107ನೇ ಪ್ರಕರಣದ ಮೇರೆಗಿನ 1ನೇಯ ನಮೂನೆಯಲ್ಲಿ ಸಾಮಾನ್ಯ ನೋಟೀಸನ್ನು ಅಂಥ ನೋಟೀಸನ್ನು ಡಂಗುರ ಬಾರಿಸುವುದರ ಮೂಲಕ ಸೂಚಿಸಿದ ಮೇಲೆ, ಮೋಜಣಿ ನಡೆಸಬೇಕಾಗಿರುವ ಗ್ರಾಮದ ಚಾವಡಿಯಲ್ಲಿ ಪ್ರಕಟಿಸತಕ್ಕದ್ದು.
Loading…
(1) 108ನೇ ಪ್ರಕರಣದ ಮೇರೆಗೆ ನಿಯಮಿಸಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆ ವಿಸ್ತೀರ್ಣವನ್ನುಳ್ಳ ಪ್ರತಿಯೊಂದು ಹಿಡುವಳಿಯನ್ನು ಪ್ರತ್ಯೇಕವಾಗಿ ಅಳೆಯತಕ್ಕದ್ದು, ವರ್ಗೀಕರಿಸತಕ್ಕದ್ದು, ಕರನಿರ್ಧಾರಣೆ ಮಾಡತಕ್ಕದ್ದು ಮತ್ತು ಮೇರೆ ಗುರುತುಗಳಿಂದ ನಿರ್ದಿಷ್ಟಪಡಿಸತಕ್ಕದ್ದು ಮತ್ತು ಭೂದಾಖಲೆಗಳಲ್ಲಿ ಅದನ್ನು ಒಂದು ಸರ್ವೇ ನಂಬರಾಗಿ ನಮೂದಿಸತಕ್ಕದ್ದು.
(ii) ಯಾವ ಹಿಡುವಳಿಯ ವಿಸ್ತೀರ್ಣವು ಗೊತ್ತು ಮಾಡಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆಯಿದೆಯೋ ಅಂಥ ಪ್ರತಿಒಂದು ಹಿಡುವಳಿಯನ್ನು ಪ್ರತ್ಯೇಕವಾಗಿ ಅಳೆಯತಕ್ಕದ್ದು ಮತ್ತು ಕರನಿರ್ಧಾರಣೆ ಮಾಡತಕ್ಕದ್ದು ಮತ್ತು ಈ ಮುಂದೆ ಉಲ್ಲೇಖಿಸಿರುವ ನಿಯಮಗಳ ಉಪಬಂಧಕ್ಕನುಸಾರವಾಗಿ ಯಾವ ಸರ್ವೇ ನಂಬರಿನಲ್ಲಿ ಅಡಕವಾಗಬೇಕೆಂದು ನಿರ್ದೇಶಿಸಲಾಗಿದೆಯೋ ಆ ಸರ್ವೇ ನಂಬರನ್ನು ಒಂದು ಉಪವಿಭಾಗವಾಗಿ ಭೂದಾಖಲೆಗಳಲ್ಲಿ ನಮೂದಿಸತಕ್ಕದ್ದು.