(1) ಯಾವುದೇ ಪ್ರದೇಶದಲ್ಲಿ ಹಕ್ಕು ದಾಖಲೆಯ ಕೆಲಸವನ್ನು ಈ ಕೆಳಕಂಡ 4 ಹಂತಗಳಾಗಿ ಸಾಮಾನ್ಯವಾಗಿ ವಿಭಾಗಿಸತಕ್ಕದ್ದು, ಅಂದರೆ:-
(ಎ) ಮೊದಲನೆಯ ಹಂತ.-
(i) ಪರೀಕ್ಷಿಸುವುದು ಮತ್ತು ತಾಳೆ ನೋಡುವುದು
(ii) ತಕರಾರುಗಳ ತೀರ್ಮಾನ, ಮತ್ತು
(iii) ಅಪೀಲುಗಳ ವಿಚಾರಣೆ ಮತ್ತು ಇತ್ಯರ್ಥ ಇವುಗಳನ್ನು ಒಳಗೊಂಡು ಪ್ರಾರಂಭಿಕ ದಾಖಲೆಗಳನ್ನು ತಯಾರಿಸುವುದು.
(ಬಿ) ಎರಡನೆಯ ಹಂತ:- ಅಳತೆಯ ನಕಾಶೆಯನ್ನು ತಯಾರಿಸುವುದು ಮತ್ತು ಪೋಡುಗಳ ಕಂದಾಯದ ಹಂಚಿಕೆ.
(ಸಿ) ಮೂರನೆಯ ಹಂತ:- ಆಖೈರು ಹಕ್ಕು ದಾಖಲೆಗಳ ತಯಾರಿಕೆ, ಮತ್ತು
(ಡಿ) ನಾಲ್ಕನೆಯ ಹಂತ:-
(i) ಬದಲಾವಣೆಗಳನ್ನು ದಾಖಲು ಮಾಡುವುದು
(ii) ಬದಲಾವಣೆಯ ರಿಜಿಸ್ಟರಿನಲ್ಲಿರುವ ನಮೂದನೆಗಳ ಪರೀಕ್ಷೆ ಮತ್ತು ಪ್ರಮಾಣೀಕರಣ;
(iii) ತಕರಾರು ತೀರ್ಮಾನ;
(iv) ಅಪೀಲುಗಳ ವಿಚಾರಣೆ ಮತ್ತು ಇತ್ಯರ್ಥ;
(v) ಹೊಸ ಹಿಸ್ಸೆಗಳ ಅಳತೆ ಮತ್ತು ಮೋಜಣಿಯ ಫಲಿತಾಂಶವನ್ನು ಹಕ್ಕು ದಾಖಲೆಯಲ್ಲಿ ಸೇರಿಸುವುದು.
-ಇವುಗಳನ್ನು ಒಳಗೊಂಡ ಹಕ್ಕು ದಾಖಲೆಯನ್ನು ತರುವಾಯದಲ್ಲಿ ಇಟ್ಟುಕೊಂಡು ಬರುವುದು.
(2) ಹಕ್ಕು ದಾಖಲೆಯ ಕೆಲಸದ ಮೊದಲನೇ ಮತ್ತು ನಾಲ್ಕನೇ ಹಂತಗಳ ಕೆಲಸವನ್ನು ರೆವಿನ್ಯೂಇಲಾಖೆಯು ನೋಡಿಕೊಳ್ಳತಕ್ಕದ್ದು ಮತ್ತು ಸದರಿ ಕೆಲಸದ ಎರಡು ಮತ್ತು ಮೂರನೇ ಹಂತಗಳ ಕೆಲಸವನ್ನು ಭೂ ದಾಖಲೆಗಳ ಇಲಾಖೆಯು ನೋಡಿಕೊಳ್ಳತಕ್ಕದ್ದು.