ಭಾರತ ಸಾಕ್ಷ್ಯ ಅಧಿನಿಯಮದ (1872ರ 1ನೇ ಅಧಿನಿಯಮದ) ಅರ್ಥದಲ್ಲಿ ಸಾರ್ವಜನಿಕ ದಸ್ತಾವೇಜಾಗಿರುವ ಪ್ರತಿಯೊಂದು ದಸ್ತಾವೇಜು ಮತ್ತು 193ನೇ ಪ್ರಕರಣದಲ್ಲಿ ಉಲ್ಲೇಖಿತವಾದ ಪ್ರತಿಯೊಂದು ದಾಖಲೆಯು, ಈ ಕೆಳಕಂಡ ಷರತ್ತುಗಳಿಗೆ ಮತ್ತು ಈ ಕೆಳಕಂಡ ಶೋಧನೆಯ ಫೀಜುಗಳಿಗೆ ಒಳಪಟ್ಟು, ಪರಿಶೀಲನೆಗೆ ದೊರಕುವಂತಿರತಕ್ಕದ್ದು.-
(1) ಕನಿಷ್ಟ ರೂ. 1-50ನ್ನು ಮುಂಗಡವಾಗಿ ಸಂದಾಯ ಮಾಡುವ ಷರತ್ತಿಗೆ ಒಳಪಟ್ಟು, ಪ್ರತಿಯೊಬ್ಬ ಅರ್ಜಿದಾರನಿಗೆ ಪ್ರತಿ ಒಂದು ಗಂಟೆಗೆ ಎಪ್ಪತ್ತೈದು ಪೈಸೆ.
(2) ಗ್ರಾಮ ಲೆಕ್ಕಿಗನ ವಶದಲ್ಲಿರುವ ಯಾವುದೇ ದಸ್ತಾವೇಜಿನ ಪರಿಶೀಲನೆಗೆ ಪ್ರತಿ ದಿನಕ್ಕೆ ಗರಿಷ್ಠ ರೂ. 1-50ನ್ನು ಸಂದಾಯ ಮಾಡುವ ಷರತ್ತಿಗೆ ಒಳಪಟ್ಟು ಪ್ರತಿ ಗಂಟೆಗೆ 50 ಪೈಸೆಯ ಫೀಜನ್ನು ವಿಧಿಸತಕ್ಕದ್ದು. ಅಂಥ ಫೀಜನ್ನು ಮುಂಗಡವಾಗಿ ಸಂದಾಯ ಮಾಡತಕ್ಕದ್ದು.
(3) ಅಂಥ ದಸ್ತಾವೇಜುಗಳನ್ನು ಸಾಮಾನ್ಯವಾಗಿ ಇಟ್ಟಿರುವ ಸ್ಥಳದಲ್ಲಿ ಕಛೇರಿಯ ವೇಳೆಯಲ್ಲಿ ದಸ್ತಾವೇಜುಗಳನ್ನು ವಶದಲ್ಲಿಟ್ಟುಕೊಂಡಿರುವ ಅಧಿಕಾರಿಯ ಕಛೇರಿಯಲ್ಲಿ ಅವು ಪರಿಶೀಲನೆಗೆ ದೊರಕುವಂತಿರತಕ್ಕದ್ದು.
(4) (ಕ) ವಿಚಾರಣಾ ವ್ಯವಹರಣೆಗಳನ್ನು ಅಥವಾ ರಿಜಿಸ್ಟ್ರರನ್ನು ಅಥವಾ ನಗರ ಮೋಜಣಿಯ ಸ್ವತ್ತಿನ ರಿಜಿಸ್ಟ್ರರನ್ನು ಪೌರ ಉದ್ದೇಶಗಳಿಗಾಗಿ ನಗರಸಭಾ ನೌಕರನ (ಅವುಗಳನ್ನು ವಶದಲ್ಲಿಟ್ಟುಕೊಂಡಿರುವ ಅಧಿಕಾರಿಯ ಅನುಮತಿಯನ್ನು ಪಡೆದು) ಪರಿಶೀಲಿಸುವುದಕ್ಕೆ;
(ಖ) ವಿಚಾರಣಾ ವ್ಯವಹರಣೆಗಳನ್ನು ಅಥವಾ ರಿಜಿಸ್ಟ್ರರನ್ನು ಅಥವಾ ನಗರ ಮೋಜಣಿಯ ಸ್ವತ್ತಿನ ರಿಜಿಸ್ಟ್ರರನ್ನು ಅಥವಾ ಗ್ರಾಮ ದಾಖಲೆಗಳನ್ನು ಕರ್ನಾಟಕ ಗ್ರಾಮ ಪಂಚಾಯಿತಿಗಳ ಮತ್ತು ಸ್ಥಳೀಯ ಮಂಡಲಿಗಳ ಅಧಿನಿಯಮ, 1959ರ ಮೇರೆಗೆ ಸ್ಥಾಪಿತವಾದ ಪಂಚಾಯತಿಯ ಅಧಿಕಾರಿಯ ಅಂಥ ಪಂಚಾಯತಿಯ ಉದ್ದೇಶಗಳಿಗಾಗಿ (ಅವುಗಳನ್ನು ವಶದಲ್ಲಿಟ್ಟುಕೊಂಡಿರುವ ಅಧಿಕಾರಿಯ ಅನುಮತಿ ಪಡೆದು) ಪರಿಶೀಲಿಸುವುದಕ್ಕೆ
(ಗ) ಸಂಘದ ವ್ಯವಹಾರಕ್ಕಾಗಿ ಯಾವುದೇ ಸಹಕಾರ ಸಂಘದ ಅಧಿಕಾರಿಯು ಅಥವಾ ಸದಸ್ಯನು ಗ್ರಾಮ ದಾಖಲೆಗಳನ್ನು ಪರಿಶೀಲಿಸುವುದಕ್ಕೆ;
- ಯಾವ ಫೀಜನ್ನು ವಿಧಿಸತಕ್ಕದ್ದಲ್ಲ.
- ಉದ್ಧೃತ ಭಾಗಗಳು ಮತ್ತು ಪ್ರತಿಗಳು