ನಮೂನೆ - 46
(150ಕ ನಿಯಮವನ್ನು ನೋಡಿ)
22(2)ನೇ ಪ್ರಕರಣದ ಮೇರೆಗೆ ಹೊರಡಿಸಬೇಕಾದ ವಾರಂಟಿನ ನಮೂನೆ .............................. ಸಿವಿಲ್ ನ್ಯಾಯಾಲಯದ ಆಡಳಿತವನ್ನು ಹೊಂದಿರುವ ಅಧಿಕಾರಿ ....................................... ನ.ಕ.ಖ.ನು. ..........................ನೇ 19................. ರಂದು 22ನೇ ಪ್ರಕರಣದ (2)ನೇ ಉಪಪ್ರಕರಣದಿಂದ ಆದೇಶಿತನಾಗಿರುವುದರಿಂದ (ಇಲ್ಲಿ 22ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಹೊರಡಿಸಿದ ಆದೇಶದ ಸಾರಾಂಶವನ್ನು ನಿರೂಪಿಸಿ);
ಸದರಿ ಕ, ಖ, ನು ಸದರಿ ಆದೇಶವನ್ನು ಪಾಲಿಸಲು ನಿರ್ಲಕ್ಷಿಸಿರುವುದರಿಂದ, ಅಥವಾ ಮೇಲೆ ಹೇಳಿದ ತಗಾದೆಗನುಸಾರವಾಗಿ ನಡೆಯದಿರುವುದಕ್ಕೆ ಸಾಕಷ್ಟು ಕಾರಣವನ್ನು ಕೊಡಲು ತಪ್ಪಿರುವುದರಿಂದ; ಮತ್ತು ....................................................ನನ್ನು ದಸ್ತಗಿರಿ ಮಾಡಿರುವುದರಿಂದ.
ಈಗ 22ನೇ ಪ್ರಕರಣದ (2)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ನೀವು ಸದರಿ ಕ, ಖ, ನನ್ನು ಸಿವಿಲ್ ಸೆರೆಮನೆಯಲ್ಲಿ ಇಡಬೇಕೆಂದು ಮತ್ತು ..................................... ಅವಧಿಯವರೆಗೆ (ಇಲ್ಲಿ 90 ದಿನಗಳಿಗೆ ಮೀರದ ಅವಧಿಯನ್ನು ನಿರ್ದಿಷ್ಟಪಡಿಸಿ) ಅಥವಾ ಅವನು ಹಣವನ್ನು ತೀರಿಸುವವರೆಗೆ ಅಥವಾ ಅವನಿಂದ ಕೇಳಲಾದ ಕಾಗದ ಪತ್ರಗಳನ್ನು ಅಥವಾ ಸ್ವತ್ತನ್ನು ಅವನು ಒಪ್ಪಿಸುವವರೆಗೆ ಅವನನ್ನು ಬಂಧನದಲ್ಲಿಡತಕ್ಕದ್ದು.
ಇದನ್ನು ನನ್ನ ಸಹಿ ಮತ್ತು ಮೊಹರಿನೊಡನೆ ....................... 19 ................... ರಂದು ಕೊಡಲಾಗಿದೆ.
ಸ್ಗಳ; ಥಿ ದಿನಾಂಕ:
ಸ್ಥಳ: (ಸಹಿ) ............................. ದಿನಾಂಕ: (ಡೆಪ್ಯುಟಿ ಕಮೀಷನರು/ಭೂ ದಾಖಲೆಗಳ ಡೆಪ್ಯುಟಿ ಕಮೀಷನರು/ ಕಂದಾಯ ವ್ಯವಸ್ಥೆಯ ಡೆಪ್ಯುಟಿ ಕಮೀಷನರು)
ಮೊಹರು
ರೆವೆನ್ಯೂ ಸಚಿವಾಲಯ
ಅಧಿಸೂಚನೆ
ಬೆಂಗಳೂರು, ದಿನಾಂಕ: 3ನೇ ನವೆಂಬರ್, 1969
ಜಿ.ಎಸ್.ಆರ್. 365.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12) 197ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸಿದೆ. ಅವುಗಳ ಕರಡನ್ನು ಸದರಿ ಅಧಿನಿಯಮದ 197ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಅಗತ್ಯಪಡಿಸಿರುವಂತೆ 1969ರ ಜೂನ್ 12ನೇ ದಿನಾಂಕದ ಕರ್ನಾಟಕ ಗೆಜೆಟ್ಟಿನಲ್ಲಿ 1969ರ ಜೂನ್ 3ನೇ ದಿನಾಂಕದ ಜಿ.ಎಸ್.ಆರ್. 204ನೇ ಅಧಿಸೂಚನೆಯಾಗಿ ಪ್ರಕಟಿಸಲಾಗಿದೆ.
ಕರ್ನಾಟಕ ಭೂಮಂಜೂರಾತಿ ನಿಯಮಗಳು, 1969
ನಿಯಮಗಳ ಅನುಕ್ರಮಣಿಗೆ
-
ಹೆಸರು ಮತ್ತು ಪ್ರಾರಂಭ
-
ಪರಿಭಾಷೆಗಳು
-
ವಿಲೆಗೆ ದೊರೆಯಬಹುದಾದ ಭೂಮಿಗಳ ಪಟ್ಟಿಯ ತಯಾರಿಕೆ ಮತ್ತು ಪ್ರಕಟಣೆ
-
ಬೇಸಾಯದ ಉದ್ದೇಶಗಳಿಗಾಗಿ ಭೂಮಿಯ ಮಂಜೂರಾತಿಗೆ ಅರ್ಹರಾದ ವ್ಯಕ್ತಿಗಳು
-
ಭೂಮಿಯ ಮೀಸಲಾತಿ
-
ಆದ್ಯತಾ ಕ್ರಮ
-
ಭೂಮಿಯನ್ನು ಮಂಜೂರು ಮಾಡಲು ರೆವೆನ್ಯೂ ಅಧಿಕಾರಿಗಳಿಗಿರುವ ಅಧಿಕಾರಗಳು
-
ಬೇಸಾಯದ ಉದ್ದೇಶಗಳಿಗಾಗಿ ಭೂಮಿಯನ್ನು ಮಂಜೂರು ಮಾಡಲು ಅನುಸರಿಸಬೇಕಾದ ಕ್ರಮ
-
ಮಂಜುರಾತಿಯ ಷರತ್ತುಗಳು
-
ಕೆಲವು ಸಂದರ್ಭಗಳಲ್ಲಿ ಭೂಮಿಯ ವಿಲೆಯ ಮೇಲೆ ನಿರ್ಬಂಧ
-
ಮಂಜೂರು ಮಾಡಲಾದ ಭೂಮಿಗಳಲ್ಲಿರುವ ಮರಗಳ ವಿಲೆ
-
ಈ ನಿಯಮಗಳ ಮೇರೆಗೆ ಮಂಜೂರಾದ ಭೂಮಿಯ ಬಗ್ಗೆ ಸಂದಾಯ ಮಾಡಬೇಕಾದ ಬೆಲೆ
-
ಈಗಾಗಲೇ ಕಂದಾಯ ನಿರ್ಧರಣೆಯಾಗಿರದ ಭೂಮಿಯನ್ನು ವಿಲೆ ಮಾಡುವುದಕ್ಕೆ ಮೊದಲು ಅದರ ಕಂದಾಯವನ್ನು ನಿರ್ಧರಿಸತಕ್ಕದ್ದು.
-
ಚೌಳು ಭೂಮಿಯನ್ನು ಬೇಸಾಯ ಯೋಗ್ಯವನ್ನಾಗಿ ಮಾಡುವುದಕ್ಕಾಗಿ ಮಂಜೂರು ಮಾಡುವುದು.
-
ಕರಾವಳಿಯ ಹತ್ತಿರದ ಭೂಮಿಗಳ ಮಂಜೂರಾತಿ
-
ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸಲು ಭೂಮಿಯನ್ನು ಮಂಜೂರು ಮಾಡುವುದು
-
ಗೇರುಬೀಜ ಬೇಸಾಯಕ್ಕೆ ಭೂಮಿಯ ಮಂಜೂರಾತಿ 17-ಕ. ಬೇಸಾಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಮಂಜೂರು ಮಾಡುವ ಕ್ರಮ
-
ಕಟ್ಟಡ ನಿವೇಶನಗಳ ಮಂಜೂರಾತಿ
-
ಭೂಮಿಗಳನ್ನು ಗುತ್ತಿಗೆಗೆ ಕೊಡುವುದು
-
ಗೃಹ ನಿರ್ಮಾಣ ಮಂಡಲಿ, ಗ್ರಾಮ ಪಂಚಾಯಿತಿ, ತಾಲ್ಲೂಕು ಅಭಿವೃದ್ಧಿ ಮಂಡಲಿ, ಸಹಕಾರ ಸಂಘಗಳ ಮತ್ತು ಇತರ ಶಾಸನಬದ್ಧ ಮಂಡಲಿಗೆ ಭೂಮಿಯನ್ನು ಮಂಜೂರು ಮಾಡುವುದು.
-
ಮತೀಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಭೂಮಿಯ ಮಂಜೂರಾತಿ
-
ಕೈಗಾರಿಕಾ ಸಂಸ್ಥೆಗಳಿಗೆ ಭೂಮಿಯ ಮಂಜೂರಾತಿ
-
ಭೂಮಿಯನ್ನು ಹಂಗಾಮಿಯಾಗಿ ಗುತ್ತಿಗೆಗೆ ಪಡೆದುಕೊಂಡಿರುವ ವ್ಯಕ್ತಿಗಳಿಗೆ ಭೂಮಿಯನ್ನು ಖಾಯಂಗೊಳಿಸುವುದು
-
ಸಮಾಲೊಚನಾ ಸಮಿತಿಗಳ ರಚನೆ
-
ಮಂಜೂರಾತಿಯ ರದ್ದಿಯಾತಿ
-
ಭೂಮಂಜೂರಾತಿಯು ವಿವೇಚನಾತ್ಮಕವಾಗಿರುವುದು
-
ರಾಜ್ಯ ಸರ್ಕಾರದ ಅಧಿಕಾರಿಗಳು
-
ಭೂ ಮಂಜೂರಾತಿ ಪಡೆದವರು ಒಪ್ಪಂದ ಪತ್ರವನ್ನು ಬರೆದುಕೊಡತಕ್ಕದ್ದು. 28-ಕ ಬಿಟ್ಟು ಕೊಟ್ಟಿರುವ ಭೂಮಿಗೆ ಬದಲಾಗಿ ಭೂಮಿಯ ಮಂಜೂರಾತಿ
-
ಅನುಮತಿ ಪತ್ರದ ನಮೂನೆ
-
ನಿರಸನ ಮತ್ತು ಉಳಿಸುವಿಕೆಗಳು
-
ನಿರಸಿತ ನಿಯಮಗಳು ಕೆಲವು ಅಡಮಾನಗಳಿಗೆ ಅನ್ವಯಿತಕ್ಕದ್ದು.