ಮೋಜದಾರನು ನಿರ್ಧರಿಸಿದ ಸರ್ವೇ ನಂಬರಿನ ಅಥವಾ ಸರ್ವೇ ನಂಬರಿನ ಪೋಡಿನ ಮೇರೆಗಳ ಸಂಬಂಧದಲ್ಲಿ ಮೋಜಣಿದಾರನು ಮಾಡಿದ ತೀರ್ಮಾನದಿಂದ ಬಾಧಿತನಾದ ಯಾವನೇ ವ್ಯಕ್ತಿಯು, ಮೋಜಣಿದಾರನ ತೀರ್ಮಾನದ ವಿರುದ್ಧ ಜಿಲ್ಲೆಯ ಭೂದಾಖಲೆಗಳ ಸಹಾಯಕ ಸೂಪರಿಂಟೆಂಡೆಂಟನಿಗೆ ಅಪೀಲು ಮಾಡಿಕೊಳ್ಳಬಹುದು ಮತ್ತು ಅಂಥ ಅಪೀಲಿನಲ್ಲಿ ಭೂದಾಖಲೆಗಳ ಸಹಾಯಕ ಸೂಪಂರಿಂಟೆಂಡೆಂಟನು ಮಾಡಿದ ತೀರ್ಮಾನದ ವಿರುದ್ಧ ಅಪೀಲನ್ನು ವಿಭಾಗದ ಭೂದಾಖಲೆಗಳ ಸೂಪರಿಂಟೆಂಡೆಂಟ್ನಿಗೆ ಹಾಕಿಕೊಳ್ಳತಕ್ಕದ್ದು. ಭೂದಾಖಲೆಗಳ ಸಹಾಯಕ ಸೂಪರಿಂಟೆಂಡೆಂಟ್ನಿಗೆ ಹಾಕಿಕೊಳ್ಳುವ ಅಪೀಲು ವಿವರಣ ಪತ್ರಕ್ಕೆ ಇಪ್ಪತ್ತೈದು ರೂಪಾಯಿಗಳ ಫೀಜನ್ನು ಕೊಡತಕ್ಕದ್ದು ಮತ್ತು ಭೂದಾಖಲೆಗಳ ಸೂಪರಿಂಟೆಂಡೆಂಟ್ನಿಗೆ ಹಾಕಿಕೊಳ್ಳುವ ಅಪೀಲು ವಿವರಣ ಪತ್ರಕ್ಕೆ ಐವತ್ತು ರೂಪಾಯಿಗಳ ಫೀಜನ್ನು ಕೊಡತಕ್ಕದ್ದು. ಪಕ್ಷಕಾರನ ಅಪೀಲನ್ನು ಎತ್ತಿ ಹಿಡಿದರೆ ಸಂದಾಯ ಮಾಡಿದ ಫೀಜಿನ ಮೊಬಲಗನ್ನು ಆ ಪಕ್ಷಕಾರನಿಗೆ ಮರು ಸಂದಾಯ ಮಾಡತಕ್ಕದ್ದು. ಅಪೀಲಿನಲ್ಲಿ ಮಾಡಲಾದ ಪ್ರತಿಯೊಂದು ಆದೇಶದ ಒಂದು ಪ್ರತಿಯನ್ನು ಭೂಮಿಯು ಇರುವ ತಾಲ್ಲೂಕಿನ ತಹಶೀಲ್ದಾರನಿಗೆ ಕಳುಹಿಸತಕ್ಕದ್ದು.
140. (1) ಮೂಲ ಮತ್ತು ಪ್ರಮಾಣಿತ ಪ್ರತಿಗಳನ್ನು ವಶದಲ್ಲಿಟ್ಟುಕೊಂಡಿರುವ ಅಧಿಕಾರಿಗಳು ಕ್ರಮವಾಗಿ ಪ್ರಮಾಣಿತ ಮತ್ತು ಯಥಾ ಪ್ರತಿಗಳನ್ನು ಕೊಡುವುದು.- ಯಾವುದೇ ಸಾರ್ವಜನಿಕ ದಸ್ತಾವೇಜಿನ ಪ್ರಮಾಣಿತ ಪ್ರತಿಯನ್ನು ಹೊಂದಿರುವ ಪ್ರತಿಯೊಬ್ಬ ಅಧಿಕಾರಿಯೂ, ಯಾವನೇ ವ್ಯಕ್ತಿಯು ತನಗೆ ಸಲ್ಲಿಸಿದ ಅರ್ಜಿಯ ಮೇಲೆ ಕ್ರಮವಾಗಿ ದಸ್ತಾವೇಜಿನ ಪ್ರಮಾಣಿತ ಪ್ರತಿಯನ್ನು ಅಥವಾ ಅಂಥ ಪ್ರಮಾಣಿತ ಪ್ರತಿಯ ಯಥಾ ಪ್ರತಿಯನ್ನು ಈ ಮುಂದೆ ನಿಯಮಿಸಿರುವ ಫೀಜುಗಳನ್ನು ಸಂದಾಯ ಮಾಡಿದ ಮೇಲೆ ತನ್ನ ಸಹಿ ಹಾಕಿ ಅವನಿಗೆ ಕೊಡತಕ್ಕದ್ದು.
| I (i) | ಪ್ರತಿ 100 ಪದಗಳನ್ನು ಅಥವಾ ಅದರ ಭಾಗವನ್ನು ಪ್ರತಿ ಮಾಡುವುದಕ್ಕೆ | 40 ಪೈಸೆ |
| ತಾಳೆ ನೋಡುವುದಕ್ಕೆ | ಮೇಲಿನ ದರದ ನಾಲ್ಕನೇ ಒಂದು ಭಾಗದಷ್ಟು |
| ಮೂಲವು ಕೋಷ್ಟಕ ರೂಪದಲ್ಲಿದ್ದರೆ ಅದನ್ನು ಪ್ರತಿ ಮಾಡುವುದಕ್ಕೆ | ಮೇಲೆ ಸೂಚಿಸಿದ ದರದ ಎರಡರಷ್ಟು |
| ಪ್ರತಿಯನ್ನು ಮುದ್ರಿನ ನಮೂನೆಯಲ್ಲಿ ಕೊಟ್ಟರೆ, ಉಪಯೋಗಿಸಿದ ಪ್ರತಿ ಹಾಳೆಗೆ | 20 ಪೈಸೆ |
ಮೂರನೇ ಬಾಬಿನಲ್ಲಿ ಹೇಳಿದುದನ್ನು ಮೇಲೆ (i) ಮತ್ತು (ii)ರಲ್ಲಿ ನಿಯಮಿಸಿದ ಫೀಜುಗಳ ಜೊತೆಗೆ ಸಂದಾಯ ಮಾಡತಕ್ಕದ್ದು
| II. | ಗ್ರಾಮ, ಪಟ್ಟಣ ಅಥವಾ ನಗರದ ನಿವೇಶನಗಳಲ್ಲಿ ಮೋಜಣಿ ಮಾಡಿದ ಪ್ರದೇಶಗಳ ಸಂಬಂಧದಲ್ಲಿ ಹಕ್ಕು ಬದಲಾವಣೆಗಳ ಬಗೆಗಿನ ನಮೂದನೆಗಳ ಪ್ರಮಾಣಿತ ಪ್ರತಿ |
| i) ii) | ಪ್ರತಿ ಮಾಡುವುದಕ್ಕೆ ತಾಳೆ ನೋಡುವುದಕ್ಕೆ | ಪ್ರತಿ ನಮೂದನೆಗೆ 20 ಪೈಸೆ ಮೇಲಿನದರ ನಾಲ್ಕನೇ ಒಂದು ಭಾಗದಷ್ಟು |
| iii) | ಉಪಯೋಗಿಸಿದ ಮುದ್ರಿತ ನಮೂನೆಗೆ | ಮೇಲಿನ ದರ ಜೊತೆಗೆ 20 ಪೈಸೆ |
ಟಿಪ್ಪಣಿ: ಮೇಲಿನ ಫೀಜು ವಿಚಾರಣಾ ರಿಜಿಸ್ಟರಿನಲ್ಲಿರುವ ಮತ್ತು ಸ್ವತ್ತಿನ ಕಾರ್ಡಿನಲ್ಲಿರುವ ಅಥವಾ ರಿಜಿಸ್ಟರಿನಲ್ಲಿರುವ ನಮೂದನೆಗಳ ಪ್ರತಿಗಳಿಗೆ ಸಹ ಅನ್ವಯಿಸತಕ್ಕದ್ದು.
III. ಒಂದು ಸರ್ವೇ ನಂಬರಿನ ಅಥವಾ ಪೋಡಿನ ನಕಾಶೆಯ ಅಥವಾ ಸರ್ವೆ ನಂಬರಿನ ಅಥವಾ ಪೋಡಿನ ಟಿಪ್ಪಣಿಯ ಪ್ರಮಾಣಿತ ಪ್ರತಿಗೆ,
| ಪ್ರತಿ ಮಾಡುವ ಫೀಜು | ರೂ. ಪೈಸೆ. 1-25 |
| ತಾಳೆ ನೋಡುವುದಕ್ಕೆ | ರೂ. ಪೈ.ಸೆ. 0-30 |
ಟಿಪ್ಪಣಿ: ಈ ದರಗಳು ಗ್ರಾಮ, ಪಟ್ಟಣ ಅಥವಾ ನಗರದ ನಿವೇಶನಗಳಲ್ಲಿ ಮೋಜಣಿ ಮಾಡಿದ ಪ್ರದೇಶಗಳಿಗೆ ಸಹ ಅನ್ವಯಿಸತಕ್ಕದ್ದು. ಫೀಜನ್ನು ಸಂದಾಯ ಮಾಡಿದ ಮೇಲೆ ಪ್ರತಿಗಳನ್ನು ಒದಗಿಸತಕ್ಕದ್ದು. ಆ ಫೀಜಿನ ಶೇಕಡಾ ಐವತ್ತು ಭಾಗವನ್ನು ಮುಂಗಡವಾಗಿ ವಸೂಲು ಮಾಡತಕ್ಕದ್ದು. ಪ್ರತಿ ಮಾಡುವ ಫೀಜನ್ನು, ತಾಳೆ ನೋಡುವ ಫೀಜನ್ನು ಮತ್ತು ನಮೂನೆಗಳ ಖರ್ಚನ್ನು ನೌಕರರು ಸರ್ಕಾರಕ್ಕೆ ಜಮೆ ಮಾಡತಕ್ಕದ್ದು.
IV. ನಗರ ಸ್ವತ್ತು ರಿಜಿಸ್ಟರಿನ ಉದ್ಧತಭಾಗದ ಪ್ರತಿಯೊಂದು ನಮೂನೆಗೆ 0.50 ಪೈಸೆ ಮುದ್ರಿತ ನಮೂನೆಯನ್ನು ಒದಗಿಸಿಲ್ಲದಿದ್ದರೆ ಅಥವಾ ಅದು ದೊರೆಯದಿದ್ದರೆ ಈ ಉಪನಿಯಮಗಳ ಮೇರೆಗಿನ ನಕಾಶೆ ಅಥವಾ ನಕ್ಷೆಯ ಪ್ರತಿಯಲ್ಲದ ಇತರ ಪ್ರತಿಯನ್ನು ತಯಾರಿಸುವಲ್ಲಿ ಉಪಯೋಗಿಸಿದ ಫುಲ್ಸ್ಕೇಪಿನ ಕಾಗದದ ಪ್ರತಿ ಹಾಳೆಗೆ 0.25 ಪೈಸೆ.
- ಹಕ್ಕು ದಾಖಲೆಗಳಲ್ಲಿ, ಹಕ್ಕು ಬದಲಾವನೆಗಳ ರಿಜಿಸ್ಟರಿನಲ್ಲಿ, ಅಥವಾ ಸಂಯುಕ್ತ ನಮೂನೆಯ ಯಾವುದೇ ಭಾಗದಲ್ಲಿರುವ ಮತ್ತು ಒಂದು ಕ್ರಮಾಂಕದ (ಅಥವಾ ನಮೂದನೆಯ) ಪ್ರತಿಯೊಂದು ಪ್ರಮಾಣಿತ ಪ್ರತಿಗೆ ಮತ್ತು 130(2)ನೇ ನಿಯಮವು ಅನ್ವಯಿಸುವ ಗ್ರಾಮಗಳಲ್ಲಿ, ಹಿಂದೆ ಹೆಸರಿಸಿದ ನಮೂನೆಗಳಲ್ಲಿರುವ ಪ್ರತಿಯೊಂದು ನಮೂದನೆಯ ಪ್ರತಿಯೊಂದು ಪ್ರಮಾಣಿತ ಪ್ರತಿಗೆ ಅಥವಾ ಅರ್ಜಿದಾರನ ಹಿಡುವಳಿಯ ಪ್ರತಿಯೊಂದು ಖಾತೆಗೆ.
ಪರಂತು, ಹಿಡುವಳಿಯ ದಾಖಲೆ ಹಾಳೆಯನ್ನು ತಿದ್ದಿ ಸರಿಪಡಿಸುವುದಕ್ಕೆ, ಅದು ಚಾಲ್ತಿಯಲ್ಲಿರುವ ಐದು ವರ್ಷಗಳ ಅವಧಿಯ ಯಾವುದೇ ಕಾಲದಲ್ಲಿ, ಯಾವ ಫೀಜನ್ನೂ ವಿಧಿಸತಕ್ಕದ್ದಲ್ಲ.
-
ಸರ್ವೇ ನಂಬರಿನ ಅಥವಾ ಸರ್ವೇನಂಬರಿನ ಪೋಡಿನ ನಕಾಶೆಯ ಅಥವಾ ನಗರ ಸ್ವತ್ತಿನ ರಿಜಿಸ್ಟರಿನಲ್ಲಿರುವ ಮೇರೆಗೆ ತಯಾರಿಸಿದ ಯಾವುದೇ ಸ್ಥಿರಸ್ವತ್ತಿನ ಯಾವುದೇ (ಬಣ್ಣ ಹಾಕದ) ನಕಾಶೆಯ ಅಥವಾ ನಗರ ಸ್ವತ್ತು ರಿಜಿಸ್ಟರಿನ ನಮೂದನೆಯ ಪ್ರತಿಯೊಂದು ಪ್ರಮಾಣಿತ ಪ್ರತಿಗೆ 0-15 ಪೈಸೆ.
-
ನಕಾಶೆಯ, ಸರ್ವೇ ನಂಬರಿನ, ಸರ್ವೇ ನಂಬರಿನ ಪೋಡಿನ ಯಾವುದೇ ಪ್ರಮಾಣಿತ ಪ್ರತಿಯ ಮೇಲೆ ಪ್ರಮಾಣಕ್ಕನುಸಾರವಾಗಿ ಗುರುತಿಸಿದ ಪರಿಧಿಯ ಅಳತೆಯನ್ನು ತೋರಿಸುವುದಕ್ಕೆ;
i) ಸರ್ವೇ ನಂಬರಿನ ಅಥವಾ ಸರ್ವೇ ನಂಬರಿನ ಪೋಡಿನ ಅಳತೆಯ ಕಾಲದಲ್ಲಿ ಅರ್ಜಿ ಹಾಕಿಕೊಂಡರೆ. 0-15 ಪೈಸೆ ii) ಅನಂತರ ಯಾವ ಕಾಲದಲ್ಲೆ ಆಗಲೀ ಅರ್ಜಿ ಹಾಕಿಕೊಂಡರೆ 30 ಪೈಸೆ. ಪೋಡಿನ ಸರ್ವೆ ನಂಬರಿನ ಅಥವಾ ಜಮೀನಿನ ನಕಾಶೆಯ ಅಥವಾ ಯಾವುದೇ ಸ್ಥಿರ ಸ್ವತ್ತಿನ ಸಾಮಾನ್ಯ (ಬಣ್ಣ ಹಾಕದ) ನಕಾಶೆಯ ಅಥವಾ ನಕ್ಷೆಯ ಅಥವಾ ನಗರ ಮೋಜಣಿ ನಕಾಶೆಯ ಉದ್ಧೃತ ಭಾಗದ ಪ್ರತಿಯೊಂದು ಪ್ರಮಾಣಿತ ಪ್ರತಿಗೆ 164ನೇ ನಿಯಮಕ್ಕೆ ಒಳಪಟ್ಟು (8)ನೇ ಬಾಬಿಗೆ ಸೇರದ ಪ್ರತಿಯೊಂದು ಜಮೀನಿಗೆ ಅಥವಾ ತಾಕಿಗೆ 1 ರೂಪಾಯಿ.
- (1) ಅಥವಾ (4)ನೇ ಬಾಬುಗಳಿಗೆ ಸೇರದ ನಕಾಶೆಯ ಅಥವಾ ನಕ್ಷೆಯ ಅಥವಾ ನಕಾಶೆಯ ಅಥವಾ ನಕ್ಷೆಯ ಭಾಗದ ಪ್ರತಿಯೊಂದು ಪ್ರಮಾಣಿತ ಪ್ರತಿಗೆ ಆ ಪ್ರತಿಯನ್ನು ಪ್ರಮಾಣೀಕರಿಸುವ ಅಧಿಕಾರಿಯು, ಹದಿನೈದು ರೂಪಾಯಿಗಳಿಗೆ ಮೀರದಂತೆ, ಆದರೆ ಒಂದು ರೂಪಾಯಿಗೆ ಕಡಿಮೆಯಾಗದಂತೆ ಅಂಥ ಫೀಜನ್ನು ನಿರ್ಧರಿಸತಕ್ಕದ್ದು.
ಪರಂತು, ಡೆಪ್ಯುಟಿ ಕಮೀಷನರ ಅಥವಾ ತಾನು ಯಾರಿಗೆ ಅಧೀನನಾಗಿರವನೋ ಆ ಭೂ ದಾಖಲೆಗಳ ಸೂಪರಿಂಟೆಂಡೆಂಟರ ಕಛೇರಿಯ ಅಧಿಕಾರಿಯ ಅನುಮತಿ ಪಡೆದ ಹೊರತು ಡೆಪ್ಯೂಟಿ ಕಮೀಷನರಿಗೆ ಅಧೀನನಾಗಿರುವ ಯಾವ ಅಧಿಕಾರಿಯೂ ಐದು ರೂಪಾಯಿಗಳಿಗೆ ಮೀರುವ ಯಾವ ಫೀಜನ್ನು ವಿಧಿಸತಕ್ಕದ್ದಲ್ಲ.
(6) ಪ್ರಮಾಣಿತ ಪ್ರತಿಯ ಪ್ರತಿಯೊಂದು ಯಥಾಪ್ರತಿಗೆ: ಪ್ರಮಾಣಿತ ಪ್ರತಿಗೆ ವಿಧಿಸುವಷ್ಟೇ ಫೀಜು;
(7) ಪ್ರತಿಯೊಂದು ಶೋಧನೆಗೆ.-
ಯಾವ ವರ್ಷದ ಬಗೆಗಿನ ದಾಖಲೆಗಳನ್ನು ಶೋಧಿಸಲಾಗಿದೆಯೋ ಆ ಪ್ರತಿಯೊಂದು ವರ್ಷಕ್ಕೆ ಎರಡು ರೂಪಾಯಿಗಳು.
ಪರಂತು, ಪರಭಾರೆಯಾದ ಭೂಮಿಗಳ ಕಛೇರಿ ದಾಖಲೆಗಳ ಸಂದರ್ಭದಲ್ಲಿ, ಹಾಗೆ ಶೋಧಿಸಿದ ಪ್ರತಿಯೊಂದು ದಾಖಲೆಗೆ ಕನಿಷ್ಠ ಐದು ರೂಪಾಯಿಗಳ ಫೀಜನ್ನು ವಿಧಿಸತಕ್ಕದ್ದು.
(8) ಈ ಅಧಿನಿಯಮದ ಮೇರೆಗಿನ ಆದೇಶಗಳ ಮತ್ತು ಅವುಗಳ ಕಾರಣಗಳ ಮತ್ತು ವಿದ್ಯುತಕ್ತ ಅಥವಾ ಸಂಕ್ಷಿಪ್ತ ವಿಚಾರಣೆಗಳ ಪ್ರದರ್ಶಿಕೆಗಳ ಪ್ರತಿಯೊಂದು ಅಧಿಪ್ರಮಾಣಿತ ಭಾಷಾಂತರಕ್ಕೆ:-
(ಕ) ಮೊದಲನೇ ಒಂದು ನೂರು ಪದಗಳಿಗೆ ಅಥವಾ ನೂರು ಪದಗಳ ಅಂಶಕ್ಕೆ ......... 0.80 ಪೈಸೆ.
(ಖ) ಆನಂತರದ ಪ್ರತಿ ಒಂದು ನೂರು ಪದಗಳಿಗೆ ಅಥವಾ ಒಂದು ನೂರು ಪದಗಳ ಅಂಶಕ್ಕೆ.... 40 ಪೈಸೆ.
ಯಾವುದೇ ಫೀಜನ್ನು ವಿ.ಪಿ.ಪಿ. ಮೂಲಕ ವಸೂಲು ಮಾಡಿಕೊಳ್ಳುವ ಅಗತ್ಯವಿರುವಾಗ ಇದರ ಜತೆಗೆ ಅಂಚೆಯ ವೆಚ್ಚ ಮತ್ತು ಅಂಚೆಯ ಕಮೀಷನನ್ನು ವಸೂಲು ಮಾಡತಕ್ಕದ್ದು, ಮತ್ತು ಅಂಚೆ ವೆಚ್ಚ ಮತ್ತು ಕಮೀಷನನ್ನು ಸೇರಿ ಫೀಜಿನ ಒಟ್ಟು ಮೊಬಲಗು ಒಂದು ಆಣೆಯ ಅಂಶವಾದರೆ, ಆ ಅಂಶಕ್ಕೆ ಬದಲು ಒಂದು ಪೂರ್ತಿ ಅಣೆಯನ್ನು ವಿಧಿಸತಕ್ಕದ್ದು.
(2) ಶೋಧನೆ ಫೀಜನ್ನು ವಿಧಿಸುವುದು.- ಯಾವುದೇ ಸಾರ್ವಜನಿಕ ದಸ್ತಾವೇಜಿನ ಅಥವಾ ಸಾರ್ವಜನಿಕ ದಸ್ತಾವೇಜಿನ ಯಾವುದೇ ಭಾಗದ ಪ್ರತಿಯ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಿರುವಾಗ ಮತ್ತು ಅಗತ್ಯವಾದ ದಸ್ತಾವೇಜಿನ ಕ್ರಮ ಸಂಖ್ಯೆ, ದಿನಾಂಕ ಮತ್ತು ಸ್ವರೂಪವನ್ನು ಅಂಥ ಅರ್ಜಿಯಲ್ಲಿ ಸ್ಪಷ್ಟವಾಗಿ ವಿವರಿಸದಿದ್ದರೆ; ಅಥವಾ ಅಂಥ ಅರ್ಜಿಯಲ್ಲಿ ಕೊಟ್ಟಿರುವ ವಿವರಣೆಯು ಸರಿಯಿಲ್ಲದಿದ್ದರೆ ಮತ್ತು ಅದರ ಪರಿಣಾಮವಾಗಿ ಅದನ್ನು ಕಂಡು ಹಿಡಿಯುವುದಕ್ಕಾಗಿ ತನ್ನ ದಾಖಲೆಗಳನ್ನು ಶೋಧನೆ ಮಾಡುವುದು ದಸ್ತಾವೇಜನ್ನು ವಶದಲ್ಲಿ ಇಟ್ಟುಕೊಂಡಿರುವ ಅಧಿಕಾರಿಗೆ ಅವಶ್ಯಕವಾದರೆ, ಯಾವ ವರ್ಷದ ಬಗ್ಗೆ ದಾಖಲೆಗಳನ್ನು ಶೋಧಿಸಲಾಗುವುದೋ ಆ ಪ್ರತಿಯೊಂದು ವರ್ಷಕ್ಕೆ ಎರಡು ರೂಪಾಯಿಗಳ ಫೀಜನ್ನು ಅಂಥ ಶೋಧನೆಯ ಬಗ್ಗೆ ಅರ್ಜಿದಾರನು ಸಂದಾಯ ಮಾಡತಕ್ಕದ್ದು.