ನಮೂನೆ-Iii
(4ನೇ ನಿಯಮವನ್ನು ನೋಡಿ)
...................................ಗ್ರಾಮದ ಶ್ರೀ/ಶ್ರೀಮತಿ ...................................................................... ಇವರು ತನ್ನ ಅರ್ಜಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಯನ್ನು ಮಂಜೂರು ಮಾಡಬೇಕೆಂದು ಸಲ್ಲಿಸಿದ ಅರ್ಜಿಯ ಸಂಬಂಧದಲ್ಲಿ, ಸದರಿ ಭೂಮಿಯನ್ನು ಅಥವಾ/ಅಂಥ ಭೂಮಿಯ .............................. ವಿಸ್ತೀರ್ಣದಷ್ಟನ್ನು ಮಂಜೂರು ಮಾಡಲು ಉದ್ದೇಶಿಸಲಾಗಿದೆಯೆಂದು ಈ ಮೂಲಕ ಅವರಿಗೆ ತಿಳಿಸಲಾಗಿದೆ.
(ಈ ನೋಟೀಸನ್ನು ಕೊಟ್ಟ ದಿನಾಂಕದಿಂದ ಹದಿನೈದು ದಿನಗಳಿಗೆ ಕಡಿಮೆಯಿಲ್ಲದಂತೆ) ................................................................. ದಿನಗಳೊಳಗೆ ಅವನು/ಅವಳು ಈ ಮಂಜೂರಾತಿಯನ್ನು ಅಂಗೀಕರಿಸುವ ಬಗ್ಗೆ ತನ್ನ ಒಪ್ಪಿಗೆಯನ್ನು ಈ ಕೆಳಗೆ ಸಹಿ ಮಾಡಿರುವವರಿಗೆ ತಿಳಿಸತಕ್ಕದ್ದು. ಮತ್ತು ಅವನು/ಅವಳು ಈ ಮಂಜೂರಾತಿಯನ್ನು ಅಂಗೀಕರಿಸಲು ಒಪ್ಪಿದರೆ ಈ ನೋಟೀಸನ್ನು ಕೊಟ್ಟ ದಿನಾಂಕದಿಂದ .............................................. ರೊಳಗೆ ತಾಲ್ಲೂಕಿನ ತಹಸೀಲ್ದಾರನ ಕಛೇರಿಯಲ್ಲಿ ........................................... ರೂ.ಗಳ (ಮೊಬಲಗು ಆಕ್ಷರಗಳಲ್ಲಿ) ಮೊಬಲಗನ್ನು ಜಮೆ ಮಾಡತಕ್ಕದ್ದು. ಮೊಬಲಗನು ಜಮೆ ಮಾಡಿದ ಬಗ್ಗೆ ಚಲನನ್ನು, ಹಾಗೆ ಜಮೆ ಮಾಡಿದ ದಿನಾಂಕದಿಂದ ಒಂದು ವಾರದೊಳಗ ಈ ಕೆಳಗೆ ಸಹಿ ಮಾಡಿರುವವರಿಗೆ ಕಳುಹಿಸತಕ್ಕದ್ದು.
ಸ್ಥಳ: .................................
QDDOT! ಟೂಟಿ
ಡೆಪ್ಯುಟಿ ಕಮೀಷನರು
ದಿನಾಂಕ: ........................................ ಡೆಪ್ಯುಟಿ ಕಮೀಷನರು
ಕರ್ನಾಟಕ ಸಾಮಾನ್ಯ ಸೇವೆಗಳು (ರೆವೆನ್ಯೂ ಅಧೀನ ವಿಭಾಗ) ಗ್ರಾಮ ಲೆಕ್ಕಿಗರ (ಸೇವಾಭರ್ತಿ) ನಿಯಮಗಳು, 1970.
-
ಹೆಸರು ಮತ್ತು ಪ್ರಾರಂಭ
-
ಗ್ರಾಮ ಲೆಕ್ಕಿಗರ ಉದ್ಯೋಗಿ ಸಂವರ್ಗ
-
ನೇಮಕಾಧಿಕಾರಿ
-
ಸೇವಾಭರ್ತಿ
-
ಆಯ್ಕೆ ಸಮಿತಿ
-
ಅರ್ಹತಾ ಪರಿವೀಕ್ಷಣೆ
-
ತರಬೇತಿ
-
ಗ್ರಾಮ ಲೆಕ್ಕಿಗರು ಬರದುಕೊಡಬೇಕಾದ ಬಂಧಪತ್ರ
8ಕ. ಪಂಚಾಯಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಹೊಣೆಗಾರಿಕೆ
-
ಸಾಮಾನ್ಯ ಸೇವಾಭರ್ತಿಯ ನಿಯಮಗಳ ಅನ್ವಯ
-
ಇತರ ನಿಯಮಗಳ ಅನ್ವಯ
-
ನಿರಸನ ಮತ್ತು ಉಳಿಸುವಿಕೆಗಳು
ರೆವೆನ್ಯೂ ಸಚಿವಾಲಯ
ಅಧಿಸೂಚನೆ
ಬೆಂಗಳೂರು, ದಿನಾಂಕ: 25ನೇ ಮಾರ್ಚ್, 1970
ಜಿ.ಎಸ್.ಆರ್. 133.- ಕರ್ನಾಟಕ ಭೂಕಂದಾಯ ಅಧಿನಿಯಮದ 1964ರ 16 ಮತ್ತು 197ನೇ ಪ್ರಕರಣಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಕೆಳಕಂಡ ನಿಯಮಗಳನ್ನು ರಚಿಸುತ್ತದೆ. ಅದರ ಕರಡನ್ನು 1970ರ ಮಾರ್ಚ್ 5ನೇ ದಿನಾಂಕದ ಕರ್ನಾಟಕ ಗೆಜೆಟ್ಟಿನ ಭಾಗ 4 ಪ್ರಕರಣದ 2(i)ರಲ್ಲಿ ಫೆಬ್ರವರಿ 24ನೇ ದಿನಾಂಕದ ಜಿ.ಎಸ್.ಆರ್. 70 ಆರ್ಡಿ 173 ಎಂ.ಸಿ.ಎಸ್ (68)ನೇ ಕ್ರಮಾಂಕದ ಅಧಿಸೂಚನೆಯಲ್ಲಿ ಸದರಿ 197ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಅಗತ್ಯಪಡಿಸಿದಂತೆ ಈ ಮೊದಲೇ ಪ್ರಕಟಿಸಲಾಗಿದೆ.
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸಾಮಾನ್ಯ ಸೇವೆಗಳು (ರೆವೆನ್ಯೂ ಅಧೀನ ವಿಭಾಗ) ಗ್ರಾಮ ಲೆಕ್ಕಿಗರ (ಸೇವಾ ಭರ್ತಿ) ನಿಯಮಗಳು, 1970 ಎಂದು ಕರೆಯತಕ್ಕದ್ದು.
(2) ಅವು ಕರ್ನಾಟಕ ಗೆಜೆಟ್ಟಿನಲ್ಲಿ ಅವುಗಳು ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
-
ಗ್ರಾಮ ಲೆಕ್ಕಿಗರ ಉದ್ಯೋಗಿ ಸಂವರ್ಗ.- ಗ್ರಾಮ ಲೆಕ್ಕಿಗರ ಉದ್ಯೋಗಿ ಸಂವರ್ಗವು ಜಿಲ್ಲಾವಾರು ಉದ್ಯೋಗಿ ಸಂವರ್ಗವಾಗಿರತಕ್ಕದ್ದು ಮತ್ತು ವೇತನ ಶ್ರೇಣಿಯು ರಾಜ್ಯ ಸರ್ಕಾರವು ನಿಗದಿ ಮಾಡಬಹುದಾದಂತೆ ಇರತಕ್ಕದ್ದು.
-
ನೇಮಕಾಧಿಕಾರಿ.- ಗ್ರಾಮ ಲೆಕ್ಕಿಗನ ಸಂಬಂಧದಲ್ಲಿ ಜಿಲ್ಲೆಯ ಡೆಪ್ಯುಟಿ ಕಮೀಷನರು ನೇಮಕಾಧಿ ಕಾರಿಯಾಗಿರತಕ್ಕದ್ದು.
-
ಸೇವಾಭರ್ತಿ.- ಗ್ರಾಮ ಲೆಕ್ಕಿಗರ ಉದ್ಯೋಗಿ ಸೇವಾ ಭರ್ತಿಯನ್ನು, ಈ ಕೆಳಕಂಡವರೊಳಗಿಂದ ನೇರ ಸೇವಾ ಭರ್ತಿಯ ಮೂಲಕ ಮಾಡತಕ್ಕದ್ದು:-
(i) ಗ್ರಾಮಾಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ವ್ಯಕ್ತಿಗಳು;
(iಕ) (i)ನೇ ಬಾಬಿನಲ್ಲಿ ಸೂಚಿಸಿರುವವರಲ್ಲಿ ಸಾಕಷ್ಟು ಸಂಖ್ಯೆಯ ಅರ್ಹ ವ್ಯಕ್ತಿಗಳು ಸಿಗದಿದ್ದರೆ, 1970ರ ಜನವರಿ 1ರಂದು ಒಟ್ಟು ಒಂದು ವರ್ಷಕ್ಕಿಂತ ಕಡಿಮೆಯಿಲ್ಲದೆ ಸೇವೆ ಸಲ್ಲಿಸಿರುವ ಸ್ಥಳೀಯ ಅಭ್ಯರ್ಥಿಗಳು, ಅವರು ಸೇವೆಯಲ್ಲಿರಲಿ ಅಥವಾ ಇಲ್ಲದಿರಲಿ;
(ii) (iಕ) ಬಾಬಿನಲ್ಲಿ ಸೂಚಿಸಿರುವವರಲ್ಲಿ ಸಾಕಷ್ಟು ಸಂಖ್ಯೆಯ ಅರ್ಹ ವ್ಯಕ್ತಿಗಳು ಸಿಗದಿದ್ದರೆ ಸೇವಾ ಭರ್ತಿ ಕಾಲದಲ್ಲಿ ಜಾರಿಯಲ್ಲಿದ ನಿಯಮಗಳಿಗನುಸಾರವಾಗಿ ಪಂಚಾಯಿತಿ ಕಾರ್ಯದರ್ಶಿಗಳಾಗಿ ಕ್ರಮಬದ್ಧವಾಗಿ ಸೇವೆಗೆ ಭರ್ತಿಮಾಡಲಾಗಿರುವ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆ ಅಥವಾ ಅದಕ್ಕೆ ಸಮಾನವಾದುದೆಂದು ರಾಜ್ಯ ಸರ್ಕಾರದಿಂದ ಘೋಷಿತವಾದ ಇತರ ಯಾವುದೇ ಪರೀಕ್ಷೆಯಲ್ಲಿ ತೇರ್ಗಡೆಯಾದ ವ್ಯಕ್ತಿಗಳು;
(iii) ಸೇವಾ ಭರ್ತಿಯ ಕಾಲದಲ್ಲಿ ಜಾರಿಯಲ್ಲಿದ್ದ ನಿಯಮಗಳಿಗನುಸಾರವಾಗಿ ಪಂಚಾಯಿತಿ ಕಾರ್ಯದರ್ಶಿಗಳಾಗಿ ಕ್ರಮಬದ್ಧವಾಗಿ ಸೇವೆಗೆ ಭರ್ತಿ ಮಾಡಲಾಗಿರುವ ವ್ಯಕ್ತಿಗಳು; ಮತ್ತು
(ii)ನೇ ಬಾಬಿನಲ್ಲಿ ಸೂಚಿತವಾದವರಲ್ಲಿ ಸಾಕಷ್ಟು ಸಂಖ್ಯೆಯ ಅರ್ಹ ವ್ಯಕ್ತಿಗಳು ಸಿಗದಿದ್ದರೆ;
(ಕ) ಸಂದರ್ಭಾನುಸಾರವಾಗಿ, ಮಾಧ್ಯಮಿಕ ಶಾಲೆಯ ಪರೀಕ್ಷೆಯಲ್ಲಿ ಅಥವಾ ಸಮನಾದುದೆಂದು ರಾಜ್ಯ ಸರ್ಕಾರದಿಂದ ಘೋಷಿತವಾದ ಇತರ ಯಾವುದೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವ್ಯಕ್ತಿಗಳು; ಮತ್ತು
(ಖ) ಪಂಚಾಯಿತಿ ಕಾರ್ಯದರ್ಶಿಗಳಾಗಿ 10 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರುವ ವ್ಯಕ್ತಿಗಳು; ಮತ್ತು
(ಗ) 1967ರ ಏಪ್ರಿಲ್ ಒಂದರಂದು 50 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರದ ವ್ಯಕ್ತಿಗಳು;
(v) ಮೇಲಿನ ಯಾವುವೇ ವರ್ಗಗಳಲ್ಲಿ ಸಾಕಷ್ಟು ಸಂಖ್ಯೆಯ ವ್ಯಕ್ತಿಗಳು ಸಿಗದಿದ್ದರೆ; ಇತರ ವ್ಯಕ್ತಿಗಳು
ಪಂಚಾಯಿತಿ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು.
(2) (1)ನೇ ಉಪನಿಯಮದ (ii) ಮತ್ತು (iii)ನೇ ವರ್ಗಗಳಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳ ಹೊರತು, ಇತರ ಯಾವನೇ ವ್ಯಕ್ತಿಯು, ಅವನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಥವಾ ಅದಕ್ಕೆ ಸಮಾನವಾದುದೆಂದು ರಾಜ್ಯ ಸರ್ಕಾರದಿಂದ ಘೋಷಿತವಾದ ಯಾವುದೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಹೊರತು, ಈ ನಿಯಮಗಳ ಮೇರೆಗೆ ನೇಮಕಗೊಳ್ಳಲು ಅರ್ಹನಾಗಿರತಕ್ಕದ್ದಲ್ಲ.
(3) (1)ನೇ ಉಪನಿಯಮದ ಮೇರೆಗೆ ನೇಮಕದ ಬಗ್ಗೆ ವಯೋಮಿತಿಯು, 1970ರ ಜನವರಿ 1ನೇ ದಿನಾಂಕದಂದು, ಕೆಳಕಂಡಂತೆ ಇರತಕ್ಕದ್ದು:-
(i) ಯಾವುದೇ ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟಿನ ವ್ಯಕ್ತಿಯಾಗಿದ್ದ ಸಂದರ್ಭದಲ್ಲಿ, 33 ವರ್ಷಗಳು;
(ii) ಇತರರ ಸಂದರ್ಭದಲ್ಲಿ 28 ವರ್ಷಗಳು;
ಪರಂತು, ಗ್ರಾಮಾಧಿಕಾರಿಯಾಗಿ ಅಥವಾ ಪಂಚಾಯಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ವ್ಯಕ್ತಿಯ ಸಂದರ್ಭದಲ್ಲಿ, ಅಂತಹ ವಯಸ್ಸು, 1967ನೇ ಏಪ್ರಿಲ್ 1ರಂದು ಇದ್ದಂತೆ ಇರತಕ್ಕದ್ದು.
ಮತ್ತೂ ಪರಂತು, ಸ್ಥಳೀಯ ಅಭ್ಯರ್ಥಿಗಳ ಸಂದರ್ಭದಲ್ಲಿ ಅಂಥ ವಯಸ್ಸು, 1965ರ ಜನವರಿ 1ರಂದು ಇದ್ದಂತೆ ಇರತಕ್ಕದ್ದು.-
ವಿವರಣೆ: ಈ ನಿಯಮದ ಉದ್ದೇಶಕ್ಕಾಗಿ, ‘ಗ್ರಾಮಾಧಿಕಾರಿ’ ಎಂದರೆ ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ ಅಧಿನಿಯಮ, 1961 ಕರ್ನಾಟಕ ಅಧಿನಿಯಮ (1961ರ 14)ರಲ್ಲಿ ಪರಿಭಾಷಿಸಿರುವಂತೆ ಕಡಿಮೆ ದರ್ಜೆಯ ಗ್ರಾಮ ಹುದ್ದೆಯಲ್ಲದ ಹೊರತು, ಇತರ “ಗ್ರಾಮ ಹುದ್ದೆ” ಯಲ್ಲಿ ಇರುವ ಒಬ್ಬ ವ್ಯಕ್ತಿ.
- ಆಯ್ಕೆ ಸಮಿತಿ.- (1) ಪ್ರತಿಯೊಂದು ಜಿಲ್ಲೆಗೂ ಆ ಜಿಲ್ಲೆಯ ಡೆಪ್ಯುಟಿ ಕಮೀಷನರು, ಉಪವಿಭಾಗ ಕೇಂದ್ರ ಸ್ಥಳದ ಆಡಳಿತವನ್ನು ಹೊಂದಿರುವ ಅಸಿಸ್ಟೆಂಟ್ ಕಮೀಷನರು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ-ಇವರನ್ನೊಳಗೊಂಡ ಒಂದು ಸಮಿತಿಯು ಇರತಕ್ಕದ್ದು. ಡೆಪ್ಯುಟಿ ಕಮೀಷನರು ಸಮಿತಿಯ ಅಧ್ಯಕ್ಷರಾಗಿರತಕ್ಕದ್ದು ಮತ್ತು ಆ ಸದಸ್ಯರ ಪೈಕಿ ಅವನು ನೇಮಕ ಮಾಡಿದ ಒಬ್ಬ ಸದಸ್ಯನು ಕಾರ್ಯದರ್ಶಿಯಾಗಿರ ತಕ್ಕದ್ದು.
(2) ಸಮಿತಿಯು ಗ್ರಾಮ ಲೆಕ್ಕಿಗರ ನೇಮಕಕ್ಕಾಗಿ ಅರ್ಜಿಗಳನ್ನು ಕರೆಯತಕ್ಕದ್ದು ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಸಿವಿಲ್ ಸೇವೆಗಳ ನಿಯಮ, 1969ರಲ್ಲಿ (ಆಯ್ಕೆಯ ಮೂಲಕ ನೇರ ಸೇವಾ ಭರ್ತಿ) ಸೂಚಿಸಿರುವ ರೀತಿಯಲ್ಲಿ ಆಯ್ಕೆ ಮಾಡತಕ್ಕದ್ದು.
(3) ಡಿವಿಜನಲ್ ಕಮೀಷನರ ಅನುಮೋದನೆಗೊಳಪಟ್ಟು ಸಮಿತಿಯ ತೀರ್ಮಾನವು ಅಂತಿಮವಾಗಿರತಕ್ಕದ್ದು.
(4) ಡಿವಿಜನಲ್ ಕಮೀಷನರು ಅನುಮೋದಿಸಿದ ಪಟ್ಟಿಯನ್ನು ಪ್ರಕಟಿಸತಕ್ಕದ್ದು ಮತ್ತು ಆಯ್ಕೆಯಾದ ವ್ಯಕ್ತಿಗಳ ಹೆಸರುಗಳು ಸದರಿ ಪಟ್ಟಿಯಲ್ಲಿರುವ ಕ್ರಮದಲ್ಲಿ ನೇಮಕ ಮಾಡತಕ್ಕದ್ದು.
-
ಅರ್ಹತಾ ಪರಿವೀಕ್ಷಣೆ.- ಗ್ರಾಮ ಲೆಕ್ಕಿಗನಾಗಿ ನೇಮಕನಾದ ಪ್ರತಿಯೊಬ್ಬ ವ್ಯಕ್ತಿಯು 2 ವರ್ಷಗಳ ಅವಧಿಯವರೆಗೆ ಅರ್ಹತಾ ಪರಿವೀಕ್ಷಣೆಯಲ್ಲಿರತಕ್ಕದ್ದು ಮತ್ತು ಪರಿವೀಕ್ಷಣೆಯ ಅವಧಿಯಲ್ಲಿ, ಕನ್ನಡ ಭಾಷಾ ಪರೀಕ್ಷೆಯನ್ನು ಮತ್ತು ಲೆಕ್ಕ ಪತ್ರ (ಕೆಳ ದರ್ಜೆ) ಮತ್ತು ರೆವೆನ್ಯೂ (ಕೆಳ ದರ್ಜೆ) ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗತಕ್ಕದ್ದು.
-
ತರಬೇತಿ.- ಗ್ರಾಮ ಲೆಕ್ಕಿಗನಾಗಿ ನೇಮಿತನಾದ ಪ್ರತಿಯೊಬ್ಬ ವ್ಯಕ್ತಿಯು ರಾಜ್ಯ ಸರ್ಕಾರವು ನಿರ್ಧರಿಸಬಹುದಾದಂತೆ ಪರಿವೀಕ್ಷಣೆಯ ಅವಧಿಯಲ್ಲಿ 3 ತಿಂಗಳುಗಳಿಗೆ ಮೀರದ ಅವಧಿಯವರೆಗೆ ತರಬೇತಿಯನ್ನು ಪಡೆಯಬೇಕೆಂದು ಹಾಗೂ ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದು ಅಗತ್ಯಪಡಿಸಬಹುದು.
ಪರಂತು, 11ನೇ ನಿಯಮದ (1)ನೇ ಉಪನಿಯಮದ ಮೇರೆಗೆ ನಿರಸಿತವಾದ ನಿಯಮಗಳಲ್ಲಿ 12ನೇ ನಿಯಮದ ಮೇರೆಗೆ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ವ್ಯಕ್ತಿಗಳು ತರಬೇತಿಯನ್ನು ಪಡೆಯಬೇಕೆಂದು ಅಗತ್ಯಪಡಿಸತಕ್ಕದ್ದಲ್ಲ.
- ಗ್ರಾಮ ಲೆಕ್ಕಿಗರು ಬರೆದುಕೊಡಬೇಕಾದ ಬಂಧಪತ್ರ.- (1) ಗ್ರಾಮ ಲೆಕ್ಕಿಗನಾಗಿ ನೇಮಿತನಾದ ಪ್ರತಿಯೊಬ್ಬ ವ್ಯಕ್ತಿಯೂ, ನಗದು ರೂಪದಲ್ಲಿ ಅಥವಾ ಇತರ ಬೆಲೆಯುಳ್ಳ ಭದ್ರತೆಯ ರೂಪದಲ್ಲಿ 300 ರೂಪಾಯಿಗಳನ್ನು ಒದಗಿಸತಕ್ಕದ್ದು ಅಥವಾ ಸದರಿ ಮೊಬಲಗಿನ ಬಗ್ಗೆ ಜಾಮೀನುದಾರನೊಡನೆ ಜಂಟಿಯಾಗಿ ಒಂದು ಬಂಧಪತ್ರವನ್ನು ಬರೆದುಕೊಡತಕ್ಕದ್ದು.
8ಕ. ಪಂಚಾಯಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಹೊಣೆಗಾರಿಕೆ.- 12,000 ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ವರಮಾನವಿರುವ ಗ್ರಾಮ ಪಂಚಾಯಿತಿಗೆ, ಪ್ರತ್ಯೇಕ ಪಂಚಾಯಿತಿ ಕಾರ್ಯದರ್ಶಿಯನ್ನು ನೇಮಕ ಮಾಡಿರದಿದ್ದರೆ, ಸದರಿ ಪಂಚಾಯತಿಯು ಇರುವ ಗ್ರಾಮದ ಗ್ರಾಮ ಲೆಕ್ಕಿಗನು, ಹಾಗೆ ನೇಮಿತನಾದರೆ, ಸದರಿ ಪಂಚಾಯಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ಇರತಕ್ಕದ್ದು.
ವಿವರಣೆ.- ಈ ಉಪನಿಯಮದಲ್ಲಿ “ಬೆಲೆಯುಳ್ಳ ಭದ್ರತೆ” ಎಂದರೆ, ಅಂಚೆ ಕಛೇರಿ ಉಳಿತಾಯ ಬ್ಯಾಂಕ್ ಠೇವಣಿ, ಸರ್ಕಾರದ ಪ್ರಾಮಿಸರಿ ನೋಟುಗಳು ಅಥವಾ ರಾಷ್ಟ್ರೀಯ ಅಥವಾ ಅಂಚೆ ಕಛೇರಿಯ ಉಳಿತಾಯ ಪ್ರಮಾಣ ಪತ್ರಗಳು.
(2) (1)ನೇ ಉಪನಿಯಮದ ಉಪಬಂಧಗಳನ್ನು ಪಾಲಿಸಲು ತಪ್ಪುವ ವ್ಯಕ್ತಿಗಳನ್ನು ಸೇವೆಯಿಂದ ತೆಗೆದುಹಾಕಲು ಅವಕಾಶವಿರತಕ್ಕದ್ದು.
-
ಸಾಮಾನ್ಯ ಸೇವಾಭರ್ತಿಯ ನಿಯಮಗಳ ಅನ್ವಯ.- ಈ ನಿಯಮಗಳಲ್ಲಿ ಯಾವ ವಿಷಯಗಳ ಬಗ್ಗೆ ಉಪಬಂಧಗಳನ್ನು ಮಾಡಲಾಗಿದೆಯೋ ಅವುಗಳ ಹೊರತು, ಈ ನಿಯಮಗಳ ಮೇರೆಗೆ ಸೇವಾ ಭರ್ತಿಯನ್ನು ಮಾಡುವ ಉದ್ದೇಶಗಳಿಗಾಗಿ ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ಸೇವಾಭರ್ತಿ) ನಿಯಮಗಳು, 1957ರ ಉಪಬಂಧಗಳು ಅನ್ವಯವಾಗತಕ್ಕದ್ದು.
-
ಇತರ ನಿಯಮಗಳ ಅನ್ವಯ.- (1) ಕರ್ನಾಟಕ ಸಿವಿಲ್ ಸೇವೆಗಳ ನಿಯಮಗಳು, ಕರ್ನಾಟಕ ಸಿವಿಲ್ ಸೇವೆಗಳ (ನಡತೆ) ನಿಯಮಗಳು, 1966 ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ನಿಯಮಗಳೂ, ಸಂವಿಧಾನದ 309ನೇ ಅನುಚ್ಛೇದದ ಪರಂತುಕದ ಮೇರೆಗೆ ಮಾಡಬಹುದಾದ ಸರ್ಕಾರಿ ನೌಕರರ ಸೇವಾ
ಷರತ್ತುಗಳನ್ನು ಕಾಲ ಕಾಲಕ್ಕೆ ನಿಯಂತ್ರಿಸುವಂಥ ಇತರ ನಿಯಮಗಳು ಮತ್ತು ತಿದ್ದುಪಡಿಗಳೂ ಸೇರಿ, ಅವು ಈ ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿಲ್ಲದಿರುಷ್ಟರ ಮಟ್ಟಿಗೆ ಈ ನಿಯಮಗಳ ಮೇರೆಗೆ ಸೇವಾಭರ್ತಿ ಮಾಡಲಾದ ವ್ಯಕ್ತಿಗಳಿಗೆ ಅನ್ವಯವಾಗತಕ್ಕದ್ದು.
(2) ಈ ನಿಯಮಗಳ ಮೇರೆಗೆ ಮಾಡಲಾದ ನೇಮಕಗಳು, ಅನುಸೂಚಿತ ಜಾತಿಗಳಿಗೆ, ಅನುಸೂಚಿತ ಪಂಗಡಗಳಿಗೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಹುದ್ದೆಗಳನ್ನು ಮೀಸಲಾಗಿಡುವುದರ ಸಂಬಂಧದಲ್ಲಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶಗಳಿಗೆ ಒಳಪಟ್ಟಿರತಕ್ಕದ್ದು;
ಪರಂತು, ಸದರಿ ಆದೇಶಗಳು 4ನೇ ನಿಯಮದ (1)ನೇ ಉಪನಿಯಮದ (i) (ii), (iii) ಮತ್ತು (iv)ನೇ ಬಾಬುಗಳಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳಲ್ಲಿ ಯಾರನ್ನಾದರೂ ಸೇವಾಭರ್ತಿ ಮಾಡುವುದಕ್ಕೆ ಸದರಿ ಆದೇಶಗಳು, ಅನ್ವಯಿಸತಕ್ಕದ್ದಲ್ಲ.
- ನಿರಸನ ಮತ್ತು ಉಳಿಸುವಿಕೆಗಳು.-
(1) ಕರ್ನಾಟಕ ಸಾಮಾನ್ಯ ಸೇವೆಗಳ (ರೆವೆನ್ಯೂ ಅಧೀನ ವಿಭಾಗ) ಗ್ರಾಮ ಲೆಕ್ಕಿಗರ ಉದ್ಯೋಗಿ ಸಂವರ್ಗ ಮತ್ತು ಸೇವಾಭರ್ತಿ ನಿಯಮಗಳು, 1961 ಈ ಮೂಲಕ ನಿರಸಿತವಾಗಿದೆ.
(2) ಈ ನಿಯಮಗಳಲ್ಲಿ ಏನೇ ಇದ್ದರೂ (1)ನೇ ಉಪನಿಯಮದ ಮೇರೆಗೆ ನಿರಸಿತವಾದ ನಿಯಮಗಳಲ್ಲಿ 11ನೇ ನಿಯಮಕ್ಕನುಸಾರವಾಗಿ ಡಿವಿಜನಲ್ ಕಮೀಷನರಿಂದ ಆಯ್ಕೆಯಾದ ಮತ್ತು ಅನುಮೋದಿತವಾದ ವ್ಯಕ್ತಿಗಳ ಪಟ್ಟಿಯಿಂದ ನೇಮಕವಾಗಿರದ ವ್ಯಕ್ತಿಗಳ ಪಟ್ಟಿಯನ್ನು ನಿಯಮಗಳಲ್ಲಿ, 5ನೇ ನಿಯಮಕ್ಕನುಸಾರವಾಗಿ ಡಿವಿಜನಲ್ ಕಮೀಷನರಿಂದ ಆಯ್ಕೆಯಾದ ಮತ್ತು ಅನುಮೋದಿತರಾದ ವ್ಯಕ್ತಿಗಳ ಪಟ್ಟಿಯೆಂದು ಭಾವಿಸತಕ್ಕದ್ದು ಮತ್ತು ಸದರಿ 5ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿರುವ ರೀತಿಯಲ್ಲಿ ಅಂತಹ ಪಟ್ಟಿಯಿಂದ ನೇಮಕಗಳನ್ನು ಮಾಡತಕ್ಕದ್ದು:
ಪರಂತು, ಸದರಿ ನಿರಸಿತ ನಿಯಮಗಳಲ್ಲಿ 12ನೇ ನಿಯಮದ ಮೇರೆಗೆ ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿರುವ ವ್ಯಕ್ತಿಗಳ ಸಂದರ್ಭದಲ್ಲಿ, ಈ ನಿಯಮಗಳ 7ನೇ ನಿಯಮದ ಮೇರೆಗೆ ತರಬೇತಿಯು ಅವಶ್ಯಕವಾಗಿರತಕ್ಕದ್ದಲ್ಲ;
ಪರಂತು, ಸದರಿ ನಿಯಮಗಳು ಜಾರಿಯಲ್ಲಿದ್ದ ಅವಧಿಯಲ್ಲಿ ಸದರಿ ನಿಯಮಗಳಿಗನುಸಾರವಾಗಿ ನೇಮಿತರಾದ ವ್ಯಕ್ತಿಗಳ ಸಂಬಂಧದಲ್ಲಿ ಸದರಿ ನಿಯಮಗಳ ಪೂರ್ವಾನ್ವಯವನ್ನು ಅಂತಹ ನಿರಸನವು ಬಾಧಿಸತಕ್ಕದ್ದಲ್ಲ.
ಅಧಿಸೂಚನೆ
ಬೆಂಗಳೂರು, ದಿನಾಂಕ: 19ನೇ ಮಾರ್ಚ್, 1964
ಎಸ್.ಓ. 385.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12) 1ನೇ ಪ್ರಕರಣದ (3)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 1964ರ ಏಪ್ರಿಲ್ ಮೊದಲನೆಯ ದಿನಾಂಕವು ಸದರಿ ಅಧಿನಿಯಮವು ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿ ಬರುವ ದಿನಾಂಕವೆಂದು ಈ ಮೂಲಕ ಗೊತ್ತು ಮಾಡಿದೆ.
(ಕ್ರಮಾಂಕ: ಆರ್.ಡಿ. 55 ಎಲ್.ಎ.ಡಿ. 64)