Annexure
ಎನ್.ಜೆ.ಇ. ಬ್ರಿಟ್ಟೊ, ಅಧೀನ ಕಾರ್ಯದರ್ಶಿ.
ಅಧಿಸೂಚನೆ
ಬೆಂಗಳೂರು, ದಿನಾಂಕ: 10ನೇ ಸೆಪ್ಟೆಂಬರ್, 1968
ಎಸ್.ಓ. 1946.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12)ರ 195ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರದವರು ಕೆಳಗಿನ ಅನುಸೂಚಿಯ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಸದರಿ ಅಧಿನಿಯಮದ ಉಪಬಂಧಗಳ ಮೇರೆಗೆ ಡೆಪ್ಯುಟಿ ಕಮೀಷನರನಿಗೆ ಪ್ರದತ್ತವಾದ ಅಧಿಕಾರಗಳನ್ನು ಅದರ (3)ನೇ ಅಂಕಣದಲ್ಲಿ ಸಂವಾದಿ ನಮೂದನೆಯಲ್ಲಿ ನಮೂದಿಸಿದ ನಿರ್ಬಂಧಗಳಿಗೆ ಒಳಪಟ್ಟು ರೆವೆನ್ಯೂ ಉಪವಿಭಾಗಗಳ ಆಡಳಿತವನ್ನು ಹೊಂದಿರುವ ಅಸಿಸ್ಟೆಂಟ್ ಕಮೀಷನರುಗಳಿಗೆ ಈ ಮೂಲಕ ವಹಿಸಿಕೊಡುತ್ತದೆ.