ನಮೂನೆ-Iii
(19(5)ನೇ ನಿಯಮವನ್ನು ನೋಡಿ)
ಬೇಸಾಯೋದ್ದೇಶಗಳಿಗಾಗಿ ರಾಜ್ಯದ ಭೂಮಿಯನ್ನು ಹಂಗಾಮಿ ಅಧಿಭೋಗಕ್ಕೆ ಪಡೆಯುವ ಸಂಬಂಧದಲ್ಲಿನ ಗುತ್ತಿಗೆ ಪತ್ರದ ನಮೂನೆ.
ಕರ್ನಾಟಕ ರಾಜ್ಯಪಾಲರು (ಈ ಪದಾವಳಿಯು ಅವರ ಪದದ ಉತ್ತರಾಧಿಕಾರಿಗಳನ್ನು ಮತ್ತು ಅವರಿಂದ ಅಧಿಕಾರ ಪಡೆದವರನ್ನು ಒಳಗೊಳ್ಳತಕ್ಕದ್ದು) ಒಂದು ಪಕ್ಷವಾಗಿ ಮತ್ತು ....................ನಲ್ಲಿ ವಾಸಿಸುವ, ಇದರಲ್ಲಿ ಇನ್ನು ಮಉಂದೆ “ಗುತ್ತಿಗೆಗೆ ಪಡೆದವನು” ಎಂದು ಕರೆಯಲಾಗುವ .........................................ನು (ಈ ಪದಾವಳಿಯು ಅವನ ವಾರಸುದಾರರು, ನಿರ್ವಾಹಕರು, ಆಡಳಿತಗಾರರು, ಕಾನೂನು ಸಮ್ಮತ ಪ್ರತಿನಿಧಿಗಳು ಇವರನ್ನು ಒಳಗೊಳ್ಳತಕ್ಕದ್ದು) ಒಂದು ಸಾವಿರದ ಬಂಭೈನೂರ ...................... ರ ............................................ನೆಯ..................................ರಂದು ಮಾಡಿಕೊಂಡ ಗುತ್ತಿಗೆ ಪತ್ರವು ಈ ಕೆಳಕಂಡಂತಿದೆ:
ಕರ್ನಾಟಕ ರಾಜ್ಯಪಾಲರು ಕೆಳಗಿನ ಅನುಸೂಚಿಯಲ್ಲಿ ವಿವರಿಸಿರುವ ಭೂಮಿಯನ್ನು ಗುತ್ತಿಗೆ ಪಡೆಯುವವನಾದ ..................................................ನು (ಹೆಸರು ಮತ್ತು ವಿಳಾಸ) ಒಪ್ಪಿಕೊಂಡಿರುವ ಕೆಳಕಂಡ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ................................................... ರಿಂದ, (ದಿನಾಂಕ, ತಿಂಗಳು ವರ್ಷ) ಪ್ರಾರಂಭವಗುವ ............................ ವರ್ಷಗಳ/ತಿಂಗಳುಗಳ ಅವಧಿಯವರೆಗೆ ಹಂಗಾಮಿ ಅಧಿಭೋಗಕ್ಕಾಗಿ ಮೇಲೆ ಹೇಳಿದ ಗುತ್ತಿಗೆಗೆ ಪಡೆಯುವವನಿಗೆ ಈ ಮೂಲಕ ಗುತ್ತಿಗೆಗೆ ಕೊಡುತ್ತಾರೆ:-
(1) ಈ ಗುತ್ತಿಗೆಯ ವ್ಯವಹಾರವು ಸ್ಪಷ್ಟವಾಗಿ ಅನ್ಯಾಯಯುತವಾಗಿದೆಯೆಂದು ಅಥವಾ ಸಂಗತಿಯ ತಪ್ಪು ತಿಳಿವಳಿಕೆಯಿಂದ ಅಥವಾ ಸುಳ್ಳು ನಿರೂಪಣೆಯಿಂದ ಅಥವಾ ಮೋಸದಿಂದ ಆಗಿದೆಯೆಂದು ಅಥವಾ ಅದನ್ನು ಮಾಡುವ ವಿಧಾನದಲ್ಲಿ ಕ್ರಮ ಲೋಪವಾಗಿದೆಯೆಂದು ಕಂಡು ಬಂದರೆ, ಅದನ್ನು ವಜಾ ಮಾಡಲು ಅವಕಾಶವಿರತಕ್ಕದ್ದು.
(2) ಗುತ್ತಿಗೆಯನ್ನು ಹಾಗೆ ವಜಾ ಮಾಡಿದ ಸಂದರ್ಭದಲ್ಲಿ, ಹಾಗೆ ವಜಾ ಮಾಡಿದುದರಿಂದಾಗಿ ತನಗೆ ಉಂಟಾದ ಯಾವುದೇ ನಷ್ಟಕ್ಕೆ ಪರಿಹಾರವನ್ನು ಪಡೆಯಲು ಗುತ್ತಿಗೆಗೆ ಪಡೆಯುವವನು ಹಕ್ಕುಳ್ಳವನಾಗಿರತಕ್ಕದ್ದಲ್ಲ.
(3) ಗುತ್ತಿಗೆ ಪತ್ರವು ಒಳಗೊಂಡಿರುವ ಷರತ್ತುಗಳನ್ನು ತಾನು ಪೂರೈಸುವುದಕ್ಕೆ ಮತ್ತು ಪಾಲಿಸುವುದಕ್ಕೆ ಭದ್ರತೆಯಾಗಿ ಮತ್ತು ಭದ್ರತೆಗಾಗಿ ............................................................. ರೂ.ಗಳ ಮೊಬಲಗನ್ನು ಗುತ್ತಿಗೆಗೆ ಪಡೆಯುವವನು ಸಂದಾಯ ಮಾಡತಕ್ಕದ್ದು. ಗುತ್ತಿಗೆ ಪತ್ರದಲ್ಲಿರುವ ಯಾವುದೇ ಷರತ್ತನ್ನು ಗುತ್ತಿಗೆಗೆ ಪಡೆದವನು ಪೂರೈಸಲು ಮತ್ತು ಪಾಲಿಸಲು ತಪ್ಪಿದ ಸಂದರ್ಭದಲ್ಲಿ, ಜಿಲ್ಲೆಯ ಡೆಪ್ಯುಟಿ ಕಮೀಷನರ ಆದೇಶದ ಮೇರೆಗೆ (ಇದರಲ್ಲಿ ಇನ್ನು ಮುಂದೆ ಡೆಪ್ಯೂಟಿ ಕಮೀಷನರೆಂದು ಉಲ್ಲೇಖಿಸಲಾಗಿದೆ) ಕರ್ನಾಟಕ ಸರ್ಕಾರಕ್ಕೆ (ಇದರಲ್ಲಿ ಇನ್ನು ಮುಂದೆ) ಸರ್ಕಾರವೆಂದು ಕರೆಯಲಾಗಿದೆ) ಹಾಗೆ ಠೇವಣಿಯಿಡಲಾದ ಮೊಬಲಗನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿರತಕ್ಕದ್ದು.
(4) ಗುತ್ತಿಗೆಗೆ ಪಡೆದವನು ಆ ಗುತ್ತಿಗೆಯು ಜಾರಿಯಲ್ಲಿರುವಷ್ಟು ಕಾಲದವರೆಗೆ ........................ರೂ.ಗಳ ಮೊಬಲಗನ್ನು, ಎಲ್ಲ ವಜಾ ಪಟ್ಟುಗಳನ್ನು ಉತ್ತರ ಹಾಕಿಕೊಂಡು, ವಾರ್ಷಿಕವಾಗಿ/ಮಾಸಿಕವಾಗಿ ಸರ್ಕಾರಕ್ಕೆ ಮುಂಗಡವಾಗಿ ಸಂದಾಯ ಮಾಡತಕ್ಕದ್ದು. ಅಂಥ ಸಂದಾಯಗಳ ಪೈಕಿ ಮೊದಲನೆಯದನ್ನು ........................
........................ರಂದು ಮತ್ತು ತರುವಾಯದ ವಾರ್ಷಿಕ/ಮಾಸಿಕ ಸಂದಾಯಗಳನ್ನು ಮುಂದಿನ ವರ್ಷಗಳ/ ತಿಂಗಳುಗಳ ಅದೇ ದಿನಾಂಕದಂದು ಸಂದಾಯ ಮಾಡತಕ್ಕದ್ದು.
(5) ಗುತ್ತಿಗೆಯ ಬಗ್ಗೆ ಸಂದಾಯ ಮಾಡಬೇಕಾದ ಯಾವುದೇ ಮೊಬಲಗುಗಳನ್ನು ಅವುಗಳನ್ನು ಸಂದಾಯ ಮಾಡಬೇಕಾದ ದಿನಾಂಕಗಳಂದು ಸಂದಾಯ ಮಾಡಲು ತಪ್ಪಿದರೆ, ಅವುಗಳನ್ನು ಹಾಗೆ ಸಂದಾಯ ಮಾಡಬೇಕಾದ ದಿನಾಂಕಗಳಿಂದ ಅವನ್ನು ಸಂದಾಯ ಮಾಡಿದ ದಿನಾಂಕದ ವರೆಗೆ ವರ್ಷಕ್ಕೆ ಶೇಕಡಾ ಹನ್ನೆರಡರ ದರದಲ್ಲಿ ಅಂಥ ಮೊಬಲಗುಗಳ ಬಗ್ಗೆ ಬಡ್ಡಿಯನ್ನು ಸಂದಾಯ ಮಾಡತಕ್ಕದ್ದು.
(6) ಗುತ್ತಿಗೆಗೆ ಪಡೆದವನು ಅದನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಅದರ ಹೊರತು ಬೇರೆ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದಲ್ಲ.
(7) ಗುತ್ತಿಗೆಗೆ ಪಡೆದವನು ಭೂಮಿಗೆ ವಿನಾಶಕಾರಿಯಾಗುವ ಅಥವಾ ಖಾಯಂ ಆಗಿ ಹಾನಿಕರವಾಗುವ ಯಾವ ಕೆಲಸವನ್ನು ಮಾಡತಕ್ಕದ್ದಲ್ಲ.
(8) ವ್ಯಕ್ತಿಯಾಗಿದ್ದಲ್ಲಿ ಭೂಮಿಯನ್ನು ಖುದ್ದಾಗಿ, ಸಂಸ್ಥೆಯಾಗಿದ್ದಲ್ಲಿ, ಆ ಸಂಸ್ಥೆಯ ಸದಸ್ಯರು ಸಾಗುವಳಿ ಮಾಡತಕ್ಕದ್ದು.
(9) ಸಂಸ್ಥೆಯ ನೋಂದಣಿಯು ರದ್ದಾದಾಗ, ಗುತ್ತಿಗೆಯನ್ನು ಮುಕ್ತಾಯಗೊಳಿಸಲು ಅವಕಾಶವಿರತಕ್ಕದ್ದು.
(10) ಭೂಮಿಯನ್ನು ರಾಜಕೀಯ ಸಭೆಗಳಿಗಾಗಿ ಉಪಯೋಗಿಸತಕ್ಕದ್ದಲ್ಲ.
(11) ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ಕೆಲಸಗಾರರೊಡನೆ ಅಥವಾ ಕೆಲಸಗಾರರಿಲ್ಲದೆ ಮೇಲೆ ಹೇಳಿದ ಭೂಮಿಗಳ ಸ್ಥಿತಿಗತಿಗಳನ್ನು ಪರಿಶೀಲಿಸುವುದಕ್ಕಾಗಿ ಯಾವುದೇ ಕಾಲದಲ್ಲಿ ಪ್ರವೇಶಿಸಲು ಗುತ್ತಿಗೆಗೆ ಪಡೆದವನು ಅನುಮತಿ ಕೊಡತಕ್ಕದ್ದು.
(12) ಈ ಗುತ್ತಿಗೆ ಅಥವಾ ಅದರ ಯಾವುದೇ ಭಾಗದಿಂದ ದೊರಕುವ ಸೌಲಭ್ಯಗಳನ್ನು ಸರ್ಕಾರದ ಲಿಖಿತ ಪೂರ್ವಾನುಮತಿಯಿಲ್ಲದೆ ಗುತ್ತಿಗೆಗೆ ಪಡೆದವನು ಬೇರೊಬ್ಬರಿಗೆ ವಹಿಸಿ ಕೊಡತಕ್ಕದ್ದಲ್ಲ ಅಥವಾ ಒಳಗುತ್ತಿಗೆಗೆ ಕೊಡತಕ್ಕದ್ದಲ್ಲ.
(13) (ಕ) ಗುತ್ತಿಗೆಗೆ ಕೊಡುವ ಕಾಲದಲ್ಲಿ ಇದ್ದ ಹಾಗೂ ಗುತ್ತಿಗೆಗೆ ಕೊಡಲಾದ ಭೂಮಿಯ ಮೇಲೆ ತರುವಾಯ ಬೆಳೆಯಬಹುದಾದ (ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಲಾದ) ಎಲ್ಲ ಗಂಧದ ಮರಗಳ ಮತ್ತು ಅವುಗಳ ಶಾಖೆಗಳ ಮತ್ತು ಬೇರುಗಳ ಮೇಲಿನ ಹಕ್ಕನ್ನು ಸರ್ಕಾವರು ತನಗೇ ಮೀಸಲಾಗಿರಿಸಿಕೊಂಡಿರುತ್ತದೆ ಮತ್ತು ಅಂಥ ಯಾವುವೇ ಮರಗಳನ್ನು ಅಥವಾ ಅವುಗಳ ಬೇರುಗಳನ್ನು ಮತ್ತು ಶಾಖೆಗಳನ್ನು ಕಡಿಯಲು ಅಥವಾ ಅಗೆಯಲು ಮತ್ತು ಆ ಭೂಮಿಯಿಂದ ಅವುಗಳನ್ನು ಸಾಗಿಸಲು ಮತ್ತು ತನ್ನ ಇಷ್ಟಾನುಸಾರ ಅವುಗಳನ್ನು ವಿಲೆ ಮಾಡಲು ಸರ್ಕಾರವು ಸ್ವತಂತ್ರವಾಗಿರತಕ್ಕದ್ದು. ಡೆಪ್ಯುಟಿ ಕಮೀಷನರ ಅನುಮತಿ ಇಲ್ಲದೆ ಅವುಗಳನ್ನು ಕಡಿಯಲು ಅಥವಾ ಸಾಗಿಸಲು ಅಥವಾ ಕಡಿಯುವಂತೆ ಮಾಡಲು ಅಥವಾ ಸಾಗಿಸುವಂತೆ ಮಾಡಲು ಗುತ್ತಿಗೆಗೆ ಪಡೆದವನು ಹಕ್ಕುಳ್ಳವನಾಗಿರತಕ್ಕದ್ದಲ್ಲ;
(ಖ) ಗಂಧದ ಮರಗಳನ್ನು ಕಳ್ಳತನ ಅಥವಾ ಹಾನಿಯಿಂದ ರಕ್ಷಿಸುವುದಕ್ಕಾಗಿ ಮತ್ತು ಆ ಭೂಮಿಯ ಮೇಲೆ ಬೆಳೆಯುವ ಚಿಕ್ಕ ಗಿಡಗಳನ್ನು ಜಾಗರೂಕತೆಯಿಂದ ರಕ್ಷಿಸುವುದಕ್ಕಾಗಿ, ಡೆಪ್ಯುಟಿ ಕಮೀಷನರಿಗೆ ಸಮಾಧಾನವಾಗುವ ರೀತಿಯಲ್ಲಿ ಎಲ್ಲ ಸೂಕ್ತ ಕ್ರಮಗಳನ್ನು ಗುತ್ತಿಗೆಗೆ ಪಡೆದವನು ಕೈಗೊಳ್ಳತಕ್ಕದ್ದು;
(ಗ) ಸರ್ಕಾರದ ಅಧಿಕಾರಿಗಳು ಗಂಧದ ಮರಗಳ ಮೇಲೆ ಮಾಡಿದ ಗುರುತುಗಳು ಸಂರಕ್ಷಿತವಾಗಿರುವಂತೆ ಮತ್ತು ಅವುಗಳನ್ನು ಯಾರೂ ಕೆಡಿಸದಂತೆ ನೋಡಿಕೊಳ್ಳಲು ಗುತ್ತಿಗೆಗೆ ಪಡೆದವನು ಕ್ರಮಗಳನ್ನು ಕೈಗೊಳ್ಳತಕ್ಕದ್ದು; ಮತ್ತು
(ಘ) ಮೇಲಿನ (ಕ), (ಖ) ಅಥವಾ (ಗ)ಗಳಲ್ಲಿ ನಮೂದಿಸಿದ ಯಾವುವೇ ಷರತ್ತುಗಳನ್ನು ಉಲ್ಲಂಘಿಸಿದ ಅಥವಾ ಅವುಗಳಲ್ಲಿ ಯಾವುದನ್ನೇ ಆಗಲಿ ಪಾಲಿಸಲು ತಪ್ಪಿದ ಸಂದರ್ಭದಲ್ಲಿ, ಅಂಥ ಉಲ್ಲಂಘನೆ ಅಥವಾ ಕರ್ತವ್ಯಲೋಪದಿಂದಾಗಿ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಯ ಬಗ್ಗೆ ಡೆಪ್ಯುಟಿ ಕಮೀಷನರು ನಿರ್ಧರಿಸುವಂಥ ಪರಿಹಾರವನ್ನು ಗುತ್ತಿಗೆಗೆ ಪಡೆದವನು ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು. ಅಲ್ಲದೆ ಆ ಗುತ್ತಿಗೆಯನ್ನು ರದ್ದುಗೊಳಿಸಲು ಹಾಗೂ ಆ ಭೂಮಿಯನ್ನು ಪುನಃ ತನ್ನ ವಶಕ್ಕೆ ತೆಗೆದುಕೊಳ್ಳಲು ಸರ್ಕಾರವು ಸ್ವತಂತ್ರವಾಗಿರತಕ್ಕದ್ದು, ಮತ್ತು ಅನಂತರ ಆ ಇಡೀ ಭೂಮಿಯು ಸರ್ಕಾರದಲ್ಲಿ ಪೂರ್ಣವಾಗಿ ನಿಹಿತವಾಗಿರತಕ್ಕದ್ದು. ಆ ಸಂದರ್ಭದಲ್ಲಿ, ಗುತ್ತಿಗೆಗೆ ಪಡೆದವನಿಗೆ ಯಾವುದೇ ನಷ್ಟ ಪರಿಹಾರವನ್ನು ಪಡೆಯಲು ಹಕ್ಕಿರತಕ್ಕದ್ದಲ್ಲ.
(14) ಸರ್ಕಾರದ ಲಿಖಿತ ಪೂರ್ವಾನುಮತಿಯಿಲ್ಲದೆ ಆ ಭೂಮಿಯ ಮೇಲೆ ಖಾಯಂ ಅಥವಾ ಹಂಗಾಮಿ ಸ್ವರೂಪದ ಯಾವುವೇ ಕಟ್ಟಡಗಳನ್ನು, ಬೇಲಿಗಳನ್ನು ಅಥವಾ ರಚನೆಗಳನ್ನು ನಿರ್ಮಿಸತಕ್ಕದ್ದಲ್ಲ.
(15) ಗುತ್ತಿಗೆಗೆ ಪಡೆದವನು ಡೆಪ್ಯುಟಿ ಕಮೀಷನರ ಪೂರ್ವಾನುಮತಿಯಿಲ್ಲದೆ ಯಾವುವೇ ಒಣಗಿದ ಮರಗಳನ್ನು ಕಡಿಯತಕ್ಕದ್ದಲ್ಲ. ಒಣಗಿದ ಮತ್ತು ಗಾಳಿಗೆ ಬಿದ್ದ ಮರಗಳು ಸಹ ಸರ್ಕಾರದ ಸ್ವತ್ತಾಗಿರತಕ್ಕದ್ದು ಮತ್ತು ಅವುಗಳನ್ನು ಗ್ರಾಮ ಲೆಕ್ಕಿಗನ ವಶಕ್ಕೆ ಕೊಡತಕ್ಕದ್ದು.
(16) ಒಣಗಿದ ಮತ್ತು ಗಾಳಿಗೆ ಬಿದ್ದ ಮರಗಳ ಮತ್ತು (15)ನೇ ಷರತ್ತಿನ ಮೇರೆಗೆ ಕಡಿದ ಮರಗಳ ಮಾರಾಟದಿಂದ ಬಂದ ಉತ್ಪತ್ತಿಯನ್ನು ಸರ್ಕಾರಕ್ಕೆ ಜಮೆ ಮಾಡತಕ್ಕದ್ದು.
(17) ಭೂಮಿಯಲ್ಲಿ ಬೆಳೆದಿರುವ ಯಾವುವೇ ಮರಗಳಿಗೆ ಅಥವಾ ಅವುಗಳ ಫಲಾನುಭೋಗಕ್ಕೆ ಗುತ್ತಿಗೆಗೆ ಪಡೆದವನಿಗೆ ಯಾವ ಹಕ್ಕು ಇರತಕ್ಕದ್ದಲ್ಲ.
(18) ಜಿಲ್ಲೆಯಲ್ಲಿರುವ ಪದ್ಧತಿಗನುಸಾರವಾಗಿ ಸರ್ಕಾರದ ಅಧಿಕಾರಗಳು ಮರಗಳ ಫಲಾನುಭೋಗವನ್ನು ಹರಾಜಿನ ಮೂಲಕ ಗುತ್ತಿಗೆಗೆ ಕೊಡಬಹುದು ಮತ್ತು ಮರಗಳ ಫಲಾನುಭೋಗದ ಹಕ್ಕನ್ನು ಸರ್ಕಾರವು ಹಾಗೆ ಕೊಟ್ಟಿರುವಂಥ ವ್ಯಕ್ತಿಗಳಿಗೆ ಗುತ್ತಿಗೆಗೆ ಪಡೆದವನು ದಾರಿಯನ್ನು ಉಪಯೋಗಿಸುವ ಹಕ್ಕನ್ನು ಕೊಡತಕ್ಕದ್ದು.
(19) ಗೇಣಿ ಪಡೆದವನು ಡೆಪ್ಯುಟಿ ಕಮೀಷನರ ಲಿಖಿತ ಪೂರ್ವಾನುಮತಿಯಿಲ್ಲದೆ, (6)ನೇ ಷರತ್ತಿನಲ್ಲಿ ಉಪಬಂಧಿಸಿದಂತೆ ಹೊರತು, ಭೂಮಿಯನ್ನು ಅಥವಾ ಅದರ ಮೇಲಿನ ಯಾವುದೇ ರಚನೆಯನ್ನು ಅಥವಾ ಭೂಮಿಯ ಅಥವಾ ರಚನೆಯ ಯಾವುದೇ ಭಾಗವನ್ನು ಉಪಯೋಗಿಸಲು ಯಾವನೇ ವ್ಯಕ್ತಿಗೆ ಅನುಮತಿ ಕೊಡತಕ್ಕದ್ದಲ್ಲ.
(20) ಈ ಮಂಜೂರಾತಿಯನ್ನು ಕೊನೆಗಾಣಿಸಿದಾಗ ಅಥವಾ ಹಿಂತೆಗೆದುಕೊಂಡಾಗ ಸದರಿ ಭೂಮಿನ್ನು ಮೇಲೆ ಹೇಳಿದ ಷರತ್ತುಗಳ ಪ್ರಕಾರ ಸುಸ್ಥಿತಿಯಲ್ಲಿ ಗುತ್ತಿಗೆಗೆ ಪಡೆದವನು ಸರ್ಕಾರಕ್ಕೆ ವಾಪಸ್ಸು ಕೊಡತಕ್ಕದ್ದು.
(21) ಮೇಲೆ ಹೇಳಿದ ಷರತ್ತುಗಳಲ್ಲಿ ಅನುಮತಿ ಕೊಟ್ಟಿರುವಂತೆ ಹೊರತು, ಸದರಿ ಭೂಮಿ ಮತ್ತು ಅದರ ಮೇಲಣ ಇತರ ಸರ್ಕಾರಿ ಸ್ವತ್ತಿಗೆ ಉಂಟು ಮಾಡಿದ ಎಲ್ಲ ಅಥವಾ ಯಾವುದೇ ಹಾನಿ ಅಥವಾ ನಷ್ಟದ ಬಗ್ಗೆ ಸರ್ಕಾರಕ್ಕೆ ಗುತ್ತಿಗೆಗೆ ಪಡೆದವನು ಜವಾಬ್ದಾರನಾಗಿರತಕ್ಕದ್ದು.
(22) ಮೇಲಿನ (1)ನೇ ಷರತ್ತಿನಲ್ಲಿ ನಿರ್ದಿಷ್ಟಪಡಿಸಿದ ಮೊಬಲಗನ್ನು ಅಥವಾ ಅದರ ಯಾವುದೇ ಭಾಗವು, ಅವುಗಳನ್ನು ಸಂದಾಯ ಮಾಡಬೇಕಾದ ತರುವಾಯ ಆ ಬಗ್ಗೆ ವಿದ್ಯುಕ್ತವಾಗಿ ಕೇಳಿರಲಿ ಅಥವಾ ಇಲ್ಲದಿರಲಿ, ಹದಿನೈದು ದಿನಗಳವರೆಗೆ ಸಂದಾಯವಾಗದೆ ಉಳಿದಿದ್ದರೆ, ಅಥವಾ ಇದರಲ್ಲಿ ಅಡಕವಾಗಿರುವ ಮಂಜೂರಾತಿಯ ಯಾವುವೇ ಷರತ್ತುಗಳನ್ನು ಗುತ್ತಿಗೆಗೆ ಪಡೆದವನು ಉಲ್ಲಂಘಿಸಿದ್ದರೆ, ಸರ್ಕಾರವು ಗುತ್ತಿಗೆಯನ್ನು ಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಬಹುದು ಮತ್ತು ಅದನ್ನು ತನ್ನ ಹತೋಟಿಗೆ ತೆಗೆದುಕೊಳ್ಳಬಹುದು ಅಥವಾ ಆ ಎಲ್ಲ ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಮತ್ತು ಅದರ ಮೇಲಿರುವ ಯಾವುದೇ ಕಟ್ಟಡಗಳನ್ನು ಬೇಲಿಗಳನ್ನು ಮತ್ತು ರಚನೆಗಳನ್ನು ಬೇರೆ ರೀತಿಯಲ್ಲೂ ವಿಲೆ ಮಾಡಬಹುದು ಮತ್ತು ಅದರ ಬಗ್ಗೆ ಯಾವುದೇ ನಷ್ಟ ಪರಿಹಾರವನ್ನು ಪಡೆಯಲು ಗುತ್ತಿಗೆಗೆ ಪಡೆದವನಿಗೆ ಹಕ್ಕಿರತಕ್ಕದ್ದಲ್ಲ.
(23) ಮೇಲಿನ (4) ಅಥವಾ (5)ನೇ ಷರತ್ತುಗಳಲ್ಲಿ ನಿರ್ದಿಷ್ಟಪಡಿಸಿದ ಮೊಬಲಗು ಅಥವಾ ಅದರ ಯಾವುದೇ ಭಾಗವು ಬಾಕಿ ಇದ್ದರೆ, ಅದನ್ನು ಭೂಕಂದಾಯದ ಬಾಕಿಯಂತೆ ಗುತ್ತಿಗೆಗೆ ಪಡೆದವನಿಂದ ವಸೂಲು ಮಾಡಲು ಸಹ ಸರ್ಕಾರಕ್ಕೆ ಅಧಿಕಾರವಿರತಕ್ಕದ್ದು.
(24) ಕರ್ನಾಟಕ ರಾಜ್ಯಪಾಲರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಡೆಪ್ಯುಟಿ ಕಮೀಷನರು ( ) ತಿಂಗಳಿನ ಲಿಖಿತ ನೋಟೀಸನ್ನು ಕೊಟ್ಟ ತರುವಾಯ, ಈ ಮೂಲಕ ಕೊಡಲಾಗಿರುವ ಗುತ್ತಿಗೆಯನ್ನು ರದ್ದುಗೊಳಿಸಬಹುದು ಮತ್ತು ಮೇಲೆ ಹೇಳಿದ ಯಾವುವೇ ಷರತ್ತುಗಳನ್ನು ಹಿಂದೆಯೇ ಉಲ್ಲಂಘಿಸಿದ್ದ ಸಂಬಂಧದಲ್ಲಿ ಸರ್ಕಾರವು ಕೈಗೊಳ್ಳಬಹುದಾದ ಯಾವುದೇ ಕ್ರಮ ಅಥವಾ ಪರಿಹಾರೋಪಾಯದ ಬಗ್ಗೆ ಅದಕ್ಕಿರುವ ಯಾವುದೇ ಹಕ್ಕಿಗೆ ಬಾಧಕ ಉಂಟಾಗದಂತೆ, ಡೆಪ್ಯುಟಿ ಕಮೀಷನರಿಗೆ ............................. ತಿಂಗಳಿನ ಲಿಖಿತ ನೋಟೀಸನ್ನು ಕೊಡುವುದರ ಮೂಲಕ ಗುತ್ತಿಗೆಗೆ ಪಡೆದವನು ಆ ಗುತ್ತಿಗೆಯನ್ನು ಮುಕ್ತಾಯಗೊಳಿಸಬಹುದು. ಹಾಗೆ ರದ್ದುಗೊಳಿಸುವ ಹಾಗೂ ಮುಕ್ತಾಯಗೊಳಿಸುವ ಸಂದರ್ಭದಲ್ಲಿ, ಭೂಮಿಯ ಮೇಲೆ ತಾನು ನಿರ್ಮಿಸಿದ ಯಾವುವೇ ರಚನೆಗಳ ಅಥವಾ ಆ ಭೂಮಿಯಲ್ಲಿ ತಾನು ಮಾಡಿದ ಯಾವುವೇ ಅಭಿವೃದ್ಧಿಗಳ ಸಂಬಂಧದಲ್ಲಿ ಅಥವಾ ತನ್ನ ಅಧಿಭೋಗಕ್ಕೆ ಅಡ್ಡಿ ಮಾಡಿದುದರಿಂದ ಉಂಟಾದ ನಷ್ಟದ ಸಂಬಂಧದಲ್ಲಿ ಯಾವ ನಷ್ಟ ಪರಿಹಾರವನ್ನು ಪಡೆಯಲು ಗುತ್ತಿಗೆಗೆ ಪಡೆದವನು ಹಕ್ಕುಳ್ಳವನಾಗಿರತಕ್ಕದ್ದಲ್ಲ. ಆದರೆ, ಗುತ್ತಿಗೆಯ ರದ್ದಿಯಾತಿ ಅಥವಾ ಮುಕ್ತಾಯವು ಜಾರಿಗೆ ಬರುವುದಕ್ಕೆ ಮೊದಲು ಅಥವಾ ಆ ಸಂಬಂಧದಲ್ಲಿ ಡೆಪ್ಯುಟಿ ಕಮೀಷನರು ಅವಕಾಶ ಕೊಡಬಹುದಾದ ಕಾಲದೊಳಗೆ ನೋಟೀಸಿಲ್ಲದೆ ಗುತ್ತಿಗೆಯನ್ನು ರದ್ದುಗೊಳಿಸಿದರೆ, ಗುತ್ತಿಗೆಗೆ ಪಡೆದವನು ಅಂಥ ರಚನೆಗಳನ್ನು ತೆಗೆದುಹಾಕಬಹುದು.
(25) (22) ಅಥವಾ (24)ನೇ ಷರತ್ತಿನ ಮೇರೆಗೆ ಗುತ್ತಿಗೆಯನ್ನು ರದ್ದು ಮಾಡಿದಾಗ, ಅಂಥ ರದ್ದಿಯಾತಿಯ ದಿನಾಂಕದವರೆಗೆ ದಾಮಾಷಾ ಗುತ್ತಿಗೆಯನ್ನು ವಿಧಿಸಲು ಸರ್ಕಾರವು ಸ್ವತಂತ್ರವಾಗಿರತಕ್ಕದ್ದು.
(26) ಗುತ್ತಿಗೆಗೆ ಪಡೆದವನು (3)ನೇ ಷರತ್ತಿನ ಮೇರೆಗೆ ಠೇವಣಿ ಇಟ್ಟ ಮತ್ತು ಅವನಿಗೆ ಹಿಂದಿರುಗಿಸ ಬಹುದಾದಂಥ ................................ ರೂ.ಗಳ ಮೊಬಲಗನ್ನು ಅಥವಾ ಅದರ ಭಾಗವನ್ನು ಗುತ್ತಿಗೆಯು ಮುಕ್ತಾಯವಾದಾಗ ಅಥವಾ ಮೊದಲೇ ಅಂತ್ಯಗೊಂಡಾಗ ಅವನಿಗೆ ಹಿಂದಿರುಗಿಸತಕ್ಕದ್ದು.
(27) ಸರ್ಕಾರ ಅಥವಾ ಅದರ ಅಧಿಕಾರಿಗಳ ಮತ್ತು ಗುತ್ತಿಗೆಗೆ ಪಡೆದವನ ನಡುವೆ, ಗುತ್ತಿಗೆಗೆ ಸಂಬಂಧಪಡುವ ಅಥವಾ ಅದರಿಂದ ಉದ್ಭವಿಸುವ ಅಥವಾ ಈ ಗುತ್ತಿಗೆ ಪತ್ರದಲ್ಲಿ ಅಡಕವಾಗಿರುವ ಎಲ್ಲ ಅಥವಾ ಯಾವುವೇ ಉಪಬಂಧಗಳ ಬಗ್ಗೆ ಅರ್ಥ ಮಾಡುವುದಕ್ಕೆ ಸಂಬಂಧಿಸಿದ ಯಾವುದೇ ವಿಷಯ ಅಥವಾ ವಸ್ತುವಿನ ಬಗೆಗಿನ ಯಾವುದೇ ಪಕ್ಷದ ಹಕ್ಕುಗಳು, ಕರ್ತವ್ಯಗಳು ಅಥವಾ ಹೊಣೆಗಾರಿಕೆಯನ್ನು ಕುರಿತು ಇನ್ನು ಮುಂದೆ ಯಾವುದೇ ಕಾಲದಲ್ಲಿ ಯಾವುದೇ ವಿವಾದ ಅಥವಾ ಭಿನ್ನಾಭಿಪ್ರಾಯ ಉಂಟಾದರೆ, ಸದರಿ
ವಿವಾದವನ್ನು ಅಥವಾ ಭಿನ್ನಾಭಿಪ್ರಾಯವನ್ನು ಅ ಕಾಲದಲ್ಲಿರುವ ಡೆಪ್ಯುಟಿ ಕಮೀಷನರ ಮಧ್ಯಸ್ಥಿಕೆಗಾಗಿ ಕಳುಹಿಸತಕ್ಕದ್ದು, ಮತ್ತು ಅವನ ತೀರ್ಮಾನವು ಅಂತಿಮವಾಗಿರತಕ್ಕದ್ದು.
(28) ಗುತ್ತಿಗೆ ಭೂಮಿಗೆ ಸೇರಿದ ಅಥವಾ ಅದಕ್ಕೆ ಸೇರಿದೆಯೆಂದು ಪ್ರತೀತಿಯಿರುವ ಅಥವಾ ಅದಕ್ಕೆ ಸಾಮಾನ್ಯವಾಗಿ ಹೊಂದಿರುವ ಅಥವಾ ಅದನ್ನು ಅನುಭವಿಸುತ್ತಿರುವ ಎಲ್ಲ ಹಕ್ಕುಗಳು, ಅನುಭೋಗದ ಹಕ್ಕುಗಳು ಮತ್ತು ಲಗತ್ತಾದವುಗಳು ಗುತ್ತಿಗೆಯಲ್ಲಿ ಸೇರಿವೆ. ಭೂಮಿಯ ಮೂಲಕ ಅಥವಾ ಭೂಮಿಯನ್ನು ಸುತ್ತುವರೆಯುವ ರಸ್ತೆಗಳು, ದಾರಿಗಳು, ನದಿಗಳು, ಹಳ್ಳಗಳು ಮತ್ತು ನಾಲೆಗಳ ಬಗ್ಗೆ ಅಸ್ತಿತ್ವದಲ್ಲಿರುವ ಸರ್ಕಾರದ ಮತ್ತು ಸಾರ್ವಜನಿಕರ ರೂಢಿಗಳ ಹಕ್ಕುಗಳು ಮತ್ತು ಭೂಮಿಯ ಪಕ್ಕದಲ್ಲಿರುವ ಗಣಿಗಳು ಮತ್ತು ಕಲ್ಲಿನ ಗಣಿಗಳ ಬಗ್ಗೆ ಸರ್ಕಾರದ ಹಕ್ಕುಗಳು ಕಾದಿರಿಸಲ್ಪಟ್ಟಿವೆ ಮತ್ತು ಅವುಗಳಿಗೆ ಗುತ್ತಿಗೆಯಿಂದಾಗಿ ಯಾವ ವಿಧವಾದ ಬಾಧಕವೂ ಇಲ್ಲ.