(1) ರಿಜಿಸ್ಟ್ರಾರನು ಅಥವಾ ಉಪರಿಜಿಸ್ಟ್ರಾರನು ಪ್ರಾರಂಭಿಕ ದಾಖಲೆಯು ಪೂರ್ಣವಾದ ಬಗ್ಗೆ 44ನೇ ನಿಯಮದ ಮೇರೆಗೆ ಮಾಹಿತಿಯನ್ನು ಪಡೆದ ಮೇಲೆ, ತನ್ನ ಕಛೇರಿಯಲ್ಲಿ ನೋಂದಾಯಿಸಿದ ಭೂಮಿಗಳಿಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳ ಬಗ್ಗೆ ಪ್ರತಿ ಗ್ರಾಮಕ್ಕೂ ಪ್ರತ್ಯೇಕವಾಗಿ ಸಂಕಲ್ಪಿಸಿದ ದಿನವಹಿ ತಿಳುವಳಿಕೆ ಚೀಟಿಯನ್ನು 10ನೇ ನಮೂನೆಯಲ್ಲಿ ತಹಶೀಲುದಾರನಿಗೆ, ಕಳಿಸತಕ್ಕದ್ದು.
(2) ರಿಜಿಸ್ಟ್ರಾರನಿಂದ ಅಥವಾ ಉಪರಿಜಿಸ್ಟ್ರಾರನಿಂದ 15ನೇ ನಮೂನೆಯಲ್ಲಿ ತಿಳಿವಳಿಕೆ ಚೀಟಿಯು ಬಂದ ಮೇಲೆ ಮತ್ತು 19 ಮತ್ತು 20ನೇ ನಮೂನೆಗಳಲ್ಲಿ ವರದಿಯು ಬಂದ ಮೇಲೆ, ತಹಶೀಲುದಾರನು ಪ್ರತಿಯೊಂದು ಗ್ರಾಮಕ್ಕೂ ಪ್ರತ್ಯೇಕ ಕ್ರಮಾಂಕಗಳನ್ನು ಕೊಟ್ಟು (ರಿಜಿಸ್ಟರಿನಲ್ಲಿ 10ಕ ನಮೂನೆಯಲ್ಲಿ ಗ್ರಾಮವಾರಾಗಿ ಚೀಟಿಗಳನ್ನು ನಮೂದಿಸುವಂತೆ ಮಾಡತಕ್ಕದ್ದು ಮತ್ತು ಅವುಗಳನ್ನು ಸಂಬಂಧಪಟ್ಟ ಗ್ರಾಮಲೆಕ್ಕಿಗರಿಗೆ ಕಳಿಸತಕ್ಕದ್ದು ಮತ್ತು ಅವರ ತಲುಪೊಪ್ಪಿಗೆ ಪಡೆದು ಅವುಗಳನ್ನು ತನ್ನ ಕಛೇರಿಯ ದಾಖಲೆಗೆ ಸೇರಿಸತಕ್ಕದ್ದು.