷನರು ಮಂಜೂರಿಯ ದಿನಾಂಕದಂದು ಇದ್ದ ಸನ್ನಿವೇಶಗಳನ್ನು ಗಮನಿಸಿ ಮತ್ತು ತಾನು ಅವಶ್ಯಕವೆಂದು ಭಾವಿಸುವಂಥ
ವಿಚಾರಣೆಯನ್ನು ಮಾಡಿ ತಿಳಿದುಕೊಳ್ಳುವಂಥ ಭೂಮಿಯ ಮಾರುಕಟ್ಟೆ ಮೌಲ್ಯಕ್ಕೆ ಸಂಬಂಧಪಟ್ಟಂತೆ ನಿರ್ಧರಿಸತಕ್ಕದ್ದು.
(2) ಅಂಥ ಬೆಲೆಯು ಯಾವ ಸಂದರ್ಭದಲ್ಲೂ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಇರತಕ್ಕದ್ದಲ್ಲ ಮತ್ತು ಅಂಥ ಭೂಮಿಯ ಮಾರುಕಟ್ಟೆ ಮೌಲ್ಯದ ಎರಡರಷ್ಟಕ್ಕಿಂತ ಹೆಚ್ಚಾಗಿರತಕ್ಕದ್ದಲ್ಲ.
ಪರಂತು, ಭೂರಹಿತ ಬಡವ್ಯಕ್ತಿಗೆ ಭೂಮಿಯನ್ನು ಮಂಜೂರು ಮಾಡುವಲ್ಲಿ, ಡೆಪ್ಯುಟಿ ಕಮೀಷನರು,-
(i) ನಿಜವಾದ ಬೇಸಾಯಕ್ಕಾಗಿ ಅಥವಾ 9ನೇ ನಿಯಮದ ಮೇರೆಗೆ ವಾಸದ ಮನೆಯನ್ನು ಕಟ್ಟುವುದಕ್ಕಾಗಿ ಭೂಮಿಯನ್ನು ಮಂಜೂರು ಮಾಡುವ ಸಂದರ್ಭದಲ್ಲಿ, ಮಾರುಕಟ್ಟೆ ಬೆಲೆಯ ಅರ್ಧಕ್ಕಿಂತ ಹೆಚ್ಚಾಗಿಲ್ಲದಿರುವ ಅಥವಾ ಕರ್ನಾಟಕ ಭೂಮಂಜೂರಾತಿ ನಿಯಮಗಳ, 1969ರ 12 ಮತ್ತು 18ನೇ ನಿಯಮಗಳ ಮೇರೆಗೆ ಭೂಮಿಗಳನ್ನು ಮಂಜೂರು ಮಾಡಿದ್ದರೆ ಆ ನಿಯಮಗಳ ಮೇರೆಗೆ ವಿಧಿಸಬಹುದಾಗಿದ್ದಂಥ ಬೆಲೆಯ ಎರಡರಷ್ಟಕ್ಕಿಂತ ಹೆಚ್ಚಾಗಿ, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ನಿಗದಿತ ಬೆಲೆಯಾಗಿ ವಿಧಿಸಬಹುದು.
ಮತ್ತೂ ಪರಂತು, ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸುವುದಕ್ಕಾಗಿ ಉಪಯೋಗಿಸಲಾಗುವ ಭೂಮಿಗಳ ಸಂಬಂಧದಲ್ಲಿ ಬೆಲೆಯು, ಮಾರುಕಟ್ಟೆ ಬೆಲೆಯ ಎರಡರಷ್ಟು ಅಥವಾ ಪ್ರತಿ ಹೆಕ್ಟೇರಿಗೆ ಐದು ಸಾವಿರ ರೂಪಾಯಿಗಳಷ್ಟು, ಇವುಗಳಲ್ಲಿ ಯಾವುದು ಕಡಿಮೆಯೋ ಅದು, ಇರತಕ್ಕದ್ದು.
(3) ಭೂಮಿಯ ಮಾರುಕಟ್ಟೆ ಬೆಲೆಯನ್ನು ಲೆಕ್ಕ ಹಾಕುವಾಗ, ಡೆಪ್ಯುಟಿ ಕಮೀಷನರನು ಆ ಭೂಮಿಯಲ್ಲಿರುವ ಮೀಸಲು ವರ್ಗದ ಯಾವುವೇ ಮರಗಳ ಬೆಲೆಯನ್ನು ಅಥವಾ ಅನಧಿಕೃತ ಅಧಿಭೋಗದ ಅವಧಿಯಲ್ಲಿ ಅರ್ಜಿದಾರನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದಲ್ಲ; ಆದರೆ ಆ ಭೂಮಿಯಲ್ಲಿರುವ ಇತರ ಮರಗಳ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದು.
(4) ಆ ಭೂಮಿಯಲ್ಲಿರುವ ಮೀಸಲು ವರ್ಗದ ಮರಗಳು ಸರ್ಕಾರದ ಸ್ವತ್ತಾಗಿರತಕ್ಕದ್ದು ಮತ್ತು ಭೂಮಿಯನ್ನು ಮಂಜೂರು ಮಾಡುವ ಆದೇಶಕ್ಕೆ ಮೊದಲು ಅಥವಾ ತರುವಾಯ ಯಾವ ಕಾಲದಲ್ಲೇ ಆಗಲಿ ಅವುಗಳನ್ನು ಸರ್ಕಾರವು ತೆಗೆದುಹಾಕಬಹುದು.
(5) ಮಾರುಕಟ್ಟೆಯ ಬೆಲೆಯನ್ನು ನಿರ್ಧರಿಸುವ ಕಾಲದಲ್ಲಿ, ಮೀಸಲು ವರ್ಗದ ಮರಗಳನ್ನು ಕಡಿದು ಹಾಕಿರುವ ಬಗ್ಗೆ ಅಲ್ಲಿ ಸಾಕ್ಷ್ಯವಿದ್ದಲ್ಲಿ, ಡೆಪ್ಯುಟಿ ಕಮೀಷನರು ಅಂಥ ಮರಗಳ ಬೆಲೆಯನ್ನು ಗೊತ್ತು ಮಾಡತಕ್ಕದ್ದು ಮತ್ತು ಭೂಮಿಯ ಬಗ್ಗೆ ವಿಧಿಸಬೇಕಾದ ಬೆಲೆಯಲ್ಲಿ ಅದನ್ನು ಸೇರಿಸತಕ್ಕದ್ದು.
(6) ಭೂಮಿಯ ಬಗ್ಗೆ ಸಂದಾಯ ಮಾಡಬೇಕಾದ ಬೆಲೆಯ ಜೊತೆಗೆ ಅಧಿಭೋಗದ ಒಟ್ಟು ಅವಧಿಯ ಬಗೆಗಿನ ಹಿಂದಿನ ಕಂದಾಯವನ್ನು ವಸೂಲು ಮಾಡತಕ್ಕದ್ದು.
(7) ಮಂಜೂರಾತಿಯು ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಡಗದ ವ್ಯಕ್ತಿಗೆ ಅಥವಾ ವಿಧಿಸಿರುವ ಬೆಲೆಯನ್ನು ಬಡತನದ ಕಾರಣದಿಂದಾಗಿ ಸಂದಾಯ ಮಾಡುವುದಕ್ಕೆ ಅಸಮರ್ಥನಾಗಿರುವ ವ್ಯಕ್ತಿಗೆ ಭೂಮಿಯನ್ನು ಮಂಜೂರು ಮಾಡಿದ್ದರೆ, ವಿಧಿಸಲಾದ ಬೆಲೆಯ ಶೇ. ಎಪ್ಪತ್ತೈದರವರೆಗೆ, ಆದರೆ, ಐನೂರು ರೂಪಾಯಿಗಳ ಪರಮಾವಧಿಗೆ ಒಳಪಟ್ಟು, ಬೆಲೆಯನ್ನು ಡೆಪ್ಯುಟಿ ಕಮೀಷನರು ಮಾಫಿ ಮಾಡಬಹುದು ಮತ್ತು ಉಳಿದ ಮೊಬಲಗನ್ನು ಮೂರು ವಾರ್ಷಿಕ ಕಂತುಗಳಲ್ಲಿ ಸಂದಾಯ ಮಾಡಬೇಕೆಂದು ನಿರ್ದೇಶಿಸಬಹುದು;
ಪರಂತು, ವಿಧಿಸಲಾದ ಬೆಲೆಯು ಐನೂರು ರೂಪಾಯಿಗಳಿಗಿಂತ ಹೆಚ್ಚಾಗಿರದಿದ್ದರೆ, ಡೆಪ್ಯುಟಿ ಕಮೀಷನರು ಇಡೀ ಮೊಬಲಗನ್ನು ಮಾಫಿ ಮಾಡಬಹುದು.
-
ಈಗಾಗಲೇ ಕಂದಾಯ ನಿರ್ಧರಿಸಿರದ ಭೂಮಿಯ ಬಗ್ಗೆ ಅದನ್ನು ಮಂಜೂರು ಮಾಡುವುದಕ್ಕೆ ಮೊದಲು ಕಂದಾಯ ನಿರ್ಧರಿಸತಕ್ಕದ್ದು.- ಈ ನಿಯಮಗಳ ಮೇರೆಗೆ ಮಂಜೂರು ಮಾಡಲಾದ, ಪ್ರತಿಯೊಂದು ಭೂಮಿಯ ಬಗ್ಗೆ, ಅದನ್ನು ಮಂಜೂರು ಮಾಡುವ ಮೊದಲು ಕಂದಾಯ ನಿರ್ಧರಿಸಿರದಿದ್ದರೆ, ಭೂಮಿಗಳ ಕಂದಾಯ ನಿರ್ಧರಣೆಗೆ ಅನ್ವಯಿಸಬಹುದಾದ ಉಪಬಂಧಗಳಿಗನುಸಾರವಾಗಿ ಭೂಕಂದಾಯವನ್ನು ನಿರ್ಧರಿಸತಕ್ಕದ್ದು. ಅಂಥ ಭೂಮಿಯ ಮೋಜಣಿಯನ್ನು ಸಹ ಮಾಡತಕ್ಕದ್ದು ಮತ್ತು ಅದರ ಸರಹದ್ದನ್ನು ಗಮನಿಸಿ ಮೇರೆ ಗುರುತುಗಳನ್ನು ನಿಲ್ಲಿಸತಕ್ಕದ್ದು. ಅದರ ಬಗೆಗಿನ ವೆಚ್ಚಗಳನ್ನು ಭೂಮಿಯ ಮಂಜೂರಾತಿ ಪಡೆದವನು ಸಂದಾಯ ಮಾಡತಕ್ಕದ್ದು.
-
ಮಂಜೂರಾತಿಯ ರದ್ದಿಯಾತಿ.- ಈ ನಿಯಮಗಳ ಮೇರೆಗೆ ಮಾಡಿದ ಭೂಮಿಯ ಯಾವುದೇ ಮಂಜೂರಾತಿಯನ್ನು ಸುಳ್ಳು ಅಥವಾ ಮೋಸದ ನಿರೂಪಣೆಗಳನ್ನು ಮಾಡುವುದರ ಮೂಲಕ ಪಡೆದಿದ್ದರೆ, ಅಥವಾ ಆ ಮಂಜೂರಾತಿಯು ಈ ನಿಯಮಗಳಿಗೆ ವಿರುದ್ಧವಾಗಿದ್ದರೆ ಆ ಮಂಜೂರಾತಿಯನ್ನು ರದ್ದು ಮಾಡಲು ಡೆಪ್ಯುಟಿ ಕಮೀಷನರಿಗೆ ಅವಕಾಶವಿರತಕ್ಕದ್ದು ಮತ್ತು ಆ ಭೂಮಿಯನ್ನು ಅವನು ಮರಳಿ ವಹಿಸಿಕೊಳ್ಳತಕ್ಕದ್ದು.
-
ನಿಯಮಗಳ ಸಡಿಲಿಕೆ.- ಈ ನಿಯಮಗಳಲ್ಲಿ ಏನೇ ಇದ್ದರೂ, ರಾಜ್ಯ ಸರ್ಕಾರವು ತಾನಾಗಿಯೇ ಅಥವಾ ಡಿವಿಜನಲ್ ಕಮೀಷನರ ಅಥವಾ ಡೆಪ್ಯುಟಿ ಕಮೀಷನರ ಆಫಾರಸ್ಸಿನ ಮೇಲೆ, ಯಾವುದೇ ಸಂದರ್ಭದ ಅಥವಾ ಸಂದರ್ಭಗಳ ವರ್ಗದ ಸನ್ನಿವೇಶಗಳಲ್ಲಿ, ಈ ನಿಯಮಗಳ ಯಾವುವೇ ಉಪಬಂಧಗಳನ್ನು ಸಡಲಿಸುವುದು ನ್ಯಾಯೋಚಿತವೆಂದು, ಮತ್ತು ಸೂಕ್ತವೆಂದು ಸರ್ಕಾರವು ಅಭಿಪ್ರಾಯಪಟ್ಟರೆ, ಅದು ಆದೇಶದ ಮೂಲಕ, ಆ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು, ಅಂಥ ಸಡಿಲಿಕೆಯ ಬಗ್ಗೆ ನಿರ್ದೇಶಿಸಬಹುದು. ಮತ್ತು ಅನಂತರ ಅಂಥ ಸಂದರ್ಭದಲ್ಲಿ ಅಥವಾ ಸಂದರ್ಭಗಳ ಗರ್ಭದಲ್ಲಿ ಅಂಥ ನಿರ್ದೇಶನಕ್ಕನುಸಾರವಾಗಿ ಭೂಮಿಗಳನ್ನು ಮಂಜೂರು ಮಾಡಬಹುದು.